Star Saree Fashion : ಸಮ್ಮರ್‌ ಸೀಸನ್‌ ಶೀರ್‌ ಬ್ಲ್ಯೂ ಸೀರೆಯಲ್ಲಿ ನಟಿ ಡೈಸಿ ಬೋಪಣ್ಣ - Vistara News

ಫ್ಯಾಷನ್

Star Saree Fashion : ಸಮ್ಮರ್‌ ಸೀಸನ್‌ ಶೀರ್‌ ಬ್ಲ್ಯೂ ಸೀರೆಯಲ್ಲಿ ನಟಿ ಡೈಸಿ ಬೋಪಣ್ಣ

ಸ್ಯಾಂಡಲ್‌ವುಡ್‌ ನಟಿ (Star Saree Fashion) ಡೈಸಿ ಬೋಪಣ್ಣ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಪಾರದರ್ಶಕವಾಗಿರುವ ಶೀರ್‌ ಬ್ಲ್ಯೂ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಸೀರೆ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸೀರೆ ಬಗ್ಗೆ ಸ್ಟೈಲಿಸ್ಟ್‌ಗಳು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Saree Fashion
ಚಿತ್ರಗಳು: ಡೈಸಿ ಬೋಪಣ್ಣ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಪಾರದರ್ಶಕವಾಗಿರುವ ಶೀರ್‌ ಪ್ಲೇನ್‌ ಸೀರೆಯಲ್ಲಿ ಸ್ಯಾಂಡಲ್‌ವುಡ್‌ ನಟಿ (Star Saree Fashion) ಡೈಸಿ ಬೋಪಣ್ಣ ಕಾಣಿಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಅಂತಹ ವಿಶೇಷ ಏನಿಲ್ಲದಿದ್ದರೂ, ಈ ಸೀಸನ್‌ಗೆ ಹೊಂದುವಂತಹ ಶೀರ್‌ ಅಂದರೆ, ಪಾರದರ್ಶಕ ಸಾದಾ ಫ್ರಿಲ್‌ ಸೀರೆಯಲ್ಲಿ ನಾನಾ ಫನ್‌ ಪೋಸ್‌ ನೀಡಿದ್ದಾರೆ. ಈ ಸೀಸನ್‌ಗೆ ಈ ಸೀರೆ ಪಕ್ಕಾ ಮ್ಯಾಚ್‌ ಆಗುವಂತಿದೆ. ಅಂದಹಾಗೆ, ಡೈಸಿ ಬೋಪಣ್ಣ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಮುಂಬಯಿಯಲ್ಲಿ ಸೆಟಲ್‌ ಆಗಿದ್ದಾರೆ. ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಆದರೆ, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಕಂಟೆಟ್‌ ಮೂಲಕ ಸಖತ್‌ ಸಕ್ರಿಯರಾಗಿದ್ದಾರೆ. ಆಗಿಂದಾಗ ಸಾಕಷ್ಟು ರೀಲ್ಸ್‌ ಮಾಡುವುದರೊಂದಿಗೆ ಸ್ಟೈಲಿಂಗ್‌ ಟಿಪ್ಸ್‌ ಕೂಡ ನೀಡುತ್ತಿರುತ್ತಾರೆ. ಸ್ಟೈಲಿಶ್‌ ಆಗಿರುವ ನಟಿ ಡೈಸಿ ಇದೀಗ ಧರಿಸಿರುವ ಸೀರೆ, ಸದ್ಯದ ಸಮ್ಮರ್‌ ಸೀರೆ ಫ್ಯಾಷನ್‌ನಲ್ಲಿ ಸೇರಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಸಮ್ಮರ್‌ಗೆ ಪಾರದರ್ಶಕ ಶೀರ್‌ ಸೀರೆಗಳು

ಸ್ಟಾರ್‌ಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರು ಕೂಡ ಕೈಗೆಟಕುವ ದರದಲ್ಲಿ ದೊರೆಯುವ ಈ ಶೀರ್‌ ಸಾದಾ ಸೀರೆಗಳನ್ನು ಪ್ರಿಫರ್‌ ಮಾಡತೊಡಗಿದ್ದಾರೆ. ಇದಕ್ಕೆ ಕಾರಣ, ಸಮ್ಮರ್‌ನಲ್ಲಿ ಈ ಸೀರೆ ಉಟ್ಟಾಗ ಸೆಕೆಯಾಗುವುದಿಲ್ಲ, ಜೊತೆಗೆ ಲೈಟ್‌ವೈಟ್‌ ಆಗಿರುತ್ತವೆ ಎಂಬುದು ಫ್ಯಾಷನಿಸ್ಟಾ ದಾಮಿನಿ ಅಭಿಪ್ರಾಯ.

