Star Summer Fashion Star Summer Fashion: ಮಿನಿ ವೈಟ್‌ ಫ್ರಾಕ್‌ನಲ್ಲಿ ಬೇಸಿಗೆ ಬಿಂದಾಸ್‌ ಫ್ಯಾಷನ್‌ಗೆ ಸೈ ಎಂದ ನಟಿ ತೇಜಸ್ವಿನಿ ಶರ್ಮಾ - Vistara News

ಫ್ಯಾಷನ್

Star Summer Fashion: ಮಿನಿ ವೈಟ್‌ ಫ್ರಾಕ್‌ನಲ್ಲಿ ಬೇಸಿಗೆ ಬಿಂದಾಸ್‌ ಫ್ಯಾಷನ್‌ಗೆ ಸೈ ಎಂದ ನಟಿ ತೇಜಸ್ವಿನಿ ಶರ್ಮಾ

ನಟಿ ಕಮ್‌ ಮಾಡೆಲ್‌ ತೇಜಸ್ವಿನಿ ಶರ್ಮಾ, ನೋಡಲು ಮನಮೋಹಕವಾಗಿ ಕಾಣಿಸುವ ಮಿನಿ ವೈಟ್‌ ಫ್ರಾಕ್‌ ಧರಿಸಿ, ಟ್ರೆಂಡ್‌ಗೆ ನಾಂದಿ ಹಾಡಿದ್ದು, ಸಮ್ಮರ್‌ ಫ್ಯಾಷನ್‌ಗೆ (Star Summer Fashion) ಸೈ ಎಂದಿದ್ದಾರೆ. ಅವರ ಈ ಉಡುಪಿನ ಬಗ್ಗೆ ಫ್ಯಾಶನ್‌ ವಿಮರ್ಶಕರು ಏನು ಹೇಳಿದ್ದಾರೆ ಇಲ್ಲಿದೆ ವಿವರ.

VISTARANEWS.COM


on

Star Summer Fashion
ಚಿತ್ರಗಳು: ತೇಜಸ್ವಿನಿ ಶರ್ಮಾ, ನಟಿ. ಚಿತ್ರಕೃಪೆ: ಸಂತೋಷ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಕಮ್‌ ಮಾಡೆಲ್‌ ತೇಜಸ್ವಿನಿ ಶರ್ಮಾ, ಸಮ್ಮರ್‌ಗೆ ಶ್ವೇತ ವರ್ಣದ ಶೇಡ್‌ಗೆ ಸೈ ಎಂದಿದ್ದಾರೆ. ಹೌದು. ಸಮ್ಮರ್‌ ಫ್ಯಾಷನ್‌ಗೆ (Star Summer Fashion) ತಕ್ಕಂತೆ, ನೋಡಲು ಮನಮೋಹಕವಾಗಿ ಕಾಣಿಸುವ ಮಿನಿ ವೈಟ್‌ ಫ್ರಾಕ್‌ ಧರಿಸಿ, ವೈಟ್‌ ಟ್ರೆಂಡ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ನಾಂದಿ ಹಾಡಿದ್ದಾರೆ.

Star Summer Fashion

ತೇಜಸ್ವಿನಿ ಸಮ್ಮರ್‌ ಫ್ಯಾಷನ್‌ ಲವ್‌

ಸಮ್ಮರ್‌ ಎಂದರೇ ನಾನಾ ಫ್ಯಾಷನ್‌ ಟ್ರೆಂಡ್‌ಗೆ ಹೇಳಿ ಮಾಡಿಸಿದ ಸೀಸನ್‌. ಜಸ್ಟ್‌ ಐ ಲವ್‌ ಸಮ್ಮರ್‌ವೇರ್ ಎಂದಿದ್ದಾರೆ ನಟಿ ತೇಜಸ್ವಿನಿ ಶರ್ಮಾ. ಅಲ್ಲದೇ ಈ ಸೀಸನ್‌ ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಬೆಸ್ಟ್‌. ಗ್ಲಾಮರಸ್‌ ಲುಕ್‌ ನೀಡುವ ಫ್ಯಾಷನ್‌ವೇರ್‌ಗಳನ್ನು ಧರಿಸಲು ಇದು ಸಕಾಲ ಎಂದಿದ್ದಾರೆ.

