Star Monsoon Fashion: ಮಾನ್ಸೂನ್‌ ಸ್ಟ್ರೀಟ್‌ ಸ್ಟೈಲ್‌ಗೆ ಸೈ ಎಂದ ಸ್ಯಾಂಡಲ್‌ವುಡ್‌ ನಟ ನಿರಂಜನ್‌ ಸುಧೀಂದ್ರ - Vistara News

ಫ್ಯಾಷನ್

Star Monsoon Fashion: ಮಾನ್ಸೂನ್‌ ಸ್ಟ್ರೀಟ್‌ ಸ್ಟೈಲ್‌ಗೆ ಸೈ ಎಂದ ಸ್ಯಾಂಡಲ್‌ವುಡ್‌ ನಟ ನಿರಂಜನ್‌ ಸುಧೀಂದ್ರ

ಸ್ಯಾಂಡಲ್‌ವುಡ್‌ನ ಯುವ ನಟ ನಿರಂಜನ್‌ ಸುಧೀಂದ್ರ, ಇತ್ತೀಚೆಗೆ ಸಖತ್‌ ಫ್ಯಾಷನೆಬಲ್‌ ಆಗಿದ್ದಾರೆ. ಮಾನ್ಸೂನ್‌ ಫ್ಯಾಷನ್‌ನಲ್ಲಿ (Star Monsoon Fashion) ಸೂಪರ್‌ ಮಾಡೆಲ್‌ನಂತೆ ಕಾಣಿಸಿಕೊಂಡಿರುವ ಅವರು ತಮ್ಮ ಸ್ಟೈಲಿಂಗ್‌ ಬಗ್ಗೆ ಹೇಳಿರುವುದೇನು? ಇವರ ಈ ಲುಕ್‌ಗೆ ಸ್ಟೈಲಿಸ್ಟ್‌ಗಳ ರಿವ್ಯೂ ಹೇಗಿದೆ?

VISTARANEWS.COM


on

ಚಿತ್ರಗಳು : ನಿರಂಜನ್‌ ಸುಧೀಂದ್ರ, ಸ್ಯಾಂಡಲ್‌ವುಡ್‌ ನಟ, ಫೋಟೋಗ್ರಾಫಿ : ನಂದಕುಮಾರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

Vistara Monsoon Focus

ಸ್ಯಾಂಡಲ್‌ವುಡ್‌ನ ಯುವ ನಟ ನಿರಂಜನ್‌ ಸುಧೀಂದ್ರ, ಮಾನ್ಸೂನ್‌ ಫ್ಯಾಷನ್‌ಲುಕ್‌ಗೆ ಸೈ ಎಂದಿದ್ದಾರೆ. ಇತ್ತೀಚಿನ ಫೋಟೋಶೂಟ್‌ನಲ್ಲಿ ಸಖತ್ ಫ್ಯಾಷನೆಬಲ್‌ (Star Monsoon Fashion) ಆಗಿ ಬಾಂಬರ್‌ ಜಾಕೆಟ್‌ ಲೇಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಇವರು ಸೀಸನ್‌ಗೆ ತಕ್ಕಂತೆ ತಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ ಬಿಂಬಿಸಿದ್ದಾರೆ.

Niranjan Sudhindra skirting

ನಟ ನಿರಂಜನ್‌ ಸುಧೀಂದ್ರ ಫ್ಯಾಷನ್‌ ಟಾಕ್‌

ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ, ನಿರಂಜನ್‌ ಸುಧೀಂದ್ರ, ಸೂಪರ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ. ಈಗಾಗಲೇ ನಮ್ಮ ಹುಡುಗರು, ಸೆಕೆಂಡ್‌ ಹಾಫ್‌ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಂಟರ್‌ಗೆ ಸಿದ್ಧರಾಗಿದ್ದಾರೆ. ತಮ್ಮ ಈ ಹೊಸ ಸ್ಟೈಲ್‌ ಸ್ಟೇಟ್‌ಮೆಂಟ್‌ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ನನ್ನದು ಯೂತ್‌ ಟ್ರೆಂಡಿ ಸ್ಟ್ರೀಟ್‌ಸ್ಟೈಲ್‌ ಫ್ಯಾಷನ್‌, ಸೋ, ಅದಕ್ಕೆ ತಕ್ಕಂತೆ ಲೇಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಮಾನ್ಸೂನ್‌ ಮೂಡನ್ನು ಉಲ್ಲಾಸಮಯವಾಗಿಸುವ ಜಾಕೆಟ್‌ ಸಹಿತ ಡ್ರೆಸ್‌ಕೋಡ್‌ ನನ್ನ ಸದ್ಯದ ಚಾಯ್ಸ್‌ ಎಂದಿದ್ದಾರೆ.

