Site icon Vistara News

Twirling In Lehenga Trend: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಟ್ವಿರ್ಲಿಂಗ್‌ ಇನ್‌ ಲೆಹೆಂಗಾ ಕಾನ್ಸೆಪ್ಟ್

Twirling In Lehenga Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಖುಷಿಯಾಗಿ ತಿರುಗಿದರೆ ಟ್ವಿರ್ಲ್ (Twirling In Lehenga Trend) ಆಗುವ ನಾನಾ ಬಗೆಯ ಲೆಹೆಂಗಾಗಳು ಮಾನಿನಿಯರ ಮನಗೆದ್ದಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಲೆಹೆಂಗಾಗಳು ಹುಡುಗಿಯರು ಟ್ವಿರ್ಲ್ ಮಾಡುವ ಫೋಟೋಶೂಟ್‌ಗಳಲ್ಲಿ ಸ್ಥಾನ ಪಡೆದಿವೆ.

ಏನಿದು ಟ್ವಿರ್ಲಿಂಗ್‌ ಇನ್‌ ಲೆಹೆಂಗಾ

ಇದು ಲೆಹೆಂಗಾದ ಹೆಸರಲ್ಲ! ಬದಲಿಗೆ ಲೆಹೆಂಗಾ ಧರಿಸಿ, ಸುತ್ತು ಸುತ್ತಿದಾಗ ಅಂದರೆ ಟ್ವಿರ್ಲ್ ಮಾಡಿದಾಗ ಈ ಔಟ್‌ಫಿಟ್‌ ಮೋಹಕವಾಗಿ ಸರ್ಕಲ್‌ನ ಶೇಪ್‌ ಪಡೆಯುತ್ತದೆ. ಫೋಟೋಗಳಲ್ಲಿ, ವಿಡಿಯೋ ಕ್ಲಿಪ್‌ಗಳಲ್ಲಿ ಈ ದೃಶ್ಯ ಚೆನ್ನಾಗಿ ಕಾಣುತ್ತದೆ. ಹಾಗಾಗಿ ಈ ಸ್ಟೈಲನ್ನು ಹುಡುಗಿಯರು ಆಡು ಭಾಷೆಯಲ್ಲಿ ಟ್ವಿರ್ಲಿಂಗ್‌ ಲೆಹೆಂಗಾ ಎಂದು ಕರೆಯತೊಡಗಿದ್ದಾರೆ.

ಟ್ವಿರ್ಲ್ ಲೆಹೆಂಗಾ ಆಯ್ಕೆ ಹೀಗಿರಲಿ

ಹಿಂದೆಲ್ಲಾ ಲೆಹೆಂಗಾ ಎಂದಾಕ್ಷಣಾ ಹೆವಿ ತೂಕದ್ದಾಗಿರುತ್ತಿದ್ದವು. ಇದೀಗ ಲೈಟ್‌ವೈಟ್‌ನವು ಬಂದಿವೆ. ನೋಡಲು ಮನಮೋಹಕ ವಿನ್ಯಾಸ ಹೊಂದಿರುವ ಇವನ್ನು ನೀವು ಟ್ವಿರ್ಲ್ ಮಾಡಬಹುದು. ಇನ್ನು ಲೆಹೆಂಗಾದಲ್ಲಿ ಟ್ವಿರ್ಲ್ ಫೋಟೋಶೂಟ್‌ ಮಾಡಿಸುವ ಇಚ್ಛೆಯಿದ್ದಲ್ಲಿ , ತಿರುಗಿದಾಗ ಆದಷ್ಟೂ ಸರ್ಕ್ಯುಲರ್‌ ಆಗುವಂತಹ ಲೆಹೆಂಗಾ ಆಯ್ಕೆ ಮಾಡಿ. ಹೆಚ್ಚು ಫ್ಲೇರ್‌ ಸ್ಟಿಚ್‌ ಇರುವಂತಹ ಅನಾರ್ಕಲಿ ಹಾಗೂ ಅಂಬ್ರೆಲ್ಲಾ ಲೆಹೆಂಗಾಗಳನ್ನು ಧರಿಸಿ. ಮೆರ್‌ಮೈಟ್‌ ಟೈಟ್‌ಫಿಟ್‌ ಇರುವಂತವಲ್ಲಿ ಸುತ್ತಲೂ ಆಗುವುದಿಲ್ಲ ಎಂಬುದು ನೆನಪಿರಲಿ.

ಹೇಗೆಲ್ಲಾ ಟ್ವಿರ್ಲ್ ಮಾಡಬಹುದು

ನೀವು ಲೆಹೆಂಗಾ ಪ್ರಿಯರಾಗಿದ್ದು, ಟ್ವಿರ್ಲ್ ಮಾಡಲು ಬಯಸಿದಲ್ಲಿ ಈ ಶೈಲಿಯಲ್ಲಿ ಟ್ರೈ ಮಾಡಿ ನೋಡಿ. ಫೋಟೋಶೂಟ್‌ಗಳಲ್ಲಿ ಮನಮೋಹಕವಾಗಿ ಕಾಣಿಸುವುದು. ಸಿಂಡ್ರೆಲ್ಲಾ ಸ್ಟೈಲ್‌, ಕ್ಯಾಂಡಿಡ್‌ ಟ್ವಿರ್ಲ್, ಮದುಮಗನೊಂದಿಗೆ ಪಾರ್ಟಿ ಟ್ವಿರ್ಲ್, ಎರಡೂ ಕೈಗಳನ್ನು ಅಗಲಿಸಿ ಸುತ್ತುವ ಮಹಾರಾಣಿ ಟ್ವಿರ್ಲ್, ಬ್ರೈಡಲ್‌ ಟ್ವಿರ್ಲ್ ಹೀಗೆ ನಾನಾ ಬಗೆಯಲ್ಲಿ ಟ್ರೈ ಮಾಡಿ ನೋಡಬಹುದು. ಅಂತರ್ಜಾಲದಲ್ಲಿ ಹುಡುಕಾಡಿದಲ್ಲಿ ಮತ್ತಷ್ಟು ಲೆಹೆಂಗಾ ಟ್ವಿರ್ಲ್ ಮಾಡುವ ಸಾಕಷ್ಟು ಫೋಟೋಶೂಟ್‌ಗಳನ್ನು ಕಾಣಬಹುದು.

ಟ್ವಿರ್ಲ್ ರೂಲ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Lulu Fashion Week : ಲುಲು ಫ್ಯಾಷನ್‌ ವೀಕ್‌ನಲ್ಲಿ ನಯಾ ಫ್ಯಾಷನ್‌ವೇರ್‌ಗಳ ಅನಾವರಣ

Exit mobile version