Site icon Vistara News

Varamahalaxmi Jewel Trend: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾಯ್ತು ಬಂಗಾರದ ಜ್ಯುವೆಲರಿ ಸೆಟ್‌ ಸಿಂಗಾರ

Varamahalaxmi Jewel Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರೆಡಿಷನಲ್‌ ಸೀರೆಗೆ ಒಂದೇ ಬಗೆಯ ಜ್ಯುವೆಲರಿ ಸೆಟ್‌ (Varamahalaxmi Jewel Trend) ಧರಿಸುವುದು ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾಗಿದೆ. ಹೌದು, ಹಬ್ಬದಂದು ಟ್ರೆಡಿಷನಲ್‌ ಸೀರೆ ಹಾಗೂ ಉಡುಪಿನೊಂದಿಗೆ ಆಂಟಿಕ್‌ ಡಿಸೈನ್‌ನ ಒಂದೇ ಬಗೆಯ ಟ್ರೆಡಿಷನಲ್‌ ಆಭರಣಗಳನ್ನು ಧರಿಸುವುದು ಫೆಸ್ಟಿವ್‌ ಸೀಸನ್‌ನ ಟ್ರೆಂಡ್‌ ಲಿಸ್ಟ್‌ಗೆ ಸೇರಿದೆ. ಈ ಬಗ್ಗೆ ಜ್ಯುವೆಲರಿ ಡಿಸೈನರ್‌ಗಳು ಡಿಕ್ಲೇರ್‌ ಮಾಡಿದ್ದಾರೆ.

ಟ್ರೆಡಿಷನಲ್‌ ಸೀರೆಗಳೊಂದಿಗೆ ಆಭರಣಗಳ ಸೆಟ್‌ ಮ್ಯಾಚಿಂಗ್‌

ಈ ಬಾರಿಯ ಫೆಸ್ಟಿವ್‌ ಸೀಸನ್‌ನಲ್ಲಿ ಮಿಕ್ಸ್ ಮ್ಯಾಚ್‌ ಆಭರಣಗಳನ್ನು ಧರಿಸುವ ಕಾನ್ಸೆಪ್ಟ್‌ ಮಾಯವಾಗಿದೆ. ಮೊದಲಿನಂತೆ, ಒಂದೇ ಬಗೆಯ ಮ್ಯಾಚಿಂಗ್‌ ಆಭರಣಗಳ ಸೆಟ್‌ ಧರಿಸುವುದು ಮರಳಿದೆ. ಅದು ಆಂಟಿಕ್ ಜ್ಯುವೆಲರಿಗಳಾಗಬಹುದು ಅಥವಾ ಟ್ರೆಡಿಷನಲ್‌ ಜ್ಯುವೆಲರಿಗಳಾಗಬಹುದು ಅಥವಾ ಸ್ಟೇಟ್‌ಮೆಂಟ್‌ ಬಂಗಾರದ ಆಭರಣಗಳಾಗಬಹುದು ಎನ್ನುತ್ತಾರೆ ಜ್ಯುವೆಲರಿ ಎಕ್ಸ್‌ಪಟ್ರ್ಸ್. ಉದಾಹರಣೆಗೆ., ಕಿವಿಯೊಲೆ, ಹಾರ, ಬಳೆ ಸೇರಿದ ಲಕ್ಷ್ಮಿ ಸೆಟ್‌, ಫ್ಲೋರಲ್‌ ಸ್ಟಡ್ಸ್, ಹಾರ, ಕಡ, ಸೊಂಟದ ಪಟ್ಟಿ ಸೇರಿದ ಜ್ಯುವೆಲರಿ ಸೆಟ್‌, ಎಮರಾಲ್ಡ್, ರೂಬಿ ಅಥವಾ ಪರ್ಲ್‌ನಿಂದ ಸಿದ್ಧಪಡಿಸಿದ ಜುಮಕಿ, ನೆಕ್ಲೇಸ್‌, ಹಾರ, ಬಾಜುಬಂದ್‌ ಹಾಗೂ ಮಾಟಿ ಸೇರಿದ ಸ್ಟೇಟ್‌ಮೆಂಟ್‌ ಬಂಗಾರದ ಆಭರಣಗಳು ಎನ್ನುತ್ತಾರೆ. ಬಂಗಾರದ ಆಭರಣಗಳನ್ನು ರೇಷ್ಮೆ ಸೀರೆಯೊಂದಿಗೆ ಧರಿಸುವುದು ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ ಎನ್ನುವ ಮಿಸೆಸ್‌ ಇಂಡಿಯಾ ಕರ್ನಾಟಕ ಕಾರ್ಪೋರೇಟ್‌ ಕ್ವೀನ್‌ ಮಲ್ಲಮ್ಮ ಗಾಣಿಗಿ ಅವರಿಗೆ ಟ್ರೆಡಿಷನಲ್‌ ಲುಕ್‌ ಎಂದರೇ ಪ್ರಿಯವಂತೆ.

ಸೀರೆ ಜೊತೆ ಮ್ಯಾಚಿಂಗ್‌ ಹೀಗೆ

ಸಿಂಪಲ್‌ ಬಾರ್ಡರ್‌ ಸೀರೆಗಳೊಂದಿಗೆ ಗ್ರ್ಯಾಂಡ್‌ ಹಾಗೂ ಲೇಯರ್‌ ಲುಕ್‌ ನೀಡುವ ಹೆವ್ವಿ ವಿನ್ಯಾಸದ ಬಂಗಾರದ ಸೆಟ್‌ ಆಭರಣಗಳನ್ನು ಧರಿಸಬಹುದು. ಇನ್ನು ಸೀರೆಯ ಒಡಲ ತುಂಬೆಲ್ಲಾ ಬೂಟಾ ಇರುವಂತಹ ರೇಷ್ಮೆ ಸೀರೆಯೊಂದಿಗೆ ಸಾದಾ ಡಿಸೈನ್‌ ಅಥವಾ ಹೆಚ್ಚು ಡಿಸೈನ್‌ ಇರದ ಆಭರಣದ ಸೆಟ್‌ ಧರಿಸಬಹುದು. ಇನ್ನು ಫ್ಲೋರಲ್‌ ಅಥವಾ ಪ್ರಿಂಟ್ಸ್‌ ಇರುವ ಡಿಸೈನ್‌ನ ರೇಷ್ಮೆ ಸೀರೆ ಜೊತೆಗೆ ಪರ್ಲ್, ಎಮರಾಲ್ಡ್, ರೂಬಿ ಸೆಟ್‌ಗಳನ್ನು ಧರಿಸಬಹುದು ಎಂದು ಸಿಂಪಲ್‌ ಸಲಹೆಗಳನ್ನು ನೀಡುತ್ತಾರೆ ಜ್ಯುವೆಲರಿ ಎಕ್ಸ್‌ಪಟ್ರ್ಸ್.

ಟ್ರೆಡಿಷನಲ್‌ ಲುಕ್‌ಗಾಗಿ ಆಭರಣದ ಜೊತೆ ಸ್ಟೈಲಿಂಗ್‌ ಹೀಗಿರಲಿ

ಇದನ್ನೂ ಓದಿ: Varamahalaxmi Saree Fashion: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಟ್ರೆಂಡಿಯಾದ 3 ಶೈಲಿಯ ರೇಷ್ಮೆ ಸೀರೆ

Exit mobile version