Niranjan Sudhindra street style

ನಿರಂಜನ್‌ ಫ್ಯಾಷನ್‌ ರಿವ್ಯೂ

ಇನ್ನು ಸೀಸನ್‌ಗೆ ಸೂಟ್‌ ಆಗುವಂತಹ ವೈಬ್ರೆಂಟ್‌ ಬಾಂಬರ್‌ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡಿರುವ ನಿರಂಜನ್‌, ಫೋಟೋಶೂಟ್‌ನಲ್ಲಿ ಬಿಂದಾಸ್‌ ಲುಕ್‌ ನೀಡಿರುವುದು, ಮೆನ್ಸ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಐಡಿಯಾ ನೀಡುವಂತಿದೆ. ಅಲ್ಲದೇ. ಈ ಜನರೇಷನ್‌ನ ಯುವಕರಿಗೆ ಮಾನ್ಸೂನ್‌ ಫ್ಯಾಷನ್‌ಗೆ ಮಾದರಿಯಾಗುವಂತಿದೆ. ಇದು ಅವರ ಫ್ಯಾಷನ್‌ ಸೆನ್ಸ್‌ ಸೀಸನ್‌ಗೆ ಸೂಕ್ತವಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್‌ ರಿತ್ವಿಕ್‌. ವೈಬ್ರೆಂಟ್‌ ನಿಯಾನ್‌ ಹಾಗೂ ಬ್ಲಾಕ್‌ ಶೇಡ್‌ನ ಬಾಂಬರ್‌ ಜಾಕೆಟ್‌ನಲ್ಲಿ ನಿರಂಜನ್‌, ಪರ್ಫೆಕ್ಟ್ ಪ್ರೊಫೆಷನಲ್‌ ಸೂಪರ್‌ ಮಾಡೆಲ್‌ನಂತೆ ಲುಕ್‌ ನೀಡಿದ್ದಾರೆ. ಅವರ ಎತ್ತರ, ಮ್ಯಾನ್ಲಿ ಲುಕ್‌ಗೆ ಸಾಥ್‌ ನೀಡಿದೆ ಎಂದಿದ್ದಾರೆ.

ಯುವಕರಿಗೆ ಫ್ಯಾಷನ್‌ ಸಂದೇಶ

ಇದರೊಂದಿಗೆ ನಿರಂಜನ್‌ ಸುಧೀಂದ್ರ ಅವರ ಎಲ್ಲಾ ಫೋಟೋಶೂಟ್‌ ಫೋಟೋಗಳು ಪಕ್ಕಾ ಯುವಕರ ಸ್ಟ್ರೀಟ್‌ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿವೆ. ಈ ಸೀಸನ್‌ ಕ್ಯಾಶುವಲ್‌ ಸ್ಟೈಲ್‌ಗೆ ಅವರ ಪರ್ಸನಾಲಿಟಿ ಕೂಡ ಪರ್ಫೆಕ್ಟ್ ಮ್ಯಾಚ್‌ ಆಗಿದ್ದು, ಅವರ ಈ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಫುಲ್‌ ಮಾರ್ಕ್ಸ್ ನೀಡಬಹುದು ಎಂದಿದ್ದಾರೆ ಫ್ಯಾಷನಿಸ್ಟ್‌ ಅಮಿತ್‌.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಾನ್ಸೂನ್‌ ಸೀರೆ ಸ್ಟೈಲಿಂಗ್‌ಗೆ ಸಾಥ್‌ನೀಡಲು ಬಂತು ಕಾಲರ್‌ ನೆಕ್‌ ಬ್ಲೌಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

Reliance Retail: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

VISTARANEWS.COM


on

ASOS brand products are available at Reliance Retail
Koo

ನವದೆಹಲಿ: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ (Reliance Retail) ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ, ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ.

ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಈ ಕುರಿತು ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ನಮ್ಮ ಫ್ಯಾಷನ್‌ ಕುಟುಂಬಕ್ಕೆ ಎಎಸ್‌ಒಎಸ್‌ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ ಫ್ಯಾಷನ್‌ ಅನ್ನು ಭಾರತದ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ನಮಗಿರುವ ಸ್ಥಾನವನ್ನು ಈ ಪಾಲುದಾರಿಕೆಯು ಸೂಚಿಸುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಬಯಸುವ ಫ್ಯಾಷನ್‌ ಉತ್ಪನ್ನಗಳನ್ನು ಅವರಿಗೆ ಒದಗಿಸುವ ಖಾತರಿಯನ್ನೂ ನೀಡುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಎಎಸ್‌ಒಎಸ್‌ (ASOS) ನ ಸಿಇಒ ಜೋಸ್‌ ಆಂಟೋನಿಯೋ ಮಾತನಾಡಿ, ರಿಲಯನ್ಸ್‌ ರಿಟೇಲ್‌ ಜತೆಗೂಡಿ ನಮ್ಮ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಕೆಲವೊಂದನ್ನು ನಾವು ಭಾರತದ ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದೇವೆ. ಮುಖ್ಯವಾಗಿ ಜಗತ್ತಿನಲ್ಲಿಯೇ ಬ್ರಿಟಿಷ್‌ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಎಸ್‌ಒಎಸ್‌ ವಿನ್ಯಾಸವನ್ನು ನೀಡಲು ಕಾತುರರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಆರ್‌ಐಎಲ್‌ (ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌) ಸಮೂಹದ ಎಲ್ಲಾ ರೀಟೇಲ್‌ ಕಂಪನಿಗಳನ್ನು ಒಳಗೊಂಡಿರುವ ಕಂಪನಿಯೇ ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ (ರಿಲಯನ್ಸ್‌ ರಿಟೇಲ್‌). ರಿಲಯನ್ಸ್‌ ರಿಟೇಲ್‌ 18,836ಕ್ಕೂ ಅಧಿಕ ಮಳಿಗೆಗಳು ಮತ್ತು ಡಿಜಿಟಲ್‌ ಇ-ಕಾಮರ್ಸ್‌ ಮೂಲಕ ಕಾರ್ಯಾಚರಿಸುತ್ತದೆ. ರಿಲಯನ್ಸ್‌ ರಿಟೇಲ್‌ ಕಂಪನಿಯು ತನ್ನ ಹೊಸ ವಾಣಿಜ್ಯ ಯೋಜನೆಯ ಭಾಗವಾಗಿ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

