Site icon Vistara News

Ramp News: ರ‍್ಯಾಂಪ್‌ನಲ್ಲಿ ಮಿನುಗಿದ ಸೌತ್‌ ಇಂಡಿಯಾ ಕ್ರೌನ್‌ ವಿಜೇತರು

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಆಕರ್ಷಕ ಡಿಸೈನರ್‌ವೇರ್‌ ಧರಿಸಿದ ಮಾಡೆಲ್‌ಗಳು ಹೆಜ್ಜೆ ಹಾಕುತ್ತಿದ್ದರೆ ಸುತ್ತಮುತ್ತಲು ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸುತ್ತಿದ್ದರು. ಎಡೆಬಿಡದ ಮಳೆಯ ನಡುವೆ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ದಕ್ಷಿಣ ಭಾರತದ ನಾನಾ ಕಡೆಯಿಂದ ಆಗಮಿಸಿದ ಮಾಡೆಲ್‌ಗಳು ಭಾಗವಹಿಸಿದ್ದರು.

ಇನ್ನು ಮಿಸೆಸ್‌ ಸೌತ್‌ ಇಂಡಿಯಾ ವಿವಾಹಿತರ ಕೆಟಗರಿಯಲ್ಲಿ ಭಾಗವಹಿಸಿದ್ದವರಲ್ಲಿ ಗೃಹಿಣಿಯರು ವೃತ್ತಿಪರ ಮಹಿಳೆಯರು ಒಳಗೊಂಡಿದ್ದರು.

ರ‍್ಯಾಂಪ್ ಮೇಲೆ ಮಾಡೆಲ್ಗಳು ಸಾಲಾಗಿ ನಿಂತಿರುವುದು

ಸೌಂದರ್ಯ ಸ್ಪರ್ಧೆ ವಿಜೇತರ ಪಟ್ಟಿ

ಮಿಸ್‌ ಹಾಗೂ ಮಿಸೆಸ್‌ ಸೌತ್‌ ಇಂಡಿಯಾ( I am powerful) ಸೌಂದರ್ಯ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಿಯಾಂಕಾ ಗಿರೀಶ್‌, ಸುವರ್ಣಾ ರೆಡ್ಡಿ, ಜನನಿ, ಬಬಿತಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಪೆಜೆಂಟ್‌ನ ಮೆಂಟರ್‌ ಹಾಗೂ ಶೋ ಡೈರೆಕ್ಟರ್‌ ನಂದಿನಿ ನಾಗರಾಜ್‌ ವಿಜೇತರಿಗೆ ಸ್ಯಾಶ್‌ ಮತ್ತು ಕಿರೀಟವನ್ನು ಮುಡಿಗೇರಿಸಿದರು.

ಮಾಡೆಲ್‌ ಪ್ರತಿಕ್‌ ಬ್ಯಾನೆರ್ಜಿ ತನ್ನೊಂದಿಗೆ ಇದ್ದ ಇತರೇ ಮಾಡೆಲ್‌ಗಳೊಂದಿಗೆ ಪ್ರತಿಸ್ಪರ್ಧೆ ನೀಡಿ ನಾನಾ ಸುತ್ತುಗಳ ನಂತರ ಮಿಸ್ಟರ್‌ ಸೌತ್‌ ಇಂಡಿಯಾ ಟೈಟೆಲ್‌ ವಿಜೇತರಾದರು. ಮಕ್ಕಳ ವಿಭಾಗದಲ್ಲಿ ಶೌರ್ಯ ಫ್ರೆಶ್‌ ಫೇಸ್‌ ವಿಭಾಗದಲ್ಲಿ ಆಯ್ಕೆಗೊಂಡರು.

ಮಿಸ್ಟರ್ ಸೌತ್ ಇಂಡಿಯಾ ಟೈಟಲ್ ವಿಜೇತ ಪ್ರತೀಕ್ ಬ್ಯಾನರ್ಜಿ

ತ್ರಿವಳಿ ಮಕ್ಕಳೊಂದಿಗೆ ರ‍್ಯಾಂಪ್‌ವಾಕ್‌

ಮಾಡೆಲ್‌ ಸವಿತಾ ರೆಡ್ಡಿ ಮೆಂಟರ್‌ ನಂದಿನಿಯವರೊಂದಿಗೆ ರ‍್ಯಾಂಪ್‌ ಮೇಲೆ ತಮ್ಮ ಹಾಲುಗಲ್ಲದ ಪುಟ್ಟ ತ್ರಿವಳಿ ಮಕ್ಕಳೊಂದಿಗೆ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದರು. ಮಕ್ಕಳನ್ನು ರ‍್ಯಾಂಪ್‌ ಮೇಲೆ ಚಿಣ್ಣರನ್ನು ಕರೆತಂದಾಗ ನೋಡಲು ಮುದ್ದು ಮುದ್ದಾಗಿ ಹೆಜ್ಜೆ ಹಾಕಿದವು.

