Site icon Vistara News

Rakshabhandan Gift Idea: ಸಹೋದರಿಯರಿಗೆ ನೀಡುವ ಪ್ರೀತಿಯ ಕೊಡುಗೆಗೆ 5 ಐಡಿಯಾ

Rakshabhandan Gift Idea

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರಾಖಿ ಕಟ್ಟಿದಾಗ ನೀವು ಸೋದರಿಯರಿಗೆ ನೀಡುವ ಗಿಫ್ಟ್ (Rakshabhandan Gift Idea) ಮೂಲೆಗಿಡುವ ವಸ್ತುವಾಗಬಾರದು. ಅತ್ಯಮೂಲ್ಯ ಬಾಂಧವ್ಯವನ್ನು ಪ್ರತಿಬಿಂಬಿಸುವಂತಿರಬೇಕು. “ಹಿಂದಿನಿಂದಲೂ ಸೋದರಿಯರಿಂದ ರಾಖಿ ಕಟ್ಟಿಸಿಕೊಂಡ ನಂತರ ಸೋದರರು ಗಿಫ್ಟ್ ನೀಡುವುದು ನಡೆದು ಬಂದ ರಿವಾಜು. ಹಾಗೆಂದು ನೀವು ಕೊಡುಗೆಯಾಗಿ ಏನಾದರೂ ನೀಡಬೇಕು ಎಂದು ಕೈಗೆ ಸಿಕ್ಕಿದ್ದನ್ನು ನೀಡುವುದು ನಾಟ್ ಓಕೆ. ಬದಲಿಗೆ ಸೋದರಿಯ ಮನಸ್ಸು ಮುಟ್ಟುವಂತಹ ಆಕೆಗೆ ಪ್ರಿಯವಾಗುವಂತಹ ಗಿಫ್ಟ್ ನೀಡುವುದು ಉತ್ತಮ” ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ನೀವು ನೀಡುವ ಕೊಡುಗೆ ಹೇಗಿರಬೇಕು ಎಂಬುದರ ಬಗ್ಗೆ ಒಂದಿಷ್ಟು ಐಡಿಯಾ ನೀಡಿದ್ದಾರೆ.

ಜನರೇಷನ್‌ಗೆ ತಕ್ಕಂತೆ ಗಿಫ್ಟ್ ಆಯ್ಕೆ

ಆಯಾ ವಯಸ್ಸಿಗೆ ಅನುಗುಣವಾಗಿ ಗಿಫ್ಟ್ ನೀಡುವುದು ಅವಶ್ಯ. ಉದಾಹರಣೆಗೆ., ಶಾಲಾ-ಕಾಲೇಜು ಹುಡುಗಿಯರಾದಲ್ಲಿ ಆದಷ್ಟೂ ಅವರ ಅಭಿರುಚಿಗೆ ತಕ್ಕಂತಿರಬೇಕು. ಹಿರಿಯರಾದಲ್ಲಿ ಅವರಿಗೆ ಇಷ್ಟವಾಗುವಂತಿರಬೇಕು. ನೀವು ನೀಡುವ ಗಿಫ್ಟ್ ಆಸಕ್ತಿ ಕೆರಳಿಸಬೇಕು. ಅಯ್ಯೋ, ಇದಾ ಗಿಫ್ಟ್ ಎಂದು ಟೀಕೆ ಮಾಡುವಂತಿರಬಾರದು. ಕಡಿಮೆ ಬೆಲೆಯದ್ದಾದರೂ ಸರಿ ಅದು ನೀಡಿದ ಮೇಲೆ ಗಮನ ಸೆಳೆಯಬೇಕು.

ಚಾಕೋಲೇಟ್ ಹ್ಯಾಂಪರ್ಸ್

ಚಾಕೋಲೇಟ್ ಪ್ರಿಯರಾದಲ್ಲಿ ಅದರಲ್ಲೂ ಟಿನೇಜ್ ಹುಡುಗಿಯರಾದಲ್ಲಿ ಅವರಿಗಿಷ್ಟವಾಗುವ ಚಾಕೋಲೇಟ್ ಹಾಗೂ ಕುಕ್ಕೀಸ್‌ನಂತಹ ಗಿಫ್ಟ್ ಬಾಕ್ಸ್ ನೀಡಬಹುದು. ಇದೀಗ ಈ ರೀತಿಯ ಬಾಕ್ಸ್‌ಗಳು ನಾನಾ ಸೈಝ್‌ಗಳಲ್ಲಿ ರಕ್ಷಾ ಬಂಧನಕ್ಕೆಂದೇ ದೊರಕುತ್ತಿವೆ.

