Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌ - Vistara News

ಲೈಫ್‌ಸ್ಟೈಲ್

Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌

ಇದೀಗ ಈ ಸೀಸನ್‌ನ ನೇಲ್‌ ಆರ್ಟ್‌ ಫ್ಯಾಷನ್‌ನಲ್ಲಿ (Summer Fashion) ಸನ್‌ ಕಲರ್ಸ್‌ ನುಸುಳಿದೆ. ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ಹಾಗಾದಲ್ಲಿ, ಏನಿದು ಸನ್‌ ಕಲರ್‌ ನೇಲ್‌ ಆರ್ಟ್?‌ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸನ್‌ ಕಲರ್‌ ನೇಲ್‌ ಆರ್ಟ್‌ (Summer Fashion) ಇದೀಗ ಟ್ರೆಂಡಿಯಾಗಿದೆ. ಹೌದು. ಇದೀಗ ಈ ಸೀಸನ್‌ನಲ್ಲಿ ನೇಲ್‌ ಆರ್ಟ್‌ನಲ್ಲಿ ನಾನಾ ಶೇಡ್‌ನ ಸನ್‌ ಕಲರ್‌ಗಳು ನುಸುಳಿವೆ. ಈ ಹಿಂದೆ ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್‌ನಲ್ಲಿ ಬಳಸತೊಡಗಿದ್ದಾರೆ. ಇದಕ್ಕೆ ಹೊಸ ರೂಪ ನೀಡಿ ಟ್ರೆಂಡಿಯಾಗಿಸಿದ್ದಾರೆ. ಮಿಕ್ಸ್‌ ಮ್ಯಾಚ್‌ ಮಾಡಿ ಹೊಸ ನೇಲ್‌ ಆರ್ಟ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ನೇಲ್‌ ಆರ್ಟ್‌ ಡಿಸೈನರ್ಸ್.‌

Summer Fashion

ಟ್ರೆಂಡಿಯಾಗಲು ಕಾರಣ

“ನೇಲ್‌ ಆರ್ಟ್‌ ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದರಲ್ಲೂ ಈ ಸಮ್ಮರ್‌ ಸೀಸನ್‌ನಲ್ಲಿ ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ನೇಲ್‌ ಆರ್ಟ್‌ನಲ್ಲೂ ಅಷ್ಟೇ! ಡಾರ್ಕ್‌ ಕಲರ್‌ಗಳಿಗಿಂತ ಲೈಟ್‌ ಕಲರ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಅದೇ ರೀತಿ ಈ ಸೀಸನ್‌ನಲ್ಲಿ ಅತಿ ಹೆಚ್ಚು ಯೆಲ್ಲೋ ಶೇಡ್‌ಗಳು, ಅದರಲ್ಲೂ ಹೆಚ್ಚು ಎದ್ದು ಕಾಣುವಂತಹ ಸನ್‌ ಕಲರ್‌ ಶೇಡ್‌ಗಳನ್ನು ಬಳಸಲಾಗುತ್ತಿದೆ. ಈ ಕಲರ್‌ಗಳು ಯುವತಿಯರಿಗೆ ಪ್ರಿಯವಾಗತೊಡಗಿವೆ. ಹಾಗಾಗಿ ಈ ಶೇಡ್ಸ್‌ ಟ್ರೆಂಡಿಯಾಗಲು ಕಾರಣವಾಗಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Fashion

ಏನಿದು ಸನ್‌ ಕಲರ್‌ ನೇಲ್‌ ಶೇಡ್ಸ್‌

ಹಳದಿಯ ನಾನಾ ಶೇಡ್‌ಗಳನ್ನು ಸನ್‌ ಕಲರ್‌ಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಪ್ರಖರ ಕಿರಣಗಳಂತೆ ಕಾಣುವ ಈ ಕಲರ್‌ಗಳನ್ನು ಸನ್‌ ಕಲರ್‌ಗಳೆಂದು ಹೇಳಲಾಗುತ್ತದೆ. ಇದು ಉಡುಪಿನ ಬಣ್ಣವಾಗಬಹುದು ಅಥವಾ ಇತರೇ ಶೇಡ್ಸ್‌ ಆಗಬಹುದು. ಇದನ್ನು ನೇಲ್‌ ಆರ್ಟ್‌ನಲ್ಲಿ ಮೊದಲೆಲ್ಲಾ ಬಳಕೆ ಮಾಡುತ್ತಿದ್ದದ್ದು ತೀರಾ ಕಡಿಮೆಯಾಗಿತ್ತು. ಇದೀಗ ಈ ಶೇಡ್‌ ಕೂಡ ನೇಲ್‌ ಆರ್ಟ್‌ನಲ್ಲಿ ಸ್ಥಾನಗಳಿಸಿ, ಪಾಪುಲರ್‌ ಆಗಿದೆ.

