Site icon Vistara News

Onam Saree Fashion: ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಟ್ರೆಡಿಷನಲ್‌ ಫ್ಯಾಷನ್‌ಗೆ ಸೇರಿದ ಓಣಂ ಸೀರೆ

Onam Saree Fashion:

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಓಣಂ ಸೀರೆ ಸಂಭ್ರಮ (Onam Saree Fashion) ಇದೀಗ ಕೇವಲ ಮಲಯಾಳಿ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಬದಲಿಗೆ ಸೀರೆ ಪ್ರಿಯ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಸೆಲೆಬ್ರೇಷನ್‌ಗೂ ಎಂಟ್ರಿ ನೀಡಿದೆ.

ಓಣಂ ಸೀರೆ ಪ್ರೇಮಿಗಳು

ಸುಮಾರು 10 ದಿನಗಳ ಕಾಲ ನಡೆಯುವ ಈ ಓಣಂ ಹಬ್ಬದ ಈ ದಿನಗಳಲ್ಲಿ ಯಾವುದಾದರೂ ಒಂದು ದಿನವನ್ನು ಓಣಂ ಆಚರಣೆ ಮಾಡಲು ಕಾರ್ಪೋರೇಟ್‌ ಕ್ಷೇತ್ರಗಳು ಮುಂದಾಗುತ್ತವೆ. ಇದು ಭಾವೈಕ್ಯತೆಯ ಪ್ರತೀಕ ಕೂಡ. ಈ ದಿನಗಳಲ್ಲಿ ಕೇರಳದ ಪ್ರಾದೇಶಿಕ ಸೀರೆಗಳಲ್ಲಿ ಕಾರ್ಪೋರೇಟ್‌ ಮಹಿಳೆಯರ ಟೀಮ್‌ ಕಾಣಿಸಿಕೊಂಡು ಸೆಲೆಬ್ರೇಟ್‌ ಮಾಡುವುದು ಸೇರಿದೆ. ಕೆಲವು ಕಚೇರಿಗಳಲ್ಲಂತೂ ಈ ಡ್ರೆಸ್‌ಕೋಡ್‌ನ ಫ್ಯಾಷನ್‌ ಶೋ, ವಾಕ್‌ ಹಾಗೂ ಬೆಸ್ಟ್‌ ಸೀರೆ ಸೆಲೆಕ್ಷನ್‌, ಬೆಸ್ಟ್‌ ಸೀರೆ ಲುಕ್‌ನಂತಹ ಸ್ಪರ್ಧೆಗಳು ನಡೆಯುತ್ತವೆ. ಇದು ಮಹಿಳೆಯರ ಉತ್ಸಾಹವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಕಾರ್ಪೋರೇಟ್‌ ಕ್ಷೇತ್ರದ ಎಕ್ಸ್‌ಪಟ್ರ್ರ್ಸ್.

ಕೇರಳದ ಸೀರೆಗಳಲ್ಲಿ ನಾರಿಯರು

ಇನ್ನು ಕೇರಳದ ಸೀರೆಗಳು ಇತರೇ ಸೀರೆಗಳಿಗಿಂತ ಕಂಪ್ಲೀಟ್‌ ವಿಭಿನ್ನವಾಗಿರುತ್ತವೆ. ಇವುಗಳಲ್ಲಿ ಕಾಣಿಸಿಕೊಳ್ಳುವುದೇ ಚೆಂದ ಎನ್ನುವ ಮಿಸೆಸ್‌ ಇಂಡಿಯಾ ಕಾರ್ಪೋರೇಟ್‌ ಕ್ವೀನ್‌ (2018 ) ಉಷಾ ಜಮದಗ್ನಿ ಹೇಳುವಂತೆ. ಓಣಂ ಸೀರೆಗಳಲ್ಲಿ ಟೀಮ್‌ನ ಮಹಿಳೆಯರು ಕಾಣಿಸಿಕೊಂಡು ಸಂಭ್ರಮಿಸುವುದು ಜೀವನೋತ್ಸಾಹ ಹೆಚ್ಚಿಸುತ್ತದಂತೆ.

ನೆಚ್ಚಿನ ಶ್ವೇತ ವರ್ಣದ ಸೀರೆಗಳು

ಓಣಂ ಸೆಲೆಬ್ರೇಷನ್‌ನಲ್ಲಿ ಶ್ವೇತ ವರ್ಣದ ಕಾಟನ್‌ ಸೀರೆಗಳಿಗಿಂತ ಕಸವು ಸೀರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಗೋಲ್ಡನ್‌ ಬಾರ್ಡರ್‌ ಹೊಂದಿರುವ ಕಸವು ಸೀರೆಗಳನ್ನು ಉಟ್ಟು ಹೂವಿನ ರಂಗೋಲಿ ಮುಂದೆ ಪೋಸ್‌ ನೀಡುವುದು ಕೂಡ ಕಾಮನ್‌ ಆಗಿದೆ. ಇದೀಗ ಪ್ರತಿ ಮಹಿಳೆಯರ ಸೀರೆಯ ವಾರ್ಡ್ರೋಬ್‌ನಲ್ಲಿ ಕೇರಳದ ಈ ಸೀರೆಗಳು ಒಂದಾಗಿವೆ ಎನ್ನುವ ಡಿಸೈನರ್‌ ದಾಮಿನಿ ಪ್ರಕಾರ, ಇದೀಗ ಯುವತಿಯರು ಧರಿಸಲು ಸುಲಭವಾಗುವಂತಹ ಕೇರಳ ಸೀರೆಗಳು ಆಗಮಿಸಿವೆ. ಇನ್ನು ಯೂ ಟ್ಯೂಬ್‌ ಬ್ಯೂಟಿ ಚಾನೆಲ್‌ಗಳು ಕೂಡ ಸೀರೆ ಉಡುವುದನ್ನು ಕಲಿಸುತ್ತಿವೆ. ಹಾಗಾಗಿ ಮಹಿಳೆಯರು ಈ ಸೀರೆಗಳತ್ತ ಒಲವು ಹೆಚ್ಚಾಗುತ್ತಿದೆ ಎನ್ನುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Varamahalaxmi Saree Fashion: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಟ್ರೆಂಡಿಯಾದ 3 ಶೈಲಿಯ ರೇಷ್ಮೆ ಸೀರೆ

Exit mobile version