Star Summer Fashion

ಬಿಂದಾಸ್‌ ಲುಕ್‌ ನೀಡಿದ ಸಿಂಪಲ್‌ ವೈಟ್‌ ಫ್ರಾಕ್‌

ನಟಿ ತೇಜಸ್ವಿನಿ ಶರ್ಮಾ ಧರಿಸಿರುವ ಸಮ್ಮರ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿರುವ ಶಾರ್ಟ್ ವೈಟ್‌ ಫ್ರಾಕ್‌ ತೀರಾ ಸಿಂಪಲ್‌ ಆಗಿದೆ. ಆದರೆ, ಅವರ ಸ್ಟೈಲಿಂಗ್‌ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡಿದೆ. ಅದರಲ್ಲೂ ಬಿಂದಾಸ್‌ ಸ್ಟೈಲಿಂಗ್‌ಗೆ ಸಾಥ್‌ ನೀಡಿದೆ. ಈ ಫ್ರಾಕ್‌ಗೆ ಧರಿಸಿರುವ ಟೊರ್ನ್ ಜೀನ್ಸ್‌ ಬೂಟ್ಸ್‌ ಹಾಗೂ ಲೆಯರ್‌ ಚೈನ್ಸ್‌ ಜೆನ್‌ ಝಿ ಫ್ಯಾಷನ್‌ಗೆ ಪರ್ಫೆಕ್ಟ್‌ ಸೂಟ್‌ ಆಗುವಂತಿದೆ. ಅಂದಹಾಗೆ, ತೇಜಸ್ವಿನಿಯ ಈ ಸ್ಟೈಲಿಂಗ್‌ ಸಾಥ್‌ ನೀಡಿದವರು ಸ್ಟೈಲಿಸ್ಟ್‌ ಐಶ್ವರ್ಯಾ ಅವರ ಜಾದೂ ಇದೆಯಂತೆ. ಇನ್ನು ಕ್ಯಾಶುವಲ್‌ ಲುಕ್‌ಗೆ ಮೇಕಪ್‌ ಆರ್ಟಿಸ್ಟ್‌ ಶ್ವೇತಾ ಅವರ ಮೇಕಪ್‌ ಮ್ಯಾಚ್‌ ಆಗಿದೆ. ಸಂತೋಷ್‌ ಅವರ ಪೋಟೋಗ್ರಾಫಿ ತೇಜಸ್ವಿನಿ ಅವರ ಇಡೀ ಲುಕ್ಕನ್ನು ಹೈಲೈಟ್‌ ಮಾಡಿದೆ.

Star Summer Fashion

ಟ್ರೆಂಡ್‌ನಲ್ಲಿ ವೈಟ್‌ ಫ್ರಾಕ್ಸ್‌

ಟೀನೇಜ್‌ ಹಾಗೂ ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ನಲ್ಲಿದ್ದ ಈ ವೈಟ್‌ ಫ್ರಾಕ್‌ ಫ್ಯಾಷನ್‌ ಇದೀಗ ಸ್ಯಾಂಡಲ್‌ವುಡ್‌ ತಲುಪಿದೆ. ಇನ್ನು ತೇಜಸ್ವಿನಿ ಧರಿಸಿರುವ ಎಲಾಸ್ಟಿಕ್‌ ಸ್ಲೀವ್‌ ಹಾಗೂ ಬಟನ್‌ ಇರುವ ಮಿನಿ ವೈಟ್‌ ಫ್ರಾಕ್‌ ಯಂಗ್‌ ಲುಕ್‌ನೊಂದಿಗೆ ಫ್ರೆಶ್‌ ಫೀಲ್‌ ನೀಡುತ್ತಿದೆ. ನೋಡಲು ಬಾಲಿವುಡ್‌ ಸೆಲೆಬ್ರೆಟಿ ಲುಕ್‌ನಂತೆ ಕಾಣಿಸುತ್ತಿದೆ. ಹೆಚ್ಚು ವಿನ್ಯಾಸವಿಲ್ಲದಿದ್ದರೂ ಕ್ಲಾಸಿ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಈ ಸ್ಟೈಲಿಂಗ್‌ ಪರ್ಫೆಕ್ಟ್‌ ಸಮ್ಮರ್‌ ಫ್ಯಾಷನ್‌ಗೆ ಹೊಂದಿಕೆಯಾಗಿದೆ ಎಂದು ಫುಲ್‌ ಮಾಕ್ರ್ಸ್ ನೀಡಿದ್ದಾರೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಸಮ್ಮರ್‌ ಸೀಸನ್‌ನ ಟ್ರೆಂಡಿ ಯೆಲ್ಲೋ ಸೀರೆಯಲ್ಲಿ ನಟಿ ಮೋಕ್ಷಿತಾ ಪೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

ಕ್ವೀನ್‌ ಲುಕ್‌ ನೀಡುವ (New fashion Trend) ನಾನಾ ಬಗೆಯ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. ಚಿಣ್ಣರು ಬಳಸುತ್ತಿದ್ದ ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಹೇರ್‌ ಸ್ಟೈಲಿಸ್ಟ್‌ಗಳು ಇಲ್ಲಿ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