ಡೈಸಿಯ ಬ್ಲ್ಯೂ ಶೀರ್‌ ಫ್ರಿಲ್‌ ಸೀರೆ

ಸಾದಾ ಸೀರೆಗೆ ಫ್ರಿಲ್‌ ಬಾರ್ಡರ್‌ ಹೊಂದಿರುವ ಈ ಸೀರೆ ತೀರಾ ಸಿಂಪಲ್‌ ಆಗಿದ್ದು, ಸೀರೆಯ ಒಡಲಲೆಲ್ಲಾ ಮಿರರ್‌ ವರ್ಕ್ ಇದೆ. ಇನ್ನು ಬ್ಲ್ಯೂ ಶೇಡ್‌ ಬೇಸಿಗೆಯ ಫ್ರೆಶ್‌ ಲುಕ್‌ ಸಾಥ್‌ ನೀಡುವಂತಿದೆ. ಇದಕ್ಕೆ ಸಾಥ್‌ ನೀಡುವ ಬ್ಲ್ಯಾಕ್‌ ಮೆಟಲ್‌ ಆಕ್ಸೆಸರೀಸ್‌, ವಿಂಗ್ಡ್‌ ಐ ಲೈನರ್‌, ಮ್ಯಾಚಿಂಗ್‌ ಬ್ಯಾಂಗಲ್ಸ್‌ ಸಮ್ಮರ್‌ ಸೀರೆ ಲುಕ್‌ಗೆ ಕಂಪ್ಲೀಟ್‌ ಎಥ್ನಿಕ್‌ ಟಚ್‌ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಸೀರೆ ಉಟ್ಟಾಕ್ಷಣಾ ಫಿಲ್ಮಿ ಎಕ್ಸ್‌ಪ್ರೆಷನ್‌ ತಂತಾನೆ ಬರುತ್ತದೆ ಎನ್ನುವ ಡೈಸಿ ಬೊಪಣ್ಣ ಸೀರೆ ಲುಕ್‌ಗೆ ಫುಲ್‌ ಮಾಕ್ರ್ಸ್ ನೀಡಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

ಬೇಸಿಗೆಯ ಬಿರು ಬಿಸಿಲಿನಲ್ಲಿ ಪೂಲ್‌ ಸೈಡ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಶಿಲ್ಪಾ ಮಂಜುನಾಥ್‌, ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ಗರನ್ನು ಹೋಲುವ ಇವರ ಈ ಔಟ್‌ಫಿಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳಿರುವುದೇನು? ಇಲ್ಲಿದೆ (Actress Summer Fashion) ವಿವರ.

VISTARANEWS.COM


on

Actress Summer Fashion
ಚಿತ್ರಗಳು : ಶಿಲ್ಪಾ ಮಂಜುನಾಥ್‌, ನಟಿ, ಮಾಡೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಶಿಲ್ಪಾ ಮಂಜುನಾಥ್‌ ಹಾಟ್‌ ಲುಕ್‌ನಲ್ಲಿ (Actress Summer Fashion) ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಬೇಸಿಗೆಯ ಬಿಸಿಲಿನಲ್ಲಿ ಪೂಲ್‌ ಸೈಡ್‌ನಲ್ಲಿ ಕಾಣಿಸಿಕೊಂಡಿರುವ ಶಿಲ್ಪಾ, ವೈಟ್‌ ಸ್ಟ್ರಾಪ್‌ ಮಿನಿ ಕ್ರಾಪ್‌ ಟಾಪ್‌, ಜೀನ್ಸ್‌ ಶಾರ್ಟ್ಸ್‌ ಹಾಗೂ ಇದರ ಮೇಲೊಂದು ಶೀರ್‌ ಶಿಫಾನ್‌ ಪ್ರಿಂಟೆಡ್‌ ಟ್ರಾಪಿಕಲ್‌ ವಿನ್ಯಾಸದ ತೆಳುವಾದ ಜಾಕೆಟ್‌ನಲ್ಲಿ ಬಿಂದಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Actress Summer Fashion

ಮಾಡೆಲ್‌/ನಟಿ ಶಿಲ್ಪಾ ಬಿಂದಾಸ್‌ ಲುಕ್‌

ಮಾಡೆಲ್‌ ಕಮ್‌ ನಟಿ ಶಿಲ್ಪಾ ಆಗಾಗ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇವರು ಕನ್ನಡದ ಹುಡುಗಿ ಮಾತ್ರವಲ್ಲ, ಮಾಜಿ ಮಿಸ್‌ ಕರ್ನಾಟಕ ಕೂಡ. ಕನ್ನಡ ಸಿನಿಮಾಗಳ ಮೂಲಕ ನಟನೆಗೆ ಕಾಲಿಟ್ಟ ಶಿಲ್ಪಾ, ತದನಂತರ ತಮಿಳು, ತೆಲುಗು ಸೇರಿದಂತೆ ಇತರೇ ಭಾಷೆಗಳಲ್ಲಿ ನಟಿಸಲಾರಂಭಿಸಿದರು. ಇದೀಗ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್‌ ಫಾಲೋವಿಂಗ್‌ ಹೊಂದಿರುವ ಇವರು, ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇದರೊಂದಿಗೆ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಇದೀಗ ಬಾಲಿವುಡ್‌ಗರನ್ನು ಹೋಲುವಂತಹ ಈ ಸೀಸನ್‌ನ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ತಮ್ಮ ಈ ಬಿಂದಾಸ್‌ ಔಟ್‌ಫಿಟ್‌ಗೆ ತಕ್ಕಂತೆ ಸನ್‌ಗ್ಲಾಸ್‌, ಕೈಗಳಿಗೆ ಫಂಕಿ ಬ್ರೇಸ್‌ಲೇಟ್ಸ್‌, ಪಾದಕ್ಕೆ ಫ್ಲಿಪ್‌ ಫ್ಲಾಪ್‌, ಆಂಕಲ್‌ ಸೈನ್‌, ಧರಿಸಿ, ಈ ಲುಕ್ಕನ್ನು ಹೈಲೈಟ್‌ ಮಾಡಿದ್ದಾರೆ. ಪೂಲ್‌ಸೈಟ್‌ನಲ್ಲಿ ಇವರ ಔಟ್‌ಲುಕ್‌ ಸಖತ್ತಾಗಿ ಮ್ಯಾಚ್‌ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Actress Summer Fashion

