Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್‌ ಕುರ್ತಾಗಳು - Vistara News

ಫ್ಯಾಷನ್

Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್‌ ಕುರ್ತಾಗಳು

ಯುವಕರ ಯುಗಾದಿ ಫ್ಯಾಷನ್‌ನಲ್ಲಿ (Ugadi Mens Fashion) ಬ್ರೈಟ್‌ ಹಾಗೂ ಲೈಟ್‌ ಶೇಡ್‌ನ ಆಕರ್ಷಕ ಸ್ಲಿಮ್‌ ಫಿಟ್‌ ಕುರ್ತಾಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಯಾವ ಶೇಡ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Ugadi mens fashion
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ ಹಬ್ಬಕ್ಕೆ ಯುವಕರಿಗೆಂದೇ (Ugadi Mens Fashion) ನಾನಾ ಶೇಡ್‌ನ ಆಕರ್ಷಕ ಸ್ಲಿಮ್‌ ಫಿಟ್‌ ಕುರ್ತಾಗಳು ಎಂಟ್ರಿ ನೀಡಿವೆ. ಬ್ರೈಟ್‌ ಹಾಗೂ ಲೈಟ್‌ ಶೇಡಿನ ಸೆಲ್ಫ್‌ ಡಿಸೈನ್‌ನ ಬಟನ್‌ ಡೌನ್‌, ಕ್ರಾಸ್‌ ಕುರ್ತಾ, ಸ್ಟ್ರೈಟ್‌ ಕುರ್ತಾ, ಸ್ಲಿಮ್‌ ಫಿಟ್‌ ಕುರ್ತಾಗಳು ಲಗ್ಗೆ ಇಟ್ಟಿವೆ. ಇವುಗಳೊಂದಿಗೆ ಕಾಟನ್‌ ಫ್ಯಾಬ್ರಿಕ್‌ನದ್ದು ಮಾತ್ರವಲ್ಲದೇ, ಹಬ್ಬಕ್ಕೆ ಕೊಂಚ ಗ್ರ್ಯಾಂಡ್‌ ಲುಕ್‌ ನೀಡುವ ಡುಪಿಯನ್‌ ಸಿಲ್ಕ್‌, ಡೋರಿ ವರ್ಕ್, ಪಟಾನಿ , ರಾ ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿಯೂ ಬಿಡುಗಡೆಗೊಂಡಿವೆ. ಹಬ್ಬದ ಆಚರಣೆಯ ನಂತರವೂ ಧರಿಸುವಂತಹ ಲೆನಿನ್‌ ಸಾಫ್ಟ್‌ ಫ್ಯಾಬ್ರಿಕ್‌ನಲ್ಲೂ ಕಾಣಿಸಿಕೊಂಡಿವೆ.

Ugadi mens fashion

ಹಬ್ಬಕ್ಕಿರಲಿ ಬ್ರೈಟ್‌ ಕುರ್ತಾ

ಹಬ್ಬಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಯಲ್‌ ಕಾಲರ್‌, ಚೈನಾ ಥ್ರೆಡ್‌ ಡಿಸೈನ್‌ ಕಾಲರ್‌, ಶೆಫ್‌ ಕೋಟ್‌ ಕುರ್ತಾ, ಡಿಸೈನರ್‌ ಬಟನ್‌ ಎಂಬ್ರಾಯ್ಡರಿ ಕುರ್ತಾ, ಸಿಲ್ಕ್ ಡಿಸೈನ್‌ ಕುರ್ತಾಗಳು ಟ್ರೆಂಡಿಯಾಗಿವೆ. ಇವು ನೋಡಲು ಗ್ರ್ಯಾಂಡ್‌ ಲುಕ್‌ ನೀಡುವುದರೊಂದಿಗೆ ಇತರೇ ಸಮಯದಲ್ಲೂ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ಕಿರಣ್‌. ಅವರ ಪ್ರಕಾರ, ಸಿಂಪಲ್‌ ಬೇಕಿದ್ದಲ್ಲಿ, ಕಂಪ್ಲೀಟ್‌ ಕಾಟನ್‌ ಹಾಗೂ ಲೆನಿನ್‌ ಫ್ಯಾಬ್ರಿಕ್‌ನಲ್ಲಿ ಕೊಂಚ ಡಿಸೈನ್‌ ಇರುವಂತವನ್ನು ಖರೀದಿಸಬಹುದು.

Ugadi mens fashion

ಶೆರ್ವಾನಿಗಿಂತ ಕುರ್ತಾ ಲೈಟ್‌ವೈಟ್‌

ಹೌದು. ಈ ಬೇಸಿಗೆಯ ಹಬ್ಬಗಳಲ್ಲಿ ಗ್ರ್ಯಾಂಡ್‌ ಲುಕ್‌ಗಾಗಿ ಶೆರ್ವಾನಿ ಧರಿಸುವವರು ಕಡಿಮೆ. ಯಾಕೆಂದರೇ, ದಪ್ಪ ಮೆಟಿರಿಯಲ್‌ನಲ್ಲಿ ಸಿದ್ಧಪಡಿಸಲಾಗುವ ಶೆರ್ವಾನಿಗಳನ್ನು ಇಡೀ ದಿನ ಧರಿಸಲಾಗದು. ಉಸಿರುಗಟ್ಟುವಂತಾಗಬಹುದು. ಅದೇ ಕುರ್ತಾ ಲೈಟ್‌ವೈಟ್‌ ಮಾತ್ರವಲ್ಲ, ಫುಲ್‌ ಸ್ಲೀವ್‌ನದ್ದು ಧರಿಸಿದರೂ ಸೆಕೆಯಾಗದು. ಪರಿಸರ ಸ್ನೇಹಿ ಫ್ಯಾಬ್ರಿಕ್‌ ಹೊಂದಿದ್ದರಂತೂ ಆರಾಮ ಎಂದೆನಿಸುತ್ತದೆ ಎನ್ನುತ್ತಾರೆ ಡಿಸೈನರ್‌ಗಳು.

