ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬಕ್ಕೆ ಯುವಕರಿಗೆಂದೇ (Ugadi Mens Fashion) ನಾನಾ ಶೇಡ್‌ನ ಆಕರ್ಷಕ ಸ್ಲಿಮ್ ಫಿಟ್ ಕುರ್ತಾಗಳು ಎಂಟ್ರಿ ನೀಡಿವೆ. ಬ್ರೈಟ್ ಹಾಗೂ ಲೈಟ್ ಶೇಡಿನ ಸೆಲ್ಫ್ ಡಿಸೈನ್‌ನ ಬಟನ್ ಡೌನ್, ಕ್ರಾಸ್ ಕುರ್ತಾ, ಸ್ಟ್ರೈಟ್ ಕುರ್ತಾ, ಸ್ಲಿಮ್ ಫಿಟ್ ಕುರ್ತಾಗಳು ಲಗ್ಗೆ ಇಟ್ಟಿವೆ. ಇವುಗಳೊಂದಿಗೆ ಕಾಟನ್ ಫ್ಯಾಬ್ರಿಕ್‌ನದ್ದು ಮಾತ್ರವಲ್ಲದೇ, ಹಬ್ಬಕ್ಕೆ ಕೊಂಚ ಗ್ರ್ಯಾಂಡ್ ಲುಕ್ ನೀಡುವ ಡುಪಿಯನ್ ಸಿಲ್ಕ್, ಡೋರಿ ವರ್ಕ್, ಪಟಾನಿ , ರಾ ಸಿಲ್ಕ್ ಫ್ಯಾಬ್ರಿಕ್‌ನಲ್ಲಿಯೂ ಬಿಡುಗಡೆಗೊಂಡಿವೆ. ಹಬ್ಬದ ಆಚರಣೆಯ ನಂತರವೂ ಧರಿಸುವಂತಹ ಲೆನಿನ್ ಸಾಫ್ಟ್ ಫ್ಯಾಬ್ರಿಕ್‌ನಲ್ಲೂ ಕಾಣಿಸಿಕೊಂಡಿವೆ.
ಹಬ್ಬಕ್ಕಿರಲಿ ಬ್ರೈಟ್ ಕುರ್ತಾ
ಹಬ್ಬಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಯಲ್ ಕಾಲರ್, ಚೈನಾ ಥ್ರೆಡ್ ಡಿಸೈನ್ ಕಾಲರ್, ಶೆಫ್ ಕೋಟ್ ಕುರ್ತಾ, ಡಿಸೈನರ್ ಬಟನ್ ಎಂಬ್ರಾಯ್ಡರಿ ಕುರ್ತಾ, ಸಿಲ್ಕ್ ಡಿಸೈನ್ ಕುರ್ತಾಗಳು ಟ್ರೆಂಡಿಯಾಗಿವೆ. ಇವು ನೋಡಲು ಗ್ರ್ಯಾಂಡ್ ಲುಕ್ ನೀಡುವುದರೊಂದಿಗೆ ಇತರೇ ಸಮಯದಲ್ಲೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಕಿರಣ್. ಅವರ ಪ್ರಕಾರ, ಸಿಂಪಲ್ ಬೇಕಿದ್ದಲ್ಲಿ, ಕಂಪ್ಲೀಟ್ ಕಾಟನ್ ಹಾಗೂ ಲೆನಿನ್ ಫ್ಯಾಬ್ರಿಕ್‌ನಲ್ಲಿ ಕೊಂಚ ಡಿಸೈನ್ ಇರುವಂತವನ್ನು ಖರೀದಿಸಬಹುದು.
