ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಲು ಟ್ರೆಡಿಷನಲ್ ಫ್ಯಾಷನ್‌ನಲ್ಲಿ (Sankranti Fashion) ಇದೀಗ ಡಾರ್ಕ್ ವರ್ಣದ ಕಾಂಟ್ರಸ್ಟ್ ಶೇಡ್‌ನ ಡಿಸೈನರ್ ಗ್ರ್ಯಾಂಡ್ ಲಂಗ-ದಾವಣಿಗಳು ಎಂಟ್ರಿ ನೀಡಿವೆ. ನೋಡಲು ಆಕರ್ಷಕವೆನಿಸುವ ಈ ಲಂಗ-ದಾವಣಿಗಳು ಟ್ರೆಡಿಷನಲ್ ಲುಕ್‌ಗೆ ಮತ್ತಷ್ಟು ಮೆರಗು ತುಂಬಿವೆ.
ಅಂದಹಾಗೆ, ಕಳೆದ ಫೆಸ್ಟಿವ್ ಸೀಸನ್‌ನಲ್ಲಿ ಮಾನೋಕ್ರೋಮ್ ಶೇಡ್‌ಗಳಲ್ಲಿ ಟ್ರೆಂಡಿಯಾಗಿದ್ದವು. ಇನ್ನು ಕೆಲವು ಲೈಟ್ ವರ್ಣಗಳಲ್ಲಿ ಪ್ರಚಲಿತದಲ್ಲಿದ್ದವು. ಆದರೆ, ನೋಡಲು ಲೆಹೆಂಗಾ ಶೈಲಿಯಲ್ಲಿ ಕಾಣುತ್ತಿದ್ದವು. ಆದರೆ, ಈ ಬಾರಿ ಈ ಡಿಸೈನ್‌ಗೆ ಇತಿಶ್ರೀ ಬಿದ್ದಿದ್ದು, ಪಕ್ಕಾ ಸೌತ್ ಇಂಡಿಯನ್ ಶೈಲಿಯ ಸ್ಟಿಚ್ಚಿಂಗ್ ಹಾಗೂ ಪ್ಯಾಟರ್ನ್‌ನಲ್ಲಿ ಆಗಮಿಸಿವೆ. ನೋಡಲು ಅಪ್ಪಟ ಸೌತ್ ಇಂಡಿಯನ್ ಲುಕ್ ನೀಡುತ್ತಿವೆ. ಆಕರ್ಷಕ ಡಾರ್ಕ್ ವರ್ಣಗಳಲ್ಲಿ ಆಗಮಿಸಿವೆ ಎನ್ನುತ್ತಾರೆ ಡಿಸೈನರ್ಸ್.
ಸೌತ್ ಇಂಡಿಯನ್ ಲಂಗ-ದಾವಣಿ
ಎಲ್ಲರಿಗೂ ತಿಳಿದಿರುವಂತೆ ಸೌತ್ ಇಂಡಿಯನ್ ಲುಕ್ ನೀಡುವ ಲಂಗ-ದಾವಣಿ ಮೊದಲಿನಿಂದಲೂ ಪ್ರಚಲಿತದಲ್ಲಿತ್ತು. ಆದರೆ ಕೆಲವೊಮ್ಮೆ ಕೊಂಚ ಲೆಹೆಂಗಾ ಶೈಲಿಯ ರೂಪದಲ್ಲಿ ಬದಲಾಗಿ ಹೊಸ ರೂಪ ಪಡೆದಿತ್ತು. ಇದೀಗ ಸಂಕ್ರಾಂತಿಯ ಟ್ರೆಡಿಷನಲ್ ಹಬ್ಬಕ್ಕೆ ಮಾತ್ರ ಮತ್ತೊಮ್ಮೆ ಪಕ್ಕಾ ಇಲ್ಲಿನ ಲೋಕಲ್ ಲಂಗ-ದಾವಣಿ ಡಿಸೈನ್‌ನಲ್ಲೆ ಬಿಡುಗಡೆಗೊಂಡಿವೆ. ಮತ್ತಷ್ಟು ಗ್ರ್ಯಾಂಡ್ ಲುಕ್ ಪಡೆದುಕೊಂಡಿದೆ ಎನ್ನುತ್ತಾರೆ ಮಾಡೆಲ್, ನಟಿ ಚಂದನಾ ಗೌಡ. ಅವರ ಪ್ರಕಾರ, ಲಂಗ-ದಾವಣಿಯು ಕೂಡ ಡಿಸೈನರ್‌ಗಳ ಕೈಗಳಲ್ಲಿ ಸುಂದರ ರೂಪ ಪಡೆದು ಗ್ರ್ಯಾಂಡ್ ಆಗಿ ಕಾಣಿಸುತ್ತಿವೆ ಎನ್ನುತ್ತಾರೆ.
