ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸಮ್ಮರ್ ಸೀಸನ್‌ನಲ್ಲಿ (Summer fashion) ನಾನಾ ಡಿಸೈನ್‌ನ ಬ್ಯಾಕ್‌ಲೆಸ್ ಡ್ರೆಸ್‌ಗಳು ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ. ಹುಡುಗಿಯರಿಗೆ ಬಿಂದಾಸ್ ಲುಕ್ ನೀಡುವ ಇವು ಇದೀಗ ಸೀಸನ್‌ನ ಹಾಟ್ ಟ್ರೆಂಡ್ ಲಿಸ್ಟ್‌ಗೆ ಸೇರಿವೆ.
ಸ್ಟೈಲಿಸ್ಟ್ ರಜಿನಿ ಪ್ರಕಾರ, ಸಮ್ಮರ್ ಫ್ಯಾಷನ್‌ನ (Summer fashion) ಬಿಂದಾಸ್ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿ ಇದೀಗ ಬ್ಯಾಕ್‌ಲೆಸ್ ಡ್ರೆಸ್‌ಗಳದ್ದೇ ಕಾರುಬಾರು. ಸದ್ಯಕ್ಕೆ ಮಾಡೆಲ್‌ಗಳಿಗೆ ನಟಿಯರಿಗೆ ಹಾಟ್ ಲುಕ್ ನೀಡುತ್ತಿರುವ ಈ ಡ್ರೆಸ್‌ಗಳು ವೆರೈಟಿ ಕಲೆಕ್ಷನ್‌ಗಳಲ್ಲಿ ಲಭ್ಯ.
ಒಂದಕ್ಕಿಂತ ಒಂದು ವಿನ್ಯಾಸದಲ್ಲಿ ದೊರೆಯುತ್ತಿರುವ ಇವು ಸಾದಾ ಹಾಗೂ ಪ್ರಿಂಟ್ಸ್‌ನಲ್ಲಿ ಫ್ಯಾಷನ್ ಪ್ರೇಮಿಗಳನ್ನು ಸೆಳೆಯುತ್ತಿವೆ. ಮಾನೋಕ್ರೋಮ್ ಬ್ಯಾಕ್‌ಲೆಸ್ ಡ್ರೆಸ್‌ಗಳು ಕೂಡ ವಿಭಿನ್ನ ವಿನ್ಯಾಸದಲ್ಲಿ ಸಿಗುತ್ತಿವೆ. ತಕ್ಷಣಕ್ಕೆ ನೋಡಲು ರೆಸಾರ್ಟ್ವೇರ್‌ನಂತೆ ಕಾಣುವ ಇವು ಬೀಚ್‌ವೇರ್ ಹಾಗೂ ಪೂಲ್‌ವೇರ್‌ನಲ್ಲೂ ಹೆಚ್ಚು ಕಾಣಸಿಗುತ್ತವೆ. ಇದೀಗ ಇವುಗಳನ್ನು ಹೊರತುಪಡಿಸಿ, ವೀಕೆಂಡ್ ಹಾಗೂ ಔಟಿಂಗ್‌ಗೆ ಧರಿಸಬಹುದಾದ ಫ್ರಾಕ್ ಹಾಗೂ ಮ್ಯಾಕ್ಸಿ ವಿನ್ಯಾಸದಲ್ಲೂ ಲಭ್ಯ. ಅಲ್ಲದೇ, ಸಿಂಪಲ್ ಮ್ಯಾಕ್ಸಿ ಡಿಸೈನ್ ಗೌನ್‌ಗಳ ಶೈಲಿಯಲ್ಲೂ ಟ್ರೆಂಡಿಯಾಗಿವೆ ಎನ್ನುತ್ತಾರೆ.