ಅಲ್ಟ್ರಾ ಮಾಡರ್ನ್‌ ಹುಡುಗಿಯರ ಪೂಲ್‌ಸೈಡ್‌ ಲುಕ್‌

ಶಿಲ್ಪಾ ಕಾಣಿಸಿಕೊಂಡಿರುವ ಈ ಪೂಲ್‌ಸೈಡ್‌ ಪಾರ್ಟಿಯ ಬಿಂದಾಸ್‌ ಲುಕ್‌ ಎಂದು ಕೂಡ ಕರೆಯಬಹುದು. ಹಾಗೆಂದು ಇದು ನೈಟ್‌ ಪಾರ್ಟಿಯದ್ದಲ್ಲ! ಮಧ್ಯಾಹ್ನದ ಸಮಯದಲ್ಲಿ ನಡೆಯುವ ಬ್ರಂಚ್‌ ಅಥವಾ ಲಂಚ್‌ ಪಾರ್ಟಿಯ ಬಿಂದಾಸ್‌ ಲುಕ್‌ ಇದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್‌ಡೋರ್‌ ಪಾರ್ಟಿಗಳಲ್ಲಿ ಈ ಔಟ್‌ಫಿಟ್‌ ಸಾಮಾನ್ಯ ಎನ್ನುತ್ತಾರೆ ಅವರು.

Actress Summer Fashion

ಬಾಲಿವುಡ್‌ನವರ ಫೆವರೇಟ್‌ ಲುಕ್‌

ಇನ್ನು, ಬಿಸಿಲು ಕಾಲದಲ್ಲಿ ಸೆಕೆ ಹೆಚ್ಚು, ಹಾಗಾಗಿ, ಈ ಲುಕ್‌ ಬಾಲಿವುಡ್‌ಗರ ಫೇವರೇಟ್‌ ಲುಕ್‌ ಎಂದರೂ ತಪ್ಪಲ್ಲ! ದಿನದ ಮಧ್ಯೆ ನಡೆಯುವ ಪಾರ್ಟಿ ಲುಕ್‌ಗಾಗಿ ಈ ಸ್ಟೈಲಿಂಗ್‌ನಲ್ಲಿ ಬಾಲಿವುಡ್‌ ತಾರೆಯರು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಉದಾಹರಣೆಗೆ., ದಿಶಾ ಪಟಾನಿ, ಅನನ್ಯಾ, ಜಾನ್ಹವಿ, ಅಹನಾ, ಸುಹಾನಾ, ನೋರಾ, ಖುಷಿ ಕಪೂರ್‌ ಸೇರಿದಂತೆ ನಾನಾ ನಟಿಯರು ಈ ಲುಕ್‌ನ ದಾಸರು. ಈ ಲುಕ್‌ ಬಾಡಿ ಮಾಸ್‌ ಇಂಡೆಕ್ಸ್‌ ಹೈಲೈಟ್‌ ಮಾಡುವುದರೊಂದಿಗೆ, ಹಾಟ್‌ ಲುಕ್‌ ನೀಡುತ್ತದೆ. ಜೊತೆಗೆ ನೋಡುಗರನ್ನು ಸೆಳೆಯುತ್ತದೆ ಎನ್ನುತ್ತಾರೆ ಸ್ಟೈಲಿಂಗ್‌ ಎಕ್ಸ್‌ಫರ್ಟ್ಸ್‌.‌ ಬಹಳಷ್ಟು ಬಾರಿ ಈ ನಟಿಯರ ಡೈಲಿ ಲುಕ್‌ ಕೂಡ ಇದಾಗಿರುತ್ತದೆ. ಆದರೆ, ಇಲ್ಲಿನ ಸ್ಥಳೀಯ ನಟಿಯರು ಹಾಗೂ ಮಾಡೆಲ್‌ಗಳು ಮಾತ್ರ, ಈ ಬಗ್ಗೆ ಸಖತ್‌ ಕಾನ್ಶಿಯಸ್‌! ತಮ್ಮ ಔಟಿಂಗ್‌ ಹಾಗೂ ವೀಕೆಂಡ್‌ ಮತ್ತು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವಾಗ ಮಾತ್ರ ಈ ಲುಕ್‌ಗೆ ಮೊರೆ ಹೋಗುತ್ತಾರೆ. ಅದು ಇನ್‌ಡೋರ್‌ ಪಾರ್ಟಿಗಳಲ್ಲಿ ಮಾತ್ರ ಹೀಗೆಲ್ಲಾ ಕಾಣಿಸಿಕೊಳ್ಳುತ್ತಾರೆ. ಪಬ್ಲಿಕ್‌ನಲ್ಲಿ ಈ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

Continue Reading

ಫ್ಯಾಷನ್

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಯಾವ್ಯಾವ ಶೈಲಿಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಹೆಣೆದುಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Season Hairstyle
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ವೀಕೆಂಡ್‌ ಔಟಿಂಗ್‌ ಕ್ಯಾಶುವಲ್‌ ಲುಕ್‌ನಲ್ಲಿ ಅದರಲ್ಲೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ.