Summer Fashion

ಟ್ರೆಂಡಿಯಾಗಿರುವ ಸನ್‌ ನೇಲ್‌ ಆರ್ಟ್‌

ಸನ್‌ ಶೇಡ್ಸ್‌ ಅಂದರೇ, ಹಳದಿ ಬಣ್ಣವನ್ನು ಬ್ಯಾಕ್‌ಗ್ರೌಂಡ್‌ ವರ್ಣವಾಗಿಸಿ ಪೊಲ್ಕಾ ಡಾಟ್ಸ್‌ ರಚಿಸುವುದು, ಸೂರ್ಯನ ಕಿರಣಗಳನ್ನು ಸೃಷ್ಟಿಸುವುದು, ಸನ್‌ ಫ್ಲವರ್‌ ಹೂಗಳ ಚಿತ್ತಾರ, ಸೇವಂತಿ, ಬಿಸಿಲಿನ ಪ್ರಖರ ಕಿರಣಗಳು, ಹಳದಿಯ ನಾನಾ ಕಿರಣಗಳಂತೆ ಬಿಂಬಿಸುವುದು. ಕಾಮನಬಿಲ್ಲು, ಜೇಡರ ಬಲೆ ಹೀಗೆ ನಾನಾ ಬಗೆಯ ಚಿತ್ರಗಳನ್ನು ರಚಿಸುವುದು ಈ ನೇಲ್‌ ಆರ್ಟ್‌ನಲ್ಲಿ ಸೇರಿದೆ. ಹಳದಿ ಬಣ್ಣ ಎದ್ದು ಕಾಣಿಸುವುದರಿಂದ ಈ ಚಿತ್ತಾರಗಳನ್ನು ಮೂಡಿಸುವುದು ಸುಲಭ ಎನ್ನುತ್ತಾರೆ ನೇಲ್‌ ಡಿಸೈನರ್‌ ರಕ್ಷಿತಾ. ಅವರ ಪ್ರಕಾರ, ಈ ಕಲರ್‌ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ನೀವೂ ನೇಲ್‌ ಆರ್ಟ್‌ ಮಾಡಿ ನೋಡಿ

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ನೇಲ್‌ ಕಿಟ್‌ ನಿಮ್ಮ ಬಳಿ ಇರಲಿ. ಜೊತೆಗೆ ಟ್ರೆಂಡಿಯಾಗಿರುವ ಎಲ್ಲಾ ಶೇಡ್‌ಗಳ ಕಲೆಕ್ಷನ್ಸ್‌ ನಿಮ್ಮ ಬಳಿಯಿರಲಿ. ಡಿಸೈನ್ಸ್‌ಗಾಗಿ ನೀವೂ ಅಂತರ್ಜಾಲ ಜಾಲಾಡಬಹುದು. ನೀವೂ ಕೂಡ ನಿಮ್ಮ ಕೈ ಬೆರಳುಗಳ ಉಗುರುಗಳಿಗೆ ಅಥವಾ ನಿಮ್ಮ ಆಪ್ತರ ಕೈಗಳಿಗೆ ಸಿಂಗಾರ ಮಾಡಬಹುದು. ಉಗುರಿಗೆ ಕೋಟ್‌ ನೇಲ್‌ಪಾಲಿಶ್‌ ಹಾಕಿದ ನಂತರ ಸನ್‌ ಕಲರ್‌ ಹಚ್ಚಿ. ಪೊಲ್ಕಾ ಡಾಟ್ಸ್‌ ಅಥವಾ ನೆಟ್‌, ಸ್ಪೈಡರ್‌ನಂತಹ ಡಿಸೈನನ್ನು ನೀವೇ ಖುದ್ದು ಡಿಸೈನ್‌ ಮಾಡಿ. ಆನ್‌ಲೈನ್‌ ಟ್ಯೂಷನ್‌ನಲ್ಲೂ ಈ ಕುರಿತ ವಿಡಿಯೋಗಳು ಲಭ್ಯ ಎಂದು ಟಿಪ್ಸ್‌ ನೀಡುತ್ತಾರೆ ನೇಲ್‌ ಡಿಸೈನರ್ಸ್.‌

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

New Medical Colleges: ಕರ್ನಾಟಕಕ್ಕೆ 3 ಪದವಿಪೂರ್ವ ವೈದ್ಯಕೀಯ ಕಾಲೇಜು ಮಂಜೂರು; 350 ಸೀಟುಗಳು ಲಭ್ಯ

New Medical Colleges: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ)ವು ಕರ್ನಾಟಕಕ್ಕೆ ಈ ಬಾರಿ ಮೂರು ಪದವಿಪೂರ್ವ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ನಗರೂರ್, ಬೆಂಗಳೂರು ಉತ್ತರ), ಪಿಇಎಸ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ (ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು) ಮತ್ತು ಎಸ್‍ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಾಗಲಕೋಟೆ)ಗಳಿಗೆ ಅವಕಾಶ ಸಿಕ್ಕಿದೆ.

VISTARANEWS.COM


on

New Medical Colleges
Koo

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ (New Medical Colleges) ಆಯೋಗ (ಎನ್‍ಎಂಸಿ)ವು ಕರ್ನಾಟಕಕ್ಕೆ ಈ ಬಾರಿ ಮೂರು ಪದವಿಪೂರ್ವ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ನಗರೂರ್, ಬೆಂಗಳೂರು ಉತ್ತರ), ಪಿಇಎಸ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ (ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು) ಮತ್ತು ಎಸ್‍ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಾಗಲಕೋಟೆ) ಆಗಿವೆ.

ಎಷ್ಟು ವೈದ್ಯಕೀಯ ಸೀಟು ಲಭ್ಯ?

ಈ ಮೂರು ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭವಾಗಲಿದ್ದು, ಬಿಜಿಎಸ್‍ಗೆ 150, ಪಿಇಎಸ್‍ಗೆ 100 ಹಾಗೂ ಬಾಗಲಕೋಟೆ ಎಸ್‍ಆರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ 100 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ಇದನ್ನೂ ಓದಿ: Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

ರಾಜ್ಯದಿಂದ ಈ ಬಾರಿ ಒಟ್ಟು ಐದು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಬೇಕೆಂದು ಎನ್‍ಎಂಸಿಗೆ ಮನವಿ ಮಾಡಲಾಗಿತ್ತು. ಆದರೆ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೆಲವು ತಾಂತ್ರಿಕ ಕಾರಣಗಳಿಂದ ಅನುಮೋದನೆ ನೀಡಿಲ್ಲ.

ಪ್ರಸ್ತುತ ಮೂರು ವೈದ್ಯಕೀಯ ಕಾಲೇಜುಗಳು ಹೊಸದಾಗಿ ಪ್ರಾರಂಭ ಆಗುತ್ತಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 73ಕ್ಕೆ ಏರಿದೆ. ಸದ್ಯ 11,745 ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿದ್ದು, 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095ಕ್ಕೆ ಏರಿಕೆಯಾಗಲಿದೆ.