New fashion Trend
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ವೀನ್‌ ಲುಕ್‌ಗೆ (New fashion Trend) ಸಾಥ್ ನೀಡುವ ಪರ್ಲ್ ಹೆಡ್‌ಬ್ಯಾಂಡ್‌ಗಳು ಇದೀಗ ಆಕ್ಸೆಸರೀಸ್‌ ಲೋಕಕ್ಕೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ರಾಣಿ-ಮಹಾರಾಣಿಯಂತೆ ಬಿಂಬಿಸುವ ನಾನಾ ವಿನ್ಯಾಸದ ಮುತ್ತಿನ ಹೆಡ್‌ಬ್ಯಾಂಡ್‌ಗಳು ಇಂದು ಆಕ್ಸೆಸರೀಸ್‌ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಒಂದಕ್ಕಿಂತ ಒಂದು ಡಿಸೈನ್‌ನವು ಆಕರ್ಷಕವಾದ ವಿನ್ಯಾಸದಲ್ಲಿ ಆಗಮಿಸಿವೆ. ಈ ಹಿಂದೆ ಚಿಣ್ಣರು ಬಳಸುತ್ತಿದ್ದ, ಈ ಶೈಲಿಯ ಹೆಡ್‌ಬ್ಯಾಂಡ್‌ಗಳು ಇದೀಗ ಹೊಸ ರೂಪ ಪಡೆದು ಮಾನಿನಿಯರ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಅದರಲ್ಲೂ ಪಾರ್ಟಿವೇರ್‌ ಜೊತೆಗೆ, ವೀಕೆಂಡ್‌ ಔಟ್‌ಫಿಟ್‌ಗಳೊಂದಿಗೆ ಹಾಗೂ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್ ಜಯಾ ಶರ್ಮಾ. ಅವರ ಪ್ರಕಾರ, ಪರ್ಲ್ ಹೆಡ್‌ಬ್ಯಾಂಡ್‌ಗಳು ಡೀಸೆಂಟ್‌ ಲುಕ್‌ ನೀಡುವುದರೊಂದಿಗೆ ಹೇರ್‌ಸ್ಟೈಲನ್ನು ಅತ್ಯಾಕರ್ಷಕವಾಗಿಸುತ್ತವೆ ಎನ್ನುತ್ತಾರೆ.

New fashion Trend

ಟ್ರೆಂಡಿಯಾಗಿರುವ ಪರ್ಲ್ ಹೆಡ್‌ಬ್ಯಾಂಡ್ಸ್

ಮಿನಿ ಪರ್ಲ್ ಹೆಡ್‌ಬ್ಯಾಂಡ್, ಕ್ರಿಸ್ಟಲ್‌-ಪರ್ಲ್ ಹೆಡ್‌ಬ್ಯಾಂಡ್‌, ಮಲ್ಟಿಲೈನ್‌ ಪರ್ಲ್ ಹೆಡ್‌ಬ್ಯಾಂಡ್‌, ಸಿಂಗಲ್‌ ಲೈನ್‌ ಬೀಡ್ಸ್ ಸ್ಟೈಲ್‌ ಹೆಡ್‌ಬ್ಯಾಂಡ್‌, ಬಿಗ್‌ ಪರ್ಲ್ ಹೆಡ್‌ಬ್ಯಾಂಡ್, ಟೈನಿ ಪರ್ಲ್ ಹೆಡ್‌ಬ್ಯಾಂಡ್‌ ಸೇರಿದಂತೆ ಬೀಡ್ಸ್ ಮಿಕ್ಸ್ ಇರುವಂತವು ಈ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಶ್ವೇತ ವರ್ಣದವು, ಹಾಫ್‌ ವೈಟ್‌, ಕ್ರೀಮಿಶ್‌ ಶೇಡ್‌ನ ಪರ್ಲ್ ಹೆಡ್‌ಬ್ಯಾಂಡ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅಂದಹಾಗೆ, ಇವೆಲ್ಲಾ ರಿಯಲ್‌ ಮುತ್ತಿನ ಹೆಡ್‌ಬ್ಯಾಂಡ್‌ಗಳಲ್ಲ, ಹೌದು. ಮುತ್ತಿನಂತೆ ಕಾಣುವ ಕೃತಕ ಮಣಿಯಂತಹ ಬೀಡ್ಸ್‌ಗಳ ಹೆಡ್‌ಬ್ಯಾಂಡ್‌ಗಳಿವು. ಹಾಗಾಗಿ ಇವುಗಳ ಬೆಲೆಯೂ ಕಡಿಮೆ. ಸುಮಾರು 50 ರೂ. ಗಳಿಂದ ಆರಂಭಗೊಂಡು 300 ರೂ.ಗಳವರೆಗೂ ಇದೆ. ಆಯಾ ಡಿಸೈನ್‌ ಹಾಗೂ ಪರ್ಲ್ ಸೈಝಿಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ದೊರೆಯುತ್ತಿವೆ. ಅಷ್ಟೇಕೆ! ಸ್ಟ್ರೀಟ್‌ ಶಾಪಿಂಗ್‌ ಮಾಡುವವರಾದಲ್ಲಿ, ಬೀದಿ ಬದಿಯ ಶಾಪ್‌ಗಳಲ್ಲೂ ಇವು ದೊರೆಯುತ್ತವೆ. ಬೆಲೆ ಕಡಿಮೆ ಎನ್ನುತ್ತಾರೆ.

New fashion Trend

ಪರ್ಲ್ ಹೆಡ್‌ಬ್ಯಾಂಡ್‌ ಪ್ರಿಯರ ಗಮನಕ್ಕೆ

ಇನ್ನು, ಮಕ್ಕಳಾದಲ್ಲಿ ಯಾವುದೇ ಉಡುಪಿಗಾದರೂ ಈ ಪರ್ಲ್ ಡಿಸೈನ್‌ನ ಹೆಡ್‌ಬ್ಯಾಂಡ್‌ ಧರಿಸಬಹುದು. ಆದರೆ, ದೊಡ್ಡವರ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಧರಿಸುವ ಉಡುಪು ಹಾಗೂ ಹೇರ್‌ಸ್ಟೈಲ್‌ಗೆ ಅನುಗುಣವಾಗಿ ಧರಿಸಬೇಕಾಗುತ್ತದೆ. ಉದಾಹರಣೆಗೆ., ಫ್ರೀ ಹೇರ್‌ಸ್ಟೈಲ್‌ ಮಾಡಿದಾಗ ಧರಿಸಬಹುದು. ಚೆನ್ನಾಗಿ ಹೊಂದುತ್ತದೆ.