Continue Reading

ಫ್ಯಾಷನ್

Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

Namratha Gowda: ರೆಡ್‌ ಶೇಡ್‌ನ ಅಸ್ಸೆಮ್ಮಿಟ್ರಿಕಲ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್ನಲ್ಲಿ ನಟಿ ನಮ್ರತಾ ಗೌಡ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದ್ಯಾವ ಬಗೆಯ ಔಟ್‌ಫಿಟ್‌ ಎಂಬುದರ ಬಗ್ಗೆ ಸ್ಟೈಲಿಸ್ಟ್ ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Namrata Gowda Holiday Look in Red Ruffle Layered Maxi Dress
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ನಮ್ರತಾ ಗೌಡ (Namratha Gowda) ರೆಡ್‌ ಕಲರ್‌ನ ರಫಲ್‌ ಲೇಯರ್‌ ಮ್ಯಾಕ್ಸಿಯಲ್ಲಿ ಬಿಂದಾಸ್‌ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ಮರ್‌ ಸೀಸನ್‌ನ ಹಾಲಿ ಡೇ ಲುಕ್‌ಗೆ ಸೈ ಎಂದಿದ್ದು, ಸಾಮಾನ್ಯವಾದ ಔಟ್‌ಫಿಟ್‌ಗೆ ಮೊರೆ ಹೋಗದೇ ಕೊಂಚ ಡಿಫರೆಂಟ್‌ ಲುಕ್‌ ನೀಡುವ ಡ್ರೆಸ್‌ ಧರಿಸಿ, ಹಾಲಿ ಡೇ ಫ್ಯಾಷನ್‌ ಪ್ರಿಯರ ಗಮನ ಸೆಳೆದಿದ್ದಾರೆ.

ಬೀಚ್‌ ಸೈಡ್‌ ಹಾಲಿ ಡೇ ಲುಕ್‌

“ಹಾಲಿ ಡೇ ಫ್ಯಾಷನ್‌ ಎಂದಾಕ್ಷಣ ಅದರಲ್ಲೂ ನಟಿ ಎಂದಾಕ್ಷಣಾ ಬಿಕಿನಿ ಇಲ್ಲವೇ ತೀರಾ ಎಕ್ಸ್ಪೋಸಿಂಗ್‌ ಉಡುಪುಗಳನ್ನು ಊಹಿಸುತ್ತಾರೆ. ಆದರೆ, ಈ ಬಾರಿ ನಟಿ ಸಮ್ರತಾ ಗೌಡ ಕೊಂಚ ಡಿಫರೆಂಟ್‌ ಆಗಿ ಬಿಂಬಿಸುವ ಡ್ರೆಸ್‌ ಧರಿಸಿದ್ದಾರೆ. ಇದು ಬೀಚ್‌ ಸೈಡ್‌ ಹಾಲಿಡೇ ಫ್ಯಾಷನ್‌ಗೆ ಮ್ಯಾಚ್‌ ಮಾಡಿದ್ದಾರೆ. ಅದರಲ್ಲೂ ಬಿಸಿಲಲ್ಲಿ ಕೊಂಚ ತಿಳಿ ವರ್ಣದ ಉಡುಪಿನ ಬದಲಾಗಿ ರೆಡ್‌ ಕಲರ್‌ ಆಯ್ಕೆ ಮಾಡಿದ್ದಾರೆ. ಇದು ಅವರ ಬದಲಾದ ಹಾಲಿಡೇ ಫ್ಯಾಷನ್‌ ಹೈಲೈಟ್‌ ಮಾಡುತ್ತದೆ” ಎಂದು ಹೇಳುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌. ಅವರ ಪ್ರಕಾರ, ನಮ್ರತಾ ಈ ಬಾರಿ ಡಾರ್ಕ್‌ ಶೇಡ್‌ ಔಟ್‌ಫಿಟ್ಸ್‌ ಆಯ್ಕೆ ಮಾಡಿರುವುದು ವಿಭಿನ್ನ ಲುಕ್‌ಗಾಗಿ ಎಂಬುದು ತಿಳಿದು ಬರುತ್ತದೆ ಎಂದಿದ್ದಾರೆ.