Ugadi mens fashion

ಸಾಲಿಡ್‌ ಕಲರ್ಸ್‌ನ ಸ್ಲಿಮ್‌ ಫಿಟ್‌ ಕುರ್ತಾಗಳು

ಮೊದಲೆಲ್ಲಾ ಕುರ್ತಾ ಎಂದಾಕ್ಷಣಾ ಮಂಡಿಯಿಂದ ಕೆಳಗಿನ ತನಕ ಹಾಗೂ ದೊಗಲೆ ಉಡುಪು ಎಂದು ಭಾವಿಸಲಾಗುತ್ತಿತ್ತು. ಈಗ ಹಾಗಿಲ್ಲ! ಇವುಗಳಲ್ಲೂ ಸ್ಲಿಮ್‌ ಫಿಟ್‌ ಕುರ್ತಾಗಳು ಬಂದಿವೆ. ಇವು ಯುವಕರ ದೇಹಕ್ಕೆ ಸರಿಯಾಗಿ ಫಿಟ್‌ ಆಗಿ ಕೂರುವುದರಿಂದ ದೊಗಲೆಯಾಗಿ ಕಾಣುವುದಿಲ್ಲ! ನೋಡಲು ಆಕರ್ಷಕವಾಗಿ ಕಾಣುತ್ತದೆ. ಪೈಜಾಮ ಧರಿಸದೇ ಜೀನ್ಸ್‌ ಧರಿಸಿದರೂ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್ ದಿವಾಕರ್‌.

Ugadi mens fashion

ಹಬ್ಬದ ಆಕರ್ಷಕ ಕುರ್ತಾ ಆಯ್ಕೆ ಹೀಗಿರಲಿ

  • ಆದಷ್ಟೂ ಡಿಸೈನ್‌ ಇರುವಂತಹದ್ದನ್ನು ಆಯ್ಕೆ ಮಾಡಿ.
  • ಸಾಲಿಡ್‌ ಕಲರ್‌ಗಳ ಕುರ್ತಾಗಳು ಇಂದು ಟ್ರೆಂಡಿಯಾಗಿವೆ.
  • ಕುರ್ತಾಗೆ ಜೀನ್ಸ್‌ ಪ್ಯಾಂಟ್‌ ಮ್ಯಾಚ್‌ ಮಾಡಬಹುದು.
  • ಎಲ್ಬೋ ಸ್ಲೀವ್‌ನ ಬಟನ್‌ ಹಾಕುವಂತಹ ಕುರ್ತಾಗಳು ದೊರೆಯುತ್ತಿವೆ.
  • ಧರಿಸಿದಾಗ ಕುರ್ತಾಗೆ ಎಲ್ಲಾ ಬಟನ್‌ ಹಾಕಬೇಕಾಗಿಲ್ಲ!

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್‌ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್‌ ಮ್ಯಾಚ್‌ ಆಭರಣಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Ear Cuff Fashion: ಕಿವಿಯ ಅಲಂಕಾರಕ್ಕೆ ಬಂತು ಬಿಗ್‌ ಇಯರ್‌ ಕಫ್‌!

ಈ ಹಿಂದೆ ಫ್ಯಾಷನ್‌ನಲ್ಲಿದ್ದ ಇಯರ್‌ ಕಫ್‌ ಫ್ಯಾಷನ್‌ (Ear cuff fashion) ಇದೀಗ ಮರಳಿದೆ. ಕಿವಿಯನ್ನು ಕಂಪ್ಲೀಟ್‌ ಅಲಂಕರಿಸುವ ಇವು ಭಾರಿ ಗಾತ್ರದಲ್ಲಿ ಬಂದಿವೆ. ವೈಲ್ಡ್‌ ಲುಕ್‌ಗೆ ಮಾತ್ರವಲ್ಲ, ಎಥ್ನಿಕ್‌ ವೇರ್‌ ಡಿಸೈನ್‌ನಲ್ಲೂ ಆಗಮಿಸಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಯಾವ ಸ್ಟೈಲಿಂಗ್‌ಗೆ ಯಾವುದು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Ear Cuff Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಯರ್‌ ಕಫ್‌ ಜ್ಯುವೆಲರಿ ಫ್ಯಾಷನ್‌ ಮರಳಿದೆ. ಈ ಹಿಂದೆ ಫ್ಯಾಷನ್‌ನಲ್ಲಿದ್ದ ಇಯರ್‌ ಕಫ್‌ ಫ್ಯಾಷನ್‌ (Ear cuff fashion) ಇದೀಗ ಹೊಸ ಡಿಸೈನ್‌ಗಳಲ್ಲಿ ಹಾಗೂ ವಿನೂತನ ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಮರಳಿದೆ. ಯಾವುದೇ ಕಿವಿಯನ್ನು ಕಂಪ್ಲೀಟ್‌ ಅಲಂಕರಿಸುವ ಇವು ಭಾರಿ ಗಾತ್ರದಲ್ಲಿ ಲಗ್ಗೆ ಇಟ್ಟಿವೆ. ಜೆನ್‌ ಜಿ ಹುಡುಗಿಯರ ಅಲ್ಟ್ರಾ ಮಾಡ್ರನ್‌ ಲುಕ್‌ಗೆ ಮಾತ್ರವಲ್ಲ, ವೈಲ್ಡ್‌ ಲುಕ್‌ಗೂ ಸಾಥ್‌ ನೀಡುತ್ತಿವೆ. ಇನ್ನು ಟ್ರೆಡಿಷನಲ್‌ ಲುಕ್‌ ಬಯಸುವವರಿಗೂ ಎಥ್ನಿಕ್‌ ವೇರ್‌ ಡಿಸೈನ್‌ಗಳಲ್ಲಿ ಆಗಮಿಸಿವೆ.

Ear Cuff Fashion

ವೆರೈಟಿ ಡಿಸೈನ್‌ ಇಯರ್‌ ಕಫ್‌ ಜ್ಯುವೆಲರಿ

ಲೆಕ್ಕವಿಲ್ಲದಷ್ಟು ಡಿಸೈನ್‌ನ ಇಯರ್‌ ಕಫ್‌ ಜ್ಯುವೆಲರಿಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ ಕ್ರಿಸ್ಟಲ್, ಅಮೆರಿಕನ್‌ ಡೈಮಂಡ್‌, ಸಿಲ್ವರ್‌, ಪ್ಲಾಟಿನಂ, ಕೋಟೆಡ್‌, ಗೋಲ್ಡ್‌ ಕೋಟೆಡ್‌, ಗೋಲ್ಡ್‌ ಕೋಟೆಡ್‌, ಲಿಂಕ್‌ ಡಿಸೈನ್‌, ಪ್ರೆಸ್‌ ಹಾಗೂ ಕ್ಲಿಪಾನ್‌ ಡಿಸೈನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಂದಕ್ಕಿಂತ ಒಂದು ನೋಡಲು ವಿಭಿನ್ನವಾಗಿದ್ದು, ನಾನಾ ಡಿಸೈನ್‌ಗಳಲ್ಲಿ ಮಹಿಳೆಯರ ಮನ ಸೆಳೆಯುತ್ತಿವೆ. ಇನ್ನು ಫ್ಯಾನ್ಸಿ ಡಿಸೈನ್‌ಗಳು ಅತಿ ಹೆಚ್ಚು ಯುವತಿಯರನ್ನು ಸೆಳೆದಿವೆ.