ಒಂದು ವೇಳೆ ರಾಮನಗರ ಮತ್ತು ಕನಕಪುರಕ್ಕೂ ಈ ವರ್ಷದಿಂದಲೇ ವೈದ್ಯಕೀಯ ಕಾಲೇಜುಗಳ ಪ್ರಾರಂಭಕ್ಕೆ ಎನ್‍ಎಂಸಿ ಅನುಮೋದನೆ ನೀಡಿದರೆ ಹೆಚ್ಚುವರಿಯಾಗಿ ಇನ್ನು 300 ವೈದ್ಯಕೀಯ ಸೀಟುಗಳು ಸಿಗಲಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

ರಾಮನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಿಬ್ಬಂದಿ ಕೊರತೆ ಮತ್ತು 650 ಬೆಡ್‍ಗಳು ಇರಬೇಕೆಂಬ ನಿಯಮವಿದೆ. ಆದರೆ ಪ್ರಸ್ತುತ ರಾಮನಗರದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲು ತಡವಾಗಿದೆ. ಒಂದು ವೈದ್ಯಕೀಯ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಬೇಕಾದರೆ ಎಂಎನ್‍ಸಿ ಮತ್ತು ಎಂಸಿಐನ ಕೆಲವು ಮಾನದಂಡಗಳನ್ನು ಪಾಲಿಸಲೇಬೇಕಾಗುತ್ತದೆ.

ನಿಯಮಗಳು ಏನೇನು?

2024-25ನೇ ಶೈಕ್ಷಣಿಕ ಸಾಲಿನಿಂದ ಆರಂಭವಾಗುವ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಮಿತಿಯನ್ನು ಗರಿಷ್ಠ 150ಕ್ಕೆ ನಿಗದಿಪಡಿಸಿದೆ.

ರಾಜ್ಯಗಳಲ್ಲಿರುವ 10 ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಪದವಿ ಸೀಟುಗಳು ಎಂಬ ಅನುಪಾತಕ್ಕೆ ಅನುಗುಣವಾಗಿ ಈ ಮಾನದಂಡ ರೂಪಿಸಲಾಗಿದೆ. ಹೊಸ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸ್, ಹೊಸ ವೈದ್ಯಕೀಯ ಕೋರ್ಸ್ ಆರಂಭ, ಹಾಲಿ ಇರುವ ಸೀಟುಗಳ ಹೆಚ್ಚಳ, ಮೌಲ್ಯಮಾಪನ ಮತ್ತು ಮೌಲ್ಯಾಂಕನ ನಿಯಮಗಳಿಗೆ ಸಂಬಂಧಿಸಿದಂತೆ ಆಯೋಗ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ.

ಯಾವುದೇ ಕಾಲೇಜಿಗೆ ಹೆಚ್ಚುವರಿಯಾಗಿ ಅನುಮತಿಸಿದ ಕೋಟಾ ಸೀಟುಗಳು ಕೂಡ ಕಾಲೇಜಿಗೆ ಮಂಜೂರು ಮಾಡಿರುವ ಒಟ್ಟು ಸೀಟುಗಳ ಮಿತಿಯನ್ನು ಮೀರಬಾರದು. ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮೊದಲ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 50, 100 ಹಾಗೂ 150 ಸೀಟುಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.

ಹೊಸ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸುಸಜ್ಜಿತ ಆಸ್ಪತ್ರೆ ಇರಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರಬೇಕು. ಆಸ್ಪತ್ರೆಯು ಕನಿಷ್ಠ 220 ಹಾಸಿಗೆ ಸಾಮರ್ಥ್ಯ ಹೊಂದಿರಬೇಕು. ಕಾಲೇಜು ಮತ್ತು ಆಸ್ಪತ್ರೆ ನಡುವೆ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಯ ಪ್ರಯಾಣದ ಅಂತರ 30 ನಿಮಿಷಕ್ಕೂ ಹೆಚ್ಚಿರಬಾರದು.

ಇದನ್ನೂ ಓದಿ: PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

ಸಹಾಯಕ ವೈದ್ಯರಿಗೆ ನೆರವಾಗುವಂತೆ ಕಾಲೇಜಿನ ವ್ಯಾಪ್ತಿಯಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಇರಬೇಕು. ಪ್ರತಿ ವೈದ್ಯಕೀಯ ಸಂಸ್ಥೆಯಲ್ಲೂ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಪೂರಕವಾಗುವಂತಹ ಸುಸಜ್ಜಿತ ಪ್ರಯೋಗಾಲಯ ಇರಬೇಕಾಗುತ್ತದೆ.

Continue Reading

ಆರೋಗ್ಯ

Yoga For Menopause: ಋತುಬಂಧ ಸಮಸ್ಯೆ ನಿಭಾಯಿಸಲು ಯೋಗ ನೆರವಾಗುವುದೇ?

Yoga for Menopause: ಇದ್ದಕ್ಕಿದ್ದಂತೆ ಮೈಯೆಲ್ಲಾ ಕಾವೇರಿದಂತೆ ಬಿಸಿಯಾಗುವುದು, ಮೈ ಬೆವರುವುದು, ಸುಸ್ತು-ಆಯಾಸ, ನಿಧಾನವಾಗುವ ಚಯಾಪಚಯ, ನಿದ್ದೆ ಬಾರದಿರುವುದು, ಮೂಡ್‌ ಏರುಪೇರು ಮುಂತಾದ ಹತ್ತು-ಹಲವು ಲಕ್ಷಣಗಳು ರಜೋನಿವೃತ್ತಿಯ ದಿನಗಳಲ್ಲಿ ಕಂಡುಬರುತ್ತವೆ. ಇದಕ್ಕಾಗಿ ಯೋಗಾಭ್ಯಾಸ ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Menopause
Koo