ಏನಿದು ಹಾಲ್ಟರ್‌ ನೆಕ್‌ ರಫಲ್‌ ಲೇಯರ್‌ ಮ್ಯಾಕ್ಸಿ ?

ನೋಡಲು ಸ್ಟ್ರಾಪ್‌ನಂತೆ ಕಾಣುವ ಹಾಲ್ಟರ್‌ ನೆಕ್‌ಲೈನ್‌ ಇರುವ ರಫಲ್‌ ಲೇಯರ್‌ ಮ್ಯಾಕ್ಸಿಯು ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಒಳಗೊಂಡಿರುತ್ತದೆ. ಇದೊಂದು ಸಮ್ಮರ್‌ ಸೀಸನ್‌ ಫ್ಯಾಷನ್‌ವೇರ್‌ ಆಗಿದೆ. ಬಾಲಿವುಡ್‌ಗರ ಫೇವರೇಟ್‌ ಹಾಲಿಡೇ ಫ್ಯಾಷನ್‌ನಲ್ಲಿದೆ. ನಾನಾ ಶೇಡ್‌ಗಳಲ್ಲಿ ದೊರೆತರೂ, ಇದೀಗ ರೆಡ್‌ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಪದರ ಪದರದಂತೆ ಕಾಣುವ ಈ ಲೇಯರ್‌ ಶಿಫಾನ್‌ ರೆಕ್ಕೆ ಪುಕ್ಕದಂತಹ ಡಿಸೈನ್ಸ್‌ ಹಾಗೂ ಸೈಡ್‌ ಸ್ಲಿಟ್‌ ಜೊತೆಗೆ ಶೋಲ್ಡರ್‌ ಎಕ್ಸ್ಪೋಸ್‌ ಮಾಡುವ ನೆಕ್‌ಲೈನ್ಸ್‌ ಎಲ್ಲವೂ ಈ ಸಮ್ಮರ್‌ ಬಿಸಿಲಿಗೆ ಹೊಂದುತ್ತದೆ ಎಂದು ಡಿಟೇಲ್‌ ನೀಡುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಈ ಬಗೆಯ ನೆಕ್‌ಲೈನ್‌ ಸಮ್ಮರ್‌ ಸೀಸನ್‌ನ ಬೆಸ್ಟ್‌ ಡಿಸೈನ್ಸ್.‌ ಇನ್ನು, ರಫಲ್‌ ಡಿಸೈನ್ಸ್‌ ಶಿಫಾನ್‌ದ್ದಾದರಿಂದ ಲೈಟ್‌ವೈಟ್‌ ಆಗಿರುತ್ತವೆ. ಸ್ಲಿಟ್‌ ಕಾಲಿನ ಅಂದಕ್ಕೆ ಬಿಂದಾಸ್‌ ಟಚ್‌ ನೀಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ನಮ್ರತಾ ಹಾಲಿಡೇ ಫ್ಯಾಷನ್‌ ಲವ್‌

ನಟಿ ನಮ್ರತಾ ಕೂಡ ಹಾಲಿ ಡೇ ಫ್ಯಾಷನ್‌ ಲವ್ವರ್‌ ಎನ್ನಬಹುದು. ಯಾಕೆಂದರೇ, ಅವರು ಎಲ್ಲೇ ಹೋಗಲಿ ಆಯಾ ಸ್ಥಳಗಳಿಗೆ ತಕ್ಕಂತೆ ಇಲ್ಲವೇ, ಟ್ರೆಂಡಿಯಾಗಿರುವ ಬಿಂದಾಸ್‌ ಉಡುಪುಗಳನ್ನೇ ಧರಿಸುತ್ತಾರೆ. ಮುಲಾಜು ನೋಡದೇ ತಮ್ಮ ಆಸೆ-ಅಭಿಲಾಷೆಗೆ ತಕ್ಕಂತೆ ಬಿಂದಾಸ್‌ ಔಟ್‌ಫಿಟ್ಸ್‌ ಧರಿಸುತ್ತಾರೆ. ಇದು ಅವರ ಬಿಂದಾಸ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಗಳು.