ಲೈಟ್‌ವೈಟ್‌ ಇಯರ್‌ ಕಫ್‌

ಮೊದಲೆಲ್ಲಾ ಭಾರವಾಗಿರುತ್ತಿದ್ದ, ಈ ಇಯರ್‌ ಕಫ್‌ ಜ್ಯುವೆಲರಿಗಳು ಇದೀಗ ಲೈಟ್‌ವೈಟ್‌ನಲ್ಲಿ ಆಗಮಿಸಿವೆ. ಹಾಗಾಗಿ ಧರಿಸಿದಾಗ ಹೆಚ್ಚು ಭಾರವೆನಿಸುವುದಿಲ್ಲ ಹಾಗೂ ಕಿವಿಯ ರಂಧ್ರ ದೊಡ್ಡದಾಗುವುದಿಲ್ಲ. ಪರಿಣಾಮ, ಇದನ್ನು ಧರಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಘವ್‌.

Ear Cuff Fashion

ಕ್ಲಿಪಾನ್‌ ಇಯರ್‌ ಕಫ್‌

ಪ್ರೆಸ್ಸಿಂಗ್‌ ಹಾಗೂ ಕ್ಲಿಪಾನ್‌ ಶೈಲಿಯವು ಈ ಸೀಸನ್‌ನಲ್ಲಿ ಹೆಚ್ಚು ಆಗಮಿಸಿವೆ. ಪ್ರೆಸ್‌ ಮಾಡಿದರೇ ಸಾಕು ಇಡೀ ಜ್ಯುವೆಲ್‌ ಹಾಗೆಯೇ ಸ್ಟಿಫ್‌ ಆಗಿ ನಿಲ್ಲುತ್ತವೆ. ಇವುಗಳಲ್ಲೂ ಕೂಡ ಊಹೆಗೂ ಮೀರಿದ ಡಿಸೈನ್‌ಗಳು ಪಾಪುಲರ್‌ ಆಗಿವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌.

ಫ್ಯಾಷನ್‌ ಜ್ಯುವೆಲ್‌ನಲ್ಲಿ ಇಯರ್‌ ಕಫ್‌

ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿ ಇವು ಈ ಸೀಸನ್‌ನ ಟಾಪ್‌ 10 ಲಿಸ್ಟ್‌ನಲ್ಲಿವೆ. ಅವುಗಳಲ್ಲಿ ಕೃತಕ ಮೆಟಲ್‌ನವು, ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌ನವು ಕಡಿಮೆ ದರದಲ್ಲಿ ದೊರೆಯುತ್ತಿವೆ. ಆನ್‌ಲೈನ್‌ನಲ್ಲಿ ಇವುಗಳ ಭರಾಟೆ ಹೆಚ್ಚು. ಕಡಿಮೆ ದರದಲ್ಲಿ ಹಾಗೂ ಡಿಸ್ಕೌಂಟ್‌ ದರದಲ್ಲಿ ಕೊಳ್ಳಬಹುದು.

ಇಯರ್‌ ಕಫ್‌ ಸೆಟ್‌

ಇನ್ನು ಕೆಲವು ಇಯರ್‌ ಕಫ್‌ ಜ್ಯುವೆಲ್‌ಗಳು ಸೆಟ್‌ನಲ್ಲೂ ದೊರೆಯುತ್ತವೆ. ಒಂದಕ್ಕೊಂದು ಕೊಂಡಿಯಂತಿರುತ್ತವೆ. ಬೇಕಾದಲ್ಲಿ ಕೇವಲ ಇಯರಿಂಗ್ಸ್‌ ಧರಿಸಬಹುದು. ಇಲ್ಲವೇ ಒಟ್ಟೊಟ್ಟಿಗೆ ಅಟ್ಯಾಚ್‌ ಮಾಡಿ ಧರಿಸಬಹುದು. ಇವುಗಳು ಸೆಟ್‌ನಂತೆಯೂ ದೊರೆಯುತ್ತವೆ.

Ear Cuff Fashion

ಇಯರ್‌ ಕಫ್‌ ಪ್ರಿಯರಿಗೆ 5 ಟಿಪ್ಸ್‌

  • ನಿಮ್ಮ ಕಿವಿಯ ಆಕಾರಕ್ಕೆ ತಕ್ಕಂತೆ ಧರಿಸಿ.
  • ಟ್ರೆಂಡಿ ಡಿಸೈನ್‌ ಆಯ್ಕೆ ಮಾಡಿ.
  • ಕ್ರಿಸ್ಟಲ್‌ ಡಿಸೈನ್‌ನವು ಆಕಷಕವಾಗಿ ಕಾಣಿಸುತ್ತವೆ.
  • ಜೆಮಿಟ್ರಿಕಲ್‌ ಡಿಸೈನ್ಸ್‌ ಇಂಡೋ-ವೆಸ್ಟರ್ನ್‌ ಲುಕ್‌ಗೆ ಬೆಸ್ಟ್.
  • ಟ್ರೆಡಿಷನಲ್‌ ಲುಕ್‌ಗಾಗಿ ಎಥ್ನಿಕ್‌‌ ಡಿಸೈನ್‌ನವನ್ನು ಖರೀದಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್‌ ಫಾಲೋ ಮಾಡಿ!

Continue Reading

ಫ್ಯಾಷನ್

Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್‌ ಫಾಲೋ ಮಾಡಿ!

ತಿಳಿ ನೀಲಿ ಜಾರ್ಜೆಟ್‌ ಸೀರೆಯಲ್ಲಿ ಬೇಸಿಗೆಯ ಸುಡು ಬಿಸಿಲಿನಲ್ಲೂ ಗ್ಲಾಮರಸ್‌ (Star Summer Saree Fashion) ಆಗಿ ಕಾಣಿಸುತ್ತಿರುವ ನಟಿ ಮೇಘಾ ಶ್ರೀಯಂತೆ ನೀವೂ ಕೂಡ ಅಂದವಾಗಿ ಕಾಣಿಸಬಹುದು. ಅದಕ್ಕಾಗಿ ನೀವು ಒಂದೈದು ಟಿಪ್ಸ್‌ ಫಾಲೋ ಮಾಡಿ ಎಂದು ಜಂಟಿಯಾಗಿ ಸಲಹೆ ನೀಡಿದ್ದಾರೆ ಖುದ್ದು ಮೇಘಾಶ್ರೀ ಹಾಗೂ ಸೀರೆ ಪರಿಣತರು.