ರಜೋನಿವೃತ್ತಿ ಎಂಬುದು (Yoga for Menopause) ಎಲ್ಲ ಮಹಿಳೆಯರ ಬದುಕಿನ ನೈಸರ್ಗಿಕವಾಗ ಹಂತ. ಬದುಕಿನಲ್ಲಿ ಆವರೆಗೆ ಜೊತೆಯಲ್ಲಿದ್ದ ಪ್ರಜನನ ಸಾಮರ್ಥ್ಯ ಆನಂತರ ಇಲ್ಲವಾಗುವ ಹಂತವನ್ನೇ ಋತುಬಂಧ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ 40ರ ನಂತರ ಯಾವಾಗಲಾದರೂ ಆರಂಭವಾಗುವ ಈ ಹಂತ, ಕೆಲವರಲ್ಲಿ ಮುಗಿಯುವಾಗ 55 ಸಮೀಪಿಸಿರುತ್ತದೆ. ಇದೊಂದು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲ, ಬದಲಿಗೆ ಹೊಸದಾಗಿ ತಮ್ಮನ್ನು ಮಹಿಳೆಯರು ಹುಡುಕುವ ಪ್ರಕ್ರಿಯೆ. ಹಾಗಾಗಿಯೇ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಲವು ಸವಾಲುಗಳನ್ನು ಈ ದಿನಗಳು ಎದುರಿಡುತ್ತವೆ. ಇದ್ದಕ್ಕಿದ್ದಂತೆ ಮೈಯೆಲ್ಲಾ ಕಾವೇರಿದಂತೆ ಬಿಸಿಯಾಗುವುದು, ಮೈ ಬೆವರುವುದು, ಸುಸ್ತು-ಆಯಾಸ, ನಿಧಾನವಾಗುವ ಚಯಾಪಚಯ, ನಿದ್ದೆ ಬಾರದಿರುವುದು, ಮೂಡ್‌ ಏರುಪೇರು ಮುಂತಾದ ಹತ್ತು-ಹಲವು ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಅತಿಯಾಗಿ, ನಿಭಾಯಿಸಲಾರದೆ ಹಾರ್ಮೋನ್‌ ಚಿಕಿತ್ಸೆಗಳನ್ನು ತೆಗೆದುಕೊಂಡವರೂ ಇರಬಹುದು. ಕೆಲವರು ನೈಸರ್ಗಿಕ ಕ್ರಮಗಳ ಮೂಲಕ ಆರೋಗ್ಯ ಸುಧಾರಿಸಿಕೊಂಡವರೂ ಇದ್ದಿರಬಹುದು. ಅಂಥ ಕ್ರಮಗಳಲ್ಲಿ ಯೋಗ ಅ‍ಭ್ಯಾಸವೂ ಒಂದು. ಯೋಗಾಭ್ಯಾಸವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೆಲೆಗಳಲ್ಲಿ ಮಾಡುವಂಥ ಪ್ರಯೋಜನಗಳೇನು ಎಂಬುದನ್ನು ನೋಡೋಣ.

Menopause 5

ದೈಹಿಕ ಲಾಭಗಳೇನು?

ಮೈ ಬಿಸಿಯಾಗುವುದು ಮತ್ತು ಅತಿಯಾಗಿ ಬೆವರುವುದು ಈ ದಿನಗಳ ಅತ್ಯಂತ ಸಾಮಾನ್ಯ ಲಕ್ಷಣ. ಹೀಗೆ ಇದ್ದಕ್ಕಿದ್ದಂತೆ ಮೈ ಬಿಸಿಯೇರುವುದು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಉತ್ತಾನಪಾದಾಸನ, ಬಾಲಾಸನ, ವಿಪರೀತ ಕರಣಿಯಂಥ ಆಸನಗಳು ಮನಸ್ಸನ್ನು ವಿಶ್ರಾಂತಿಯೆಡೆಗೆ ದೂಡುತ್ತವೆ. ಇದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗಿ, ಇಂಥ ಲಕ್ಷಣಗಳನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ.

Menopause Diet image

ನೋವುಗಳು

ರಜೋನಿವೃತ್ತಿಯಲ್ಲಿ ಈಸ್ಟ್ರೋಜೆನ್‌ ಹಾರ್ಮೋನಿನ ಮಟ್ಟ ಗಣನೀಯವಾಗಿ ಕುಸಿಯುವುದರಿಂದ, ಕೀಲುಗಳು, ಸ್ನಾಯುಗಳಲ್ಲಿ ನೋವಿನ ಪ್ರಮಾಣ ಹೆಚ್ಚಬಹುದು. ಈ ಹಂತದಿಂದ ಮುಂದಿನ ಬದುಕಿನಲ್ಲಿ ದೇಹದ ಕೀಲುಗಳ ನಮ್ಯತೆಯನ್ನು ಹೆಚ್ಚಿಸುವ ಮತ್ತು ಸ್ನಾಯುಗಳ ಶಕ್ತಿಯನ್ನು ವೃದ್ಧಿಸುವ ವ್ಯಾಯಾಮಗಳು ಬೇಕೇಬೇಕು. ಮಾರ್ಜರಿಯಾಸನ, ಬಿಟಿಲಾಸನ, ವೀರಭದ್ರಾಸನ, ಸೇತುಬಂಧಾಸನ, ಧನುರಾಸನದಂಥ ಭಂಗಿಗಳು ಕೀಲು ಮತ್ತು ಸ್ನಾಯುಗಳ ದೇಖರೇಕಿ ಮಾಡುವಲ್ಲಿ ನೆರವಾಗುತ್ತವೆ.