ಈ ಔಟ್‌ಫಿಟ್‌ನಲ್ಲಿ ನೀವೂ ನಮ್ರತಾರಂತೆ ಕಾಣಲು ಹೀಗೆ ಮಾಡಿ

  • ಪ್ರಯೋಗಾತ್ಮಕ ಡಿಸೈನರ್‌ವೇರ್‌ ಸೆಲೆಕ್ಟ್‌ ಮಾಡಿ.
  • ಹಾಲ್ಟರ್‌ ನೆಕ್‌ ಡ್ರೆಸ್‌ ಬಿಂದಾಸ್‌ ಲುಕ್‌ ನೀಡುತ್ತದೆ.
  • ಸ್ಲಿಟ್‌ ಡ್ರೆಸ್‌ಗಳು ಕಾಲುಗಳನ್ನು ಆಕರ್ಷಕವಾಗಿ ಬಿಂಬಿಸುತ್ತವೆ.
  • ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ಗೆ ಸೈ ಎನ್ನಿ.
  • ಹಾಲಿಡೇಯಲ್ಲಿ ಧರಿಸುವ ಸ್ಯಾಂಡಲ್ಸ್‌ ಫ್ಲಾಟಾಗಿರಲಿ.
  • ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಕಲರ್‌ ಡ್ರೆಸ್‌ ಆಯ್ಕೆ ಮಾಡಿ.
  • ಶೋಲ್ಡರ್‌ಗೆ ಹಾಲ್ಟರ್‌ ನೆಕ್‌ ಹೊಂದುತ್ತದೆಯೇ ಎಂಬುದನ್ನು ಮೊದಲೇ ಟ್ರಯಲ್‌ ಮಾಡಿ ನೋಡಿ.
  • ಹಾಲ್ಟರ್‌ ನೆಕ್‌ ಡ್ರೆಸ್‌ ಧರಿಸಿದಾ ಕತ್ತಿಗೆ ಆಕ್ಸೆಸರೀಸ್‌ ಧರಿಸಬೇಡಿ.
  • ಹಾಲಿ ಡೇ ಫ್ಯಾಷನ್‌ ಟ್ರೆಂಡ್‌ ಫಾಲೋ ಮಾಡಿ, ನಂತರ ಡಿಸೈಡ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ಈಗಾಗಲೇ ಆರಂಭವಾಗಿರುವ ಪ್ರತಿಷ್ಠಿತ ಕಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು, ರೆಡ್‌ಕಾರ್ಪೆಟ್‌ನಲ್ಲಿ ತಮ್ಮತಮ್ಮ ಫ್ಯಾಷನ್‌ವೇರ್ಸ್ ಅನಾವರಣಗೊಳಿದರು. ಮೊದಲ ದಿನವೇ ಯಾರ್ಯಾರು ಹೇಗೆಲ್ಲ ಕಾಣಿಸಿಕೊಂಡರು ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿದ್ದು, ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Cannes 2024 Fashion celebrities trend
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮತ್ತೊಮ್ಮೆ ಸೆಲೆಬ್ರೆಟಿಗಳ (Cannes 2024 Fashion) ಫ್ಯಾಷನ್‌ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ. ಹೌದು, ಈಗಾಗಲೇ ಆರಂಭವಾಗಿರುವ ವಿಶ್ವದ ಪ್ರತಿಷ್ಠಿತ 77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು ಪಾಲ್ಗೊಂಡು ತಮ್ಮದೇ ಆದ ಫ್ಯಾಷನ್‌ವೇರ್ಸ್ ಅನಾವರಣಗೊಳಿಸತೊಡಗಿದ್ದಾರೆ.

ಫ್ಯಾಷನ್‌ ವಿಮರ್ಶಕರ ರಿವ್ಯೂ
” ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಎಂದಿನಂತೆ ನಾನಾ ಧಿರಿಸು ಹಾಗೂ ಗೌನ್‌ಗಳ ಅನಾವರಣದಿಂದಲೇ ಆರಂಭವಾಗಿದೆ. ಸ್ಪರ್ಧೆಗಿಳಿದವರಂತೆ ತಾರೆಯರು ಕೂಡ ಊಹೆಗೂ ಮೀರಿದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸತೊಡಗಿದ್ದಾರೆ. ಹಾಲಿವುಡ್‌ ತಾರೆಯರು ನಾನ್‌ ವೇರಬಲ್‌ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದರೇ, ನಮ್ಮ ರಾಷ್ಟ್ರದ ಸೆಲೆಬ್ರೆಟಿಗಳು ವೇರಬಲ್‌ ಪ್ಲಸ್‌ ನಾನ್‌ ವೇರಬಲ್‌ ಡಿಸೈನರ್‌ ಗೌನ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇನ್ನು ಸಾಕಷ್ಟು ದಿನಗಳು ಈ ಫೆಸ್ಟಿವಲ್‌ ನಡೆಯುವುದರಿಂದ ಈಗಲೇ ಏನೂ ಹೇಳಲಾಗದು” ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರಾದ ಸೆಲೆಬ್ರೆಟಿ ಡಿಸೈನರ್‌ ನೀರಜ್‌ ವರ್ಮಾ.
” ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಬಾಲಿವುಡ್‌ ನಟಿ ಐಶ್ವರ್ಯಾ ರೈ ಪ್ರತಿಬಾರಿಯೂ ವಿನೂತನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ನಿರೀಕ್ಷೆ ಇದೆ. ಇನ್ನು ಕಿಯಾರಾ, ಶೋಭಿತಾ, ಜಾಕ್ವೇಲಿನ್‌ ಹಾಗೂ ಅದಿತಿ ರಾವ್‌ ಹೈದರಿ ಕೂಡ ಮುಂಬರುವ ದಿನಗಳಲ್ಲಿ ಭಾಗವಹಿಸಲಿದ್ದು, ಇವರ ಡಿಸೈನರ್‌ವೇರ್‌ಗಳ ಬಗ್ಗೆಯೂ ಸಾಕಷ್ಟು ಕುತೂಹಲವಿದೆ” ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ರೋಹನ್‌ ರಾಜ್‌.

