ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವ ಬಂಗಾರ ಹಾಗೂ ಬಂಗಾರೇತರ ಪ್ರೆಸ್ ಆನ್ ಮೂಗುತಿಗಳು (Press On Nosepin) ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಹೌದು. ಶ್ರಾವಣ ಮಾಸದ ಹಬ್ಬದ ಸೀಸನ್ ಆರಂಭವಾಗುತ್ತಿರುವಂತೆಯೇ ಮಹಿಳೆಯರ ದೇಶೀಯ ಲುಕ್ ಅಥವಾ ಟ್ರೆಡಿಷನಲ್ ಲುಕ್‌ಗೆ ಮ್ಯಾಚ್ ಆಗುವಂತಹ ಚಿನ್ನ ಹಾಗೂ ಆರ್ಟಿಫಿಶಿಯಲ್ ಮೆಟಲ್‌ನ ಪ್ರೆಸ್ ಆನ್ ಮೂಗುತಿಗಳು ಈಗಾಗಲೇ ಬಿಕರಿಯಾಗುತ್ತಿವೆ.
ಟ್ರೆಂಡ್‌ನಲ್ಲಿರುವ ವಿನ್ಯಾಸದ ಪ್ರೆಸ್ ಆನ್ ಮೂಗುತಿಗಳು
ಟ್ರೆಡಿಷನಲ್ ಲುಕ್ ಇರುವಂತಹ ಕಮಲ, ತ್ರಿಶೂಲ, ರಂಗೋಲಿ ಚಿತ್ತಾರ, ಶಂಖ-ಚಕ್ರ, ಕೊಳಲು, ಮಹಾರಾಷ್ಟ್ರೀಯನ್ ಶೈಲಿಯ ಮುತ್ತಿನ ಮೂಗಿನ ರಿಂಗ್, ಪ್ರಿಶಿಯಸ್ ಸ್ಟೋನ್ಸ್ ಇರುವಂತಹ ಕಾಸಗಲದ್ದು, ಎನಮೆಲ್ ಪೇಂಟ್ ಇರುವಂತಹ ಆಂಟಿಕ್ ವಿನ್ಯಾಸದವು, ಕಾಸಗಲದವು, ಏಳು, ಒಂಭತ್ತು ಹಾಗೂ ಹನ್ನೊಂದು ಕಲ್ಲಿನ ಕಿವಿಯೊಲೆಯಂತವು, ಸೂರ್ಯಕಾಂತಿ, ಸೇವಂತಿಗೆ, ಡೈರಿಯಾದಂತಹ ಹೂವಿನ ಎಂಬೋಸಿಂಗ್ ಇರುವಂತವು, ಕುಂದನ್‌ನಿಂದ ಸಿಂಗರಿಸಲ್ಪಟ್ಟವು, ನವಿಲು, ಪಾರಿವಾಳ, ಗಿಳಿ ಸೇರಿದಂತೆ ನಾನಾ ಹಕ್ಕಿ-ಪಕ್ಷಿಗಳ ಮಿನಿಯೇಚರ್‌ನಂತ ಪ್ರೆಸ್ ಆನ್ ಮೂಗುತಿಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ನೋಡಲು ಒಂದಕ್ಕಿಂತ ಒಂದು ಮನಮೋಹಕ ಎನಿಸುವಂತಹ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ.
ಟ್ರೆಡಿಷನಲ್ ಲುಕ್‌ಗೆ ಪ್ರೆಸ್ ಆನ್ ಮೂಗುತಿಗಳ ಮ್ಯಾಚಿಂಗ್
ಮೂಗು ಚುಚ್ಚಿಸದಿದ್ದರೆ ಏನಂತೆ, ಸೀರೆ, ಲಂಗ-ದಾವಣಿ, ಸಲ್ವಾರ್, ಹಾಫ್ ಸೀರೆ, ಲೆಹೆಂಗಾ ಧರಿಸಿದಾಗ ಈ ಪ್ರೆಸ್ ಆನ್ ಮೂಗುತಿಗಳನ್ನು ಇತರೇ ಜ್ಯುವೆಲರಿಗಳೊಂದಿಗೆ ಧರಿಸಿದಲ್ಲಿ ಟ್ರೆಡಿಷನಲ್ ಲುಕ್ ಪಡೆಯಬಹುದು. ನೋಡಲು ಕಂಪ್ಲೀಟ್ ಹಬ್ಬದ ಲುಕ್ ನಿಮ್ಮದಾಗುತ್ತದೆ ಎನ್ನುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ಜೀವಿತಾ. ಅವರು ಹೇಳುವಂತೆ, ಪ್ರೆಸ್ ಆನ್ ಮೂಗುತಿಗಳು 100 ರೂ.ಗಳಿಂದ ಆರಂಭಗೊಂದು ಸಾವಿರ ರೂ.ಗಳವರೆಗೂ ಫ್ಯಾನ್ಸಿ ಶಾಪ್‌ಗಳಲ್ಲಿ ಲಭ್ಯ.
ಪ್ರೆಸ್ ಆನ್ ಮೂಗುತಿ ಧರಿಸುವವರಿಗೆ 5 ಟಿಪ್ಸ್
- ಮೇಕಪ್ ಮುಗಿದ ನಂತರ ಇದನ್ನು ಧರಿಸಿ.
- ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಮೂಗುತಿ ಸೆಲೆಕ್ಟ್ ಮಾಡಿ.
- ಮೂಗುತಿಗೆ ಬೇರೆ ಜ್ಯುವೆಲರಿಗಳು ಹೊಂದಬೇಕು.
- ಫಿನಿಶಿಂಗ್ ಇರುವಂತಹ ಪ್ರೆಸ್ ಆನ್ ಮೂಗುತಿಯನ್ನೇ ಖರೀದಿಸಿ.
- ರಾತ್ರಿ ಮಲಗುವ ವೇಳೆ ತೆಗೆದಿಡಿ. ಸ್ಕಿನ್ ಅಲರ್ಜಿಯಾಗಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festive Season Fashion: ಶ್ರಾವಣ ಸಂಭ್ರಮ ಹೆಚ್ಚಿಸಲು ಎಂಟ್ರಿ ಕೊಟ್ಟ ಟ್ರೆಡಿಷನಲ್‌ವೇರ್ಸ್