VISTARANEWS.COM


on

Star Summer Saree Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾಶ್ರೀ ಧರಿಸಿರುವ ಈ ಸಮ್ಮರ್‌ ಸೀರೆ‌, ಇದೀಗ ಸೀರೆ ಪ್ರಿಯ (Star Summer Saree Fashion) ಮಾನಿನಿಯರನ್ನು ಸೆಳೆದಿದೆ. ಲೈಟ್ವೈಟ್‌ ಜೊತೆಗೆ ಸೀಸನ್‌ಗೆ ತಕ್ಕಂತಿರುವ ಈ ಪಾರದರ್ಶಕ ತಿಳಿ ನೀಲಿ ಜಾರ್ಜೆಟ್‌ ಸೀರೆ ಸದ್ಯ ಟ್ರೆಂಡಿಯಾಗಿದೆ. ನಟಿ ಮೇಘಾ ಶ್ರೀ ಸಮ್ಮರ್‌ ಸೀರೆ ಲವ್‌: ಮೊದಲಿನಿಂದಲೂ ಸೀರೆಯೆಂದರೇ ನನಗೆ ತುಸು ಪ್ರೇಮ ಹೆಚ್ಚಾಗಿಯೇ ಇದೆ. ಇನ್ನು, ನಾನು ಧರಿಸಿರುವ ತಿಳಿ ನೀಲಿ ಬಣ್ಣದ ಜಾರ್ಜೆಟ್‌ ಸೀರೆ ಈ ಸೀಸನ್‌ಗೆ ಬೆಸ್ಟ್‌ ಆಯ್ಕೆ ಎನ್ನಬಹುದು. ಈ ಸೀಸನ್‌ನಲ್ಲಿ ನಾವು ಲೆನಿನ್‌, ಕಾಟನ್‌, ಶಿಫಾನ್‌, ಜಾರ್ಜೆಟ್‌ ಸಿಂಪಲ್‌ ಸೀರೆಗಳನ್ನು ಆಯ್ಕೆ ಮಾಡಿಕೊಂಡಾಗ ಆಕರ್ಷಕವಾಗಿ ಕಾಣಲು ಸಾಧ್ಯ. ಮನಸ್ಸಿಗೆ ಉಲ್ಲಾಸ ನೀಡುವ ಶೇಡ್‌ಗಳು ಕೂಡ ನಮ್ಮನ್ನು ಮತ್ತಷ್ಟು ಅಂದವಾಗಿ ಬಿಂಬಿಸಬಲ್ಲವು” ಎನ್ನುತ್ತಾರೆ ನಟಿ ಮೇಘಾ ಶ್ರೀ. ಈ ಕುರಿತಂತೆ ಸೀರೆ ಎಕ್ಸ್‌ಫರ್ಟ್ಸ್‌ ಜೊತೆ ಸೇರಿ ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ. ಸೋ, ನೀವೂ ಕೂಡ ನಟಿ ಮೇಘಾ ಶ್ರೀ ಯಂತೆ ಈ ಸೀಸನ್‌ನಲ್ಲೂ ಗ್ಲಾಮರಸ್‌ ಆಗಿ ಕಾಣಿಸಬೇಕೇ! ಹಾಗಾದಲ್ಲಿ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ ನೋಡಿ.‌

Star Summer Saree Fashion

ಟ್ರೆಂಡಿ ಸೀರೆ ಆಯ್ಕೆ ಮಾಡಿ

ಈ ಸಮ್ಮರ್‌ ಸೀಸನ್‌ನಲ್ಲಿ ಕಾಟನ್‌, ಲೆನಿನ್‌, ಶಿಫಾನ್‌, ಜಾರ್ಜೆಟ್‌ ಸೇರಿದಂತೆ ಆದಷ್ಟೂ ಟ್ರೆಂಡಿ ಸೀರೆ ಆಯ್ಕೆ ಮಾಡಿ. ಅದರಲ್ಲೂ ದಪ್ಪನೆಯ ಫ್ಯಾಬ್ರಿಕ್‌ನ ಸೀರೆ ಬೇಡವೇ ಬೇಡ! ಬದಲಿಗೆ ತೆಳುವಾದ ಅದರಲ್ಲೂ ಬ್ರಿಥಬಲ್‌ ಸೀರೆಯನ್ನು ಸೆಲೆಕ್ಟ್‌ ಮಾಡಿ ಉಡಿ. ಆಗ ಟ್ರೆಂಡ್‌ಗೆ ತಕ್ಕಂತೆ ಕಾಣಿಸಬಹುದು.

Star Summer Saree Fashion

ಲೈಟ್‌ ಶೇಡ್ಸ್/ಪಾಸ್ಟೆಲ್‌ ಶೇಡ್ಸ್‌ ಚೂಸ್‌ ಮಾಡಿ

ಈ ಬೇಸಿಗೆಯಲ್ಲಿ ಆದಷ್ಟೂ ಡಾರ್ಕ್‌ ಕಲರ್‌ ಸೀರೆಗಳಿಗಿಂತ ಲೈಟ್‌ ಶೇಡ್‌ನ ಸೀರೆಗಳನ್ನು ಚೂಸ್‌ ಮಾಡಿ. ಪಾಸ್ಟೆಲ್‌ ಶೇಡ್‌ ಈ ಸೀಸನ್‌ನ ಟ್ರೆಂಡ್‌ನಲ್ಲಿದೆ. ಇವು ನೋಡಲು ಫ್ರೆಶ್‌ ಲುಕ್‌ ನೀಡುತ್ತವೆ. ಹಾಗಾಗಿ ಇಂತಹ ಶೇಡ್‌ನ ಸೀರೆಗಳನ್ನೇ ಪ್ರಿಫರ್‌ ಮಾಡಿ.

Star Summer Saree Fashion

ಲೈಟ್‌ವೈಟ್‌ ಸೀರೆ ಸೆಲೆಕ್ಷನ್

ಬೇಸಿಗೆಯ ಸುಡು ಬಿಸಿಲಿಗೆ ನೀವು ದಪ್ಪನೆಯ ಫ್ಯಾಬ್ರಿಕ್‌ ಅಥವಾ ಭಾರವಾದ ಸೀರೆ ಉಟ್ಟರೇ ಚೆನ್ನಾಗಿ ಕಾಣಿಸುವುದಿರಲಿ, ಅದನ್ನು ಕ್ಯಾರಿ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟೂ ಲೈಟ್‌ವೈಟ್‌ ಸೀರೆ ಆರಿಸಿ, ಅದನ್ನೇ ಉಟ್ಟುಕೊಳ್ಳಿ. ಇವು ಉಟ್ಟಾಗ ಸುಲಭವಾಗಿ ನಡೆದಾಡಬಹುದು. ಸೆಕೆಯಾಗದು ಹಾಗೂ ಕ್ಯಾರಿ ಮಾಡಲು ಸುಲಭ. ಪರಿಣಾಮ, ನೋಡಲು ಚೆನ್ನಾಗಿ ಕಾಣಿಸುವಿರಿ.

