Site icon Vistara News

Rakshabandhan Festival: ರಕ್ಷಾ ಬಂಧನಕ್ಕೆ ಟ್ರೆಂಡಿಯಾದ 5 ಶೈಲಿಯ ಆಕರ್ಷಕ ರಾಖಿ

Rakshabandhan Festival

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರಕ್ಷಾ ಬಂಧನದ ಸಂಭ್ರಮಕ್ಕೆ (Rakshabandhan Festival) ಸಾಥ್‌ ನೀಡಲು ಊಹೆಗೂ ಮೀರಿದ ಆಕರ್ಷಕ ಬಗೆಬಗೆಯ ಡಿಸೈನರ್‌ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೋಡಲು ಒಂದಕ್ಕಿಂತ ಒಂದು ಡಿಫರೆಂಟ್‌ ಆಗಿ ಬಿಂಬಿಸುವ ಈ ರಾಖಿಗಳು ಗ್ರಾಹಕರ ಆಯ್ಕೆ ಅನುಗುಣವಾಗಿ ದೊರೆಯುತ್ತಿವೆ. ಅವುಗಳಲ್ಲಿ ಈ ಐದು ಬಗೆಯ ವಿನೂತನ ಕಾನ್ಸೆಪ್ಟ್‌ನ ರಾಖಿಗಳು ಈ ಫೆಸ್ಟಿವ್‌ ಸೀಸನ್‌ನಲ್ಲಿ ಆಗಮಿಸಿವೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ವಿವರ.

ಜೆನ್‌ ಜಿ ಆಯ್ಕೆಯ ಫಂಕಿ ರಾಖಿ

ಜೆನ್‌ ಜಿ ಹುಡುಗರಿಗೆ ಪ್ರಿಯವಾಗುವಂತ ಫಂಕಿ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವರಿಗೆ ಇಷ್ಟವಾಗುವಂತಹ ಫಂಕಿ ಪದಗಳನ್ನು ಹೊಂದಿರುವಂತವು, ಬ್ರೋ ಎಂದೆಲ್ಲಾ ಬರೆದಿರುವಂತವು, ಜಂಕ್‌ ಜ್ಯುವೆಲರಿ ಪೀಸ್‌ನಂತೆ ಕಾಣುವಂತಹ ಫಂಕಿ ಡಿಸೈನ್‌ನವು ಆಗಮಿಸಿವೆ. ಇವು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಲಭ್ಯ.

ಬ್ರೇಸ್‌ಲೇಟ್‌ ರಾಖಿ

ಹಬ್ಬ ಮುಗಿದರೂ ಧರಿಸಬಹುದಾದ ರಾಖಿಗಳಿವು. ಇತರೇ ಸಮಯದಲ್ಲೂ ಅದರಲ್ಲೂ ಸಮಾರಂಭಗಳಲ್ಲಿಯೂ ಇತರೇ ಜ್ಯುವೆಲರಿಗಳಂತೆ ಧರಿಸಬಹುದಾದ ಈ ಬ್ರೇಸ್‌ಲೇಟ್‌ ರಾಖಿಗಳು ಥೇಟ್‌ ಬಂಗಾರದ ಬ್ರೇಸ್‌ಲೇಟ್‌ನಂತೆಯೇ ಕಾಣುತ್ತವೆ. ಇದು ಪ್ಲಾಟಿನಂ ಶೇಡ್‌, ವೈಟ್‌ ಮೆಟಲ್‌ ಹಾಗೂ ವನ್‌ ಗ್ರಾಮ್‌ ಗೋಲ್ಡ್‌ನಲ್ಲಿಯೂ ಲಭ್ಯ. ಕೊಂಚ ದುಬಾರಿ.

ಹ್ಯಾಂಡ್‌ಮೇಡ್‌ ರಾಖಿ

ಕಲಾವಿದರೂ ತಮ್ಮ ಕೈಗಳಲ್ಲಿಯೇ ತಯಾರಿಸಿದಂತಹ ರಾಖಿಗಳಿವು. ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಅವರಿಗೆ ಬೇಕಾದಂತಹ ಡಿಸೈನ್‌ನಲ್ಲಿ, ಕಟ್ಟಿಸಿಕೊಳ್ಳುವವರ ಅಭಿರುಚಿಗೆ ತಕ್ಕಂತೆ ಇವನ್ನು ಸಿದ್ಧಪಡಿಸಲಾಗಿರುತ್ತದೆ. ಹಾಗಾಗಿ ಡಿಸೈನ್‌ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ.

ಇಕೋ ಫ್ರೆಂಡ್ಲಿ ರಾಖಿ

ಪರಿಸರ ಸ್ನೇಹಿ ಹಾಗೂ ಪರಿಸರ ಪ್ರೇಮಿಗಳಿಗೆಂದೇ ಇಂತಹ ರಾಖಿಗಳು ಕಾಲಿಟ್ಟಿವೆ. ಪ್ಲಾಸ್ಟಿಕ್‌ನ ಕೊಂಚವೂ ಟಚ್‌ ಇರದಂತಹ ಈ ರಾಖಿಗಳು ರಿಸೈಕಲ್‌ ವಸ್ತುಗಳಿಂದ ಸಿದ್ಧಪಡಿಸಿದವಾಗಿರುತ್ತವೆ. ಇವು ಪರಿಸರ ಸ್ನೇಹಿ ರಾಖಿಗಳು ಎನ್ನಬಹುದು.

ಮರೆಯಾಗದ ಸ್ಪಿರಿಚ್ಯುಯಲ್‌ ಸಿಂಬಲ್‌ ರಾಖಿಗಳು

ಓಂ, ಸ್ವಸ್ತಿಕ್‌ ಹಾಗೂ ರುದ್ರಾಕ್ಷಿ ಸೇರಿದಂತೆ ಆಧ್ಯಾತ್ಮಿಕ ಸಿಂಬಲ್‌ ಹಾಗೂ ದೇವರ ಚಿತ್ರಗಳನ್ನು ಹೊಂದಿರುವಂತಹ ರಾಖಿಗಳಿವು. ಇವು ಎವರ್‌ಗ್ರೀನ್‌ ರಾಖಿಗಳೆಂದೇ ಖ್ಯಾತಿ ಹೊಂದಿವೆ. ಜನರೇಷನ್‌ ಬದಲಾದರೂ ಈ ರಾಖಿಗಳು ಮಾತ್ರ ಇಂದಿಗೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿವೆ. ಹೊಸ ಡಿಸೈನ್‌ನಲ್ಲಿ ಇವು ಬಿಡುಗಡೆಗೊಂಡಿವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Festival Fashion: ಟ್ರೆಡಿಷನಲ್‌ವೇರ್ಸ್‌ನಲ್ಲಿ ಮಹಾಲಕ್ಷ್ಮಿಯರಂತೆ ಹಬ್ಬವನ್ನು ಸಂಭ್ರಮಿಸಿದ ಸೆಲೆಬ್ರೆಟಿಗಳು

Exit mobile version