Promotes Bone Health Fish Benefits

ಮೂಳೆಗಳ ಆರೋಗ್ಯ

ಒಮ್ಮೆ ಈಸ್ಟ್ರೋಜೆನ್‌ ಪ್ರಮಾಣ ಕಡಿಮೆಯಾದರೆ, ಆಸ್ಟಿಯೊಪೊರೋಸಿಸ್‌ ನಂಥ ಮೂಳೆ ಟೊಳ್ಳಾಗುವ ತೊಂದರೆಗಳು ಅಮರಿಕೊಳ್ಳುತ್ತವೆ. ಇದಕ್ಕಾಗಿ ಕೆಲವು ವಿಶೇಷ ಆಸನಗಳು ಅಗತ್ಯವಾಗಿದ್ದು, ಈ ಮೂಲಕ ಸ್ನಾಯುಗಳನ್ನು ಬಲಗೊಳಿಸಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ವೃಕ್ಷಾಸನ, ತ್ರಿಕೋಣಾಸನದಂಥ ಭಂಗಿಗಳು ಅಗತ್ಯವಾಗುತ್ತವೆ.

ಮಾನಸಿಕ ಆರೋಗ್ಯಕ್ಕಾಗುವ ಲಾಭ

ಆತಂಕ, ಒತ್ತಡ, ಖಿನ್ನತೆ, ಮೂಡ್‌ ಬದಲಾವಣೆಯಂಥ ಮಾನಸಿಕ ಸಮಸ್ಯೆಗಳು ಈ ದಿನಗಳಲ್ಲಿ ಎಷ್ಟೋ ಮಹಿಳೆಯರನ್ನು ಕಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಮಾನಸಿಕ ಸ್ಥಿರತೆಯ ಕ್ರಮಗಳು ಮತ್ತು ಉಸಿರಾಟದ ತಂತ್ರಗಳು ಈ ನಿಟ್ಟಿನಲ್ಲಿ ಬಹುದೊಡ್ಡ ನೆರವು ನೀಡುತ್ತವೆ. ನಾಡಿಶೋಧನ, ಭ್ರಾಮರಿಯಂಥ ಉಸಿರಾಟದ ತಂತ್ರಗಳು ಮನಸ್ಸನ್ನು ಕೇಂದ್ರೀಕರಿಸಲು ಉಪಯುಕ್ತ. ನಿಯಮಿತವಾದ ಧ್ಯಾನದಿಂದ ಆಗುವ ಲಾಭಗಳಂತೂ ಹೇಳಿ ಮುಗಿಸಲಾಗದು.

Vastu Tips

ನಿದ್ದೆ

ಋತುಬಂಧದ ದಿನಗಳಲ್ಲಿ ಮತ್ತು ನಂತರ ಬಹಳಷ್ಟು ಮಹಿಳೆಯರು ನೆಮ್ಮದಿಯ ನಿದ್ದೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಆಳ ವಿಶ್ರಾಂತಿಗೆ ದೂಡುವಂಥ ಡಿಆರ್‌ಟಿ ಅಥವಾ ಯೋಗನಿದ್ದೆಯಂಥ ಅಭ್ಯಾಸಗಳು ನಿದ್ದೆಯ ತೊಂದರೆಯನ್ನು ಬಹುತೇಕ ದೂರ ಮಾಡುತ್ತವೆ. ಜೊತೆಗೆ ಮಕರಾಸನ, ಸುಪ್ತಬದ್ಧಕೋಣಾಸನ, ಶವಾಸನದಂಥವು ಹೆಚ್ಚುವರಿ ವಿಶ್ರಾಂತಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಸ್ಪಷ್ಟತೆ, ಏಕಾಗ್ರತೆ

ರಜೋನಿವೃತ್ತಿಯಲ್ಲಿ ಕಾಣುವ ಇನ್ನೊಂದು ತೊಂದರೆಯೆಂದರೆ ನೆನಪು ಮತ್ತು ಏಕಾಗ್ರತೆಯ ಕೊರತೆ. ಕೆಲವೊಮ್ಮೆ ನಿರ್ಧಾರಗಳಲ್ಲಿ ಗೊಂದಲೂ ಮೂಡುತ್ತದೆ. ಇದಕ್ಕಾಗಿ ದೇಹ-ಮನಸ್ಸುಗಳ ಹೆಚ್ಚುವರಿ ಹೊಂದಾಣಿಕೆಯನ್ನು ಬೇಡುವ ಗರುಡಾಸನ, ಅರ್ಧ ಚಂದ್ರಾಸನ ಮುಂತಾದ ಭಂಗಿಗಳು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮ ಅತ್ಯಗತ್ಯ.

Continue Reading

ಫ್ಯಾಷನ್

Sequins Lehenga Trend: ಅಂಬಾನಿ ಮಗನ ಮದುವೆ ಎಫೆಕ್ಟ್‌; ಸಿಕ್ವಿನ್ಸ್ ಲೆಹೆಂಗಾಗಳಿಗೆ ಡಿಮ್ಯಾಂಡ್‌!