Star Summer Saree Fashion

ಬ್ಲೌಸ್‌ ಆಯ್ಕೆ ಸೀಸನ್‌ಗೆ ತಕ್ಕಂತಿರಲಿ

ಉಡುವ ಸೀರೆಯ ಬ್ಲೌಸ್‌ ಡಿಸೈನ್‌ ಆಯ್ಕೆ ಕೂಡ ಸೀಸನ್‌ಗೆ ತಕ್ಕಂತಿರಬೇಕು. ಯಾಕೆಂದರೇ, ಈ ಸೀಸನ್‌ನಲ್ಲಿ ಯಾವುದೇ ಕಾರಣಕ್ಕೂ ಫುಲ್‌ ಸ್ಲೀವ್‌, ತ್ರಿ ಫೋರ್ತ್‌ ಹಾಗೂ ಕೈಗಳು ಕವರ್‌ ಆಗುವಂತಹ ಬ್ಲೌಸ್‌ ಡಿಸೈನ್‌ ಬೇಡ. ಸ್ಲಿವ್‌ಲೆಸ್‌ ಅಥವಾ ಮೆಗಾ ಸ್ಲೀವ್‌ ಆದಲ್ಲಿ ಉತ್ತಮ. ನೋಡಲು ಟ್ರೆಂಡಿಯಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸುತ್ತವೆ.

Star Summer Saree Fashion

ಡ್ರೇಪಿಂಗ್‌/ಸ್ಟೈಲಿಂಗ್‌ ಸಿಂಪಲ್ಲಾಗಿರಲಿ

ಉಡುವ ಸೀರೆಯ ಡ್ರೇಪಿಂಗ್‌ ಸಿಂಪಲ್ಲಾಗಿರಲಿ. ಆದಷ್ಟೂ ನೀಟಾಗಿ ಉಡುವುದು ಉತ್ತಮ. ಹೆಚ್ಚು ಕಾಂಪ್ಲೀಕೇಟೆಡ್‌ ಡ್ರೇಪಿಂಗ್‌ ಹಾಗೂ ಸ್ಟೈಲಿಂಗ್‌ ಮಾಡುವುದು ಬೇಡ. ಇನ್ನು ಇದರೊಂದಿಗೆ ಮೇಕಪ್‌ ಕೂಡ ತಿಳಿಯಾಗಿರಲಿ. ಮ್ಯಾಚ್‌ ಆಗುವ ಆಕ್ಸೆಸರೀಸ್‌ ಇರಲಿ. ಹೇರ್‌ಸ್ಟೈಲ್‌ ಹೊಂದುವಂತಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ

Continue Reading

ಫ್ಯಾಷನ್

Summer Fashion: ಬೇಸಿಗೆಯ ಹೈ ಫ್ಯಾಷನ್‌ಗಾಗಿ ಬಂತು ಗ್ಲಾಮರಸ್‌ ಕೋ-ಆರ್ಡ್‌ ಸೆಟ್ಸ್

ಸಮ್ಮರ್‌ನ ಸುಡು ಬಿಸಿಲಿಗೆ (Summer Fashion) ನಾನಾ ಬಗೆಯ ಕೋ-ಆರ್ಡ್‌ ಸೆಟ್‌ಗಳು ಲಗ್ಗೆ ಇಟ್ಟಿದ್ದು, ಟಿನೇಜ್‌ ಹಾಗೂ ಕಾಲೇಜ್‌ ಹುಡುಗಿಯರ ಹೈ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ದಿನಗಳಲ್ಲಿ ಟ್ರೆಂಡಿಯಾಗಿವೆ?ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಬಿರು ಬಿಸಿಲಲ್ಲೂ ಹಾಟ್‌ ಲುಕ್‌ ನೀಡುವಂತಹ ಕೋ-ಆರ್ಡ್‌ ಸೆಟ್‌ಗಳು ಫ್ಯಾಷನ್‌ಲೋಕಕ್ಕೆ (Summer Fashion) ಕಾಲಿಟ್ಟಿವೆ. ಸಮ್ಮರ್‌ನ ಹಾಟ್‌ ಬಿಸಿಲಿಗೆ ನಾನಾ ಬಗೆಯ ಪ್ರಿಂಟೆಡ್‌ ಹಾಗೂ ಮಾನೋಕ್ರೋಮ್‌ ಶೇಡ್‌ನ ಕೋ-ಆರ್ಡ್‌ ಸೆಟ್‌ಗಳು ಲಗ್ಗೆ ಇಟ್ಟಿದ್ದು, ಟಿನೇಜ್‌ ಹಾಗೂ ಕಾಲೇಜ್‌ ಹುಡುಗಿಯರ ಅಲ್ಟ್ರಾ ಫ್ಯಾಷನ್‌ ಅಂದರೆ, ಸಮ್ಮರ್‌ ಹೈ ಫ್ಯಾಷನ್‌ನಲ್ಲಿ ಟಾಪ್‌ ಲಿಸ್ಟ್‌ಗೆ ಎಂಟ್ರಿ ನೀಡಿವೆ.
“ಕೋ-ಆರ್ಡ್‌ ಸೆಟ್‌ಗಳು ಕಳೆದ ಸೀಸನ್‌ನಿಂದಲೂ ಟ್ರೆಂಡಿಯಾಗಿವೆ. ಹಾಗೆಂದು ಈ ಸೀಸನ್‌ನಲ್ಲಿ ಕಣ್ಮರೆಯಾಗಿಲ್ಲ! ಬದಲಿಗೆ ಹೊಸ ರೂಪದಲ್ಲಿ ಎಂಟ್ರಿ ನೀಡಿವೆ. ಅದರಲ್ಲೂ ಗ್ಲಾಮರಸ್‌ ಹಾಗೂ ಹಾಟ್‌ ಲುಕ್‌ ನೀಡುವ ನಾನಾ ಬೇಸಿಗೆಯ ವಿನ್ಯಾಸದಲ್ಲಿ ಬಂದಿವೆ. ಧರಿಸಿದಾಗ ಕೇವಲ ಫ್ಯಾಷನ್‌ಗೆ ಮಾತ್ರ ಮ್ಯಾಚ್‌ ಆಗುವುದಲ್ಲ, ಜೊತೆಗೆ ಸೀಸನ್‌ನಲ್ಲಿ ಸೆಕೆಯಾಗದಂತಹ ರೀತಿಯಲ್ಲಿ ವಿನ್ಯಾಸದಲ್ಲಿ ಇವು ಆಗಮಿಸಿವೆ. ಇನ್ನು ಫ್ರೆಶ್‌ ಲುಕ್‌ ನೀಡುವ ಪ್ರಿಂಟ್ಸ್‌ ಹಾಗೂ ಶೇಡ್‌ಗಳಲ್ಲಿ ಇವು ಹುಡುಗಿಯರನ್ನು ಸೆಳೆದಿವೆ. ಕೆಲವಂತು ಹೈ ಸ್ಟ್ರೀಟ್‌ ಫ್ಯಾಷನ್‌ ಸೂಟ್‌ ಆಗುವಂತಹ ಡಿಸೈನ್‌ನಲ್ಲಿ ಕಂಡು ಬಂದಿದ್ದು, ಟೀನೇಜ್‌ ಹುಡುಗಿಯರಿಂದಿಡಿದು, ಹೈ ಫ್ಯಾಷನ್‌ ಪ್ರಿಯ ಯುವತಿಯರನ್ನು ಸೆಳೆದಿವೆ. ಪರಿಣಾಮ, ಈ ಸಮ್ಮರ್‌ ಸೀಸನ್‌ನ ಟ್ರೆಂಡ್‌ನಲ್ಲಿ ಟಾಪ್‌ಗೆ ಸೇರಿವೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ರಿಯಾ. ಅವರ ಪ್ರಕಾರ, ಸದ್ಯ ಹಾಟ್‌ ಟ್ರೆಂಡ್‌ನ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ.

