Site icon Vistara News

Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸನ್‌ ಕಲರ್‌ ನೇಲ್‌ ಆರ್ಟ್‌ (Summer Fashion) ಇದೀಗ ಟ್ರೆಂಡಿಯಾಗಿದೆ. ಹೌದು. ಇದೀಗ ಈ ಸೀಸನ್‌ನಲ್ಲಿ ನೇಲ್‌ ಆರ್ಟ್‌ನಲ್ಲಿ ನಾನಾ ಶೇಡ್‌ನ ಸನ್‌ ಕಲರ್‌ಗಳು ನುಸುಳಿವೆ. ಈ ಹಿಂದೆ ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್‌ನಲ್ಲಿ ಬಳಸತೊಡಗಿದ್ದಾರೆ. ಇದಕ್ಕೆ ಹೊಸ ರೂಪ ನೀಡಿ ಟ್ರೆಂಡಿಯಾಗಿಸಿದ್ದಾರೆ. ಮಿಕ್ಸ್‌ ಮ್ಯಾಚ್‌ ಮಾಡಿ ಹೊಸ ನೇಲ್‌ ಆರ್ಟ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ನೇಲ್‌ ಆರ್ಟ್‌ ಡಿಸೈನರ್ಸ್.‌

ಟ್ರೆಂಡಿಯಾಗಲು ಕಾರಣ

“ನೇಲ್‌ ಆರ್ಟ್‌ ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದರಲ್ಲೂ ಈ ಸಮ್ಮರ್‌ ಸೀಸನ್‌ನಲ್ಲಿ ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ನೇಲ್‌ ಆರ್ಟ್‌ನಲ್ಲೂ ಅಷ್ಟೇ! ಡಾರ್ಕ್‌ ಕಲರ್‌ಗಳಿಗಿಂತ ಲೈಟ್‌ ಕಲರ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಅದೇ ರೀತಿ ಈ ಸೀಸನ್‌ನಲ್ಲಿ ಅತಿ ಹೆಚ್ಚು ಯೆಲ್ಲೋ ಶೇಡ್‌ಗಳು, ಅದರಲ್ಲೂ ಹೆಚ್ಚು ಎದ್ದು ಕಾಣುವಂತಹ ಸನ್‌ ಕಲರ್‌ ಶೇಡ್‌ಗಳನ್ನು ಬಳಸಲಾಗುತ್ತಿದೆ. ಈ ಕಲರ್‌ಗಳು ಯುವತಿಯರಿಗೆ ಪ್ರಿಯವಾಗತೊಡಗಿವೆ. ಹಾಗಾಗಿ ಈ ಶೇಡ್ಸ್‌ ಟ್ರೆಂಡಿಯಾಗಲು ಕಾರಣವಾಗಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಏನಿದು ಸನ್‌ ಕಲರ್‌ ನೇಲ್‌ ಶೇಡ್ಸ್‌

ಹಳದಿಯ ನಾನಾ ಶೇಡ್‌ಗಳನ್ನು ಸನ್‌ ಕಲರ್‌ಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಪ್ರಖರ ಕಿರಣಗಳಂತೆ ಕಾಣುವ ಈ ಕಲರ್‌ಗಳನ್ನು ಸನ್‌ ಕಲರ್‌ಗಳೆಂದು ಹೇಳಲಾಗುತ್ತದೆ. ಇದು ಉಡುಪಿನ ಬಣ್ಣವಾಗಬಹುದು ಅಥವಾ ಇತರೇ ಶೇಡ್ಸ್‌ ಆಗಬಹುದು. ಇದನ್ನು ನೇಲ್‌ ಆರ್ಟ್‌ನಲ್ಲಿ ಮೊದಲೆಲ್ಲಾ ಬಳಕೆ ಮಾಡುತ್ತಿದ್ದದ್ದು ತೀರಾ ಕಡಿಮೆಯಾಗಿತ್ತು. ಇದೀಗ ಈ ಶೇಡ್‌ ಕೂಡ ನೇಲ್‌ ಆರ್ಟ್‌ನಲ್ಲಿ ಸ್ಥಾನಗಳಿಸಿ, ಪಾಪುಲರ್‌ ಆಗಿದೆ.