New fashion Trend
  • ಸೀರೆಗೆ ಇವನ್ನು ಧರಿಸುವುದು ನಾಟ್‌ ಓಕೆ.
  • ಪಾರ್ಟಿವೇರ್‌ ಗೌನ್‌ಗಳಿಗೆ ಧರಿಸಬಹುದು.
  • ಇತರೇ ಪರ್ಲ್ ಆಕ್ಸೆಸರೀಸ್‌ಗೂ ಮ್ಯಾಚ್‌ ಮಾಡಬಹುದು.
  • ಎಥ್ನಿಕ್ ಉಡುಪಿಗೆ ಹೊಂದುವುದಿಲ್ಲ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

Continue Reading

ಫ್ಯಾಷನ್

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

ಈ ಬಾರಿಯ ಅಕ್ಷಯ ತೃತೀಯದಲ್ಲಿ ಮಾನಿನಿಯರಿಗೆ (Akshaya Tritiya Fashion) ಪ್ರಿಯವಾಗುವಂತಹ ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಯಾರಿಗೆ ಯಾವುದು ಸೂಕ್ತ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Akshaya Tritiya Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಅಕ್ಷಯ ತೃತೀಯದಲ್ಲಿ (Akshaya Tritiya Fashion) ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ನೋಡಲು ಕಿವಿಯ ಓಲೆ ಹಾಗೂ ಸ್ಟಡ್ಸ್‌ನಂತೆ ಕಾಣುವ ಈ ನೋಸ್‌ ರಿಂಗ್ಸ್‌ , ಡ್ಯಾಂಗಲ್ಸ್‌ ಅಥವಾ ಸ್ಟಡ್ಸ್‌ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಕಿವಿಗೆ ಧರಿಸುವ ಓಲೆಯಷ್ಟೇ ಮಹತ್ವವನ್ನು ಪಡೆದುಕೊಂಡಿವೆ.

Akshaya Tritiya Fashion

ಯುವತಿಯರ ನೋಸ್‌ ಸ್ಟಡ್ಸ್‌ ಒಲವು

“ಮೂಗುತಿ ಎಂದರೇ ಚಿಕ್ಕದೊಂದು ನೋಸ್‌ ರಿಂಗ್ಸ್‌ ಅಥವಾ ಚಿಕ್ಕ ಚುಕ್ಕೆಯಂತಹ ಡಿಸೈನ್‌ನವು ಈ ಮೊದಲೆಲ್ಲಾ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ರೆಟ್ರೊ ಫ್ಯಾಷನ್‌ನಲ್ಲಿದ್ದವು, ಅದರಲ್ಲೂ ಹಳೆಯ ಸಿನಿಮಾಗಳಲ್ಲಿ ಪೌರಾಣಿಕ ಚಲನಚಿತ್ರಗಳಲ್ಲಿ ರಾಣಿ-ಮಹಾರಾಣಿಯರು, ದೇವಾನುದೇವತೆಗಳ ಪಾತ್ರಧಾರಿಗಳು ಧರಿಸುತ್ತಿದ್ದ ಬಿಗ್‌ ನೋಸ್‌ ರಿಂಗ್‌ ಅಥವಾ ಕಿವಿಯ ಓಲೆಯಂತೆ ಕಾಣುವ ಸ್ಟಡ್ಸ್‌ ಈ ಸೀಸನ್‌ನಲ್ಲಿ ಮರಳಿವೆ. ಮಾನಿನಿಯರ ಮುಖವನ್ನು ಎದ್ದು ಕಾಣುವಂತೆ ಮಾಡಬಲ್ಲ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಎಲ್ಲದಕ್ಕಿಂತ ಖುಷಿ ಪಡುವ ವಿಚಾರವೆಂದರೇ ಯುವತಿಯರು ಕೂಡ ಇದರತ್ತ ವಾಲತೊಡಗಿದ್ದಾರೆ. ತಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳಲ್ಲಿ ಇವನ್ನು ಸೇರಿಸಿಕೊಂಡಿದ್ದಾರೆ. ಪರಿಣಾಮ, ಜ್ಯುವೆಲರಿ ವಿನ್ಯಾಸಕಾರರು ಈ ಬಿಗ್‌ ನೋಸ್‌ ಸ್ಟಡ್ಸ್‌ ಅನ್ನು ನಾನಾ ರೂಪದಲ್ಲಿ ಬಿಡುಗಡೆಗೊಳಿಸಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಮಣ ಆಚಾರ್‌ ಹಾಗೂ ಜಯಂತ್‌.