Summer Fashion

ಪ್ರಿಂಟೆಡ್‌ ಆಫ್‌ ಶೋಲ್ಡರ್‌ ಕೋ-ಆರ್ಡ್‌ ಸೆಟ್‌

ಫ್ಲೋರಲ್‌, ಟ್ರಾಪಿಕಲ್‌ ಹಾಗೂ ಜೆಮೆಟ್ರಿಕಲ್‌ ವಿನ್ಯಾಸದ ಆಪ್‌ ಶೋಲ್ಡರ್‌ ಅಥವಾ ಶೋಲ್ಡರ್‌ ಲೆಸ್‌ ಇರುವಂತಹ ಪ್ರಿಂಟೆಡ್‌ ಕೋ ಆರ್ಡ್‌ ಸೆಟ್‌ಗಳು ಈ ಬೇಸಿಗೆಯ ಹೈ ಫ್ಯಾಷನ್‌ನಲ್ಲಿವೆ. ಸೆಕೆಯಾಗದ ಇವು ಭುಜಕ್ಕೆ ಗ್ಲಾಮರಸ್‌ ಲುಕ್‌ ನೀಡುವುದರೊಂದಿಗೆ ಹೈ ಫ್ಯಾಷನ್‌ ಟಚ್‌ ನೀಡುತ್ತವೆ. ಇವುಗಳಲ್ಲೆ ಕೆಲವು ಕೋಲ್ಡರ್‌ ಶೋಲ್ಡರ್‌ನವು ಎಂಟ್ರಿ ನೀಡಿದ್ದು, ಅವು ಕೂಡ ಟೀನೇಜ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

Summer Fashion

ರಾಂಪರ್‌ ಶೈಲಿಯ ಕೋ-ಆರ್ಡ್‌ ಸೆಟ್‌

ರಾಂಪರ್‌ ಶೈಲಿಯ ಕೋ-ಆರ್ಡ್‌ ಸೆಟ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಶಾರ್ಟ್‌ ಜಂಪ್‌ಸೂಟ್‌ನಂತೆ ಕಾಣುವ ಇವು ಚಿಕ್ಕ ಹೆಣ್ಣುಮಕ್ಕಳಿಗೂ ಪ್ರಿಯವಾಗಿವೆ. ಹಾಲಿಡೇ, ವೀಕೆಂಡ್‌ ಲುಕ್‌ ನೀಡುವ ಇವು ಬಿಂದಾಸ್‌ ಫ್ಯಾಷನ್‌ಗೆ ಸಾಥ್‌ ನೀಡುತ್ತಿವೆ. ಪ್ರಿಂಟೆಡ್‌ ಹೆಚ್ಚು ಚಾಲ್ತಿಯಲ್ಲಿವೆ. ಮಾನೋಕ್ರೋಮ್‌ ಶೇಡ್‌ನವು ಸೈಡಿಗೆ ಸರಿದಿವೆ.

Summer Fashion

ಶೋಲ್ಡರ್‌ ಲೆಸ್‌-ಸ್ಟ್ರಾಪ್‌ಲೆಸ್‌ ಕೋ-ಆರ್ಡ್‌ ಸೆಟ್‌

ತೋಳುಗಳಿಲ್ಲದ ಹಾಗೂ ಯಾವುದೇ ಚಿಕ್ಕ ಸ್ಟ್ರಾಪ್‌ಗಳಿಲ್ಲದ ಬಿಕಿನಿಯಂತೆ ಕಾಣುವ ಕೋ-ಆರ್ಡ್‌ ಸೆಟ್‌ಗಳು ಸದ್ಯ ಅಲಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್ರೋಬ್‌ ಸೇರಿವೆ. ಅದರಲ್ಲೂ ಬೀಚ್‌ ಫ್ಯಾಷನ್‌ ಅಥವಾ ರಿವರ್‌ ಸೈಡ್‌ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಿವೆ. ಬಾಲಿವುಡ್‌ ತಾರೆಯರ ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ನಲ್ಲೂ ಇವನ್ನು ಕಾಣಬಬಹುದು. ಅಷ್ಟೇಕೆ! ಗ್ಲಾಮರಸ್‌ ಲುಕ್‌ ಬಯಸುವ ಹುಡುಗಿಯರ ಹೈ ಹಾಲಿಡೇ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲೂ ಇವು ಇವೆ.

Summer Fashion

ಬೇಸಿಗೆ ಕೋ-ಆರ್ಡ್‌ ಸೆಟ್‌ ಪ್ರಿಯರಿಗಾಗಿ…

  • ಟ್ರೆಂಡಿ ಫ್ಲೋರಲ್‌ ವಿನ್ಯಾಸದವನ್ನು ಆಯ್ಕೆ ಮಾಡಿ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
  • ಸಮ್ಮರ್‌ ಹೇರ್‌ಸ್ಟೈಲ್‌ ಮಾಡಿ, ನೋಡಿ.
  • ಫುಟ್‌ವೇರ್‌ ಕೂಡ ಸೀಸನಬಲ್‌ ಆಗಿರಲಿ.
  • ಯಾವುದೇ ಎಥ್ನಿಕ್‌ ಆಕ್ಸೆಸರೀಸ್‌ ಅಥವಾ ಸ್ಟೈಲಿಂಗ್‌ ಮಾಡಬೇಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Summer Fashion: ಸಮ್ಮರ್‌ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ನಟಿ ಡೈಸಿ ಬೋಪಣ್ಣ ಫಂಕಿ ಲುಕ್‌‌!