ಇದನ್ನೂ ಓದಿ: Sandalwood Actress At Cannes 2023: ಮತ್ತೊಮ್ಮೆ ಕಾನ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ

ಟಿವಿ ತಾರೆ ದೀಪ್ತಿಯ ಆಕರ್ಷಕ ಲಾಂಗೆಸ್ಟ್‌ ಗೌನ್‌

ಆರಂಭದಲ್ಲೆ, ಟಿವಿ ತಾರೆ ದೀಪ್ತಿ ಸದ್ವಾನಿಯ ಹಳದಿ ಕಲರ್‌ ರಫಲ್‌ ನೆಟ್ಟೆಡ್‌ ಗೌನ್‌ ಕಾನೆ ಫೆಸ್ಟಿವಲ್‌ನ ಆರಂಭದ ದಿನದಲ್ಲೆ ಎಲ್ಲರನ್ನು ಸೆಳೆಯಿತು. ಆಂಚಲ್‌ ಕಾಚರ್‌ ಡಿಸೈನ್‌ನ ಈ ಗೌನ್‌ ಮೊದಲನೆ ದಿನದ ಅತಿ ಉದ್ದನೆಯ ಗೌನ್‌ ಎಂದು ರೆಕಾರ್ಡ್‌ ಮಾಡಿತು.

ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ತಾಪರ್‌ ಲುಕ್‌:

ಉದ್ಯಮಿ ಹಾಗೂ ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ಟಾಪರ್‌ರ ಪಾಸ್ಟೆಲ್‌ ಶೇಡ್‌ನ ಆಫ್‌ ಶೋಲ್ಡರ್‌, ಸ್ಲಿಟ್‌ ಇರುವ ಬಲೂನ್‌ ಸ್ಲೀವ್‌ನ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯಿತು.

ಡಿಸೈನರ್‌ವೇರ್‌ ಕಾಪಿ ಮಾಡಿದ ಊರ್ವಶಿ

ಪಿಂಕ್‌ ಗೌನ್‌ನಲ್ಲಿ ಊರ್ವಶಿ ಚಂದನಾಗಿ ಕಾಣಿಸಿದರೂ, ದೀಪಿಕಾ ಪಡುಕೋಣೆಯ ಗೌನ್‌ ಕಾಪಿ ಮಾಡಿದ ಬಿರುದು ದೊರೆಯಿತು.

ಹಾಲಿವುಡ್‌ ತಾರೆಯರ ಬೆಸ್ಟ್‌ ಲುಕ್ಸ್‌

ನಟಿ ನೌಮಿ ಕಾಂಪ್ಬೆಲ್‌ ಬ್ಲಾಕ್‌ ಶೇಡ್‌ ಆರ್ಕಿವ್‌ ಚಾನೆಲ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಅನ್ಯಾ ಟಾಯ್ಲರ್‌ ಡಿಯೋರ್‌ ಶೋಲ್ಡರ್‌ಲೆಸ್‌ ಕ್ರೀಮಿಶ್‌ ಸಿಂಡ್ರೆಲ್‌ ಗೌನ್‌ನಲ್ಲಿ ಗಮನ ಸೆಳೆದರು. ಕ್ರಿಸ್‌ ಹೆಮ್ಸ್ವರ್ತ್‌ – ಎಲ್ಸಾ ಕಪಲ್‌ ಕಾಂಟ್ರಸ್ಟ್‌ ಬ್ಲಾಕ್‌ & ವೈಟ್‌ ಔಟ್‌ಫಿಟ್‌ನಲ್ಲಿ ರೆಡ್‌ ಕಾರ್ಪೆಟ್‌ ತುಳಿದರು. ಲಾ ರೋಚ್‌ ಬ್ಲಾಕ್‌ ಶೈನಿಂಗ್‌ ಕೋಟ್‌ ಶರ್ಟ್-ಪ್ಯಾಂಟ್‌ನಲ್ಲಿ, ಸಬ್ರು ಡಬ್ಬಲ್‌ ಶೇಡ್‌ ವನ್‌ ಶೋಲ್ಡರ್‌ ಗೌನ್‌ನಲ್ಲಿ, ಗ್ರೇಟಾ ರೆಡ್‌ ಫಿಶ್‌ಟೇಲ್‌ ಗೌನ್‌ನಲ್ಲಿ, ಇವಾ ಬಾಲ್ಮೈಮ್‌ ಶಿಮ್ಮರ್‌ ಗೌನ್‌ನಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆದರು. ಇವರೊಂದಿಗೆ ಸಿನಿಮಾ ಪ್ರೀಮಿಯರ್‌ ಟೀಮ್‌ನವರು ನಾನಾ ಶೈಲಿಯ ಡಿಸೈನರ್‌ವೇರ್ಗಳಲ್ಲಿ ಕಾಣಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Wedding men’s jewel Fashion: ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ಗೆ ಕಾಲಿಟ್ಟ ಆರ್ಟಿಫಿಶಿಯಲ್‌ ಪರ್ಲ್‌ ಹಾರ!