ಟ್ರೆಂಡಿಯಾಗಿರುವ ಸನ್‌ ನೇಲ್‌ ಆರ್ಟ್‌

ಸನ್‌ ಶೇಡ್ಸ್‌ ಅಂದರೇ, ಹಳದಿ ಬಣ್ಣವನ್ನು ಬ್ಯಾಕ್‌ಗ್ರೌಂಡ್‌ ವರ್ಣವಾಗಿಸಿ ಪೊಲ್ಕಾ ಡಾಟ್ಸ್‌ ರಚಿಸುವುದು, ಸೂರ್ಯನ ಕಿರಣಗಳನ್ನು ಸೃಷ್ಟಿಸುವುದು, ಸನ್‌ ಫ್ಲವರ್‌ ಹೂಗಳ ಚಿತ್ತಾರ, ಸೇವಂತಿ, ಬಿಸಿಲಿನ ಪ್ರಖರ ಕಿರಣಗಳು, ಹಳದಿಯ ನಾನಾ ಕಿರಣಗಳಂತೆ ಬಿಂಬಿಸುವುದು. ಕಾಮನಬಿಲ್ಲು, ಜೇಡರ ಬಲೆ ಹೀಗೆ ನಾನಾ ಬಗೆಯ ಚಿತ್ರಗಳನ್ನು ರಚಿಸುವುದು ಈ ನೇಲ್‌ ಆರ್ಟ್‌ನಲ್ಲಿ ಸೇರಿದೆ. ಹಳದಿ ಬಣ್ಣ ಎದ್ದು ಕಾಣಿಸುವುದರಿಂದ ಈ ಚಿತ್ತಾರಗಳನ್ನು ಮೂಡಿಸುವುದು ಸುಲಭ ಎನ್ನುತ್ತಾರೆ ನೇಲ್‌ ಡಿಸೈನರ್‌ ರಕ್ಷಿತಾ. ಅವರ ಪ್ರಕಾರ, ಈ ಕಲರ್‌ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ನೀವೂ ನೇಲ್‌ ಆರ್ಟ್‌ ಮಾಡಿ ನೋಡಿ

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ನೇಲ್‌ ಕಿಟ್‌ ನಿಮ್ಮ ಬಳಿ ಇರಲಿ. ಜೊತೆಗೆ ಟ್ರೆಂಡಿಯಾಗಿರುವ ಎಲ್ಲಾ ಶೇಡ್‌ಗಳ ಕಲೆಕ್ಷನ್ಸ್‌ ನಿಮ್ಮ ಬಳಿಯಿರಲಿ. ಡಿಸೈನ್ಸ್‌ಗಾಗಿ ನೀವೂ ಅಂತರ್ಜಾಲ ಜಾಲಾಡಬಹುದು. ನೀವೂ ಕೂಡ ನಿಮ್ಮ ಕೈ ಬೆರಳುಗಳ ಉಗುರುಗಳಿಗೆ ಅಥವಾ ನಿಮ್ಮ ಆಪ್ತರ ಕೈಗಳಿಗೆ ಸಿಂಗಾರ ಮಾಡಬಹುದು. ಉಗುರಿಗೆ ಕೋಟ್‌ ನೇಲ್‌ಪಾಲಿಶ್‌ ಹಾಕಿದ ನಂತರ ಸನ್‌ ಕಲರ್‌ ಹಚ್ಚಿ. ಪೊಲ್ಕಾ ಡಾಟ್ಸ್‌ ಅಥವಾ ನೆಟ್‌, ಸ್ಪೈಡರ್‌ನಂತಹ ಡಿಸೈನನ್ನು ನೀವೇ ಖುದ್ದು ಡಿಸೈನ್‌ ಮಾಡಿ. ಆನ್‌ಲೈನ್‌ ಟ್ಯೂಷನ್‌ನಲ್ಲೂ ಈ ಕುರಿತ ವಿಡಿಯೋಗಳು ಲಭ್ಯ ಎಂದು ಟಿಪ್ಸ್‌ ನೀಡುತ್ತಾರೆ ನೇಲ್‌ ಡಿಸೈನರ್ಸ್.‌

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version