ಮಾನೋಕ್ರೋಮ್ ಶೈಲಿಯ ಬ್ಯಾಕ್‌ಲೆಸ್ ಡ್ರೆಸ್
ಇಡೀ ಉಡುಪು ಒಂದೇ ವರ್ಣದಲ್ಲಿ ಕಾಣುವ ಬ್ಯಾಕ್‌ಲೆಸ್ ಡ್ರೆಸ್‌ಗಳಲ್ಲಿ ಇದೀಗ ಅಸ್ಸೆಮ್ಮಿಟ್ರಿಕಲ್, ಜಿಗ್‌ಜಾಗ್, ಫ್ರಾಕ್ ಶೈಲಿಯವು ಪ್ರಚಲಿತದಲ್ಲಿವೆ. ರಫಲ್ಸ್ ಹಾಗೂ ಫ್ರಿಲ್ ಶೈಲಿಯವು ಹೆಚ್ಚು ಬೇಡಿಕೆಯಲ್ಲಿವೆ. ಇನ್ನು ಸಾಕಷ್ಟು ಫೋಟೊಶೂಟ್‌ನಲ್ಲೂ ಈ ಉಡುಪುಗಳು ಸ್ಥಾನ ಪಡೆದುಕೊಂಡಿವೆ. ಬ್ಲ್ಯೂ, ವೈಟ್, ಗ್ರೀನ್, ವೈನ್ ಕಲರ್, ಕ್ಲಾಸಿಕ್ ರೆಡ್ ಶೇಡ್‌ನವು ಹೆಚ್ಚು ಡಿಮ್ಯಾಂಡ್ ಪಡೆದುಕೊಂಡಿವೆ.
ಬ್ಯಾಕ್‌ಲೆಸ್ ಗೌನ್
ಕ್ಯಾಶುವಲ್ ಗೌನ್‌ಗಳಿಗೆ ಬಿಂದಾಸ್ ಲುಕ್ ನೀಡುವ ಈ ಬ್ಯಾಕ್‌ಲೆಸ್ ವಿನ್ಯಾಸ ಸಮ್ಮರ್ ಫ್ಯಾಷನ್‌ನ್ನಲ್ಲಿ ಅದರಲ್ಲೂ ತಾರೆಯರ ನೆಚ್ಚಿನ ಉಡುಪುಗಳಲ್ಲೊಂದಾಗಿದೆ. ಅದರಲ್ಲೂ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಹ ಫಿಟ್ ಗೌನ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಪ್ರಿಂಟೆಡ್‌ನಲ್ಲಿ ಸೆಮಿ ಟ್ರಾಪಿಕಲ್, ಜೆಯಾಮಿಟ್ರಾಕಲ್, ಫ್ಲೋರಲ್‌ನವು ಸಾಮಾನ್ಯವಾಗಿ ಚಾಲ್ತಿಯಲ್ಲಿವೆ. ನೆಟ್ಟೆಡ್ ಬ್ಯಾಕ್‌ಲೆಸ್ ಹಾಗೂ ಶೀರ್ ಬ್ಯಾಕ್‌ಲೆಸ್ ಗೌನ್‌ಗಳು ಈ ಸೀಸನ್‌ನಲ್ಲಿ ಮರೆಯಾಗಿವೆ. ಇದೀಗ ಏನಿದ್ದರೂ ಸ್ಕಿನ್ ಶೋ ಮಾಡುವಂತಹ ಗೌನ್‌ಗಳು ಹೆಚ್ಚಾಗಿವೆ. ಇನ್ನು ಸಾಕಷ್ಟು ಫೋಟೊಶೂಟ್‌ಗಳಲ್ಲಿ ಮಾಡೆಲ್‌ಗಳು ಬ್ಯಾಕ್‌ಲೆಸ್ ಗೌನ್‌ಗಳಲ್ಲಿ ಬ್ಯಾಕ್‌ಸೈಡ್ ಫೋಟೊ ಶೂಟ್ ಮಾಡಿಸುವುದನ್ನು ಆಗಾಗ್ಗೆ ನೋಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬ್ಯಾಕ್‌ಲೆಸ್ ಮ್ಯಾಕ್ಸಿ