ಫ್ಯಾಷನ್‌ ಕ್ಷೇತ್ರದ ಅಭಿವೃದ್ಧಿಗೆ ನಾಂದಿ

“ಕೋವಿಡ್‌ ನಂತರ ನಡೆದ ಈ ಗ್ರ್ಯಾಂಡ್‌ ಸಮಾರಂಭ ಮತ್ತೊಮ್ಮೆ ಫ್ಯಾಷನ್‌ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಬಾರಿ ಸಾಕಷ್ಟು ಮಾಡೆಲ್‌ಗಳು ಉತ್ಸುಕದಿಂದ ಭಾಗವಹಿಸಿದ್ದು ಮಾತ್ರವಲ್ಲದೇ, ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಂಡಿರುವುದು ರ‍್ಯಾಂಪ್‌ನ ಘನತೆ ಹೆಚ್ಚಿಸಿದೆ. ಇಲ್ಲಿ ನಡೆದ ರ‍್ಯಾಂಪನಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ” ಎಂದು ಶೋ ಡೈರೆಕ್ಟರ್‌ ಹಾಗೂ ಮೆಂಟರ್‌ ನಂದಿನಿ ನಾಗರಾಜ್‌ ಹೇಳಿದರು.

ಮಾಡೆಲ್ ಪೂಜಾ ಸಾಲಿಮಠ್, ಸೆಲೆಬ್ರಿಟಿ ಡಿಸೈನರ್ ರಾಜೇಶ್ ಶೆಟ್ಟಿ, ಫಿಟ್ನೆಸ್ ದಿವಾ ಸೀಮಾ ನಾಯ್ಡು

“ಈ ಸೌಂದರ್ಯ ಸ್ಪರ್ಧೆಯಲ್ಲಿ ನಾವು ಕೇವಲ ಯುವಕ ಯುವತಿಯರಿಗೆ ಮಿಸ್ಟರ್‌ ಹಾಗೂ ಮಿಸ್‌ ಕ್ರೌನ್‌ ಸ್ಪರ್ಧೆ ಮಾಡುತ್ತಿರುವುದು ಮಾತ್ರವಲ್ಲ, ವಿವಾಹಿತರನ್ನು ಪ್ರೋತ್ಸಾಹಿಸುವ ಮಿಸೆಸ್‌ ಸೌತ್‌ ಇಂಡಿಯಾ( i am powerful) ಹೆಸರಿನಲ್ಲಿ ಆಯ್ಕೆ ಮಾಡುತ್ತೇವೆ. ಇದು ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪೆಜೆಂಟ್‌ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ. ಮಿಸೆಸ್‌ ವಲ್ರ್ಡ್ ವೈಡ್‌ ೨೦೧೯ ಶ್ವೇತಾ ನಿರಂಜನ್‌ ಜ್ಯುರಿ ಟೀಮ್‌ನಲ್ಲಿದ್ದರು. ಸೆಲೆಬ್ರಿಟಿ ಡಿಸೈನರ್‌ ಚಂದನಾ ಡಿಸೈನರ್‌ವೇರ್‌ಗಳು ಮನಸೂರೆಗೊಂಡವು.
……………

ಚಿತ್ರಗಳು: ಟೈಟಲ್‌ ವಿಜೇತರೊಂದಿಗೆ ಮೆಂಟರ್‌ ಹಾಗೂ ಶೋ ಡೈರೆಕ್ಟರ್‌ ನಂದಿನಿ ನಾಗರಾಜ್‌

ಇದನ್ನೂ ಓದಿ| Fashion Shopping: ಎಲ್ಲೆಡೆ ಶುರುವಾಯ್ತು ಸೀಸನ್‌ ಸೇಲ್‌

Exit mobile version