Site icon Vistara News

ಬೀಚ್‌ಗಳಲ್ಲಿ ಸೆಕ್ಸ್ ಮಾಡಬೇಡಿ ಪ್ಲೀಸ್! ಪ್ರವಾಸಿಗರಿಗೆ ಮನವಿ, ಕೇಳಿ ಬಂತು ಆಕ್ಷೇಪ

Netherlands town impose ban on beach sex and representative image

ನವದೆಹಲಿ: ಐರೋಪ್ಯ ರಾಷ್ಟ್ರಗಳ ಸಮುದ್ರತೀರಗಳಲ್ಲಿ ನಗ್ನತೆ ಮತ್ತು ಸೆಕ್ಸ್‌ (Sex)ಗೆ ಸಂಬಂಧಿಸಿದಂತೆ ಅಂತಾ ತೀರ ಮಡಿವಂತಿಕೆಗಳ ನಿಯಮಗಳಿಲ್ಲ. ಆದರೆ, ಇದೇ ಮೊದಲ ಬಾರಿಗೆ ನೆದರ್‌ಲ್ಯಾಂಡ್‌ನ (Netherland) ನಗರವೊಂದರ ಕಡಲತೀರ(Beach) ಮತ್ತು ದಿಬ್ಬಗಳಲ್ಲಿ (Dunes) ಸೆಕ್ಸ್ ಮಾಡುವುದನ್ನು ನಿಷೇಧಿಸಲಾಗಿದೆ! ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು ನೋ ಸೆಕ್ಸ್ ಆನ್ ಬೀಚ್ (No Sex On The Beach) ವಿಶಿಷ್ಟ ಅಭಿಯಾನವನ್ನು ಕೈಗೊಂಡಿದೆ(Viral News).

ವೀರೆ ಮುನ್ಸಿಪಾಲ್ಟಿಯು ಬೀಚ್‌ಗಳಲ್ಲಿ ಸೆಕ್ಸ್ ನಿಷೇಧ ಮಾಡಿರುವ ಚಿಹ್ನೆಗಳ ಫಲಕಗಳನ್ನು ಹಾಕಿದೆ. ಸಾರ್ವಜನಿಕ ಸೆಕ್ಸ್ ನಿಷೇಧಿಸಲಾಗಿದೆ ಎಂದು ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ತಿಳಿಸಲಾಗುತ್ತದಿ. ವಿಶೇವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನು ಕಾನೂನುಬದ್ಧಗೊಳಿಸಲಾಗಿದೆ. ಅಲ್ಲದೇ ದಿಬ್ಬಗಳು, ಮೀಸಲು ಕಾಡು ಮತ್ತು ಬೀಚ್‌ಗಳಲ್ಲಿ ಸೆಕ್ಸ್ ಮಾಡುವುದನ್ನು ತಪ್ಪಿಸಲು ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಮನರಂಜನೆಗೆಂದು ಆಗಮಿಸುವ ಜನರು ಸಾರ್ವಜನಿಕವಾಗಿ ನಡೆಸುವ ಸೆಕ್ಸ್‌ ಕ್ರಿಯೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರ, ಜಲಮಂಡಳಿ ಮತ್ತು ನಿಸರ್ಗ ಸಂಸ್ಥೆಗಳಿಗೆ ಹಲವಾರು ದೂರುಗಳ ಬಂದಿವೆ. ಇದಕ್ಕಾಗಿ ಕೆಲವು ಗುಂಪುಗಳು ಪ್ರಾಜೆಕ್ಟ್ ಆರೆಂಜೋನ್ ಎಂಬ ಹೆಸರಿನಲ್ಲಿ ಮುಂಚಿತವಾಗಿಯೇ ದಿನಾಂಕಗಳನ್ನು ಕಾಯ್ದಿರಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಕೇಳಿ ಬಂದಿವೆ.

ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್ ಅವರು, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ, ನೈಸರ್ಗಿಕ ಪರಿಸರವನ್ನು ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಇನ್ನು ಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ, ಬದಲಿಗೆ, ತ್ವರಿತ “ಮೌಖಿಕ”ವಾಗಿ ತಿಳಿಸಲಾಗುತ್ತದೆ ಮತ್ತು ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Fact Check: ಸ್ವೀಡನ್‌ನಲ್ಲಿ ‘ಸೆಕ್ಸ್ ಚಾಂಪಿಯನ್‌ಶಿಪ್’, ರತಿಕ್ರೀಡೆ ಟೂರ್ನಿ ಗೆಲ್ಲಲು ರೆಡಿಯಾಗಿದ್ರು 20 ಮಂದಿ!

ಈ ಮಧ್ಯೆ, ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ. ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ. ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version