Akshaya Tritiya Fashion

ಟ್ರೆಂಡಿಯಾಗಿರುವ ಡಿಸೈನ್‌ಗಳ್ಯಾವುವು?

ಫ್ಲೋರಲ್‌, ಹರಳಿನ, ಅಮೆರಿಕನ್‌ ಡೈಮಂಡ್‌ನ ನಾನಾ ಡಿಸೈನ್‌ನ ಸ್ಟಡ್ಸ್‌, ಒಂಭತ್ತು, ಏಳು, ಐದು ಕಲ್ಲಿನ ಹಳೆಯ ನಕ್ಷತ್ರದಂತಹ ವಿನ್ಯಾಸ, ಮುತ್ತಿನ ಮೂಗುತಿಗಳು, ಟ್ವಿಸ್ಟೆಡ್‌, ಡಾಂಗಲ್ಸ್‌, ಡ್ರಾಪ್ಸ್‌, ಮಹಾರಾಷ್ಟ್ರದ ಮಹಿಳೆಯರು ಧರಿಸುವ ನಾನಾ ಬಗೆಯ ನತ್‌ ಜೊತೆಗಿನ ಸ್ಟಡ್ಸ್‌, ಕಲರ್‌ಫುಲ್‌ ಸೆಮಿ ಪ್ರಿಶಿಯಸ್‌ ಸ್ಟೋನ್ಸ್‌ ಇರುವಂತಹ ಡಿಸೈನ್‌ನವು, ಫ್ಲೋರಲ್‌, ನವಿಲು ಸೇರಿದಂತೆ ನಾನಾ ಬಗೆಯ ಬಿಗ್‌ ನೋಸ್‌ ಸ್ಟಡ್ಸ್‌ ಡಿಸೈನ್‌ನವು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಅದರಲ್ಲೂ ಮೂಗುತಿ ಆಭರಣಗಳ ಕೆಟಗರಿಯಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಆಭರಣ ಮಾರಾಟಗಾರರು.

Akshaya Tritiya Fashion

ಯಾರಿಗೆ ಯಾವುದು ಸೂಕ್ತ?

  • ಅಗಲವಾದ ಮೂಗು ಹೊಂದಿರುವವರು ಆದಷ್ಟೂ ಉದ್ದನೆಯ ಡಿಸೈನ್‌ ಹೊಂದಿರುವಂತವು ಅಥವಾ ಡ್ಯಾಂಗಲ್ಸ್‌ ಚೂಸ್‌ ಮಾಡಬೇಕು.
  • ಉದ್ದನಾದ ಮೂಗಿರುವವರಿಗೆ ಯಾವುದೇ ಡಿಸೈನ್‌ನ ನೋಸ್‌ ಸ್ಟಡ್ಸ್‌ ಆದರೂ ಓಕೆ. ಆಕರ್ಷಕವಾಗಿ ಕಾಣುತ್ತದೆ.
  • ಪುಟ್ಟ ಮೂಗಿರುವವರು ಆದಷ್ಟೂ ಚಿಕ್ಕ ಸ್ಟೋನ್ಸ್‌ ಇರುವಂತಹ ಮಿನಿಯೇಚರ್‌ ಮೂಗುತಿಗಳನ್ನು ಆಯ್ಕೆ ಮಾಡುವುದು ಬೆಸ್ಟ್.‌
  • ದಪ್ಪಗಿನ ಮೂಗಿರುವವರು ಡಾಂಗಲ್ಸ್‌ ಇಲ್ಲವೇ ಪುಟ್ಟ ಡ್ರಾಪ್ಸ್‌ ಇರುವಂತಹ ನೋಸ್‌ ರಿಂಗ್‌ ಧರಿಸಿದಾಗ ನೋಡಲು ಚೆನ್ನಾಗಿ ಕಾಣುತ್ತದೆ.
  • ಮೂಗಿನ ಸ್ಟಡ್ಸ್‌ ಧರಿಸುವವರು ಆದಷ್ಟೂ ಇತರೇ ಆಭರಣಗಳನ್ನು ಮ್ಯಾಚ್‌ ಮಾಡುವ ಚಾಲಕಿತನ ಹೊಂದಿರಬೇಕು.
  • ಆದಷ್ಟೂ ಲೈಟ್‌ವೈಟ್‌ ನೋಸ್‌ ಸ್ಟಡ್ಸ್‌ ಸೆಲೆಕ್ಟ್‌ ಮಾಡಿ, ಧರಿಸಿದಲ್ಲಿ ಹೆಚ್ಚು ಭಾರವೆನಿಸದು.
  • ಸ್ಟೋನ್ಸ್‌ ಇರುವಂತಹ ಮೂಗುತಿಗಳು ಬೆಳಕಿನಲ್ಲಿ ಮಿನುಗುತ್ತವೆ. ಇಂತವು ಟ್ರೆಂಡಿಯಾಗಿವೆ.
  • ಪ್ರತಿದಿನ ಅಗಲವಾದ ಮೂಗುತಿಗಳನ್ನು ಧರಿಸಬೇಡಿ. ಕಾರ್ಯಕ್ರಮಗಳಿಗೆ ಮಾತ್ರ ಧರಿಸಿ.
  • ಅಗಲವಾದ ಪಿನ್‌ ಇರುವಂತವು ಮೂಗಿನ ತೂತನ್ನು ಮತ್ತಷ್ಟು ದೊಡ್ಡದಾಗಿಸಬಲ್ಲವು.
  • ಉಡುಪಿಗೆ ತಕ್ಕಂತೆ ಮ್ಯಾಚಿಂಗ್‌ ಬಣ್ಣ ಬಣ್ಣದ ಹರಳಿನ ನೋಸ್‌ ಸ್ಟಡ್ಸ್‌ ಕೂಡ ಪ್ರಚಲಿತದಲ್ಲಿದ್ದು, ಎಲ್ಲರಿಗೂ ಆಕರ್ಷಕವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Continue Reading