ಟೆಡ್ಡಿಬೇರ್-ಡಾಲ್ ಗಿಫ್ಟ್ಸ್

ಹೆಚ್ಚಿನ ಹೆಣ್ಣು ಮಕ್ಕಳಿಗೆ ಬಗೆಬಗೆಯ ಟೆಡ್ಡಿಬೇರ್ಸ್ ಹಾಗೂ ಬಾರ್ಬಿ ಡಾಲ್ ಮತ್ತು ಟಾಯ್ ಸೆಟ್ ಹಾಗೂ ಪ್ಲೇಯಿಂಗ್ ಮೇಕಪ್ ಕಿಟ್‌ಗಳು ಇಷ್ಟವಾಗುತ್ತವೆ. ಇವನ್ನೂ ಕೂಡ ನೀಡಬಹುದು. ಸಹೋದರಿಯು ಬಹಳ ದಿನಗಳಿಂದ ಕೊಳ್ಳಲು ಬಯಸುತ್ತಿರುವ ಅವರ ಆಯ್ಕೆಯ ವಸ್ತುವಿನ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ, ಅದನ್ನೇ ಕೊಂಡು ಕೊಡುಗೆಯಾಗಿ ನೀಡಿ, ಸರ್ಪ್ರೈಸ್ ಮಾಡಿ. ಇದು ಅವರಿಗೆ ದುಪಟ್ಟು ಸಂತೋಷ ನೀಡುತ್ತದೆ.

ಕಸ್ಟಮೈಸ್ಡ್ ಗಿಫ್ಟ್ಸ್

ಫೋಟೋ ಫ್ರೇಮ್, ಪೊಟ್ರೈಟ್ ಮಗ್ ಸೇರಿದಂತೆ ನಾನಾ ಬಗೆಯವನ್ನು ಕಸ್ಟಮೈಸ್ಡ್ ಮಾಡಿಸಿ ನೀಡಬಹುದು. ಸಹೋದರಿಗೆ ಇಷ್ಟವಾಗುವಂತಿರುವ ವಸ್ತುಗಳನ್ನು ಕೊಡುಗೆಯಾಗಿ ನೀಡಬಹುದು. ಉದಾಹರಣೆಗೆ., ಜೊತೆಗೆ ಕಳೆದ ನೆನಪುಗಳನ್ನು ಮೆಲುಕು ಹಾಕುವಂತಹ ಫೋಟೋವೊಂದನ್ನು ಲ್ಯಾಮಿನೇಟ್ ಮಾಡಿಸಬಹುದು. ಫೋಟೋ ಫ್ರೇಮ್ ಹಾಕಿಸಿ ನೀಡಬಹುದು. ಫೋಟೋಗಳನ್ನು ಮಗ್ ಇಲ್ಲವೇ ಟೀ ಶರ್ಟ್ ಮೇಲೆ ಹಾಕಿಸಿ ನೀಡಬಹುದು. ಕೀಚೈನ್ ಮೇಲೂ ಪುಟ್ಟದಾದ ಫೋಟೋ ಹಾಕಿಸಬಹುದು.

ಹಣದ ಬದಲು ಗಿಫ್ಟ್ ವೋಚರ್

ಇದೀಗ ಇಂತಿಷ್ಟು ಬೆಲೆಯ ಗಿಫ್ಟ್ ವೋಚರ್ಗಳನ್ನು ಆನ್‌ಲೈನ್‌ನ್ನಲ್ಲಿ ಖರೀದಿಸಿ ನೀಡಬಹುದು. ಆಗ ಸಹೋದರಿಯು ಅವರಿಗೆ ಇಷ್ಟವಾಗುವಂತಹ ವಸ್ತುಗಳನ್ನು ಖರೀದಿಸಬಹುದು. ಒಬ್ಬರಿಗಿಂತ ಹೆಚ್ಚಿನವರಿಗಾದಲ್ಲಿ, ಮನೆಯಲ್ಲಿ ಸೋದರಿಯರು ಒಬ್ಬರಿಗಿಂತ ಹೆಚ್ಚು ಮಂದಿಯಿದ್ದಲ್ಲಿ ಮೊದಲೇ ಅವರ ಚಾಯ್ಸ್ ತಿಳಿದುಕೊಳ್ಳಿ. ಸಮಾನ ಮನಸ್ಕರಾದಲ್ಲಿಎಲ್ಲರಿಗೂ ಒಂದೇ ರೀತಿಯ ಗಿಫ್ಟ್ ನೀಡಿ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Onam Saree Fashion: ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಟ್ರೆಡಿಷನಲ್‌ ಫ್ಯಾಷನ್‌ಗೆ ಸೇರಿದ ಓಣಂ ಸೀರೆ

Exit mobile version