Season Hairstyle

ಜಡೆಯ ಮೂಲರೂಪ

“ಎರಡು ಜಡೆ ಹೇರ್‌ಸ್ಟೈಲ್‌ ನಿನ್ನೆ ಮೊನ್ನೆಯದೇನಲ್ಲ! ಹಿಂದಿನ ಕಾಲದಿಂದಲೂ ಇದೆ. ಅದರಲ್ಲೂ ನಮ್ಮಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಎರಡು ಜಡೆ ಹಾಕುವುದು ಈಗಲೂ ಇದೆ. ಇನ್ನು ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತಾರೆ. ಆ ಮಟ್ಟಿಗೆ ಈ ಎರಡು ಜಡೆ ತನ್ನ ಮೂಲತನವನ್ನು ಉಳಿಸಿಕೊಂಡಿದೆ. ಇದೀಗ ಇವಕ್ಕೆ ಹೇರ್‌ಸ್ಟೈಲಿಸ್ಟ್‌ಗಳು ಮತ್ತೆ ಮರು ಜೀವ ತುಂಬಿ ಒಂದಿಷ್ಟು ಹೊಸತನದಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ರೂಪದಲ್ಲಿ ಎರಡು ಜಡೆಗಳು ಆಗಮಿಸಿವೆ. ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ 3 ಬಗೆಯವು ಹೆಚ್ಚು ಪ್ರಚಲಿದಲ್ಲಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ದಿಗಂತ್‌.

ಫ್ರೆಂಚ್‌ ಫ್ಲಾಟ್‌ನಂತಹ ಎರಡು ಜಡೆ

ತಲೆಯ ಅಂದರೆ, ಹಣೆ ಮುಂಭಾಗದಿಂದಲೇ ಎರಡು ಜಡೆ ಹೆಣೆದು, ಕೆಳಗಿನ ಭಾಗದವರೆಗೂ ಜಡೆ ಕಂಟಿನ್ಯೂ ಮಾಡುವ ಈ ಹೇರ್‌ಸೈಲ್‌ ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಇದರಲ್ಲೆ ನಾನಾ ಪ್ರಕಾರದ ಜಡೆಗಳು ಇನ್‌ಸ್ಟಾ ಬ್ಯೂಟಿ ಬ್ಲಾಗ್‌ಗಳಿಂದ ಚಾಲ್ತಿಗೆ ಬಂದಿವೆ.

Season Hairstyle

ಫಿಶ್‌ಟೈಲ್‌ ಜಡೆ

ಮೇಲಿನಿಂದ ಹೆಣೆದ ಜಡೆಯು ಕೊನೆಯಲ್ಲಿ ಫಿಶ್‌ ಟೈಲ್‌ನಂತೆ ಲುಕ್‌ ನೀಡಲಾಗುತ್ತದೆ. ಈ ಹೇರ್‌ಸ್ಟೈಲ್‌ ಕೂಡ ಸಾಕಷ್ಟು ಚಾಲ್ತಿಯಲ್ಲಿದೆ. ಮಾಡೆಲಿಂಗ್‌ ಶೋಗಳಲ್ಲಿ ಕೆಲಕಾಲ ಈ ಹೇರ್‌ಸ್ಟೈಲ್‌ ಪ್ರಚಲಿತದಲ್ಲಿತ್ತು. ಇನ್ನು ಕೆಲವು ಸೆಲೆಬ್ರೆಟಿಗಳ ಫೋಟೋ ಶೂಟ್‌ಗಳಲ್ಲೂ ಇವನ್ನು ಕಾಣಬಹುದು.

ಉಲ್ಟಾ ಜಡೆ

ಹಣೆಯ ಮುಂಭಾಗ ಇಲ್ಲವೇ ಕಿವಿಯ ಹಿಂಭಾಗದಿಂದ ಕಂಪ್ಲೀಟ್‌ ಉಲ್ಟಾ ಶೈಲಿಯಲ್ಲಿ ಹೆಣೆಯುವ ಈ ಉಲ್ಟಾ ಎರಡು ಜಡೆ ಕೂಡ ಫ್ಯಾಷೆನಬಲ್‌ ಹುಡುಗಿಯರನ್ನು ಆವರಿಸಿದೆ. ಇವು ನೋಡಲು ಡಿಫರೆಂಟ್‌ ಲುಕ್‌ ನೀಡುತ್ತವೆ. ಔಟಿಂಗ್‌ ಹೋದಾಗ ಹಾಕಿಕೊಂಡಲ್ಲಿ, ಕೂದಲು ಅಲ್ಲಾಡುವುದಿಲ್ಲ. ಕೆದರುವುದು ಇಲ್ಲ.

Season Hairstyle

ಎರಡು ಜಡೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

  • ಔಟಿಂಗ್‌ ಹೋಗುವಾಗ ಈ ಜಡೆಗಳನ್ನು ಹೆಣೆಯುವುದು ಸೂಕ್ತ.
  • ಜಡೆ ಹೆಣೆದ ಮಾರನೇ ದಿನ ಬಿಚ್ಚಿದಲ್ಲಿ ಕೂದಲು ಗುಂಗುರಾಗುತ್ತದೆ.
  • ಆದಷ್ಟೂ ಸಾಫ್ಟ್‌ ಹೇರ್‌ಬ್ಯಾಂಡ್‌ಗಳನ್ನು ಬಳಸಿ.
  • ಹೆಣ್ಣುಮಕ್ಕಳಿಗೆ ಕಲರ್‌ಫುಲ್‌ ಬ್ಯಾಂಡ್‌ಗಳಿಂದ ಮಲ್ಟಿ ಲೇಯರ್‌ ಜಡೆ ಲುಕ್‌ ನೀಡಬಹುದು.
  • ಎಣ್ಣೆ ಹಚ್ಚಿ ಜಡೆ ಹೆಣೆಯುವುದು ನಾಟ್‌ ಓಕೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಫ್ಯಾಷನ್