ಟ್ರಾವೆಲ್ ಟೈಮ್‌ನಲ್ಲಿ ಧರಿಸಬಹುದಾದ ಮ್ಯಾಕ್ಸಿಗಳು ಇದೀಗ ಬ್ಯಾಕ್‌ಲೆಸ್ ಆಗಿವೆ. ಅದರಲ್ಲೂ ಸಮ್ಮರ್ ರೆಸಾರ್ಟ್‌ವೇರ್‌ಗಳಲ್ಲಿ ಇದು ತೀರಾ ಕಾಮನ್ ಆಗಿವೆ. ಅಸ್ಸೆಮ್ಮಿಟ್ರಿಕಲ್ ಹಾಗೂ ಸ್ಲಿಟ್ ಮ್ಯಾಕ್ಸಿಗಳು ಗ್ಲಾಮರಸ್ ಲುಕ್ ನೀಡುವುದಕ್ಕಾಗಿಯೇ ಬ್ಯಾಕ್‌ಲೆಸ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್. ಇನ್ನು ಮ್ಯಾಕ್ಸಿ ಶೈಲಿಯ ಬ್ಯಾಕ್‌ಲೆಸ್ ಫ್ರಾಕ್‌ಗಳು ಕೂಡ ಇದೀಗ ಕಾಲೇಜು ಹುಡುಗಿಯರ ಫೇವರಿಟ್ ಮಾತ್ರವಲ್ಲ, ವಿವಾಹಿತರ ಟ್ರಾವೆಲ್ ಟೈಮ್‌ಗೆ ಸೇರಿವೆ. ಯಂಗ್ ಲುಕ್ ಕಲ್ಪಿಸುತ್ತಿವೆ.
ಬ್ಯಾಕ್‌ಲೆಸ್ ಟೈಯಿಂಗ್ ಡ್ರೆಸ್
ಗ್ಲಾಮರಸ್ ಲುಕ್ ನೀಡುವ ಟೈಯಿಂಗ್ ಬ್ಯಾಕ್‌ಲೆಸ್ ಡ್ರೆಸ್‌ಗಳು ಕೂಡ ಹೊಸ ಲುಕ್ ನೀಡುತ್ತವೆ. ಬೆನ್ನಿನ ಸೌಂದರ್ಯಕ್ಕಾಗಿ ಕೆಲವರು ಈ ಟೈಯಿಂಗ್ ಥ್ರೆಡ್‌ನಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲೆಲ್ಲಾ ಬ್ಲೌಸ್‌ನಲ್ಲಿದ್ದ ಈ ಕಾನ್ಸೆಪ್ಟ್ ಇದೀಗ ಡ್ರೆಸ್‌ಗಳಿಗೂ ಶಿಫ್ಟ್ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಮಿಕ್ಸ್ ಮ್ಯಾಚ್ ಫ್ಯೂಶನ್ ಫ್ಯಾಷನ್‌ಗೆ ಸಾಥ್ ನೀಡುತ್ತಿವೆ ಎಂಬುದು ಫ್ಯಾಷನಿಸ್ಟ್‌ಗಳ ಅಭಿಪ್ರಾಯ.
ಬ್ಯಾಕ್‌ಲೆಸ್ ಡ್ರೆಸ್ ಪ್ರಿಯರು ಗಮನಿಸಬೇಕಾದ್ದು
- ಫ್ಯಾಷನ್ ಹೆಸರಲ್ಲಿ ಎಕ್ಸ್ಪೋಸ್ ಆಗುವಂತಿರಬಾರದು.
- ಸಮಾರಂಭಗಳಿಗೆ ಈ ವಿನ್ಯಾಸ ನಾಟ್ ಓಕೆ.
- ಟ್ರೆಂಡಿ ವಿನ್ಯಾಸದ್ದನ್ನು ಆಯ್ಕೆ ಮಾಡಿ.
- ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫಂಕಿ ಲುಕ್‌ಗಾಗಿ ಮಿರರ್ಡ್ ಸನ್‌ಗ್ಲಾಸ್