ಶೆರ್ವಾನಿಗಿಂತ ಕುರ್ತಾ ಲೈಟ್‌ವೈಟ್
ಹೌದು. ಈ ಬೇಸಿಗೆಯ ಹಬ್ಬಗಳಲ್ಲಿ ಗ್ರ್ಯಾಂಡ್ ಲುಕ್‌ಗಾಗಿ ಶೆರ್ವಾನಿ ಧರಿಸುವವರು ಕಡಿಮೆ. ಯಾಕೆಂದರೇ, ದಪ್ಪ ಮೆಟಿರಿಯಲ್‌ನಲ್ಲಿ ಸಿದ್ಧಪಡಿಸಲಾಗುವ ಶೆರ್ವಾನಿಗಳನ್ನು ಇಡೀ ದಿನ ಧರಿಸಲಾಗದು. ಉಸಿರುಗಟ್ಟುವಂತಾಗಬಹುದು. ಅದೇ ಕುರ್ತಾ ಲೈಟ್‌ವೈಟ್ ಮಾತ್ರವಲ್ಲ, ಫುಲ್ ಸ್ಲೀವ್‌ನದ್ದು ಧರಿಸಿದರೂ ಸೆಕೆಯಾಗದು. ಪರಿಸರ ಸ್ನೇಹಿ ಫ್ಯಾಬ್ರಿಕ್ ಹೊಂದಿದ್ದರಂತೂ ಆರಾಮ ಎಂದೆನಿಸುತ್ತದೆ ಎನ್ನುತ್ತಾರೆ ಡಿಸೈನರ್‌ಗಳು.
ಸಾಲಿಡ್ ಕಲರ್ಸ್‌ನ ಸ್ಲಿಮ್ ಫಿಟ್ ಕುರ್ತಾಗಳು
ಮೊದಲೆಲ್ಲಾ ಕುರ್ತಾ ಎಂದಾಕ್ಷಣಾ ಮಂಡಿಯಿಂದ ಕೆಳಗಿನ ತನಕ ಹಾಗೂ ದೊಗಲೆ ಉಡುಪು ಎಂದು ಭಾವಿಸಲಾಗುತ್ತಿತ್ತು. ಈಗ ಹಾಗಿಲ್ಲ! ಇವುಗಳಲ್ಲೂ ಸ್ಲಿಮ್ ಫಿಟ್ ಕುರ್ತಾಗಳು ಬಂದಿವೆ. ಇವು ಯುವಕರ ದೇಹಕ್ಕೆ ಸರಿಯಾಗಿ ಫಿಟ್ ಆಗಿ ಕೂರುವುದರಿಂದ ದೊಗಲೆಯಾಗಿ ಕಾಣುವುದಿಲ್ಲ! ನೋಡಲು ಆಕರ್ಷಕವಾಗಿ ಕಾಣುತ್ತದೆ. ಪೈಜಾಮ ಧರಿಸದೇ ಜೀನ್ಸ್ ಧರಿಸಿದರೂ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್ ದಿವಾಕರ್.
ಹಬ್ಬದ ಆಕರ್ಷಕ ಕುರ್ತಾ ಆಯ್ಕೆ ಹೀಗಿರಲಿ
- ಆದಷ್ಟೂ ಡಿಸೈನ್ ಇರುವಂತಹದ್ದನ್ನು ಆಯ್ಕೆ ಮಾಡಿ.
- ಸಾಲಿಡ್ ಕಲರ್ಗಳ ಕುರ್ತಾಗಳು ಇಂದು ಟ್ರೆಂಡಿಯಾಗಿವೆ.
- ಕುರ್ತಾಗೆ ಜೀನ್ಸ್ ಪ್ಯಾಂಟ್ ಮ್ಯಾಚ್ ಮಾಡಬಹುದು.
- ಎಲ್ಬೋ ಸ್ಲೀವ್ನ ಬಟನ್ ಹಾಕುವಂತಹ ಕುರ್ತಾಗಳು ದೊರೆಯುತ್ತಿವೆ.
- ಧರಿಸಿದಾಗ ಕುರ್ತಾಗೆ ಎಲ್ಲಾ ಬಟನ್ ಹಾಕಬೇಕಾಗಿಲ್ಲ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್ ಮ್ಯಾಚ್ ಆಭರಣಗಳು