ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 3 ನೇ ದಿನದ ಬಣ್ಣ ಕೆಂಪು (Navaratri Red Colour Fashion Tips). ಪವರ್‌ಫುಲ್ ವರ್ಣವಾದ ಈ ಶೇಡ್‌ನ ಎಥ್ನಿಕ್‌ವೇರ್‌ಗಳು ಕಂಪ್ಲೀಟ್ ಟ್ರೆಡಿಷನಲ್ ಲುಕ್ ನೀಡುತ್ತವೆ. ಜೊತೆಗೆ ಗ್ರ್ಯಾಂಡ್ ಲುಕ್ ಕಲ್ಪಿಸುತ್ತವೆ. ಈ ಬಣ್ಣ ದೇವಿಯ ಧೈರ್ಯ ಹಾಗೂ ಶಕ್ತಿ-ಸೌಂದರ್ಯದ ಪ್ರತೀಕ. ಧರಿಸಿದಾಗ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ತಂತಾನೇ ಹಬ್ಬದ ಕಳೆ ಎಲ್ಲರಲ್ಲೂ ಮನೆ ಮಾಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಧೈರ್ಯ-ಸೌಂದರ್ಯದ ದ್ಯೋತಕ
ಅಂದಹಾಗೆ, ಕೆಂಪು ಬಣ್ಣ ಧೈರ್ಯ ಹಾಗೂ ಸೌಂದರ್ಯದ ಧ್ಯೋತಕ. ಅಷ್ಟೆಕೆ! ವ್ಯಾಲೆಂಟೇನ್ಸ್ ಡೇಯಂದು ಎಲ್ಲೆಡೆ ರಂಗೇರುವ ಕಲರ್ ಇದು. ಈ ಕಲರ್‌ಗೆ ಇತಿಹಾಸ ಕೂಡ ಇದೆ. ಶಕ್ತಿ ದೇವಿ ದುರ್ಗೆ ಈ ಬಣ್ಣದ ಸೀರೆಯಲ್ಲಿ ಹುಲಿಯ ಮೇಲೆ ಆಸೀನಳಾಗಿರುತ್ತಾಳೆ. ಕೆಲವೆಡೆ ಕೆಂಪು ಬಣ್ಣದ ಚುನರಿಯನ್ನು ಈ ನವರಾತ್ರಿ ಸಂದರ್ಭದಲ್ಲಿ ದೇವಿಗೆ ಹೊದಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಈ ಬಣ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇನ್ನು ಸಮೀಕ್ಷೆಯೊಂದರ ಪ್ರಕಾರ, ಅತಿ ಹೆಚ್ಚು ಶೇಡ್‌ನ ಕೆಂಪು ವರ್ಣದ ಔಟ್‌ಫಿಟ್‌ಗಳನ್ನು ನಮ್ಮ ಭಾರತದ ನಾರಿಯರನ್ನು ಧರಿಸುತ್ತಾರಂತೆ. ಇದಕ್ಕೆ ಪೂರಕ ಎಂಬಂತೆ ಪುರಾಣಗಳಲ್ಲೂ ಶಕ್ತಿ ದೇವತೆಗಳು ಕೆಂಪು ಸೀರೆಯನ್ನು ಧರಿಸುವುದನ್ನು ಕಾಣಬಹುದು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ನಾನಾ ಕೆಂಪು ಶೇಡ್ ಸೀರೆಗಳನ್ನುಹೀಗೆ ಧರಿಸಿ
