ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಕಮ್ ಮಾಡೆಲ್ ತೇಜಸ್ವಿನಿ ಶರ್ಮಾ, ಸಮ್ಮರ್‌ಗೆ ಶ್ವೇತ ವರ್ಣದ ಶೇಡ್‌ಗೆ ಸೈ ಎಂದಿದ್ದಾರೆ. ಹೌದು. ಸಮ್ಮರ್ ಫ್ಯಾಷನ್‌ಗೆ (Star Summer Fashion) ತಕ್ಕಂತೆ, ನೋಡಲು ಮನಮೋಹಕವಾಗಿ ಕಾಣಿಸುವ ಮಿನಿ ವೈಟ್ ಫ್ರಾಕ್ ಧರಿಸಿ, ವೈಟ್ ಟ್ರೆಂಡ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ನಾಂದಿ ಹಾಡಿದ್ದಾರೆ.
ತೇಜಸ್ವಿನಿ ಸಮ್ಮರ್ ಫ್ಯಾಷನ್ ಲವ್
ಸಮ್ಮರ್ ಎಂದರೇ ನಾನಾ ಫ್ಯಾಷನ್ ಟ್ರೆಂಡ್‌ಗೆ ಹೇಳಿ ಮಾಡಿಸಿದ ಸೀಸನ್. ಜಸ್ಟ್ ಐ ಲವ್ ಸಮ್ಮರ್‌ವೇರ್ ಎಂದಿದ್ದಾರೆ ನಟಿ ತೇಜಸ್ವಿನಿ ಶರ್ಮಾ. ಅಲ್ಲದೇ ಈ ಸೀಸನ್ ಬಿಂದಾಸ್ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಬೆಸ್ಟ್. ಗ್ಲಾಮರಸ್ ಲುಕ್ ನೀಡುವ ಫ್ಯಾಷನ್‌ವೇರ್‌ಗಳನ್ನು ಧರಿಸಲು ಇದು ಸಕಾಲ ಎಂದಿದ್ದಾರೆ.
ಬಿಂದಾಸ್ ಲುಕ್ ನೀಡಿದ ಸಿಂಪಲ್ ವೈಟ್ ಫ್ರಾಕ್
ನಟಿ ತೇಜಸ್ವಿನಿ ಶರ್ಮಾ ಧರಿಸಿರುವ ಸಮ್ಮರ್ ಫ್ಯಾಷನ್ ಲಿಸ್ಟ್‌ಗೆ ಸೇರಿರುವ ಶಾರ್ಟ್ ವೈಟ್ ಫ್ರಾಕ್ ತೀರಾ ಸಿಂಪಲ್ ಆಗಿದೆ. ಆದರೆ, ಅವರ ಸ್ಟೈಲಿಂಗ್ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡಿದೆ. ಅದರಲ್ಲೂ ಬಿಂದಾಸ್ ಸ್ಟೈಲಿಂಗ್‌ಗೆ ಸಾಥ್ ನೀಡಿದೆ. ಈ ಫ್ರಾಕ್‌ಗೆ ಧರಿಸಿರುವ ಟೊರ್ನ್ ಜೀನ್ಸ್ ಬೂಟ್ಸ್ ಹಾಗೂ ಲೆಯರ್ ಚೈನ್ಸ್ ಜೆನ್ ಝಿ ಫ್ಯಾಷನ್‌ಗೆ ಪರ್ಫೆಕ್ಟ್ ಸೂಟ್ ಆಗುವಂತಿದೆ. ಅಂದಹಾಗೆ, ತೇಜಸ್ವಿನಿಯ ಈ ಸ್ಟೈಲಿಂಗ್ ಸಾಥ್ ನೀಡಿದವರು ಸ್ಟೈಲಿಸ್ಟ್ ಐಶ್ವರ್ಯಾ ಅವರ ಜಾದೂ ಇದೆಯಂತೆ. ಇನ್ನು ಕ್ಯಾಶುವಲ್ ಲುಕ್‌ಗೆ ಮೇಕಪ್ ಆರ್ಟಿಸ್ಟ್ ಶ್ವೇತಾ ಅವರ ಮೇಕಪ್ ಮ್ಯಾಚ್ ಆಗಿದೆ. ಸಂತೋಷ್ ಅವರ ಪೋಟೋಗ್ರಾಫಿ ತೇಜಸ್ವಿನಿ ಅವರ ಇಡೀ ಲುಕ್ಕನ್ನು ಹೈಲೈಟ್ ಮಾಡಿದೆ.
ಟ್ರೆಂಡ್‌ನಲ್ಲಿ ವೈಟ್ ಫ್ರಾಕ್ಸ್
ಟೀನೇಜ್ ಹಾಗೂ ಕಾಲೇಜು ಹುಡುಗಿಯರ ಫ್ಯಾಷನ್ ಲಿಸ್ಟ್‌ನಲ್ಲಿದ್ದ ಈ ವೈಟ್ ಫ್ರಾಕ್ ಫ್ಯಾಷನ್ ಇದೀಗ ಸ್ಯಾಂಡಲ್‌ವುಡ್ ತಲುಪಿದೆ. ಇನ್ನು ತೇಜಸ್ವಿನಿ ಧರಿಸಿರುವ ಎಲಾಸ್ಟಿಕ್ ಸ್ಲೀವ್ ಹಾಗೂ ಬಟನ್ ಇರುವ ಮಿನಿ ವೈಟ್ ಫ್ರಾಕ್ ಯಂಗ್ ಲುಕ್‌ನೊಂದಿಗೆ ಫ್ರೆಶ್ ಫೀಲ್ ನೀಡುತ್ತಿದೆ. ನೋಡಲು ಬಾಲಿವುಡ್ ಸೆಲೆಬ್ರೆಟಿ ಲುಕ್‌ನಂತೆ ಕಾಣಿಸುತ್ತಿದೆ. ಹೆಚ್ಚು ವಿನ್ಯಾಸವಿಲ್ಲದಿದ್ದರೂ ಕ್ಲಾಸಿ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಈ ಸ್ಟೈಲಿಂಗ್ ಪರ್ಫೆಕ್ಟ್ ಸಮ್ಮರ್ ಫ್ಯಾಷನ್‌ಗೆ ಹೊಂದಿಕೆಯಾಗಿದೆ ಎಂದು ಫುಲ್ ಮಾಕ್ರ್ಸ್ ನೀಡಿದ್ದಾರೆ.
( ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಸಮ್ಮರ್ ಸೀಸನ್‌ನ ಟ್ರೆಂಡಿ ಯೆಲ್ಲೋ ಸೀರೆಯಲ್ಲಿ ನಟಿ ಮೋಕ್ಷಿತಾ ಪೈ