Sequins lehenga trend: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಸಮಾರಂಭಗಳಲ್ಲಿ ಸೆಲೆಬ್ರೆಟಿಗಳು ಮಿರಮಿರ ಮಿನುಗುವ ಸಿಕ್ವಿನ್ಸ್ ಲೆಹೆಂಗಾಗಳಲ್ಲಿ ಕಾಣಿಸಿಕೊಂಡಿದ್ದೇ ತಡ, ಫ್ಯಾಷನ್‌ ಲೋಕದಲ್ಲಿ ಸಿಕ್ವಿನ್ಸ್ ಲೆಹೆಂಗಾಗಳಿಗೆ ಬೇಡಿಕೆ ಹೆಚ್ಚಿದೆ. ಅಚ್ಚರಿಯ ವಿಚಾರ ಎಂದರೆ ಲೋಕಲ್‌ ಬ್ರಾಂಡ್‌ಗಳು ಇವುಗಳ ರಿಪ್ಲಿಕಾ ಲೆಹೆಂಗಾಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Sequins Lehenga Trend
ಚಿತ್ರಗಳು: ಸಾರಾ ಅಲಿ ಖಾನ್‌, ಶನಾಯಾ ಕಪೂರ್‌, ಅನನ್ಯಾ ಪಾಂಡೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಲುಕ್‌ ನೀಡುವ (Sequins lehenga trend) ಸಿಕ್ವಿನ್ಸ್ ಲೆಹೆಂಗಾಗಳು ಇದೀಗ ಭಾರಿ ಸದ್ದು ಮಾಡಿವೆ. ಹೌದು, ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌-ಅನಂತ್‌ ಅಂಬಾನಿಯ ಪ್ರಿ-ವೆಡ್ಡಿಂಗ್‌ ಸಂಗೀತ್‌ ಸಮಾರಂಭಗಳಲ್ಲಿ ಸೆಲೆಬ್ರೆಟಿಗಳು ಮಿರಮಿರ ಮಿನುಗುವ ಸಿಕ್ವಿನ್ಸ್ ಲೆಹೆಂಗಾಗಳಲ್ಲಿ ಕಾಣಿಸಿಕೊಂಡು ಎಲ್ಲೆಡೆ ಸುದ್ದಿಯಾಗಿದ್ದೇ ತಡ, ಫ್ಯಾಷನ್‌ ಲೋಕದಲ್ಲಿ ಕಣ್ಣು ಕುಕ್ಕುವ ಮಿರ ಮಿರ ಮಿನುಗುವ ಸಿಕ್ವಿನ್ಸ್ ಲೆಹೆಂಗಾಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಎಲ್ಲದಕ್ಕಿಂತ ಅಚ್ಚರಿಯ ವಿಚಾರ ಎಂದರೇ, ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ಪೈಪೋಟಿ ಎಂಬಂತೆ, ಲೋಕಲ್‌ ಬ್ರಾಂಡ್‌ಗಳು ಮಧ್ಯಮ ವರ್ಗದ ಮಹಿಳೆಯರಿಗೂ ಕೈಗೆಟಕುವ ದರದಲ್ಲಿ ಸೆಲೆಬ್ರೆಟಿಗಳ ರಿಪ್ಲಿಕಾ ಲೆಹೆಂಗಾಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾರಂಭಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.

ಲೋಕಲ್‌ ಬ್ರಾಂಡ್‌ನಲ್ಲೂ ಬಂತು ಸಿಕ್ವಿನ್ಸ್ ಲೆಹೆಂಗಾಗಳು

“ಅಂಬಾನಿ ಫ್ಯಾಮಿಲಿಯಲ್ಲಿ ಪ್ರಿ-ವೆಡ್ಡಿಂಗ್‌ ಸಮಾರಂಭವು ಸೆಲೆಬ್ರೆಟಿಗಳಿಗೆ ತಂತಮ್ಮ ಡಿಸೈನರ್‌ವೇರ್‌ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಟ್ಟಿತ್ತು ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ತಾರೆಯರು ಕೂಡ ಸ್ಪರ್ಧೆಗೆ ಇಳಿದವರಂತೆ, ಲಕ್ಷಗಟ್ಟಲೇ ಬೆಲೆ ಬಾಳುವ ದೊಡ್ಡ ದೊಡ್ಡ ಬ್ರಾಂಡ್‌ನ ಡಿಸೈನರ್‌ವೇರ್‌ಗಳನ್ನು ಧರಿಸಿ, ಕಣ್ಮನ ಸೆಳೆದರು. ಇಷ್ಟಾದರೇ ಪರವಾಗಿಲ್ಲ! ರಾತ್ರಿಯಿಂದ ಬೆಳಗಾಗುವುದರೊಳಗೆ, ಚಿಕ್ಕ ಪುಟ್ಟ ಲೋಕಲ್‌ ಡಿಸೈನರ್‌ಗಳು ಹಾಗೂ ಲೋಕಲ್‌ ಬ್ರಾಂಡ್‌ಗಳು ಥೇಟ್‌ ಸೆಲೆಬ್ರೆಟಿಗಳು ಧರಿಸಿದಂತಹ ಅತ್ಯಾಕರ್ಷಕ ಸಿಕ್ವಿನ್‌ ಲೆಹೆಂಗಾಗಳನ್ನು ತಮ್ಮದೇ ಆದ ಡಿಸೈನ್‌ನಲ್ಲಿ ಸೃಷ್ಟಿಸಿ ಬಿಡುಗಡೆಗೊಳಿಸಿ, ಪ್ರಿ-ಆರ್ಡರ್‌ ತೆಗೆದುಕೊಳ್ಳಲಾರಂಭಿಸಿದ್ದಾರೆ. ಇದು ಸದ್ಯದ ಲೆಹೆಂಗಾ ಕ್ರೇಝ್‌ಗೆ ನಾಂದಿ ಹಾಡಿದೆ ” ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಏನಿದು ಸಿಕ್ವಿನ್ಸ್ ಲೆಹೆಂಗಾ

ಮಿರ ಮಿರ ಮಿನುಗುವಂತಹ ಚಿಕ್ಕ ಚಿಕ್ಕ ಶೈನಿಂಗ್‌ ಮೆಟಿರಿಯಲ್‌ನಲ್ಲಿ ಸಿದ್ಧಗೊಂಡ ಫ್ಯಾಬ್ರಿಕ್‌ನಿಂದ ತಯಾರಾದ ಡಿಸೈನರ್‌ ಲೆಹೆಂಗಾಗಳಿವು.

