ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣು ಮಕ್ಕಳು ಆಚರಿಸುವ ವರಮಹಾಲಕ್ಷ್ಮಿ ಹಬ್ಬದಂದು ಟ್ರೆಡಿಷನಲ್ ಸೀರೆ ಉಟ್ಟು, ಥೇಟ್ ಮಹಾಲಕ್ಷ್ಮಿಯಂತೆ (varamahalaxmi festival styling) ಸಿಂಗರಿಸಿಕೊಳ್ಳಿ. ಇದು ಕಂಪ್ಲೀಟ್ ಫೆಸ್ಟಿವಲ್ ಲುಕ್ ನೀಡುವುದರೊಂದಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
“ಪ್ರತಿ ಹಬ್ಬವು ಒಂದೊಂದು ಬಗೆಯ ವಿಶೇಷತೆಯನ್ನು ಹೊಂದಿರುತ್ತದೆ. ಇನ್ನು, ಅತಿ ಹೆಚ್ಚು ಮಹಿಳೆಯರು ಆಚರಿಸುವ ವರಮಹಾಲಕ್ಷ್ಮಿ ಹಬ್ಬದಂದು ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಡ್ರೆಸ್‌ಕೋಡ್ ಫಾಲೋ ಮಾಡಬೇಕು. ಇದಕ್ಕಾಗಿ ಜರತಾರಿ ಸೀರೆ, ಆಭರಣ ಹಾಗೂ ಬಿಂದಿ-ಹೂ ಧರಿಸಿ, ಟಿಪಿಕಲ್ ಲಕ್ಷ್ಮಿಯಂತೆ ಕಾಣಿಸಿಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್ ದೇವಿಕಾ. ಅವರು ಹಬ್ಬಕ್ಕೆ ಮಹಿಳೆಯರು ಹೇಗೆಲ್ಲಾ ಸಿಂಗರಿಸಿಕೊಳ್ಳಬಹುದು ಎಂಬುದರ ಬಗ್ಗೆ ಒಂದೈದು ಸ್ಟೈಲಿಂಗ್ ಟಿಪ್ಸ್ ನೀಡಿದ್ದಾರೆ.
ಟ್ರೆಡಿಷನಲ್ ರೇಷ್ಮೆ ಸೀರೆ ಆಯ್ಕೆ ಮಾಡಿ
ಹಬ್ಬದಂದು ಉಡಲು ಟ್ರೆಡಿಷನಲ್ ಸೀರೆಯನ್ನು ಆಯ್ಕೆ ಮಾಡಿ. ಸದ್ಯಕ್ಕೆ ವೆಸ್ಟರ್ನ್ ಲುಕ್ ನೀಡುವ ಸ್ಲಿವ್‌ಲೆಸ್ ಬ್ಲೌಸ್ ಹಾಗೂ ಕ್ರಾಪ್ ಬ್ಲೌಸ್ ಆವಾಯ್ಡ್ ಮಾಡಿ. ಎಥ್ನಿಕ್ ಡಿಸೈನ್ ಇರುವ ಬ್ಲೌಸನ್ನೇ ಸೆಲೆಕ್ಟ್ ಮಾಡಿ. ಇನ್ನು ಬಾರ್ಡರ್ ಸೀರೆಗಳು ಸುಲಭವಾಗಿ ಮನೆಯ ಮಹಾಲಕ್ಷ್ಮಿಯಂತೆ ಬಿಂಬಿಸುತ್ತವೆ. ಅಮ್ಮನ ಹಾಗೂ ಅಜ್ಜಿಯ ಸೀರೆಯನ್ನೂ ಉಡಬಹುದು ಎಂಬುದು ಮಾಡೆಲ್ ಸ್ಮಿತಾ ಮಿಥುನ್ ಅಭಿಪ್ರಾಯ.