ಫ್ಯಾಷನ್

Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ಇದೀಗ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಇದಕ್ಕೆ ಪೂರಕ ಎಂಬಂತೆ, ಸ್ಥಳೀಯ ಡಿಸೈನ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಹೊಸ ರೂಪ ಪಡೆದು ನಾನಾ ಶೈಲಿಯಲ್ಲಿ ಕಾಲಿಟ್ಟಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Girls Pleats Skirts Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಕೊರಿಯನ್‌ ಗ್ಲಾಸ್‌ ಸ್ಕಿನ್‌ ಟ್ರೆಂಡ್‌ ಸೈಡಿಗೆ ಸರಿಯುತ್ತಿದ್ದಂತೆ, ಇದೀಗ ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್‌ಗಳು, ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ವೆಸ್ಟರ್ನ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿಕೊಂಡು ಹಂಗಾಮಾ ಎಬ್ಬಿಸಿವೆ.

Girls Pleats Skirts Fashion

ಹುಡುಗಿಯರನ್ನು ಸೆಳೆದ ಕೊರಿಯನ್‌ ಸ್ಕರ್ಟ್ಸ್‌

ಕೊರಿಯನ್‌ ಪ್ಲೀಟೇಡ್‌ ಸ್ಕರ್ಟ್ಸ್‌ ಇಂದು ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ವೀಕೆಂಡ್‌ ಹಾಗೂ ಔಟಿಂಗ್‌ ಇಷ್ಟಪಡುವ ಹುಡುಗಿಯರನ್ನು ಆವರಿಸಿಕೊಂಡಿವೆ. ಸಮ್ಮರ್‌ ಲುಕ್‌ಗೆ ಸಾಥ್‌ ನೀಡುವ ಇವು ನಾನಾ ಶೈಲಿಯ ಟಾಪ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಗಿ ಆಕರ್ಷಕ ಸ್ಕರ್ಟ್‌ ಫ್ಯಾಷನ್‌ಗೆ ನಾಂದಿ ಹಾಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Girls Pleats Skirts Fashion

ಟ್ರೆಂಡಿಯಾಗಿರುವ ಕೊರಿಯನ್‌ ಸ್ಕರ್ಟ್ಸ್‌

ಹೈ ವೇಸ್ಟ್‌ ಪ್ಲೀಟೆಡ್‌ ಕೊರಿಯನ್‌ ಸ್ಕರ್ಟ್‌, ಎ-ಲೈನ್‌ ಪ್ಲೀಟೆಡ್‌, ಹೈ ವೇಸ್ಟ್‌ ಟೆನ್ನೀಸ್‌ ಸ್ಕರ್ಟ್‌, ಸ್ಯಾಟೀನ್‌ ಪ್ಲೀಟೆಡ್‌, ನೆಟ್ಟೆಡ್‌ ಪ್ಲೀಟೆಡ್‌, ಪ್ಲೀಟೆಡ್‌ ಮಿಡಿ ಸ್ಕರ್ಟ್‌, ಶಾರ್ಟ್‌ ಪ್ಲೀಟೆಡ್‌, ಬಿಗೇ ಪ್ಲೀಟೆಡ್‌, ಮಿನಿ ಪ್ಲೀಟೆಡ್‌ ಸ್ಕರ್ಟ್‌, ಲಾಂಗ್‌ ಪ್ಲೀಟೆಡ್‌ ಸ್ಲರ್ಟ್‌ ಸೇರಿದಂತೆ ಸಾಕಷ್ಟು ನೆರಿಗೆ ಇರುವ ಕೊರಿಯನ್‌ ಸ್ಕರ್ಟ್‌ಗಳು ನಮ್ಮಲ್ಲಿ ಬಂದು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Girls Pleats Skirts Fashion

ಏನಿದು ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌?

