Site icon Vistara News

Star Travel Fashion: ಮಾಡೆಲ್‌ – ನಟಿ ಶುಭ್ರಾ ಅಯ್ಯಪ್ಪ ಬಿಂದಾಸ್‌ ಟ್ರಾವೆಲ್‌ ಫ್ಯಾಷನ್‌!

Star Travel Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಹಾಗೂ ಮಾಡೆಲ್‌ ಶುಭ್ರಾ ಅಯ್ಯಪ್ಪ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು. ಸದ್ಯ ಇಟಲಿ ಪ್ರವಾಸದಲ್ಲಿರುವ (Star Travel Fashion) ಅವರು ಅಲ್ಲಿನ ವಾತಾವರಣ ಹಾಗೂ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿರುವುದು ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ.

ಶುಭ್ರಾ ಗ್ಲಾಮರಸ್‌ ಔಟ್‌ಫಿಟ್ಸ್‌

ಇಟಲಿಯ ಬೀಚ್‌ಗಳಲ್ಲಿ ತಮ್ಮ ಗ್ಲಾಮರಸ್‌ ಔಟ್‌ಫಿಟ್‌ ಸೇರಿದಂತೆ ಬಿಕಿನಿಯಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿರುವ ಮಾಡೆಲ್‌ ಕಮ್‌ ನಟಿ ಶುಭ್ರಾ ಅಯ್ಯಪ್ಪ ಮೊದಲಿನಿಂದಲೂ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಅಷ್ಟೇಕೆ! ಹಲವಾರು ಬಾರಿ, ರ‍್ಯಾಂಪ್‌ ಮೇಲೂ ಗ್ಲಾಮರಸ್‌ ಔಟ್‌ಫಿಟ್‌ಗಳಿಂದಲೇ ಫ್ಯಾಷನ್‌ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.

ಬಿಕಿನಿ ಟಾಪ್‌ಗಳಿಗೆ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌

ಇಟಲಿ ಪ್ರವಾಸದಲ್ಲಿ ನಾನಾ ವೈವಿಧ್ಯಮಯ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಶುಭ್ರಾ ಅವರು ಕ್ಯುಲ್ಲೋಟ್ಸ್, ಪಲ್ಹಾಜೋ, ಸ್ಟ್ರೈಪ್‌ ಪ್ಯಾಂಟ್ಸ್‌, ಮಾನೋಕ್ರೋಮ್‌ ಬ್ಲ್ಯೂ ಪ್ಯಾಂಟ್ಸ್, ಡೆನೀಮ್‌ ಶಾಟ್ರ್ಸ್‌ಗೆ ಬಿಕಿನಿ ಟಾಪ್‌ಗಳನ್ನು ಮಿಕ್ಸ್‌ ಮ್ಯಾಚ್‌ ಮಾಡಿದ್ದಾರೆ. ನೋಡಲು ರೆಸಾರ್ಟ್‌ವೆರ್‌ನಂತೆ ಕಾಣುವ ಈ ಔಟ್‌ಫಿಟ್‌ಗಳೆಲ್ಲವೂ ಶುಭ್ರಾ ಅವರ ಸೆಲ್ಫ್ ಮೇಡ್‌ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ ಎಂಬುದು ಅವರ ಸ್ಟೈಲಿಂಗ್‌ನಿಂದಲೇ ನೋಡಿ ತಿಳಿದುಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ರಾಕಿ. ಅವರ ಪ್ರಕಾರ, ಶುಭ್ರಾ ಸಖತ್‌ ಸ್ಟೈಲಿಶ್‌ ಮಾಡೆಲ್‌ ಎನ್ನುತ್ತಾರೆ.

ಸ್ಟೈಲಿಸ್ಟ್‌ಗಳ ರಿವ್ಯೂ

ಸ್ಟೈಲಿಸ್ಟ್‌ ಜಾನ್‌ ಹೇಳುವಂತೆ, ಹೊರ ರಾಷ್ಟ್ರಗಳಲ್ಲಿ ಇಲ್ಲಿನ ಹವಾಮಾನಕ್ಕೆ ತದ್ವಿರುದ್ಧವಾದ ಸೀಸನ್‌ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಟ್ರಾವೆಲ್‌ ಔಟ್‌ಫಿಟ್‌ಗಳು ಬದಲಾಗುತ್ತವೆ. ಇದೇ ರೀತಿ ಶುಭ್ರಾ ಕೂಡ ತಮ್ಮ ಟ್ರಾವೆಲಿಂಗ್‌ನ ಒಂದೊಂದು ಡ್ರೆಸ್‌ಕೋಡನ್ನು ತಮ್ಮದೇ ಆದ ಗ್ಲಾಮರಸ್‌ ಚಾಯ್ಸ್‌ ಮೂಲಕ ಧರಿಸಿದ್ದಾರೆ. ಅವರ ಚಾಯ್ಸ್‌ನಲ್ಲಿ ಬಿಕಿನಿ ಟಾಪ್‌ಗಳು ಸೇರಿರುವುದು ಹಾಟ್‌ ಲುಕ್‌ ನೀಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ. ಇನ್ನು ಸ್ಟೈಲಿಸ್ಟ್‌ ಜಿಯಾ ಕೂಡ ಅದನ್ನೇ ಹೇಳುತ್ತಾರೆ. ಶುಭ್ರಾ ಅವರ ಸ್ಟೈಲಿಂಗ್‌ ಹಾಟ್‌ ಲುಕ್‌ಗೆ ಸಾಥ್‌ ನೀಡಿದೆ ಎನ್ನುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Monsoon Fashion: ಮಾನ್ಸೂನ್‌ ಸ್ಟ್ರೀಟ್‌ ಸ್ಟೈಲ್‌ಗೆ ಸೈ ಎಂದ ಸ್ಯಾಂಡಲ್‌ವುಡ್‌ ನಟ ನಿರಂಜನ್‌ ಸುಧೀಂದ್ರ

Exit mobile version