ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್, ಸ್ನಾಪ್‌ಚಾಟ್ ಸೇರಿದಂತೆ ನಾನಾ ರಾಷ್ಟ್ರೀಯ-ಅಂತಾರಾಷ್ಟ್ರೀಯ ಬ್ಯೂಟಿ ಬ್ಲಾಗ್‌ಗಳಲ್ಲೂ ಮೇಕಪ್ ಪ್ರಿಯರ ಫೋಟೋಗಳು, ವಿಡಿಯೋ ಕ್ಲಿಪ್‌ಗಳನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಂಡಿದೆ.
ಬ್ಯೂಟಿ ಅಕಾಡೆಮಿಯ ಸಮೀಕ್ಷೆಯೊಂದರ ಪ್ರಕಾರ, ಮೊದಲೆಲ್ಲಾ ಮೇಕಪ್(Makeup) ತಜ್ಞರು ಮಾತ್ರ ಈ ಬಗ್ಗೆ ಆಸಕ್ತಿ ವಹಿಸುತ್ತಿದ್ದರು. ಇದೀಗ ಮೇಕ್ ಓವರ್ ಮಾಡುವವರು, ಬ್ಯೂಟಿಶೀಯನ್‌ಗಳು, ಮೇಕಪ್‌ಗೆ ಒಳಗಾಗುವವರು ಕೂಡ ಮೇಕಪ್‌ನ ಸೀರೀಸ್ ಫೋಟೋ, ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೋಹಕ್ಕೆ ಒಳಗಾಗಿದ್ದಾರೆ. ಇದು ಯಾವ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸಿದೆಯೆಂದರೆ ಮೇಕಪ್‌ಗೆ(Makeup) ಒಳಗಾಗುವವರ ಮೊದಲು ಹಾಗೂ ನಂತರದ ಕ್ಲಿಪ್‌ಗಳು ಅತಿ ಹೆಚ್ಚಾಗಿ ಕಾಣಿಸಲಾರಂಭಿಸಿವೆ.
ಸಂದೇಶದ ಮೂಲಕ ಬೇಡಿಕೆ:
ಮೇಕಪ್ ಆರ್ಟಿಸ್ಟ್ ಅಹಲ್ಯಾ ಅವರ ಪ್ರಕಾರ: ಸೋಷಿಯಲ್ ಮೀಡಿಯಾದಲ್ಲಿ ಮೇಕಪ್ ಫೋಟೋಗಳಲ್ಲಿ ಇದೀಗ ಅತಿ ಹೆಚ್ಚು ಆಕರ್ಷಿಸುತ್ತಿರುವುದು ಐ ಮೇಕಪ್, ಐ ಲೈನರ್, ಐ ಶ್ಯಾಡೋವರೆಗಿನ ಮೇಕಪ್ ಮಾಡಿದಂಥವು ಬ್ಯೂಟಿ ಪ್ರಿಯರನ್ನು ಸೆಳೆಯುತ್ತಿವೆ. ಅದನ್ನು ಹೊರತುಪಡಿಸಿದಲ್ಲಿ, ಬ್ರೈಡಲ್ ಮೇಕಪ್ ಫೋಟೊ ಹಾಗೂ ಕ್ಲಿಪ್‌ಗಳು ಹೆಚ್ಚು ಲೈಕ್ಸ್ ಪಡೆಯುತ್ತಿವೆ. ಸಂದೇಶದ ಮೂಲಕವೇ ಬೇಡಿಕೆ ಕೂಡ ಬರುತ್ತಿದೆ.
ಉತ್ತಮ ಬೆಳವಣಿಗೆ:
ಬ್ಯೂಟಿ ಬ್ಲಾಗರ್ಸ್‌ಗಳ ಪ್ರಕಾರ: ಸೋಷಿಯಲ್ ಮೀಡಿಯಾ ಪರೋಕ್ಷವಾಗಿ ಈ ಕ್ಷೇತ್ರವನ್ನು ಪ್ರೋತ್ಸಾಹಿಸುವುದರೊಂದಿಗೆ ಮೇಕಪ್ ಪ್ರಿಯರನ್ನು ಆಕರ್ಷಿಸುತ್ತಿದೆ. ಇದು ಉತ್ತಮ ಬೆಳವಣಿಗೆ.
ಅದರೊಂದಿಗೆ ಒಂದೆರೆಡು ಉತ್ತಮ ಸಲಹೆ ಕೂಡ ಅವರು ಹೀಗೆ ನೀಡುತ್ತಾರೆ: ಆದಷ್ಟೂ ನಿಮ್ಮದೇ ಆದ ಸೋಷಿಯಲ್ ಮೀಡಿಯಾ ಐಡೆಂಟಿಟಿ ಸೃಷ್ಟಿಸಿಕೊಳ್ಳಿ. ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಹಿತಿ ಮಾತ್ರ ನೀಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: ನನಗೆ ನನ್ನದೇ ಆದ ಫ್ಯಾಷನ್ ರೂಲ್ಸ್ ಇದೆ!