Star Saree Fashion: ಪಾಸ್ಟೆಲ್‌ ಅರ್ಗಾನ್ಜಾ ಸೀರೆಯಲ್ಲಿ ಮಿಂಚಬೇಕೆ? ನಟಿ ಮೋಕ್ಷಿತಾ ಪೈ ನೀಡಿದ್ದಾರೆ 5 ಸಿಂಪಲ್‌ ಐಡಿಯಾ

ಬೇಸಿಗೆ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ನೀವೂ ಕೂಡ ಪಾರು ಖ್ಯಾತಿಯ ನಟಿ ಮೋಕ್ಷಿತಾರಂತೆ ಮನಮೋಹಕವಾಗಿ ಕಾಣಬಹುದು. ಅದು ಹೇಗೆ ಅಂತಿರಾ? ಖುದ್ದು ಮೋಕ್ಷಿತಾ ಪೈ ಈ ಕುರಿತಂತೆ 5 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ಮೋಕ್ಷಿತಾ ಟಿಪ್ಸ್‌ಗಳನ್ನು ನೀವು ಜಸ್ಟ್‌ ಫಾಲೋ ಮಾಡಿ ನೋಡಿ.

VISTARANEWS.COM


on

Star Saree Fashion
ಚಿತ್ರಗಳು: ಮೋಕ್ಷಿತಾ ಪೈ, ಕಿರುತೆರೆ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈ ಈ ಸೀಸನ್‌ನಲ್ಲಿ ಮಹಿಳೆಯರ ಪ್ರೀತಿಗೆ ಪಾತ್ರವಾಗಿರುವ ಟ್ರಾನ್ಸಪರೆಂಟ್‌ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೀರೆ ಪ್ರಿಯರ ಲಿಸ್ಟ್‌ನಲ್ಲಿರುವ ಈ ಅರ್ಗಾನ್ಜಾ ಪಾಸ್ಟೆಲ್‌ ಸೀರೆಗಳು ಈ ಸೀಸನ್‌ನಲ್ಲಿ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ, ಎಂದರೇ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಜೊತೆಗೆ ಬ್ರಿಥೆಬಲ್‌ ಫ್ಯಾಬ್ರಿಕ್‌ನಲ್ಲಿ ಬಂದಿವೆ. ಹಾಗಾಗಿ ಮಾನಿನಿಯರನ್ನು, ಅದರಲ್ಲೂ ಸೀರೆ ಪ್ರಿಯರನ್ನು ಬರಸೆಳೆದಿವೆ.

Star Saree Fashion

ನಟಿ ಮೋಕ್ಷಿತಾ ಸೀರೆ ಲವ್‌

ಪಾರೂ ಸೀರಿಯಲ್‌ನಲ್ಲಿ ಕರಾರುವಕ್ಕಾಗಿ ಸೀರೆಗಳನ್ನು ಉಟ್ಟು ಕಾಣಿಸಿಕೊಳ್ಳುತ್ತಿದ್ದ, ನಟಿ ಪಾರು ಅಲಿಯಾಸ್‌ ಮೋಕ್ಷಿತಾಗೆ ಸಾಕಷ್ಟು ಮಂದಿ ಯಾವ ಸೀರೆ ಉಟ್ಟಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಇವರ ಸೀರೆಗಳ ಡ್ರೇಪಿಂಗ್‌ ಹಾಗೂ ಅವುಗಳ ಸ್ಟೈಲಿಂಗ್‌ಗನ್ನು ಗಮನಿಸುತ್ತಿದ್ದರಂತೆ. ಆ ಮಟ್ಟಿಗೆ ರೂರಲ್‌ ಹೆಣ್ಣುಮಕ್ಕಳು ಇವರ ಸೀರೆಗಳ ಅಭಿಮಾನಿಯಾಗಿದ್ದರಂತೆ. ಹಾಗೆಂದು ಟೆಲಿವಿಷನ್‌ ಸ್ಟೈಲಿಸ್ಟ್‌ಗಳೇ ಹೇಳುತ್ತಾರೆ. ಇನ್ನು, ಮೋಕ್ಷಿತಾ ಕೂಡ ಕೇವಲ ಧಾರವಾಹಿಯಲ್ಲಿ ಮಾತ್ರವಲ್ಲ, ಸಾಕಷ್ಟು ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ನನಗಂತೂ ಸೀರೆಗಳೆಂದರೇ ಸಖತ್‌ ಇಷ್ಟ. ಇವು ನಮ್ಮ ಸಂಸ್ಕೃತಿಯ ಧ್ಯೋತಕ ಎನ್ನುತ್ತಾರೆ ಮೋಕ್ಷಿತಾ. ಡಿಫರೆಂಟ್‌ ಸೀರೆಗಳನ್ನು ಉಡುವುದು, ವಿಭಿನ್ನವಾದ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುವುದು ತುಂಬಾ ಇಷ್ಟ ಎನ್ನುತ್ತಾರೆ ಮೋಕ್ಷಿತಾ.
ಈ ಪಾಸ್ಟೆಲ್‌ ಸೀರೆ ಪ್ರಿಯರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

ಪಾಸ್ಟೆಲ್‌ ಸೀರೆಗಿರಲಿ ಕಾಂಟ್ರಾಸ್ಟ್‌ ಬ್ಲೌಸ್‌

ಧರಿಸುವ ಅರ್ಗಾನ್ಜಾ ಸೀರೆ ಹಾಗೂ ಅದಕ್ಕೆ ಧರಿಸುವ ಬ್ಲೌಸ್‌ ಮ್ಯಾಚಿಂಗ್ ಕಾಂಟ್ರಾಸ್ಟ್‌ ಆಗಿದ್ದರೇ ಉತ್ತಮ. ಆಗ ಸೀರೆ ನೋಡಲು ಎದ್ದು ಕಾಣುತ್ತದೆ. ಪಾಸ್ಟೆಲ್‌ ಶೇಡ್‌ನ ಸೀರೆ ಹೈಲೈಟಾಗುತ್ತದೆ.

ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌

ಅರ್ಗಾನ್ಜಾ ಸೀರೆಗೆ ಸಿಂಪಲ್‌ ಮೇಕಪ್‌ ಮಾಡಿದರೂ ಸಾಕು. ಡಾರ್ಕ್‌ ಮೇಕಪ್‌ ಸೂಟ್‌ ಆಗದು. ಹಾಗಾಗಿ ಮೇಕಪ್‌ ಹಿತಮಿತವಾಗಿರಲಿ. ಇನ್ನು ಹೇರ್‌ಸ್ಟೈಲ್‌ ಕೂಡ ಅಷ್ಟೇ, ತೀರಾ ಕಾಂಪ್ಲಿಕೇಟೆಡ್‌ ಹೇರ್‌ಸ್ಟೈಲ್‌ ಮಾಡಕೂಡದು.

Star Saree Fashion

ಜ್ಯುವೆಲರಿ ಮಿನಿಮಲ್‌ ಆಗಿರಲಿ

ಈ ಪಾಸ್ಟೆಲ್‌ ಸೀರೆ ಎದ್ದು ಕಾಣಬೇಕಾದಲ್ಲಿ ಆದಷ್ಟೂ ಕಡಿಮೆ ಜ್ಯುವೆಲರಿ ಧರಿಸುವುದು ಉತ್ತಮ. ಅದರಲ್ಲೂ ಸಿಂಪಲ್‌ ನೆಕ್‌ಪೀಸ್‌ ಹಾಗೂ ಕಡ, ಇಯರಿಂಗ್ಸ್‌ ಹಾಕಿದರೇ ಸಾಕು. ಇನ್ನು ಬ್ಲೌಸ್‌ ಹೈ ನೆಕ್‌ ಅಥವಾ ಫುಲ್‌ ನೆಕ್‌ ಇದ್ದಲ್ಲಿ, ಎಂಬ್ರಾಯ್ಡರಿ ಡಿಸೈನ್‌ ಮಾಡಿಸಿದ್ದಲ್ಲಿ ನೋಡಿಕೊಂಡು ಆಭರಣಗಳನ್ನು ಧರಿಸುವುದು ಉತ್ತಮ. ಹೆಚ್ಚು ಆಭರಣಗಳ ಅಗತ್ಯವಿರುವುದಿಲ್ಲ.

ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ

ನೀವು ಆಯ್ಕೆ ಮಾಡುವ ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ. ಸೀರೆಯು ಡಿಸೈನರ್‌ ಡಿಸೈನ್‌ ಹೊಂದಿದ್ದಲ್ಲಿ ಅದಕ್ಕೆ ತಕ್ಕಂತೆ ಮೇಕೋವರ್‌ ಮಾಡುವುದು ಅಗತ್ಯ. ಇನ್ನು ಪಾಸ್ಟೆಲ್‌ ಶೇಡ್‌ಗಳು ಸಮ್ಮರ್‌ನಲ್ಲಿ ಫ್ರೆಶ್‌ ಲುಕ್‌ ನೀಡುವುದರೊಂದಿಗೆ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ.

Star Saree Fashion

ಡ್ರೇಪಿಂಗ್‌ ಹೀಗಿರಲಿ

ಅರ್ಗಾನ್ಜಾ ಸೀರೆಗಳನ್ನು ಆದಷ್ಟೂ ಒಟ್ಟೊಟ್ಟಿಗೆ ಪಿನ್‌ ಮಾಡುವುದಕ್ಕಿಂತ, ಸಿಂಗಲ್‌ ಪಿನ್‌ ಮಾಡುವುದು ಉತ್ತಮ. ಯಾಕೆಂದರೇ ಅದರ ಡಿಸೈನ್‌ ಹಾಗೂ ಲುಕ್‌ ಹೈ ಲೈಟಾಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಫ್ಯಾಷನ್

Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

ಬೇಸಿಗೆಯಲ್ಲಿ (Summer Fashion) ಟ್ರೆಂಡಿಯಾಗಿರುವ ಕ್ರಾಪ್‌ ಟೀ ಶರ್ಟ್‌ಗಳನ್ನು ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಮಾಡಬಹುದು. ಅವುಗಳಲ್ಲಿ 3 ಬಗೆಯವು ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಅವು ಯಾವ್ಯುವು? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ (Summer Fashion) ಟ್ರೆಂಡಿಯಾಗಿರುವ ನಯಾ ಡಿಸೈನ್‌ನ ಕ್ರಾಪ್‌ ಟೀ ಶರ್ಟ್‌ಗಳನ್ನು ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಮಾಡಬಹುದು. ಅವುಗಳಲ್ಲಿ 3 ಬಗೆಯವು ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಅದರಲ್ಲೂ ಟೀನೇಜ್‌ ಹುಡುಗಿಯರು ಈ ಕ್ರಾಪ್‌ ಟೀ ಶರ್ಟ್‌ಗಳನ್ನು ಸಮ್ಮರ್‌ ಸೀಸನ್‌ನ ಡ್ರೆಸ್‌ಕೋಡ್‌ಗಳಲ್ಲಿ ಸೇರಿಸಿಕೊಂಡಿದ್ದಾರೆ. ತಮ್ಮ ಸ್ಟೈಲಿಂಗ್‌ನಲ್ಲಿ ಇವುಗಳಿಗೆ ಡಿಫರೆಂಟ್‌ ಲುಕ್‌ ನೀಡಿದ್ದಾರೆ. ಹಾಗಾಗಿ ಇವು ಸಖತ್‌ ಪಾಪುಲರ್‌ ಆಗಿವೆ.