ಕೆಂಪು ಅಂದಾಕ್ಷಣ ಒಂದೇ ಶೇಡ್ ಅಲ್ಲ, ಗಾಢ, ತಿಳಿಗೆಂಪು, ರಕ್ತ ಕೆಂಪು ಹೀಗೆ ಲೆಕ್ಕವಿಲ್ಲದಷ್ಟು ಬಗೆಯವು ಇದೆ. ಆಯಾ ವರ್ಣದ ಸೀರೆಗಳು ಒಂದೊಂದು ಬಗೆಯ ಲುಕ್ ನೀಡುತ್ತವೆ. ಕೆಂಪು ಬಣ್ಣದ ಬಾರ್ಡರ್ ರೇಷ್ಮೆ ಸೀರೆಯಾದಲ್ಲಿ ಗ್ರ್ಯಾಂಡ್ ಫೆಸ್ಟಿವ್ ಲುಕ್ ನೀಡುತ್ತದೆ. ಇನ್ನು ಸಾದಾ ಅಥವಾ ಗೋಲ್ಡನ್ ಪ್ರಿಂಟ್ಸ್ ಇಲ್ಲವೇ ಬೂಟಾ ಪ್ರಿಂಟ್ಸ್ ಇರುವ ಶಿಫಾನ್, ಜಾರ್ಜೆಟ್ ಡಿಸೈನರ್ ಸೀರೆಗಳಾದಲ್ಲಿ ಮನಮೋಹಕವಾಗಿ ಕಾಣುತ್ತವೆ. ಸೀರೆಗಳಿಗೆ ಬಂಗಾರದ ಜ್ಯುವೆಲರಿಗಳು ಚೆನ್ನಾಗಿ ಒಪ್ಪುತ್ತವೆ. ಟ್ರೆಡಿಷನಲ್ ಮೇಕಪ್ ಇರಲಿ. ಹಣೆಗೊಂದು ಅಗಲವಾದ ಬಿಂದಿ ಇರಲಿ. ದೇಸಿ ಹೇರ್‌ಸ್ಟೈಲ್ ಮ್ಯಾಚ್ ಆಗುತ್ತದೆ.
ಕೆಂಪು ಲೆಹೆಂಗಾ ಜಾದೂ
ಕೆಂಪು ಬಣ್ಣದ ಲೆಹೆಂಗಾಗಳು ನವರಾತ್ರಿಯ ಸೀಸನ್‌ನಲ್ಲಿ ಇದೀಗ ಟ್ರೆಂಡಿಯಾಗಿವೆ. ಸೀರೆ ಬೇಡ, ಲೆಹೆಂಗಾ ಓಕೆ ಎನ್ನುವವರು ಲೆಹೆಂಗಾದಲ್ಲಿ ಹೆಚ್ಚು ಸಮಯವಿಲ್ಲದೇ ರೆಡಿಯಾಗಬಹುದು. ಮಾನೋಕ್ರೋಮ್ ಸೇಮ್ ಶೇಡ್‌ನ ಲೆಹೆಂಗಾಗಳು ಬೆಸ್ಟ್, ಕಾಂಟ್ರಾಸ್ಟ್ ಈ ದಿನಕ್ಕೆ ಮ್ಯಾಚ್ ಆಗದು. ಹೇರ್‌ಸ್ಟೈಲ್‌ನಲ್ಲಿ ಕೆಂಪು ಗುಲಾಬಿ ಸೇರಿಸಿಕೊಂಡಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು.
ಕೆಂಪು ಬಣ್ಣದ ಚೂಡಿದಾರ್ ಕುರ್ತಾ
ಇನ್ನು ಸಿಂಪಲ್ ಆಗಿ ಆಕರ್ಷಕವಾಗಿ ಕಾಣಲು ಚೂಡಿದಾರ್ ಕುರ್ತಾ ಆಯ್ಕೆ ಮಾಡಿ ಧರಿಸಬಹುದು. ಇದಕ್ಕಾಗಿ ಹೆಚ್ಚೆನೂ ತಯಾರಿ ಬೇಕಾಗಿಲ್ಲ. ಮ್ಯಾಚಿಂಗ್ ಸ್ಟೇಟ್‌ಮೆಂಟ್ ಜ್ಯುವೆಲರಿ ಧರಿಸಬಹುದು. ಬೇಕಾದ ಹೇರ್ ಸ್ಟೈಲ್ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Navaratri white colour styling : ನವರಾತ್ರಿಯ 2ನೇ ದಿನಕ್ಕೆ ಶ್ವೇತ ವರ್ಣದ ಸ್ಟೈಲಿಂಗ್