Site icon Vistara News

Sankranti Fashion 2024: ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಾದ ಟ್ರೆಡಿಷನಲ್‌ವೇರ್ಸ್ ಶಾಪಿಂಗ್‌

Sankranti Fashion 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಿನ್ನೆಲೆಯಲ್ಲಿ ಎಲ್ಲೆಡೆ ಟ್ರೆಡಿಷನಲ್‌ ವೇರ್‌ಗಳ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುವ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಹಬ್ಬದ ರಂಗು ಹೆಚ್ಚಿಸುವ ಟ್ರೆಂಡಿ ಟ್ರೆಡಿಷನಲ್‌ವೇರ್‌ಗಳು ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ.

ಸಾಂಪ್ರದಾಯಿಕ ಉಡುಗೆಗಳಿಗೆ ಡಿಮ್ಯಾಂಡ್‌

ದಾವಣಿ-ಲಂಗ, ಉದ್ದ-ಲಂಗ, ಟ್ರೆಡಿಷನಲ್‌ ಲೆಹೆಂಗಾ, ಹಾಫ್‌ ಸೀರೆ, ರೆಡಿ ಸೀರೆ, ಬಾರ್ಡರ್‌ ಸಲ್ವಾರ್‌ ಕಮೀಝ್‌, ಕುರ್ತಾ ಸೇರಿದಂತೆ ಟ್ರೆಡಿಷನಲ್‌ ಲುಕ್‌ ನೀಡುವ ಉಡುಗೆ-ತೊಡುಗೆಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಹೊಸ ವಿನ್ಯಾಸದಲ್ಲಿ ಹಾಗೂ ಡಿಸೈನ್‌ನಲ್ಲಿ ಬಂದಿವೆ. ನೋಡಲು ಮನಮೋಹಕ ಡಿಸೈನ್‌ಗಳಲ್ಲಿ ಗ್ರ್ಯಾಂಡ್‌ ಲುಕ್‌ ನೀಡುವಂತವು ಬೇಡಿಕೆ ಹೆಚ್ಚಿಸಿಕೊಂಡಿವೆ. ಇನ್ನು ರೇಷ್ಮೆ ಸೀರೆಗಳು ಮೊದಲಿಗಿಂತ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

ದೇಸಿ ವಿನ್ಯಾಸದ ಡಿಸೈನರ್‌ ವೇರ್‌

ಬಹಳಷ್ಟು ನಾರ್ತ್ ಇಂಡಿಯನ್‌ ಉಡುಗೆ-ತೊಡುಗೆಗಳು ಇದೀಗ ಸೌತ್‌ ಇಂಡಿಯನ್‌ ಮಹಿಳೆಯರು ಧರಿಸುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಹಾಗಾಗಿ ಇದೀಗ ದೇಸಿ ವಿನ್ಯಾಸದ ಕಲರ್‌ಫುಲ್‌ ಉಡುಗೆ-ತೊಡುಗೆಗಳಿಗೆ ಆದ್ಯತೆ ನೀಡುವುದು ಹೆಚ್ಚಾಗಿದೆ. ಪರಿಣಾಮ ಸದ್ಯಕ್ಕೆ ವೆಸ್ಟರ್ನ್ ಶೈಲಿಯ ಉಡುಪುಗಳು ಸೈಡಿಗೆ ಸರಿದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಮಕ್ಕಳು-ಪುರುಷರಿಗೂ ದೇಸಿ ಸ್ಟೈಲ್‌ ಉಡುಗೆಗಳು

ಮೊದಲೆಲ್ಲ ಕೇವಲ ಯಂಗ್‌ಸ್ಟರ್ಸ್‌ಗಳಿಗೆ ಮಾತ್ರ ದೇಸಿ ಸ್ಟೈಲ್‌ ಉಡುಗೆಗಳು ದೊರೆಯುತ್ತಿದ್ದವು. ಈಗ ಹಾಗಿಲ್ಲ, ಮಕ್ಕಳು, ಪುರುಷರು ಹಾಗೂ ವಯಸ್ಸಾದ ಹಿರಿಯರಿಗೂ ಕೂಡ ದೇಸಿ ಲುಕ್‌ ನೀಡುವ ನಾನಾ ಬ್ರಾಂಡ್‌ನ ಉಡುಪುಗಳು ಹಬ್ಬದ ಸಂಭ್ರಮ ಹೆಚ್ಚಿಸಲು ಬಂದಿವೆ. ಉದಾಹರಣೆಗೆ., ಮಿನಿ ದಾವಣಿ-ಲಂಗ, ಪುಟ್ಟ ಪುಟ್ಟ ರೆಡಿ ಸೀರೆಗಳು, ಹೆಣ್ಣುಮಕ್ಕಳಿಗೆ ಬಂದಿವೆ. ಇನ್ನು ಪುರುಷರಿಗೆ ಹಿರಿಯರಿಗೆ ಬಾರ್ಡರ್‌ ಕುರ್ತಾ, ಬಾರ್ಡರ್‌ ಕಮೀಜ್‌ಗಳು ಆಗಮಿಸಿವೆ.

ಸಂಕ್ರಾತಿ ಸೇಲ್ಸ್‌ ಅಬ್ಬರ

ಈಗಾಗಲೇ ಮಾಲ್‌ಗಳು ಮಾತ್ರವಲ್ಲ, ಹಲವೆಡೆ ಸಂಕ್ರಾಂತಿ ಸೇಲ್ಸ್‌ ಡಿಸ್ಕೌಂಟ್ಸ್‌ ಕೂಡ ನಡೆಯುತ್ತಿವೆ. ಹಬ್ಬದ ಪ್ರಯುಕ್ತ ಬಾರಿ ಡಿಸ್ಕೌಂಟ್ಸ್‌- ಆಫರ್ಸ್‌ ಲಭ್ಯ. ಮಾಲ್‌ಗಳು ಹಾಗೂ ಶೋ ರೂಂಗಳಲ್ಲಿ ಆರಂಭಿಕ ರಿಯಾಯತಿ ಸೌಲಭ್ಯ ಹಾಗೂ ಹೊಸ ವರ್ಷದ ಬೋನ್ಹಾನ್ಜಾ ಆಫರ್‌ಗಳು ದೊರೆಯುತ್ತಿವೆ. ಜತೆಗೆ ಗಿಫ್ಟ್ಸ್‌, ವೋಚರ್ಸ್‌, ಲಕ್ಕಿ ಡಿಪ್‌ಗಳಂತಹ ಆಫರ್ಸ್‌ ಪಡೆಯಬಹುದು ಎಂಬುದು ಮಾಲ್‌ಗಳ ಮಾರ್ಕೆಟಿಂಗ್‌ ಮ್ಯಾನೇಜರ್‌ಗಳ ಅಭಿಪ್ರಾಯ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sankranti Fashion: ಸಂಕ್ರಾಂತಿ ಹಬ್ಬದ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್‌ ಔಟ್‌ಫಿಟ್ಸ್

Exit mobile version