Wedding men’s jewel Fashion ವೆಡ್ಡಿಂಗ್‌ ಸೀಸನ್‌ನಲ್ಲಿ ಇದೀಗ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಕೃತಕ ಪರ್ಲ್‌ ಲೇಯರ್‌ ಹಾರಗಳು ಮದುಮಗನನ್ನು ಸಿಂಗರಿಸುತ್ತಿವೆ. ಮದುವೆಯ ಆರತಕ್ಷತೆಯಲ್ಲಿ ಧರಿಸುವ ಶೆರ್ವಾನಿ, ಬಂದ್ಗಾಲ ಹಾಗೂ ಕುರ್ತಾಗಳೊಂದಿಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Wedding men's jewel Fashion Artificial pearl necklace has entered
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಇದೀಗ ಆರ್ಟಿಫಿಶಿಯಲ್‌ ಪರ್ಲ್‌ ಹಾರಗಳು ಎಂಟ್ರಿ (Wedding mens jewel Fashion) ನೀಡಿವೆ. ಮದುವೆಯ ರಿಸಪ್ಷನ್‌ನಲ್ಲಿ ಯುವಕರು ಧರಿಸುವ ಶೆರ್ವಾನಿ, ಬಂದ್ಗಾಲ ಹಾಗೂ ಡಿಸೈನರ್‌ ಕುರ್ತಾಗಳಿಗೆ ಸಾಥ್‌ ನೀಡುತ್ತಿವೆ. ಅಷ್ಟು ಮಾತ್ರವಲ್ಲ, ರಾಯಲ್‌ ಲುಕ್‌ ಕಲ್ಪಿಸುತ್ತಿವೆ.

ರಾಯಲ್‌ ಲುಕ್‌ಗಾಗಿ ಪರ್ಲ್‌ ಹಾರ

ವೆಡ್ಡಿಂಗ್‌ನಲ್ಲಿ ಮದುಮಗನ ರಾಯಲ್‌ ಲುಕ್‌ಗಾಗಿ ಈ ಭಾರಿ ಡಿಸೈನ್‌ನ ಪರ್ಲ್‌ ಹಾರಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ರಿಸಪ್ಷನ್‌ ಅಂದರೇ ಆರತಕ್ಷತೆಯಲ್ಲಿ ಮದುಮಗ ಧರಿಸುವ ಗ್ರ್ಯಾಂಡ್‌ ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಹ ಡಿಸೈನ್‌ನವನ್ನು ಧರಿಸುವುದು ಕಂಡು ಬರುತ್ತಿದೆ. ಇದಕ್ಕಾಗಿ ಹೆಚ್ಚು ಬೆಲೆ ತೆತ್ತು ರಿಯಲ್‌ ಪರ್ಲ್‌ ಹಾರಗಳನ್ನು ಖರೀದಿಸುವುದರ ಬದಲು ಥೇಟ್‌ ಮುತ್ತಿನ ಹಾರಗಳಂತೆ ಕಾಣುವ ಆರ್ಟಿಫೀಶಿಯಲ್‌ ಪರ್ಲ್‌ವನ್ನು ಇತ್ತೀಚೆಗೆ ಹುಡುಗರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಒಂದು ದಿನಕ್ಕಾಗಿ ಧರಿಸುವ ಈ ಮೆನ್ಸ್‌ ಗ್ರ್ಯಾಂಡ್‌ ಮುತ್ತಿನ ಹಾರಗಳು ಮತ್ತೊಮ್ಮೆ ಬಳಕೆಯಾಗುವುದು ಕಡಿಮೆ. ಬಳಸಿದರೂ ಮತ್ತೊಮ್ಮೆ ಕುಟುಂಬದವರೇ ಧರಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಆಯ್ಕೆ ಮಾಡುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ವೆಡ್ಡಿಂಗ್‌ ಜ್ಯುವೆಲರಿ ಡಿಸೈನರ್ಸ್.‌