ಸಿಕ್ವಿನ್ಸ್ ಲೆಹೆಂಗಾಗೆ ಡಿಮ್ಯಾಂಡ್‌

ಸಾರಾ ಅಲಿ ಖಾನ್‌, ಅನನ್ಯಾ ಪಾಂಡೇ , ಶನಾಯಾ ಕಪೂರ್‌, ದಿಶಾ ಪಟಾನಿ ಹಾಗೂ ಖುಷಿ ಕಪೂರ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಸಿಕ್ವಿನ್ಸ್ ಲೆಹೆಂಗಾಗಳಲ್ಲಿ ಕಾಣಿಸಿಕೊಂಡ ನಂತರ ಫ್ಯಾಷೆನಬಲ್‌ ಯುವತಿಯರು ಇಂಥದ್ದೇ ರಿಪ್ಲಿಕಾ ಲೆಹೆಂಗಾಗಳಿಗಾಗಿ ಆನ್‌ಲೈನ್‌ನಲ್ಲೂ ಹುಡುಕಾಟ ನಡೆಸಿರುವುದು ಹೆಚ್ಚಾಗಿದೆಯಂತೆ. ಇದಕ್ಕೆ ತಕ್ಕಂತೆ ಡಿಸೈನರ್‌ಗಳು ಕೂಡ ಆರ್ಡರ್‌ ಮೇರೆಗೆ ಸಿಕ್ವಿನ್ಸ್ ಡಿಸೈನರ್‌ವೇರ್‌ಗಳನ್ನು ಪೂರೈಸಲು ಮುಂದಾಗುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: http://Ambani Family’s Jewels: ನೀತಾ ಅಂಬಾನಿಯ ನೆಕ್‌ಲೆಸ್‌ ಬೆಲೆ 500 ಕೋಟಿ ರೂ! ಅಂಬಾನಿ ಮಹಿಳೆಯರ ಬಳಿ ಎಂಥೆಂಥ ಆಭರಣಗಳಿವೆ ನೋಡಿ!

  • ಸೆಲೆಬ್ರೆಟಿ ಲುಕ್‌ಗೆ ಸಿಕ್ವಿನ್ಸ್ ಲೆಹೆಂಗಾಗಳು ಬೆಸ್ಟ್.
  • ಎಂತಹವರನ್ನು ಈ ಲೆಹೆಂಗಾಗಳು ಹೈಲೈಟ್‌ಗೊಳಿಸುತ್ತವೆ.
  • ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Ambani Family’s Jewels: ನೀತಾ ಅಂಬಾನಿಯ ನೆಕ್‌ಲೆಸ್‌ ಬೆಲೆ 500 ಕೋಟಿ ರೂ! ಅಂಬಾನಿ ಮಹಿಳೆಯರ ಬಳಿ ಎಂಥೆಂಥ ಆಭರಣಗಳಿವೆ ನೋಡಿ!

Ambani family’s jewels: ರಾಧಿಕಾ ಮರ್ಚೆಂಟ್‌-ಅನಂತ್‌ ಅಂಬಾನಿ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಇತ್ತ ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿದ ಡಿಸೈನರ್‌ವೇರ್‌ಗಳು ಕೆಲವರ ಕಣ್ಮನ ಸೆಳೆಯುತ್ತಿದ್ದರೇ, ಅತ್ತ ಅವರೆಲ್ಲರ ಜಗಮಗಿಸುವ ವಜ್ರ-ವೈಢೂರ್ಯ ಖಚಿತ ರೂಬಿ, ಎಮರಾಲ್ಡ್ ಆಭರಣಗಳು ಜ್ಯುವೆಲ್‌ ಪ್ರೇಮಿಗಳ ಕಣ್ಣುಕುಕ್ಕಿದವು. ಅವು ಯಾವುವು ಎಂಬುದರ ಬಗ್ಗೆ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani Family's Jewels
ಚಿತ್ರಗಳು: ಅಂಬಾನಿ ಫ್ಯಾಮಿಲಿ ಪ್ರಿ-ವೆಡ್ಡಿಂಗ್‌ ಸಮಾರಂಭದಲ್ಲಿನ ಚಿತ್ರಗಳು.
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್‌-ಅನಂತ್‌ (Ambani family’s jewels) ಅಂಬಾನಿ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಇತ್ತ ಅಂಬಾನಿ ಫ್ಯಾಮಿಲಿಯ ಲೇಡೀಸ್‌ ಧರಿಸಿದ ಡಿಸೈನರ್‌ವೇರ್‌ಗಳು ಕೆಲವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾದರೇ, ಅತ್ತ ಅವರೆಲ್ಲರ ಜಗಮಗಿಸುವ ವಜ್ರ-ವೈಢೂರ್ಯ ಖಚಿತ ಎಮಾರಾಲ್ಡ್, ರೂಬಿ ಆಭರಣಗಳು ಜ್ಯುವೆಲ್‌ ಪ್ರೇಮಿಗಳ ಕಣ್ಣುಕುಕ್ಕಿದವು.

ನೀತಾ ಅಂಬಾನಿಯ ಎಮರಾಲ್ಡ್ ಆಭರಣ ಪ್ರೇಮ

ನೀತಾ ಅಂಬಾನಿಯವರಿಗೆ ಮೊದಲಿನಿಂದಲೂ ಎಮರಾಲ್ಡ್ ಆಭರಣಗಳೆಂದರೇ ಸಖತ್‌ ಇಷ್ಟವಂತೆ. ದೊಡ್ಡ ಎಮರಾಲ್ಡ್ ಪೆಂಡೆಂಟ್‌ ಹೊಂದಿದ ಜಿರ್ಕೋನ್‌ ಹಾರ, ಲೇಯರ್‌ ಎಮಾರಾಲ್ಡ್ ನೆಕ್ಲೇಸ್‌, ಫ್ಲೋರಲ್‌ ಎಮರಾಲ್ಡ್ ಇಯರಿಂಗ್, ಮಾಂಗ್‌ಟೀಕಾ, ಬಾಜುಬಂಧಿ, ಫಿಂಗರ್‌ರಿಂಗ್ಸ್, ಕಡ ಸೇರಿದಂತೆ ಲೆಕ್ಕವಿಲ್ಲದಷ್ಟು ಸೆಟ್‌ಗಳು ಅವರ ಬಳಿಯಿವೆಯೆನ್ನಲಾಗಿದೆ. ಅವುಗಳಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ, ಎಮರಾಲ್ಡ್ ಹಾರವೊಂದೇ ಸರಿ ಸುಮಾರು 500 ಕೋಟಿ. ರೂ. ಬೆಲೆ ಎಂದಾದಲ್ಲಿ, ಅವರ ಇನ್ನುಳಿದ ಆಭರಣಗಳ ಬೆಲೆ ಎಷ್ಟಿರಬೇಡ! ಎಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್. ಇವನ್ನು ಹೊರತುಪಡಿಸಿದಲ್ಲಿ ನೀತಾ ಅವರ ಬಳಿ ಮೀನಾಂಕಾರಿ ಕುಂದನ್‌, ಹಾಗೂ ಡೈಮಂಡ್‌ ಜ್ಯುವೆಲರಿಗಳ ಕಲೆಕ್ಷನ್‌ ಇವೆಯಂತೆ.