Summer Fashion

ಪಾಪುಲರ್‌ ಕ್ರಾಪ್‌ ಟೀ ಶರ್ಟ್ಸ್‌

ಕ್ರಾಪ್‌ ಟೀ ಶರ್ಟ್ಸ್‌ ಮೊದಲೆಲ್ಲಾ ಈ ಜನರೇಷನ್‌ನ ಹಾಗೂ ಟೀನೇಜ್‌ ಹುಡುಗಿಯರಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಇದೀಗ ಉದ್ಯೋಗಸ್ಥ ಮಹಿಳೆಯರ ವೀಕೆಂಡ್‌ ಹಾಗೂ ಔಟಿಂಗ್‌ ಡ್ರೆಸ್‌ಕೋಡ್‌ನಲ್ಲೂ ಸೇರಿಕೊಂಡಿವೆ. ನೋಡಲು ಮಾಡರ್ನ್‌ ಲುಕ್‌ ನೀಡುವ ಇವು ಈ ಸೀಸನ್‌ಗೆ ಸಾಥ್‌ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು .

Summer Fashion
  • ಕ್ರಾಪ್‌ ಟೀ ಶರ್ಟ್ಸ್‌ ಜೊತೆಗೆ ಜೀನ್ಸ್‌ ಪ್ಯಾಂಟ್‌
  • ಇದು ತೀರಾ ಕಾಮನ್‌ ಆಗಿರುವ ಸ್ಟೈಲಿಂಗ್‌ ಕಾನ್ಸೆಪ್ಟ್.‌ ಬಹುತೇಕ ಹುಡುಗಿಯರು ಜೀನ್ಸ್‌ ಪ್ಯಾಂಟ್‌ ಜೊತೆಗೆ ಕ್ರಾಪ್‌ ಟೀ ಶರ್ಟ್ಸ್‌ ಪ್ರಿಫೆರ್‌ ಮಾಡುತ್ತಾರೆ. ಇದು ಅತಿ ಸರಳ ಹಾಗೂ ಸುಲಭವಾಗಿ ಕಾಂಬೀನೇಷನ್‌ ಮಾಡಬಹುದಾದ ಸ್ಟೈಲಿಂಗ್‌. ಒಂದು ಬ್ಲ್ಯೂ ಅಥವಾ ಯಾವುದೇ ಕಲರ್‌ನ ಜೀನ್ಸ್‌ ಪ್ಯಾಂಟ್‌ಗೆ ಯಾವ ಶೇಡ್‌ನದ್ದಾದರೂ ಸರಿಯೇ, ಕ್ರಾಪ್‌ ಟೀ ಶರ್ಟ್‌ ಮ್ಯಾಚ್‌ ಮಾಡಿದರಾಯಿತು. ನೋಡಲು ಸಿಂಪಲ್‌ ಲುಕ್‌ನೊಂದಿಗೆ ಮಾಡರ್ನ್‌ ಟಚ್‌ ನೀಡುತ್ತದೆ. ಟೋರ್ನ್‌ ಜೀನ್ಸ್‌ ಪ್ಯಾಂಟ್‌ ಜೊತೆ ಅಲ್ಟ್ರಾ ಮಾಡರ್ನ್‌ ಲುಕ್‌ ನೀಡುತ್ತದೆ. ಸಿಕ್ಸ್‌ ಪಾಕೆಟ್‌ ಕಾರ್ಗೋ ಪ್ಯಾಂಟ್‌ ಅಥವಾ ಪೇಂಟರ್‌ ಪ್ಯಾಂಟ್‌ ಕೂಡ ಈ ಕ್ರಾಪ್‌ ಟೀ ಶರ್ಟ್‌ ಜೊತೆ ಧರಿಸಬಹುದು.
  • ಕ್ರಾಪ್‌ ಟೀ ಶರ್ಟ್‌ ಜೊತೆ ಸ್ಕರ್ಟ್‌
  • ಮಿನಿ ಶಾರ್ಟ್ಸ್‌ ಆದರೂ ಓಕೆ, ಮಿಡಿಯಂತಹ ಪೆನ್ಸಿಲ್‌ ಸ್ಕರ್ಟ್‌ ಆದರೂ ಓಕೆ. ಕ್ರಾಪ್‌ ಟೀ ಶರ್ಟ್‌ ಧರಿಸಬಹುದು. ಸಾದಾ ಅಥವಾ ಮಾನೋಕ್ರೋಮ್‌ ಶೇಡ್‌ನ ಟೀ ಶರ್ಟ್ಗಿಂತ ಪ್ರಿಂಟೆಡ್‌ ಅದರಲ್ಲೂ ಟೆಕ್ಸ್ಟ್‌ ಇರುವಂತಹ ಕ್ರಾಪ್‌ ಟೀ ಶರ್ಟ್‌ಗಳು ಇವಕ್ಕೆ ಸೂಕ್ತ. ಅದರಲ್ಲೂ ಪಾಸ್ಟೆಲ್‌ ಶೇಡ್‌ನ ಕ್ರಾಪ್‌ ಟೀ ಶರ್ಟ್‌ಗಳು ಈ ಸೀಸನ್‌ನಲ್ಲೂ ಆಕರ್ಷಕವಾಗಿ ಕಾಣುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ.
  • ಶಾರ್ಟ್ಸ್‌ ಜೊತೆ ಕ್ರಾಪ್‌ ಟೀ ಶರ್ಟ್‌
  • ಟೋರ್ನ್‌ ಜೀನ್ಸ್‌ ಶಾರ್ಟ್‌ ಜೊತೆ ಬಗೆಬಗೆಯ ಕ್ರಾಪ್‌ ಟೀ ಶರ್ಟ್‌ ಧರಿಸುವುದು ಜೆನ್‌ ಜಿ ಹುಡುಗಿಯರ ಕ್ರೇಝಿ ಫ್ಯಾಷನ್‌ ಲಿಸ್ಟ್‌ನಲ್ಲಿದೆ. ಇದು ಕಾಲನ್ನು ಎಕ್ಸ್ಪೋಸ್‌ ಮಾಡುತ್ತದೆ. ಬೇಸಿಗೆಗೆ ಬಿಂದಾಸ್‌ ಲುಕ್‌ ನೀಡುತ್ತದೆ. ಇದರೊಂದಿಗೆ ಕೆಲವು ಕಾಟನ್‌ ಶಾರ್ಟ್ಸ್‌ ಕೂಡ ಟ್ರೆಂಡ್‌ನಲ್ಲಿದೆ. ಚಿಕ್ಕ ಹೆಣ್ಣು ಮಕ್ಕಳು ಇವನ್ನು ಧರಿಸುವುದು ಸಾಮಾನ್ಯವಾಗಿದೆ. ಈ ಸ್ಟೈಲಿಂಗ್‌ ಕೂಡ ಈ ಸೀಸನ್‌ನ ಟ್ರೆಂಡ್‌ನಲ್ಲಿದೆ.
Summer Fashion