ಸೈಡಿಗೆ ಸರಿದ ಮಾನೋಕ್ರೋಮ್ ಲಂಗ-ದಾವಣಿ
ಒಂದೇ ಶೇಡ್‌ನ ಲಂಗ-ದಾವಣಿಗಳು ಸದ್ಯಕ್ಕೆ ಸೈಡಿಗೆ ಸರಿದಿವೆ. ಇದೀಗ ಕಾಂಟ್ರಸ್ಟ್ ಹಾಗೂ ತದ್ವಿರುದ್ಧ ವರ್ಣಗಳ ಮಿಕ್ಸ್ ಮ್ಯಾಚ್ ಶೇಡ್‌ನ ಲಂಗ-ದಾವಣಿಗಳು ಟ್ರೆಂಡಿಯಾಗಿವೆ. ಇವು ನೋಡಲು ಗ್ರ್ಯಾಂಡ್ ಲುಕ್ ನೀಡುತ್ತಿವೆ. ಈ ವಿನ್ಯಾಸದಲ್ಲಿ ಬ್ಲೌಸ್ ಹಾಗೂ ದಾವಣಿ ಒಂದೇ ವರ್ಣದ್ದಾಗಿರುತ್ತದೆ. ಲಂಗ ಮಾತ್ರ ಬೇರೆ ವರ್ಣದ್ದಾಗಿರುತ್ತದೆ. ಇದು ಇದೀಗ ಟ್ರೆಂಡಿಯಾಗಿರುವ ಡಿಸೈನ್‌ನ ಶೇಡ್‌ಗಳು ಎನ್ನುತ್ತಾರೆ ಡಿಸೈನರ್ಸ್.
ಆಕರ್ಷಕ ನೆರಿಗೆ ಲಂಗ
ಲೆಹೆಂಗಾಗಳಲ್ಲಿ ನೆರಿಗೆ ಕಂಡುಬರುವುದು ಕಡಿಮೆ. ಆದರೆ, ನಮ್ಮ ನೆಲದ ವಿನ್ಯಾಸದ ಲಂಗ-ದಾವಣಿಗಳಲ್ಲಿ ನೆರಿಗೆಗಳು ಸಿಗ್ನೆಚರ್ ಸ್ಟೈಲ್. ಇದೀಗ ಲಂಗದ ನೆರಿಗೆ ಫ್ಯಾಬ್ರಿಕ್ ಕೂಡ ಮಿಕ್ಸ್ ಮ್ಯಾಚ್ ಆಗಿ ಬಿಡುಗಡೆಗೊಂಡಿದೆ. ಎರಡೆರಡು ವರ್ಣಗಳ ಲಂಗಗಳು ಚಾಲ್ತಿಯಲ್ಲಿವೆ. ಎಂದಿನಂತೆ ಬಾರ್ಡರ್ ಲಂಗಗಳಿಗೆ ಡಿಸೈನರ್ ಬ್ಲೌಸ್‌ಗಳು ಸಾಥ್ ನೀಡುತ್ತಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Miss India Universe Fashion | ಬಂಗಾರದ ಹಕ್ಕಿಯಾಗಿ ನಲಿದ ಮಿಸ್ ಇಂಡಿಯಾ ಯೂನಿವರ್ಸ್ ದಿವಿತಾ ರೈ