ರಾಧಿಕಾ ಡೈಮಂಡ್‌ ಫ್ಯಾಷನ್‌ ಜ್ಯುವೆಲರಿ ಪ್ರೇಮ

ಇನ್ನು, ಈ ಜನರೇಷನ್‌ಗೆ ಸೇರುವ ರಾಧಿಕಾ ಮರ್ಚೆಂಟ್‌ ಆಭರಣ ಪ್ರೇಮ ಇವರೆಲ್ಲರಿಗಿಂತ ಕೊಂಚ ಭಿನ್ನವಾಗಿದೆ. ಈ ಜನರೇಷನ್‌ನವರಿಗೆ ಪ್ರಿಯವಾಗುವಂತಹ ತೀರಾ ಹೆವ್ವಿಯಾಗಿರದ ಡೈಮಂಡ್‌ ಫ್ಯಾಷನ್‌ ಜ್ಯುವೆಲರಿ ಹಾಗೂ ಜಿರ್ಕೋನ್‌ ಆಭರಣಗಳು ಇವರ ಅಭಿರುಚಿಗೆ ಸೇರಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಟ್ರೆಡಿಷನಲ್‌ ಡಿಸೈನ್‌ಗಿಂತ ಕಂಟೆಂಪರರಿ ಡಿಸೈನ್ಸ್ ಹೊಂದಿರುವ ಫ್ಯಾಷನ್‌ ಆಭರಣಗಳು ಇವರ ಜ್ಯುವೆಲ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

ಇಶಾ ಅಂಬಾನಿಯ ಡೈಮಂಡ್‌ ಲವ್‌

ಅಮ್ಮನಿಗಿಂತ ನಾನೇನು ಕಡಿಮೆಯೇನಿಲ್ಲ ಎನ್ನುವಂತೆ ಇಶಾ ಅಂಬಾನಿ ಕೂಡ ಆಫ್ಟರ್‌ ಪಾರ್ಟಿಗೆ ಕಂಪ್ಲೀಟ್‌ ಎಮರಾಲ್ಡ್ ಹಾಗೂ ಜಿರ್ಕೋನ್‌ ಸ್ಟೋನ್‌ಗಳಿಂದ ಸಿಂಗಾರಗೊಂಡ ಕಾಕ್‌ಟೈಲ್‌ ಲೆಹೆಂಗಾವನ್ನೇ ಧರಿಸಿದ್ದರು. ಅಷ್ಟೇಕೆ! ಶಾಪೆರಲಿ ಕೌಚರ್‌ ಡಿಸೈನರ್‌ ಸೀರೆಗೆ ಮಾಂಗ್‌ ಟೀಕಾ ಬದಲು ಡೈಮಂಡ್‌ ಬಿಂದಿ ಧರಿಸಿ, ಟ್ರೆಂಡ್‌ ಸೆಟ್‌ ಮಾಡಿದ್ದರು.

ಇದನ್ನೂ ಓದಿ: Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್‌!

ಶ್ಲೋಕ ಸ್ಟೇಟ್‌ಮೆಂಟ್‌ ಜ್ಯುವೆಲ್ಸ್

ಶ್ಲೋಕ ಅಂಬಾನಿಯವರದ್ದು ಕೊಂಚ ವಿಭಿನ್ನ ಅಭಿರುಚಿ. ಟ್ರೆಡಿಷನಲ್‌ ಡಿಸೈನ್ಸ್ ಜೊತೆಗೆ ಕಂಟೆಂಪರರಿ ಡಿಸೈನ್‌ನವನ್ನು ಹೆಚ್ಚು ಮಿಕ್ಸ್ ಮಾಡುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಬಾರಿ ಡೈಮಂಡ್‌ ಜೊತೆ ರೂಬಿ ಆಭರಣಗಳನ್ನು ಧರಿಸಿದ್ದರು. ಇದರೊಂದಿಗೆ ಅನ್‌ಕಟ್‌ ಡೈಮಂಡ್‌ ನೆಕ್ಲೇಸ್‌ ಹಾಗೂ ಸ್ಟೇಟ್‌ಮೆಂಟ್‌ ಹಾರಗಳು ಇವರ ಕಲೆಕ್ಷನ್‌ನಲ್ಲಿವೆಯಂತೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
IND vs SL
ಕ್ರೀಡೆ5 mins ago

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್​-ಕೊಹ್ಲಿಗೆ ವಿಶ್ರಾಂತಿ

Ramniwas Rawat
ದೇಶ1 hour ago

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Paris Olympics 2024
ಕ್ರೀಡೆ1 hour ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ1 hour ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ2 hours ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ2 hours ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ2 hours ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ2 hours ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Maharashtra Rain
Latest2 hours ago

Maharashtra Rain: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

Money Guide
ಮನಿ-ಗೈಡ್3 hours ago

Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ6 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ8 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ10 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು12 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