ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ನ ಯುವ ನಟ ನಿರಂಜನ್ ಸುಧೀಂದ್ರ, ಮಾನ್ಸೂನ್ ಫ್ಯಾಷನ್‌ಲುಕ್‌ಗೆ ಸೈ ಎಂದಿದ್ದಾರೆ. ಇತ್ತೀಚಿನ ಫೋಟೋಶೂಟ್‌ನಲ್ಲಿ ಸಖತ್ ಫ್ಯಾಷನೆಬಲ್ (Star Monsoon Fashion) ಆಗಿ ಬಾಂಬರ್ ಜಾಕೆಟ್ ಲೇಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರು ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲ್‌ಸ್ಟೇಟ್‌ಮೆಂಟ್ ಬಿಂಬಿಸಿದ್ದಾರೆ.
ನಟ ನಿರಂಜನ್ ಸುಧೀಂದ್ರ ಫ್ಯಾಷನ್ ಟಾಕ್
ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ, ನಿರಂಜನ್ ಸುಧೀಂದ್ರ, ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ. ಈಗಾಗಲೇ ನಮ್ಮ ಹುಡುಗರು, ಸೆಕೆಂಡ್ ಹಾಫ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಂಟರ್‌ಗೆ ಸಿದ್ಧರಾಗಿದ್ದಾರೆ. ತಮ್ಮ ಈ ಹೊಸ ಸ್ಟೈಲ್ ಸ್ಟೇಟ್‌ಮೆಂಟ್ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ನನ್ನದು ಯೂತ್ ಟ್ರೆಂಡಿ ಸ್ಟ್ರೀಟ್‌ಸ್ಟೈಲ್ ಫ್ಯಾಷನ್, ಸೋ, ಅದಕ್ಕೆ ತಕ್ಕಂತೆ ಲೇಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಮಾನ್ಸೂನ್ ಮೂಡನ್ನು ಉಲ್ಲಾಸಮಯವಾಗಿಸುವ ಜಾಕೆಟ್ ಸಹಿತ ಡ್ರೆಸ್‌ಕೋಡ್ ನನ್ನ ಸದ್ಯದ ಚಾಯ್ಸ್ ಎಂದಿದ್ದಾರೆ.
ನಿರಂಜನ್ ಫ್ಯಾಷನ್ ರಿವ್ಯೂ
ಇನ್ನು ಸೀಸನ್‌ಗೆ ಸೂಟ್ ಆಗುವಂತಹ ವೈಬ್ರೆಂಟ್ ಬಾಂಬರ್ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡಿರುವ ನಿರಂಜನ್, ಫೋಟೋಶೂಟ್‌ನಲ್ಲಿ ಬಿಂದಾಸ್ ಲುಕ್ ನೀಡಿರುವುದು, ಮೆನ್ಸ್ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಐಡಿಯಾ ನೀಡುವಂತಿದೆ. ಅಲ್ಲದೇ. ಈ ಜನರೇಷನ್‌ನ ಯುವಕರಿಗೆ ಮಾನ್ಸೂನ್ ಫ್ಯಾಷನ್‌ಗೆ ಮಾದರಿಯಾಗುವಂತಿದೆ. ಇದು ಅವರ ಫ್ಯಾಷನ್ ಸೆನ್ಸ್ ಸೀಸನ್‌ಗೆ ಸೂಕ್ತವಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್ ರಿತ್ವಿಕ್. ವೈಬ್ರೆಂಟ್ ನಿಯಾನ್ ಹಾಗೂ ಬ್ಲಾಕ್ ಶೇಡ್‌ನ ಬಾಂಬರ್ ಜಾಕೆಟ್‌ನಲ್ಲಿ ನಿರಂಜನ್, ಪರ್ಫೆಕ್ಟ್ ಪ್ರೊಫೆಷನಲ್ ಸೂಪರ್ ಮಾಡೆಲ್‌ನಂತೆ ಲುಕ್ ನೀಡಿದ್ದಾರೆ. ಅವರ ಎತ್ತರ, ಮ್ಯಾನ್ಲಿ ಲುಕ್‌ಗೆ ಸಾಥ್ ನೀಡಿದೆ ಎಂದಿದ್ದಾರೆ.
ಯುವಕರಿಗೆ ಫ್ಯಾಷನ್ ಸಂದೇಶ
ಇದರೊಂದಿಗೆ ನಿರಂಜನ್ ಸುಧೀಂದ್ರ ಅವರ ಎಲ್ಲಾ ಫೋಟೋಶೂಟ್ ಫೋಟೋಗಳು ಪಕ್ಕಾ ಯುವಕರ ಸ್ಟ್ರೀಟ್‌ಸ್ಟೈಲ್ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿವೆ. ಈ ಸೀಸನ್ ಕ್ಯಾಶುವಲ್ ಸ್ಟೈಲ್‌ಗೆ ಅವರ ಪರ್ಸನಾಲಿಟಿ ಕೂಡ ಪರ್ಫೆಕ್ಟ್ ಮ್ಯಾಚ್ ಆಗಿದ್ದು, ಅವರ ಈ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಫುಲ್ ಮಾರ್ಕ್ಸ್ ನೀಡಬಹುದು ಎಂದಿದ್ದಾರೆ ಫ್ಯಾಷನಿಸ್ಟ್ ಅಮಿತ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಾನ್ಸೂನ್ ಸೀರೆ ಸ್ಟೈಲಿಂಗ್‌ಗೆ ಸಾಥ್‌ನೀಡಲು ಬಂತು ಕಾಲರ್ ನೆಕ್ ಬ್ಲೌಸ್