ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ಗೆ ಹೊಂದುವಂತಹ ಪಾರದರ್ಶಕವಾಗಿರುವ ಶೀರ್ ಪ್ಲೇನ್ ಸೀರೆಯಲ್ಲಿ ಸ್ಯಾಂಡಲ್‌ವುಡ್ ನಟಿ (Star Saree Fashion) ಡೈಸಿ ಬೋಪಣ್ಣ ಕಾಣಿಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಅಂತಹ ವಿಶೇಷ ಏನಿಲ್ಲದಿದ್ದರೂ, ಈ ಸೀಸನ್‌ಗೆ ಹೊಂದುವಂತಹ ಶೀರ್ ಅಂದರೆ, ಪಾರದರ್ಶಕ ಸಾದಾ ಫ್ರಿಲ್ ಸೀರೆಯಲ್ಲಿ ನಾನಾ ಫನ್ ಪೋಸ್ ನೀಡಿದ್ದಾರೆ. ಈ ಸೀಸನ್‌ಗೆ ಈ ಸೀರೆ ಪಕ್ಕಾ ಮ್ಯಾಚ್ ಆಗುವಂತಿದೆ. ಅಂದಹಾಗೆ, ಡೈಸಿ ಬೋಪಣ್ಣ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಮುಂಬಯಿಯಲ್ಲಿ ಸೆಟಲ್ ಆಗಿದ್ದಾರೆ. ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಕಂಟೆಟ್ ಮೂಲಕ ಸಖತ್ ಸಕ್ರಿಯರಾಗಿದ್ದಾರೆ. ಆಗಿಂದಾಗ ಸಾಕಷ್ಟು ರೀಲ್ಸ್ ಮಾಡುವುದರೊಂದಿಗೆ ಸ್ಟೈಲಿಂಗ್ ಟಿಪ್ಸ್ ಕೂಡ ನೀಡುತ್ತಿರುತ್ತಾರೆ. ಸ್ಟೈಲಿಶ್ ಆಗಿರುವ ನಟಿ ಡೈಸಿ ಇದೀಗ ಧರಿಸಿರುವ ಸೀರೆ, ಸದ್ಯದ ಸಮ್ಮರ್ ಸೀರೆ ಫ್ಯಾಷನ್‌ನಲ್ಲಿ ಸೇರಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸಮ್ಮರ್‌ಗೆ ಪಾರದರ್ಶಕ ಶೀರ್ ಸೀರೆಗಳು
ಸ್ಟಾರ್‌ಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರು ಕೂಡ ಕೈಗೆಟಕುವ ದರದಲ್ಲಿ ದೊರೆಯುವ ಈ ಶೀರ್ ಸಾದಾ ಸೀರೆಗಳನ್ನು ಪ್ರಿಫರ್ ಮಾಡತೊಡಗಿದ್ದಾರೆ. ಇದಕ್ಕೆ ಕಾರಣ, ಸಮ್ಮರ್‌ನಲ್ಲಿ ಈ ಸೀರೆ ಉಟ್ಟಾಗ ಸೆಕೆಯಾಗುವುದಿಲ್ಲ, ಜೊತೆಗೆ ಲೈಟ್‌ವೈಟ್ ಆಗಿರುತ್ತವೆ ಎಂಬುದು ಫ್ಯಾಷನಿಸ್ಟಾ ದಾಮಿನಿ ಅಭಿಪ್ರಾಯ.
ಡೈಸಿಯ ಬ್ಲ್ಯೂ ಶೀರ್ ಫ್ರಿಲ್ ಸೀರೆ
ಸಾದಾ ಸೀರೆಗೆ ಫ್ರಿಲ್ ಬಾರ್ಡರ್ ಹೊಂದಿರುವ ಈ ಸೀರೆ ತೀರಾ ಸಿಂಪಲ್ ಆಗಿದ್ದು, ಸೀರೆಯ ಒಡಲಲೆಲ್ಲಾ ಮಿರರ್ ವರ್ಕ್ ಇದೆ. ಇನ್ನು ಬ್ಲ್ಯೂ ಶೇಡ್ ಬೇಸಿಗೆಯ ಫ್ರೆಶ್ ಲುಕ್ ಸಾಥ್ ನೀಡುವಂತಿದೆ. ಇದಕ್ಕೆ ಸಾಥ್ ನೀಡುವ ಬ್ಲ್ಯಾಕ್ ಮೆಟಲ್ ಆಕ್ಸೆಸರೀಸ್, ವಿಂಗ್ಡ್ ಐ ಲೈನರ್, ಮ್ಯಾಚಿಂಗ್ ಬ್ಯಾಂಗಲ್ಸ್ ಸಮ್ಮರ್ ಸೀರೆ ಲುಕ್‌ಗೆ ಕಂಪ್ಲೀಟ್ ಎಥ್ನಿಕ್ ಟಚ್ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಸೀರೆ ಉಟ್ಟಾಕ್ಷಣಾ ಫಿಲ್ಮಿ ಎಕ್ಸ್‌ಪ್ರೆಷನ್ ತಂತಾನೆ ಬರುತ್ತದೆ ಎನ್ನುವ ಡೈಸಿ ಬೊಪಣ್ಣ ಸೀರೆ ಲುಕ್‌ಗೆ ಫುಲ್ ಮಾಕ್ರ್ಸ್ ನೀಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Holiday Fashion: ಸೀಸನ್ ಟ್ರೆಂಡ್‌ನ ಟಾಪ್ ಲಿಸ್ಟ್‌ನಲ್ಲಿ ಸಮ್ಮರ್ ಹಾಲಿಡೇ ಫ್ಯಾಷನ್