Continue Reading

ಫ್ಯಾಷನ್

Star Summer Fashion: ಸಮ್ಮರ್‌ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ನಟಿ ಡೈಸಿ ಬೋಪಣ್ಣ ಫಂಕಿ ಲುಕ್‌‌!

ನಟಿ ಡೈಸಿ ಬೋಪಣ್ಣ (Daisy Bopanna) ಈ ಸಮ್ಮರ್‌ನಲ್ಲೂ (Star Summer Fashion) ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ? ಅಂತಿರಾ ! ಟ್ರೆಂಡ್‌ನಲ್ಲಿರುವ ಡೀಪ್‌ ವೀ ನೆಕ್‌ನ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಡ್ರೆಸ್?‌ ಈ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Star Summer Fashion
ಚಿತ್ರಗಳು : ಡೈಸಿ ಬೋಪಣ್ಣ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಡೈಸಿ ಬೋಪಣ್ಣ (Daisy Bopanna) ಈ ಸುಡು ಬಿಸಿಲ ಸಮ್ಮರ್‌ನಲ್ಲೂ (Star Summer Fashion) ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದು ಹೇಗೆ? ಅಂತಿರಾ! ಈ ಸೀಸನ್‌ ಟ್ರೆಂಡ್‌ನಲ್ಲಿರುವ ಡೀಪ್‌ ವೀ ನೆಕ್‌ನ ಬಾಡಿಕಾನ್‌ ಪಾರ್ಟಿ ಡ್ರೆಸ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಔಟ್‌ಫಿಟ್‌ಗೆ ತಾವೇ ಸಮಜಾಯಿಷಿ ಕೂಡ ನೀಡಿಕೊಂಡಿದ್ದಾರೆ. ಟ್ಯಾನ್‌ ಆಗಿರುವ ಸ್ಕಿನ್‌ನಲ್ಲೂ ಪರ್ಪೆಕ್ಟ್‌ ಔಟ್‌ಫಿಟ್‌ ಧರಿಸಿದಾಗ ಇದು ಸಾಧ್ಯ ಎಂಬುದು ಅವರ ಅಭಿಪ್ರಾಯ. ಈ ಸಮ್ಮರ್‌ ಪಾರ್ಟಿ ಲುಕ್‌ಗೆ ಫ್ಯಾಷನ್‌ ವಿಮರ್ಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸಮ್ಮರ್‌ನ ಪಾರ್ಟಿವೇರ್‌ಗಳನ್ನು ಚೂಸ್‌ ಮಾಡುವುದು ಸುಲಭದ ಕೆಲಸ. ಸೀಸನ್‌ ಟ್ರೆಂಡ್‌ನಲ್ಲಿರುವ ಶೇಡ್ಸ್‌ ಹಾಗೂ ಡಿಸೈನ್‌ಗಳನ್ನು ಆಯ್ಕೆ ಮಾಡಿದರಾಯಿತು. ಅದರೊಂದಿಗೆ ಒಂದಿಷ್ಟು ಪಾಪ್‌ ಅಪ್‌ ಕಲರ್‌ನ ಐ ಮೇಕಪ್‌ ಹಾಗೂ ಫಂಕಿ ಅಥವಾ ಸಮ್ಮರ್‌ ಹೇರ್‌ ಸ್ಟೈಲ್‌ ಚೂಸ್‌ ಮಾಡಿದಲ್ಲಿ ಲುಕ್‌ ಮ್ಯಾಚ್‌ ಆಗುವುದು. ಆದರೆ, ಇಲ್ಲಿ ಆಯ್ಕೆ ಮಾಡುವ ಪಾರ್ಟಿವೇರ್‌ ಮಾತ್ರ ಗ್ಲಾಮರಸ್‌ ಆಗಿ ಇರುವುದರೊಂದಿಗೆ ಕಂಫರ್ಟಬಲ್‌ ಆಗಿರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸೆಕೆಯಾಗಕೂಡದು. ಏರ್‌ ಕಂಡೀಷನ್‌ ರೂಮ್‌ನಿಂದ ಆಚೆ ಬಂದರೂ ಕೂಡ ಆರಾಮ ಎನಿಸಬೇಕು. ಆಗಷ್ಟೇ ಇವನ್ನು ಸೂಕ್ತ ರೀತಿಯಲ್ಲಿ ಕ್ಯಾರಿ ಮಾಡಲು ಸಾಧ್ಯ” ಎನ್ನುತ್ತಾರೆ ಸ್ಟೈಲಿಸ್ಟ್‌ ಜಾನ್‌. ಅವರ ಪ್ರಕಾರ, ಡೀಪ್‌ ನೆಕ್‌ಲೈನ್‌ ಡ್ರೆಸ್‌ಗಳು ಈ ಸೀಸನ್‌ನ ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ.