ಇದನ್ನೂ ಓದಿ: Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

ಆರ್ಟಿಫಿಶಿಯಲ್‌ ಮುತ್ತಿನ ಹಾರಗಳ ವಿನ್ಯಾಸ

ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಡಿಸೈನ್‌ಗಳಲ್ಲಿ ಇದೀಗ ನಾನಾ ಬಗೆಯ ಕೃತಕ ಪರ್ಲ್‌ ಹಾರಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಮೂರು, ಐದು, ಏಳು ಎಳೆಯ ಹಾರಗಳು ಚಾಲ್ತಿಯಲ್ಲಿವೆ. ಇನ್ನು ಇವುಗಳಲ್ಲೆ ಮಿಕ್ಸ್‌ ಮ್ಯಾಚ್‌ ಮಾಡಿರುವ ಪ್ರಿಶಿಯಸ್‌ ಬೀಡ್ಸ್ನಂತೆ ಕಾಣುವ ಲೇಯರ್‌ ಮಣಿಗಳವು ಬಂದಿವೆ. ಇನ್ನು ಗೋಲ್ಡನ್‌ ಬೀಡ್ಸ್‌ ಜೊತೆಗೆ ಪರ್ಲ್‌ನಂತೆ ಕಾಣುವ ಆರ್ಟಿಫಿಶಿಯಲ್‌ ಪರ್ಲ್‌ ಹಾರಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

ಕೈಗೆಟಕುವ ಬೆಲೆ

ಫ್ಯಾನ್ಸಿ ಶಾಪ್‌ಗಳಲ್ಲಿ ದೊರಕುವ ಈ ಮೆನ್ಸ್‌ ಆರ್ಟಿಫಿಶೀಯಲ್‌ ವೆಡ್ಡಿಂಗ್‌ ಜ್ಯುವೆಲರಿಗಳು ಅಂತಹ ದುಬಾರಿ ದರ ಹೊಂದಿರುವುದಿಲ್ಲ. ಬ್ರಾಂಡೆಡ್‌ನದ್ದಾದಲ್ಲಿ ದರ ಹೆಚ್ಚಿರುತ್ತವೆ. ಇನ್ನು ಲೋಕಲ್‌ ಬ್ರಾಂಡ್‌ಗಳದ್ದಾದಲ್ಲಿ ಸಾವಿರ ರೂ.ಗಳ ಒಳಗೆ ದೊರಕುತ್ತವೆ. ಕೆಲವು ಯೂನಿಸೆಕ್ಸ್‌ ಡಿಸೈನ್‌ ಹೊಂದಿರುತ್ತವೆ. ಇವನ್ನು ಮದುವೆಯ ಆರತಕ್ಷತೆಯ ನಂತರ ಕುಟುಂಬದ ಇತರೇ ಮಹಿಳೆಯರು ಧರಿಸಬಹುದು. ಮರು ಬಳಕೆ ಮಾಡಬಹುದು ಎಂದು ಟಿಪ್ಸ್‌ ನೀಡುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ಗಳು.

ಮದುಮಗನ ಪರ್ಲ್‌ ಹಾರ ಆಯ್ಕೆಗೆ 7 ಸೂತ್ರ:

  • ಆರತಕ್ಷತೆಯಲ್ಲಿ ಧರಿಸುವ ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಿರಬೇಕು.
  • ಮರುಬಳಕೆ ಮಾಡುವಂತಹ ಪರ್ಲ್‌ ಹಾರವನ್ನು ಖರೀದಿಸಿ.
  • ಒಂದೇ ಶೇಡ್‌ನದ್ದಾದಲ್ಲಿ ಯಾರೂ ಬೇಕಾದರೂ ಧರಿಸಬಹುದು.
  • ಮಿಕ್ಸ್‌ ಮ್ಯಾಚ್‌ ಮಾಡಿರುವ ಬೀಡ್ಸ್‌ ಇರುವಂತಹ ಪರ್ಲ್‌ ಹಾರ ಎದ್ದು ಕಾಣುತ್ತವೆ.
  • ಸಾದಾ ಡಿಸೈನ್‌ನ ಔಟ್‌ಫಿಟ್‌ಗೆ ಕಲರ್‌ ಬೀಡ್ಸ್‌ ಮಿಕ್ಸ್‌ ಮಾಡಿರುವಂತವನ್ನು ಧರಿಸುವುದು ಉತ್ತಮ.
  • ಗ್ರ್ಯಾಂಡ್‌ ಡಿಸೈನ್‌ನವಕ್ಕೆ ಸಿಂಪಲ್‌ ಒಂದೇ ಕಲರ್‌ನವನ್ನು ಚೂಸ್‌ ಮಾಡಬೇಕು.
  • ಆದಷ್ಟೂ ಉದ್ದ ಇರುವಂತಹ ಲೇಯರ್‌ ಹಾರ ಖರೀದಿಸುವುದು ಬೆಸ್ಟ್.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
These foods are really what our body needs in summer
ಆರೋಗ್ಯ14 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ24 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ26 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ38 mins ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ1 hour ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ3 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Pakistan
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ8 hours ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ18 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