Site icon Vistara News

Readymade Saree Blouse Trend: ಫೆಸ್ಟಿವ್‌ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಸೀರೆಯ ರೆಡಿಮೇಡ್‌ ಬ್ಲೌಸ್‌

Readymade saree blouse trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫೆಸ್ಟಿವ್‌ ಸೀಸನ್‌ನಲ್ಲಿ ಸೀರೆಗೆ ಧರಿಸುವ ವೈವಿಧ್ಯಮಯ ರೆಡಿಮೇಡ್‌ ಬ್ಲೌಸ್‌ಗಳು (Readymade Saree Blouse Trend) ಮಾರುಕಟ್ಟೆಗೆ ಕಾಲಿಟ್ಟಿವೆ. ಹಬ್ಬದ ಸೀಸನ್‌ನಲ್ಲಿ ಮಾನಿನಿಯರು ಉಡುವ ನಾನಾ ಬಗೆಯ ಸೀರೆಗಳಿಗೆ ಮ್ಯಾಚ್‌ ಮಾಡಲು ಲೆಕ್ಕವಿಲ್ಲದಷ್ಟು ಮಿಕ್ಸ್‌ ಮ್ಯಾಚ್‌ ಹಾಗೂ ಕಾಂಟ್ರಾಸ್ಟ್‌ ಶೇಡ್‌ನ ಬಗೆಬಗೆಯ ವಿನ್ಯಾಸದ ರೆಡಿಮೇಡ್‌ ಬ್ಲೌಸ್‌ಗಳು ಎಂಟ್ರಿ ನೀಡಿವೆ.

ರೆಡಿಮೇಡ್‌ ಬ್ಲೌಸ್‌ಗಳ ಲೋಕ

ಮೊದಲೆಲ್ಲಾ ಕೊಂಡ ಸೀರೆಗಳಿಗೆ ಅದೇ ವರ್ಣದ ಅಥವಾ ಅದೇ ಸೀರೆಯಲ್ಲಿ ಬರುವ ಬ್ಲೌಸ್‌ ಮೆಟೀರಿಯಲ್‌ನಿಂದ ಬ್ಲೌಸ್‌ ಹೊಲಿಸಿ ಮ್ಯಾಚ್‌ ಮಾಡಲಾಗುತ್ತಿತ್ತು. ಇದೀಗ ಜನರೇಷನ್‌ ಬದಲಾದಂತೆ ಕಾನ್ಸೆಪ್ಟ್‌ ಕೂಡ ಬದಲಾಗಿದೆ. ಅದರಲ್ಲೂ ಅಮ್ಮನ ಸೀರೆಯುಡುವ ಹೆಣ್ಣು ಮಕ್ಕಳು, ಇಲ್ಲವೇ ಮನೆಯಲ್ಲಿ ಒಬ್ಬರ ಸೀರೆಯನ್ನು ಮತ್ತೊಬ್ಬರು ಉಡುವ ಹೆಂಗಸರು, ಸೀರೆಯನ್ನು ಅದಲು ಬದಲು ಮಾಡಿಕೊಳ್ಳುವ ಸ್ನೇಹಿತೆಯರು, ಅಜ್ಜಿ ಕಾಲದ ರೇಷ್ಮೆ ಸೀರೆಯನ್ನು ಹೊಸತನಕ್ಕೆ ಒಗ್ಗಿಕೊಳ್ಳುವಂತೆ ಉಡುವ ಈ ಜನರೇಷನ್‌ನ ಹುಡುಗಿಯರಿಗೆಲ್ಲಾ ಇಷ್ಟವಾಗುವಂತೆ ಮಾರುಕಟ್ಟೆಯಲ್ಲಿ ವೈವಿಧ್ಯಮಯ ವಿನ್ಯಾಸದ ರೆಡಿಮೇಡ್‌ ಬ್ಲೌಸ್‌ಗಳು ಕಾಲಿಟ್ಟಿವೆ. ರೇಷ್ಮೆ ಸೀರೆಗೆ ಮ್ಯಾಚಿಂಗ್‌ ಮಾಡುವುದರಿಂದಿಡಿದು ಕಾಟನ್‌, ಕ್ರೇಪ್‌, ಜಾರ್ಜೆಟ್‌, ಪಾರ್ಟಿ ಸಿಕ್ವೀನ್ಸ್‌ ಸೀರೆಗಳಿಗೂ ರೆಡಿಮೇಡ್‌ ಬ್ಲೌಸ್‌ಗಳು ಲಭ್ಯ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ಪಾಯಲ್‌ ಸೇನ್‌.

ಕಾಂಟ್ರಾಸ್ಟ್‌ ವಿನ್ಯಾಸದ ರೆಡಿಮೇಡ್‌ ಬ್ಲೌಸ್‌ಗಳಿಗೆ ಡಿಮ್ಯಾಂಡ್‌

ಸಾದಾ, ಪ್ರಿಂಟ್ಸ್‌, ಕಲಾಂಕಾರಿ, ಶಿಮ್ಮರ್‌, ಸಿಕ್ವೀನ್ಸ್‌, ಬಾರ್ಡರ್‌, ಬಾರ್ಡರ್‌ ಲೆಸ್‌ ಸಿಲ್ಕ್‌ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ರೆಡಿಮೇಡ್‌ ಬ್ಲೌಸ್‌ಗಳು ಇಂದು ದೊರೆಯುತ್ತಿವೆ. ಅವುಗಳಲ್ಲಿ ವಿವಾಹಿತ ಮಹಿಳೆಯರು ಮಾತ್ರ ಹೆಚ್ಚಾಗಿ ರೇಷ್ಮೆ ಸೀರೆಗಳಿಂದಿಡಿದು ಎಲ್ಲವಕ್ಕೂ ಮ್ಯಾಚಿಂಗ್‌ ಬ್ಲೌಸ್‌ಗಳ ಆಯ್ಕೆ ಮಾಡುತ್ತಾರೆ. ಇನ್ನು ಯುವತಿಯರು, ಹುಡುಗಿಯರೆಲ್ಲರೂ ಆದಷ್ಟೂ ಕಾಂಟ್ರಾಸ್ಟ್‌ ಹಾಗೂ ಅಪೊಸಿಟ್‌ ವರ್ಣದ ಬ್ಲೌಸ್‌ಗಳನ್ನು ಕೊಳ್ಳುತ್ತಾರೆ. ಮೊಬೈಲ್‌ನಲ್ಲಿ ಸೀರೆಯ ಫೋಟೋ ಅಥವಾ ಸೀರೆಯನ್ನು ಜೊತೆಗೆ ತೆಗೆದುಕೊಂಡು ಬಂದು ಆಯ್ಕೆ ಮಾಡುತ್ತಾರೆ ಎನ್ನುತ್ತಾರೆ ಮಾರಾಟಗಾರರು.

ರೆಡಿಮೇಡ್‌ ಬ್ಲೌಸ್‌ ಖರೀದಿಸುವವರು ತಿಳಿದಿರಬೇಕಾದ್ದು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Guru Desi Style: ಯೂನಿಕ್‌ ದೇಸಿ ಸ್ಟೈಲ್‌ನಲ್ಲಿ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ

Exit mobile version