ಮೇಕಪ್‌ಗೆ ಎಥ್ನಿಕ್ ಟಚ್
ಮೇಕಪ್ ರೇಷ್ಮೆ ಸೀರೆಗೆ ಹೊಂದುವಂತಿರಬೇಕು. ಸ್ಮೋಕಿ ಐಸ್, ಗೋಲ್ಡನ್ ಐ ಮೇಕಪ್, ಪ್ಲಂಪ್-ಪೌಟ್ ಲಿಪ್ಸ್ ಲುಕ್ ಹಾಗೂ ವೈಲ್ಡ್ ಮೇಕಪ್ ಲುಕ್‌ಗಳನ್ನು ಮರೆತು ಬಿಡಿ. ಮುಖದ ಸೌಮ್ಯತನ ಹೆಚ್ಚಿಸುವಂತಹ ಟ್ರೆಡಿಷನಲ್ ಲುಕ್ ಆಯ್ಕೆ ಮಾಡಿ. ಕಣ್ಣಿಗೆ ಕಾಜಲ್, ಐಬ್ರೋ ತೀಡಿ, ಸ್ಕಿನ್ ಟೋನ್‌ಗೆ ಹೊಂದುವ ಲಿಪ್‌ಸ್ಟಿಕ್ ಹಚ್ಚಿ.
ಹಣೆಯಲ್ಲಿ ಬಿಂದಿ ಇರಲಿ
ಉಡುವ ಸೀರೆಯ ಮ್ಯಾಚಿಂಗ್ ಆದರೂ ಸರಿಯೇ ಹಣೆಗೆ ಬಿಂದಿ ಇರಿಸಿ. ಇದು ಇಡೀ ಲುಕ್ಕನ್ನು ಕಂಪ್ಲೀಟ್ ಮಾಡುವುದು. ನೋಡಲು ಪಕ್ಕಾ ಸೌತ್ ಇಂಡಿಯನ್ ಇಮೇಜ್ ನೀಡುವುದು.
ಜಡೆಯ ಅಲಂಕಾರ
ಹೇರ್‌ಸ್ಟೈಲ್ ಕೂಡ ಸೀರೆಗೆ ಹೊಂದಬೇಕು. ಅದಕ್ಕೆ ನೀವು ಬಗೆಬಗೆಯ ಜಡೆಯನ್ನು ಹೆಣೆದುಕೊಳ್ಳಬಹುದು. ಇಲ್ಲವೇ ತುರುಬನ್ನು ಹಾಕಿ ಕೆಳಗೆ ಜಡೆ ಹಾಕಬಹುದು. ಜಡೆಯ ಸಿಂಗಾರಕ್ಕೆ ಅಗತ್ಯವಿರುವ ಜಡೆ ಬಿಲ್ಲೆಗಳನ್ನು ಧರಿಸಬಹುದು. ಮಲ್ಲಿಗೆ ಹಾಗೂ ಕನಕಾಂಬರ ಹೂವನ್ನು ಕೂಡ ಮುಡಿಯಬಹುದು.
ಗ್ರ್ಯಾಂಡ್ ಆಭರಣಗಳನ್ನು ಧರಿಸಿ
ನೆಕ್ಲೇಸ್, ಹಾರ, ಜುಮಕಿ, ಕಿವಿಯೊಲೆ, ಮಾಟಿ, ಬಳೆ ಅಥವಾ ಕಡ, ಮಾಂಗ್‌ಟೀಕಾದಂತಹ ಟ್ರೆಡಿಷನಲ್ ಚಿನ್ನಾಭರಣಗಳನ್ನು ಆಭರಣಗಳನ್ನು ಧರಿಸಿ. ಇವು ಥೇಟ್ ಮನೆಯ ಮಹಾಲಕ್ಷ್ಮಿಯಂತೆ ಬಿಂಬಿಸುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festive Season Fashion: ಶ್ರಾವಣ ಸಂಭ್ರಮ ಹೆಚ್ಚಿಸಲು ಎಂಟ್ರಿ ಕೊಟ್ಟ ಟ್ರೆಡಿಷನಲ್‌ವೇರ್ಸ್