Site icon Vistara News

Saree Fashion | ಪೊಂಗಲ್‌ ಸೆಲೆಬ್ರೇಷನ್‌ಗೆ ಟ್ರೆಂಡಿಯಾದ 3 ಶೈಲಿಯ ಸೀರೆಗಳು

Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪೊಂಗಲ್‌ ಹಬ್ಬದ ಸೆಲೆಬ್ರೇಷನ್‌ಗೆಂದು ಫ್ಯಾಷನ್‌ (pongal fashion) ಲೋಕದಲ್ಲಿ ನಾನಾ ಬಗೆಯ ಟ್ರೆಂಡಿ ಸೀರೆಗಳು (pongal saree collection) ಕಾಲಿಟ್ಟಿದ್ದು, ಅವುಗಳಲ್ಲಿ ತಿಳಿ ವರ್ಣದ ಹಾಫ್‌ ವೈಟ್‌, ಕ್ರೀಮಿಶ್‌, ಐವರಿ ವರ್ಣದ ಕಸವು, ಕಾಟನ್‌ ಸಿಲ್ಕ್‌, ಆರ್ಟಿಸ್ಟಿಕ್‌ ಸಿಂಥೆಟಿಕ್‌ ಸೀರೆಗಳು ಟ್ರೆಂಡಿಯಾಗಿವೆ. ಮಾನಿನಿಯರ ಮನಗೆದ್ದಿವೆ.

  1. ಸಾಫ್ಟ್‌ ಕಾಟನ್‌ ಸಿಲ್ಕ್‌ ಸೀರೆ

ಪೊಂಗಲ್‌ ಹಬ್ಬದ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಫ್ಟ್‌ ಕಾಟನ್‌ ಸಿಲ್ಕ್‌ ಸೀರೆಗಳು (soft cotton silk sarees) ಕಾಲಿಟ್ಟಿದ್ದು, ಅವುಗಳಲ್ಲಿ ಇದೀಗ ಕೇವಲ ಬಿಳಿ ವರ್ಣದಲ್ಲೆ ದೊರೆಯುವ ಹಾಫ್‌ ವೈಟ್‌, ಮಿಲ್ಕಿ ವೈಟ್‌, ಕ್ರೀಮ್‌ ಹಾಗೂ ಲೈಟ್‌ ಆರೆಂಜ್‌ ವರ್ಣದ ಸೀರೆಗಳು ಟ್ರೆಂಡಿಯಾಗಿವೆ. ಪೊಂಗಲ್‌ನ ಸೆಲೆಬ್ರೇಷನ್‌ಗೆ ಸಾಥ್‌ ನೀಡುವ ಈ ವರ್ಣಗಳ ಬಾರ್ಡರ್‌ ಹಾಗೂ ಬಾರ್ಡರ್‌ ಲೆಸ್‌ ಸೀರೆಗಳೂ ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಇವು ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆಯುತ್ತಿವೆ.

  1. ಆಕರ್ಷಕ ಕಸವು ಸೀರೆ

ಪೊಂಗಲ್‌ ಹಬ್ಬದ ಸಂದರ್ಭಕ್ಕೆ ಸೂಟ್‌ ಆಗುವಂತಹ ಕಸವು ಸೀರೆಗಳು (pongal collection sarees) ನಾನಾ ಸಿಂಪಲ್‌ ಡಿಸೈನ್‌ಗಳಲ್ಲಿ ಲಭ್ಯ. ಈ ಸೀರೆಗಳಲ್ಲಿಹಲವಾರು ವಿಧದ ಡಿಸೈನ್‌ಗಳು ಲಭ್ಯವಿದ್ದು, ಎಂದಿನಂತೆ ಗೋಲ್ಡನ್‌ ಕಲರ್‌ ಬಾಕ್ಸ್‌, ಬಾರ್ಡರ್‌ ಸ್ಟ್ರೈಪ್ಸ್‌, ಝರಿ ಸೀರೆಗಳು ಪ್ರಚಲಿತದಲ್ಲಿವೆ. ಕೆಲವು ಲೈಟ್‌ ಎಂಬ್ರಾಯ್ಡರಿ, ಪಿಕಾಕ್‌ ಎಂಬ್ರಾಯ್ಡರಿ, ಫ್ಯಾಬ್ರಿಕ್‌ ಪ್ರಿಂಟ್‌, ಸಿಲ್ವರ್‌- ಟಿಶ್ಯೂ ಎಂಬೋಸಿಂಗ್‌, ವಲ್ಲಿ ಪ್ರಿಂಟ್‌ ಒಳಗೊಂಡಿವೆ. ಮೊದಲೆಲ್ಲಾ ಓಣಂ ಹಬ್ಬಕ್ಕೆ (onam sarees collection) ಮಾತ್ರ ಸೀಮಿತವಾಗಿದ್ದ ಈ ಕಸವು ಸೀರೆಗಳು ಇದೀಗ ಪೊಂಗಲ್‌ ಹಬ್ಬಕ್ಕೂ ಡಿಫರೆಂಟ್‌ ವಿನ್ಯಾಸದಲ್ಲಿ ಎಂಟ್ರಿ ನೀಡಿದ್ದು, ಟ್ರೆಂಡಿಯಾಗಿವೆ.

