ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಲ್ಲಿ ಬಾಲಿವುಡ್‌ನ ತಾರೆಯರು (Pre Diwali Party) ಒಬ್ಬರಿಗಿಂತ ಒಬ್ಬರು ಮಿನುಗುತ್ತಿದ್ದರು. ಕೆಲವರು ಮಿಂಚುವ ಭಿನ್ನ-ವಿಭಿನ್ನ ಸೀರೆಗಳಲ್ಲಿ ಕಾಣಿಸಿಕೊಂಡರೇ, ಇನ್ನು ಕೆಲವರು ಜಗಮಗಿಸುವ ಟ್ರೆಡಿಷನಲ್ ಗ್ರ್ಯಾಂಡ್ ಔಟ್‌ಫಿಟ್‌ಗಳಲ್ಲಿ ಮಿಂಚಿದರು. ಅಂದಹಾಗೆ, ಬಾಲಿವುಡ್ ತಾರೆಯರ ಜಗಮಗಿಸುವ ಔಟ್‌ಫಿಟ್ ಹಾಗೂ ಸೀರೆಗಳ ಅನಾವರಣಗೊಂಡದ್ದು, ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ. ಈ ಪಾರ್ಟಿಗೆಂದು ಆಗಮಿಸಿದ ತಾರೆಯರೆಲ್ಲರೂ ತಂತಮ್ಮ ಜಗಮಗಿಸುವ ಫ್ಯಾಷನ್‌ವೇರ್ ಹಾಗೂ ಸೀರೆಗಳಲ್ಲಿ ಕಾಣಿಸಿಕೊಂಡು ದೀಪಾವಳಿಗೆ ಮುನ್ನವೇ ಟ್ರೆಂಡ್ ಸೆಟ್ ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಹೆವಿ ಡಿಸೈನರ್‌ವೇರ್‌ನಲ್ಲಿ ತಾರೆಯರು
ನಟಿ ಐಶ್ವರ್ಯಾ ರೈ ಧರಿಸಿದ ಮಾನೋಕ್ರೋಮ್ ಬ್ಲಡ್ ರೆಡ್ ಶೇಡ್‌ನ ಪಲ್ಹಾಜೋ ಶಾರ್ಟ್ ಕಮೀಝ್ ಹಾಗೂ ಬಾರ್ಡರ್ ದುಪಟ್ಟಾ ಇರುವ ಹೆವ್ವಿ ಡಿಸೈನರ್‌ವೇರ್ ಈ ಫೆಸ್ಟಿವ್ ಸೀಸನ್‌ಗೆ ಸೇರಿದೆ. ಬೆಳಗಾಗುವುದರೊಳಗೆ ಈಗಾಗಲೇ ಇದರ ರಿಪ್ಲಿಕಾ ಎಲ್ಲೆಡೆ ಎಂಟ್ರಿ ನೀಡಿ, ಪಾಪ್ಯುಲರ್ ಲಿಸ್ಟ್‌ಗೆ ಸೇರುವುದರಲ್ಲಿದೆ.
ರೀಪಿಟ್ ಆದ ತಾರೆಯರ ಸಿಕ್ವಿನ್ ಸೀರೆಗಳು
ಸೀಸನ್ ಕಳೆದರೂ ಮಿನುಗುವ ವೆರೈಟಿ ಸಿಕ್ವೀನ್ ಸೀರೆಗಳು ಮಾತ್ರ ಟ್ರೆಂಡ್‌ನಿಂದ ಹೊರಗೆ ಹೋಗಿಲ್ಲ! ಇದಕ್ಕೆ ಸಾಕ್ಷಿ ಎಂಬಂತೆ, ದಿಶಾ ಪಟಾನಿ, ಕೃತಿ ಸನೂನ್ ಹಾಗೂ ತಮನ್ನಾ ಬಾಟಿಯಾ ಡಿಫರೆಂಟ್ ಶೇಡ್‌ನ ಸಿಕ್ವಿನ್ಸ್ ಸೀರೆಯಲ್ಲಿ ಮಿನುಗಿದ್ದಾರೆ. ಇದೀಗ ಈ ಸೀರೆ ಸಾಮಾನ್ಯ ಮಹಿಳೆಯರ ವಾರ್ಡ್ರೋಬ್‌ನಲ್ಲಿ ಕಳೆದ ಸಾಲಿನಿಂದಲೇ ಸ್ಥಾನ ಗಳಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ವಿದ್ಯಾ ವಿವೇಕ್. ಈ ಪಾರ್ಟಿಯಲ್ಲಿ ಪಾಲ್ಗೊಂಡ ಒಬ್ಬೊಬ್ಬರದು ಒಂದೊಂದು ಯೂನಿಕ್ ಡಿಸೈನರ್‌ವೇರ್‌ಗಳಾಗಿದ್ದು ವಿಶೇಷ ಎನ್ನುತ್ತಾರೆ.
ತಾರೆಯರ ಜಗಮಗಿಸುವ ಗ್ಲಾಮರಸ್ ಲೆಹೆಂಗಾ
ಗೋಲ್ಡನ್ ಲೆಹೆಂಗಾದಲ್ಲಿ ಜಾನ್ವಿ ಕಪೂರ್, ಪಿಂಕ್ ಲೆಹೆಂಗಾದಲ್ಲಿ ಸಾರಾ, ಹಳದಿ ಲೆಹೆಂಗಾದಲ್ಲಿ ಅನನ್ಯಾ ಪಾಂಡೇ, ಫಿಶ್ ಕಟ್ 2 ಪೀಸ್ ಫಿಶ್‌ಕಟ್ ಗೌನ್‌ನಲ್ಲಿ ನೋರಾ, ವೆಲ್ವೆಟ್ ಗೋಲ್ಡನ್ ಶೇಡ್ ಲೆಹೆಂಗಾದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದು, ಈಗಾಗಲೇ ಫ್ಯಾಷನ್ ಪ್ರಿಯರ ಮನಗೆದ್ದಿದೆ. ಇವುಗಳೆಲ್ಲದರ ರಿಪ್ಲೀಕಾ ಔಟ್‌ಫಿಟ್ಗಳು ಸದ್ಯದಲ್ಲೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion 2023-2024: ಚಳಿಗಾಲದ ಬೆಚ್ಚನೆಯ ಫ್ಯಾಷನ್‌ಗೆ ಸೈ ಎನ್ನಿ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