Daisy Bopanna

ಡೀಪ್‌ ವೀ ಬಾಡಿಕಾನ್‌ ಪಾರ್ಟಿವೇರ್‌ ಅಥವಾ ಮಿಡಿ ಡ್ರೆಸ್‌

ಈ ಬೇಸಿಗೆಯಲ್ಲಿ ನಟಿ ಡೈಸಿ ಬೋಪಣ್ಣ ಧರಿಸಿರುವ ಡ್ರೆಸ್‌ ಡಿಸೈನರ್‌ ಡಿಸೈನ್‌ ಮಾಡಿದ ಸ್ಪೆಷಲ್‌ ಡ್ರೆಸ್‌ ಏನಲ್ಲ! ಬದಲಿಗೆ ಆನ್‌ಲೈನ್‌ ಮೂಲಕ ತರಿಸಿಕೊಂಡ ಉಡುಪಿದು. ನಾನಾ ಬ್ರಾಂಡ್‌ಗಳಲ್ಲಿ ಈ ಡಿಸೈನ್‌ ಲಭ್ಯ. ಎಮಾರಾಲ್ಡ್‌ ಶೇಡ್‌ನ ಈ ಡ್ರೆಸ್‌ ಸ್ಲಿವ್‌ಲೆಸ್‌ ಮಿಡಿ ಡ್ರೆಸ್‌ ಎಂದೂ ಕೂಡ ಕರೆಯಲಾಗುತ್ತದೆ. ಮಂಡಿಗಿಂತ ಕೆಳಗಿನ ತನಕ ನಿಲ್ಲುವ ಈ ಉಡುಪು ಸೆಂಟರ್‌ ಸ್ಲಿಟ್‌ ಹೊಂದಿದ್ದು, ಹಾಟ್‌ ಲುಕ್‌ ನೀಡುವ ಡೀಪ್‌ ವೀ ನೆಕ್‌ ಹೊಂದಿದೆ. ಕ್ಲಿವೇಜ್‌ನಿಂದಾಗಿ ಎಕ್ಸ್‌ಪೋಸ್‌ ಮಾಡಿದಂತಾಗಿದೆ. ಇದೆಲ್ಲಾ ಬಾಲಿವುಡ್‌ನಲ್ಲಿ ಹಾಗೂ ಸಿನಿಮಾ ಇಂಡಸ್ಟ್ರೀಯಲ್ಲಿ ಕಾಮನ್‌ ಬಿಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಕೇವಲ ನಾಲ್ಕು ಸಾವಿರ ರೂ.ಗಳ ಆಸು ಪಾಸಿನಲ್ಲಿ ದೊರಕುವ ಈ ಉಡುಪು, ಸದ್ಯ ವೆಸ್ಟರ್ನ್‌ ಔಟ್‌ಫಿಟ್‌ನಲ್ಲಿ ಚಾಲ್ತಿಯಲ್ಲಿದೆ. ಯಾರೂ ಬೇಕಾದರೂ ಇದನ್ನು ಧರಿಸಬಹುದು. ಆದರೆ, ಕ್ಲಿವೇಜ್‌ ನೆಕ್‌ ಧರಿಸಲು ಸಿದ್ಧರಾಗಿರಬೇಕಷ್ಟೇ! ಪಾರ್ಟಿ ಲುಕ್‌ ಅದರಲ್ಲೂ ಬ್ರಂಚ್‌, ಲಂಚ್‌ ಹಾಗೂ ನೈಟ್‌ ಸಮ್ಮರ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Daisy Bopanna

ಫ್ಯಾಷನ್‌ ಇನ್ಫೂಯೆನ್ಸರ್‌ ಡೈಸಿ ಬೋಪಣ್ಣ

ನಟಿ ಡೈಸಿ ಬೋಪಣ್ಣ, ಸಿನಿಮಾದಿಂದ ಸದ್ಯಕ್ಕೆ ಬ್ರೇಕ್‌ ತೆಗದುಕೊಂಡಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯರಾಗಿದ್ದಾರೆ. ಅಷ್ಟೇಕೆ! ಆಗಾಗ್ಗೆ ಫ್ಯಾಷನ್‌ವೇರ್‌ ಹಾಗೂ ಇತರೇ ವಿಷಯಗಳ ಬಗ್ಗೆ ಕ್ಲಿಪ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಮೊದಲಿನಿಂದಲೂ ಫ್ಯಾಷೆನಬಲ್‌ ನಟಿಯಾಗಿರುವ ಇವರು, ಮೇಕಪ್‌ ಪ್ರಿಯೆ ಕೂಡ. ಸಾಕಷ್ಟು ಬಾರಿ ಈ ಕುರಿತಂತೆ ಟಿಪ್ಸ್‌ ಕೂಡ ನೀಡುತ್ತಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Daisy Bopanna

ಡೈಸಿ ಬೋಪಣ್ಣ ವೆಸ್ಟ್ರನ್‌ ಲುಕ್‌

ನಟಿ ಡೈಸಿ ಬೋಪಣ್ಣ ಈ ಜನರೇಷನ್‌ಗೆ ಹೊಂದುವಂತೆ ಸಾಕಷ್ಟು ಫ್ಯಾಷನ್‌ವೇರ್‌ ಧರಿಸುತ್ತಲೇ ಇರುತ್ತಾರೆ. ಇದರೊಂದಿಗೆ ಅವರ ಮೇಕಪ್‌ ಕೂಡ ಈ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ. ಅವರಂತೆಯೇ ಮೇಕಪ್‌ ಮಾಡುವುದು ಸುಲಭ ಕೂಡ. ಇಲ್ಲಿದೆ ಟಿಪ್ಸ್.‌

  1. ಐ ಮೇಕಪ್‌ಗೆ ಈ ಸೀಸನ್‌ನ ಪಾಪ್‌ಅಪ್‌ ಕಲರ್ಸ್‌ ಚೂಸ್‌ ಮಾಡಿ.
  2. ಹೇರ್‌ಸ್ಟೈಲ್‌ ಫಂಕಿ ಲುಕ್‌ ನೀಡಲಿ.
  3. ಧರಿಸುವ ಪಾರ್ಟಿ ಲುಕ್‌ಗೆ ತಕ್ಕಂತೆ ಆಕ್ಸೆಸರೀಸ್‌ ಇರಲಿ.
  4. ಮಿನಿಮಲ್‌ ಆಕ್ಸೆಸರೀಸ್‌ ಬೆಸ್ಟ್‌.
  5. ಕಣ್ಣಿಗೆ ವಿಂಗ್‌ ಐ ಎಳೆದು ನೋಡಿ.

(ಲೇಖಕಿ ಫ್ಯಾಷನ್‌ ಪರ್ತಕರ್ತೆ )

ಇದನ್ನೂ ಓದಿ: Summer Fashion: ಹಾಟ್‌ಲುಕ್‌ಗಾಗಿ ಬಂತು 3 ಶೈಲಿಯ ಸ್ಲೀವ್‌ಲೆಸ್‌ ಸೀರೆ ಬ್ಲೌಸ್‌

Continue Reading
Advertisement
gold rate today tapasi
ಚಿನ್ನದ ದರ1 min ago

Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

Actor Dwarakish
ಪ್ರಮುಖ ಸುದ್ದಿ8 mins ago

Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

Theft Case in Bengaluru
ಬೆಂಗಳೂರು26 mins ago

Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

actor prakash Rai
ವೈರಲ್ ನ್ಯೂಸ್51 mins ago

Actor Prakash Rai: “ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ; ನಿರ್ದಿಗಂತಕ್ಕೆ ಹಣದ ಹೊಳೆ!” ಸಿಡಿದೆದ್ದ ಜೆಡಿಎಸ್‌ನಿಂದ ನಟ ಪ್ರಕಾಶ್‌ ರೈಗೆ ಚಾಟಿ

IPL 2024
ಕ್ರೀಡೆ53 mins ago

IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

Breast Cancer
ಲೈಫ್‌ಸ್ಟೈಲ್57 mins ago

Breast Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

BSP Candidates List
ಪ್ರಮುಖ ಸುದ್ದಿ57 mins ago

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

Road Accident in Hubballi
ಹುಬ್ಬಳ್ಳಿ1 hour ago

Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ

Rameshwaram Cafe
ಕ್ರೈಂ1 hour ago

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

New Job Trend
ಉದ್ಯೋಗ2 hours ago

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ7 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 202424 hours ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