  1. ಆರ್ಟಿಸ್ಟಿಕ್‌ ಸಿಂಥೆಟಿಕ್‌ ಸೀರೆ

ಇನ್ನು ಆರ್ಟಿಸ್ಟಿಕ್‌ ಸಿಂಥೆಟಿಕ್‌ ಸೀರೆಗಳು ನಾನಾ ವಿನ್ಯಾಸದಲ್ಲಿ ಬಿಡುಗಡೆಯಾಗಿದ್ದು, ಪೊಂಗಲ್‌ ಹಬ್ಬಕ್ಕೆ ಆಗಮಿಸಿವೆ. ಈ ಸೀರೆಗಳು ಲೈಟ್‌ವೇಟ್‌ ಇರುವ ಕಾರಣ ಉದ್ಯೋಗಸ್ಥ ಮಹಿಳೆಯರು ಇದರತ್ತ ವಾಲತೊಡಗಿದ್ದಾರೆ. ನೋಡಲು ಆಕರ್ಷಕವಾಗಿ ಕಾಣುವ ಇವುಗಳಲ್ಲೂ ಲೈಟ್‌ ಕಲರ್‌ಗಳ ಸೀರೆಗಳು ಬಂದಿವೆ. ಬಾರ್ಡರ್‌ಲೆಸ್‌ ಸೀರೆಗಳಾದ ಇವುಗಳು ಇತರೇ ಸಮಯದಲ್ಲೂ ಧರಿಸಬಹುದಾಗಿದೆ. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ.

ಪೊಂಗಲ್‌ ಸೆಲೆಬ್ರೇಷನ್‌ ಸೀರೆ ಆಯ್ಕೆ ಹೀಗಿರಲಿ

ಇತರೆ ಕಾರ್ಯಕ್ರಮಗಳಿಗೂ ಧರಿಸುವಂತಹ ಸೀರೆಯನ್ನು ಆಯ್ಕೆ ಮಾಡಿ.

ಈ ಸೀಸನ್‌ನಲ್ಲಿ ಅಪರೂಪದ ವರ್ಣಗಳಾದ ಕ್ರೀಮಿಶ್‌, ಹಾಫ್‌ವೈಟ್‌ವರ್ಣದವು ಲಭ್ಯ.

ಲೈಟ್‌ವೇಟ್‌ ಸೀರೆಗಳನ್ನು ಸೆಲೆಕ್ಟ್‌ ಮಾಡಿ, ಮುಂದಿನ ಸೀಸನ್‌ನಲ್ಲೂ ಧರಿಸಬಹುದು.

ನಿರ್ವಹಣೆಯ ಕುರಿತಂತೆ ಮೊದಲೇ ತಿಳಿದುಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star Fashion | ನಟ ಹೃತಿಕ್‌ ರೋಷನ್‌ ಗ್ರೀಕ್‌ ಗಾಡ್ ಆಫ್‌ ಬಾಲಿವುಡ್‌ ಆಗಿದ್ದು ಹೇಗೆ?

Exit mobile version