ಕ್ರಾಪ್‌ ಟೀ ಶರ್ಟ್‌ ಲುಕ್‌ ಹೀಗಿರಲಿ

  • ಸಿಂಪಲ್‌ ಹೇರ್‌ಸ್ಟೈಲ್‌ ನಿಮ್ಮದಾಗಲಿ.
  • ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ.
  • ಹಾಫ್‌ ಶೂ ಇವಕ್ಕೆ ಮ್ಯಾಚ್‌ ಆಗುತ್ತವೆ.
  • ಮೇಕಪ್‌ ಹೆವ್ವಿಯಾಗದಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿ

Continue Reading
Advertisement
Columbia University
ವಿದೇಶ15 mins ago

Columbia University: ಕೊಲಂಬಿಯಾ ವಿವಿ ಪ್ರವೇಶಿಸಿದ ನ್ಯೂಯಾರ್ಕ್‌ ಪೊಲೀಸರು; ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಬಂಧನ

High-tec Gadget
ತಂತ್ರಜ್ಞಾನ27 mins ago

High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌

hassan pen drive case hd revanna prajwal revanna
ಕ್ರೈಂ36 mins ago

Hassan Pen Drive Case: ಹೊಳೆನರಸೀಪುರದ ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಿ ಎಸ್‌ಐಟಿ ವಾಪಸ್!‌

Bhavyashree Poojary exit Neenade Naa Serial
ಕಿರುತೆರೆ38 mins ago

Bhavyashree Poojary: ರಮೇಶ್‌ ಅರವಿಂದ್‌ ನಿರ್ಮಾಣದ ಧಾರಾವಾಹಿಗೆ ಗುಡ್‌ಬೈ ಹೇಳಿದ ಭವ್ಯಶ್ರೀ ಪೂಜಾರಿ! ಕಾರಣವೇನು?

Heat Wave
ದೇಶ1 hour ago

Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು

SS Rajamouli Announces Baahubali Crown of Blood Animated Series
ಟಾಲಿವುಡ್1 hour ago

SS Rajamouli: ʻಬಾಹುಬಲಿ: ಕ್ರೌನ್ ಆಫ್ ಬ್ಲಡ್ʼ ಸಿರೀಸ್‌ ಅನೌನ್ಸ್‌ ಮಾಡಿದ ರಾಜಮೌಳಿ!

Viral video
ವೈರಲ್ ನ್ಯೂಸ್1 hour ago

Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

lok sabha election 2024 voting
ಪ್ರಮುಖ ಸುದ್ದಿ1 hour ago

Lok Sabha Election 2024: ಎರಡು ಹಂತದ ಚುನಾವಣೆ ವೇಳೆ ಶೇ.84ರಷ್ಟು ಕ್ಷೇತ್ರಗಳಲ್ಲಿ ಮತದಾನ ಕುಸಿತ; ಎಫೆಕ್ಟ್ ಏನು?

Aamir Khan on collaborating with SRK, Salman Khan
ಸಿನಿಮಾ2 hours ago

Aamir Khan: ಬಿಗ್ ಸ್ಕ್ರೀನ್ ಮೇಲೆ ಮೂವರು ಖಾನ್​ಗಳು ಕಾಣೋದು ಕನ್‌ಫರ್ಮ್‌! ಸಿನಿಮಾ ಯಾವಾಗ ಶುರು?

Godrej Group
ದೇಶ2 hours ago

Godrej Group: ಶತಮಾನದ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ಇಬ್ಬಾಗ; ಎರಡು ಕುಟುಂಬಗಳಲ್ಲಿ ಆಡಳಿತ ವಿಭಜನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