ಕೊರಿಯನ್‌ ಶೈಲಿಯ ನೆರಿಗೆ ಪಕ್ಕ ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ಪಕ್ಕ ಪಕ್ಕದಲ್ಲೆ ಇರುವಂತಹ ಪ್ಲೀಟೆಡ್‌ ಸ್ಕರ್ಟ್ಸ್‌ ನೋಡಲು ತಕ್ಷಣಕ್ಕೆ ನಮ್ಮ ರಾಷ್ಟ್ರದಲ್ಲಿ ಶಾಲೆಯ ಯೂನಿಫಾರ್ಮ್‌ ಸ್ಕರ್ಟ್‌ನಂತೆಯೇ ಕಾಣುತ್ತವೆ. ಒಟ್ಟಿನಲ್ಲಿ, ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ನೆರಿಗೆಯ ಸ್ಕರ್ಟ್‌ಗಳು ಎಂದು ಹೇಳಬಹುದು. ದಪ್ಪನೆಯ ಫ್ಯಾಬ್ರಿಕ್‌ನದ್ದಾದಲ್ಲಿ ನೀಟಾಗಿ ಈ ನೆರಿಗೆಗಳು ಕಾಣಿಸುತ್ತವೆ. ತೆಳುವಾದ ಅಂದರೇ, ನೆಟ್ಟೆಡ್‌ನದ್ದಾದಲ್ಲಿ ಲೈನಿಂಗ್‌ ಕಾಣಿಸುತ್ತವೆ. ಒಟ್ನಲ್ಲಿ, ನಾನಾ ಬಗೆಯವು ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

“ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್‌ಗಳು ಇಂದು ಟೀನೇಜ್‌ ಹಾಗೂ ಕಾಲೇಜು ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ಗರ ಸೇರಿವೆ. ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡುವ ಈ ಕೊರಿಯನ್‌ ಶೈಲಿಯವು ಇದೀಗ ಜಾಗತೀಕ ಮಟ್ಟದಲ್ಲಿ ಪ್ರಚಲಿತದಲ್ಲಿವೆ. ಪಾಸ್ಟೆಲ್‌ ಶೇಡ್‌ನವು ಹಾಗೂ ಚೆಕ್ಸ್‌ ಮತ್ತು ಮಾನೋಕ್ರಾಮ್‌ ಡಿಸೈನ್‌ನವು ಹೆಚ್ಚು ಹುಡುಗಿಯರಿಗೆ ಪ್ರಿಯವಾಗಿವೆ ” ಎನ್ನುವ ಸ್ಟೈಲಿಸ್ಟ್‌ಗಳು, ಇವು ನಾನಾ ಬಗೆಯಲ್ಲಿ ಧರಿಸಬಹುದು ಎನ್ನುತ್ತಾರೆ.

Girls Pleats Skirts Fashion

ಕೊರಿಯನ್‌ ಪ್ಲೀಟೆಡ್‌ ಸ್ಕರ್ಟ್ಸ್‌ ಟಿಪ್ಸ್‌

  • ಫ್ಯಾಬ್ರಿಕ್‌ ಆಧಾರದ ಮೇಲೆ ಸ್ಟೈಲಿಂಗ್‌ ಮಾಡಬಹುದು.
  • ಸ್ಕರ್ಟ್ಸ್‌ ಜೊತೆ ಸ್ಟಾಕಿಂಗ್ಸ್‌ ಧರಿಸಬಹುದು.
  • ಹೈ ಹೀಲ್ಸ್‌ ಅಥವಾ ಶೂ ಧರಿಸಿದರೆ ಆಕರ್ಷಕವಾಗಿ ಕಾಣಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

ಅಕ್ಷಯ ತೃತೀಯ ಆಗಮಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ಜನರೇಷನ್‌ನವರು ಇಷ್ಟಪಡುವಂತಹ ಊಹೆಗೂ ಮೀರಿದ ನಾನಾ ವೆರೈಟಿ ಡಿಸೈನ್‌ನ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery) ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ಗೆ ಕಾಲಿಟ್ಟಿವೆ? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Akshaya Tritiya Jewellery
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಈ ಜನರೇಷನ್‌ನವರು ಇಷ್ಟಪಡುವಂತಹ ನಾನಾ ವೆರೈಟಿ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಕೂಡ ಇಷ್ಟಪಡುವಂತಹ ಸಿಂಪಲ್‌ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery), ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಧರಿಸುವಂತಹ ಬಿಗ್‌ ಹಾಗೂ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ.

Akshaya Tritiya Jewellery

ವೈವಿಧ್ಯಮಯ ಜ್ಯುವೆಲರಿಗಳು

ಈ ಬಾರಿ ಕಳೆದ ಬಾರಿಗಿಂತ ಅತಿ ಹೆಚ್ಚು ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ. ಮೊದಲೆಲ್ಲ ಕೇವಲ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು ಇದೀಗ ಸಾಮಾನ್ಯ ಬ್ರಾಂಡ್‌ಗಳಲ್ಲೂ ಬಂದಿರುವುದು ವಿಶೇಷ. ಇನ್ನು, ಕಡಿಮೆ ಗ್ರಾಮ್‌ಗಳಲ್ಲೂ ದೊರಕುತ್ತಿರುವುದು ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣ. ಇದರಿಂದಾಗಿ ಸಾಮಾನ್ಯ ಜನರು ಕೂಡ ಫ್ಯಾಷನ್‌ ಜ್ಯುವೆಲರಿಗಳತ್ತ ವಾಲಿದ್ದಾರೆ. ಪರಿಣಾಮ, ಫ್ಯಾಷನ್‌ ಜ್ಯುವೆಲರಿಗಳು ಸಖತ್‌ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್‌ ಮಾರಾಟಗಾರರು.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳ ಲೋಕ

ಪುಟ್ಟ ಚಿಕ್ಕ ಸ್ಟಡ್ಸ್‌ನಂತಹ ಫ್ಲೋರಲ್‌, ಟ್ರಾಪಿಕಲ್‌, ನಕ್ಷತ್ರ, ರಂಗೋಲಿ ಡಿಸೈನ್‌ನಂತಹ ಫ್ಯಾಷನ್‌ ಜ್ಯುವೆಲರಿಗಳು, ಜಿಯಾಮೆಟ್ರಿಕಲ್‌ ಡಿಸೈನ್‌ನ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು, ಬಿಗ್‌ ಹರಳಿನೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡಿರುವಂತಹ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು, ಇಮ್ಯಾಜೀನ್‌ಗೂ ಸಿಗದ ವೆರೈಟಿ ಡಿಸೈನ್‌ಗಳು, ಇನ್ನು, ಉಡುಪಿಗೆ ಮ್ಯಾಚ್‌ ಆಗುವಂತಹ ಫ್ಯಾಷನ್‌ ಜ್ಯುವೆಲರಿಗಳು ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜ್ಯುವೆಲರಿ ಶಾಪ್‌ಗಳು ಕೂಡ ಫ್ಯಾಷೆನಬಲ್‌ ಜ್ಯುವೆಲರಿಗಳನ್ನು ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಆರ್ಡರ್‌ ತೆಗೆದುಕೊಂಡು ನೀಡುತ್ತಿವೆ. ಆ ಸೌಲಭ್ಯವನ್ನು ನೀಡಿವೆ. ಅಷ್ಟು ಮಾತ್ರವಲ್ಲದೇ, ಕಾಲೇಜು ಹುಡುಗಿಯರಿಗೆ ಪ್ರಿಯವಾಗುವಂತಹ ಇಂದು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಫ್ಯಾಷನ್‌ ಜ್ಯುವೆಲರಿಗಳನ್ನು ಬಿಡುಗಡೆಗೊಳಿಸಿವೆ.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳನ್ನು ಖರೀದಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು

  • ಆದಷ್ಟೂ ಲೈಟ್‌ವೈಟ್‌ನವನ್ನು ಆಯ್ಕೆ ಮಾಡಿ.
  • ಟ್ರೆಂಡಿ ಡಿಸೈನ್‌ನವನ್ನು ಸೆಲೆಕ್ಟ್‌ ಮಾಡಿ ಖರೀದಿಸಿ.
  • ಮಕ್ಕಳಿಗಾದಲ್ಲಿ ಸಿಂಪಲ್‌ ಸ್ಟಡ್ಸ್‌ ಡಿಸೈನ್‌ನವನ್ನು ಕೊಳ್ಳಿ.
  • ಕಾಲೇಜು ಯುವತಿಯರಾದಲ್ಲಿ ಬಹುತೇಕ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುವಂತದ್ದನ್ನು ನೋಡಿ.
  • ಉದ್ಯೋಗಸ್ಥ ಮಹಿಳೆಯರು ಅಗಲವಾದ ಡಿಸೈನ್‌ನವನ್ನು ಆಯ್ಕೆ ಮಾಡಬಹುದು.
  • ಹೆವಿ ಭಾರವಿರುವಂಥದ್ದನ್ನು ಅವಾಯ್ಡ್‌ ಮಾಡಿ.
  • ಬೀಡ್ಸ್‌ ಇರುವಂತವು ರೀಸೇಲ್‌ ಮಾಡುವಾಗ ಉತ್ತಮ ಬೆಲೆ ದೊರಕುವುದಿಲ್ಲ ಎಂಬುದು ನೆನಪಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

Continue Reading
Advertisement
KL Rahul
ಕ್ರೀಡೆ27 mins ago

IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್​?

Prajwal Revanna Case DK Shivakumar alleged mastermind in 25000 pen drive allotment
ಹಾಸನ29 mins ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

Maldives anti-India stance
ಪ್ರಮುಖ ಸುದ್ದಿ1 hour ago

Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Self Harming Guest lecturer hangs herself to death
ಕರ್ನಾಟಕ2 hours ago

Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

karnataka weather Forecast
ಮಳೆ2 hours ago

Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

Dog bite
Latest2 hours ago

Dog Bite : ಮಗುವಿಗೆ ಕಚ್ಚಿದ ನಾಯಿ; ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿಗೆ ಥಳಿತ, ಇಲ್ಲಿದೆ ವಿಡಿಯೊ

Toxic Shawarma
ಆರೋಗ್ಯ2 hours ago

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

Sensex crash
ಪ್ರಮುಖ ಸುದ್ದಿ2 hours ago

Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

Dietary Guidelines
ಆರೋಗ್ಯ2 hours ago

Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

Bananas mangoes crops and houses damaged due to heavy rain in Gangavathi
ಮಳೆ2 hours ago

Heavy Rain: ಗಂಗಾವತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ, ಮಾವು, ಮನೆಗಳಿಗೆ ಹಾನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case DK Shivakumar alleged mastermind in 25000 pen drive allotment
ಹಾಸನ29 mins ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ7 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ7 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ8 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು8 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ8 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಟ್ರೆಂಡಿಂಗ್‌