ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಮಹಿಳೆಯರ ಜೊತೆಯಾಗಲು ವೆರೈಟಿ ರೇಷ್ಮೆ ಸೀರೆಗಳು (Varamahalaxmi Saree fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 3 ಶೈಲಿಯವು ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ರೇಷ್ಮೆ ಸೀರೆಗಳ ಮಹಾಪೂರವೇ ಸೀರೆ ಸೆಂಟರ್ಗಳಿಗೆ ಹರಿದು ಬಂದಿದ್ದು, ಒಂದಕ್ಕಿಂತ ಒಂದು ಮನಮೋಹಕ ವಿನ್ಯಾಸದ ರೇಷ್ಮೆ ಸೀರೆಗಳು ಸ್ತ್ರೀಯರನ್ನು ಸೆಳೆಯುತ್ತಿವೆ. ಹಬ್ಬದ ಹೆಸರಲ್ಲಿ ಸೀರೆ ಖರೀದಿಯನ್ನು ಹೆಚ್ಚಿಸಿಕೊಂಡಿವೆ.
ಟ್ರೆಡಿಷನಲ್ ಸೀರೆಗಳಿಗೆ ಹೆಚ್ಚಾದ ಆದ್ಯತೆ
“ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ರೇಷ್ಮೆ ಸೀರೆಗಳು ಎಂಟ್ರಿ ನೀಡಿದ್ದು. ಅದರಲ್ಲೂ ಕಲಾತ್ಮಕವಾಗಿರುವ ಹಾಗೂ ಗ್ರ್ಯಾಂಡ್ ಲುಕ್ ನೀಡುವ ಸೀರೆಗಳು ಮಹಿಳೆಯರನ್ನು ಸೆಳೆದಿವೆ. ದೇವಿಗೆ ಉಡಿಸಲು ಮಾತ್ರವಲ್ಲ, ಮಹಿಳೆಯರು ಟ್ರೆಡಿಷನಲ್ ಆಗಿ ಕಾಣಿಸಬಹುದಾದ ಸೀರೆಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ” ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ ಪಾಯಲ್ ಸೇನ್ ಗುಪ್ತಾ. ಅವರ ಪ್ರಕಾರ, ಸೀರೆಗಳು ಮಹಿಳೆಯರ ಸೌಂದರ್ಯದ ಪ್ರತೀಕವಂತೆ.
ಡಿಸೈನ್ ಬಾರ್ಡರ್ ಲೆಸ್ ಸಾಫ್ಟ್ ಸಿಲ್ಕ್ ಸೀರೆ
ಇನ್ನು ಬಾರ್ಡರ್ ಇರದಂತಹ ಪ್ರಿಂಟ್ಸ್ ಹಾಗೂ ಅಬ್ಸ್ಟ್ರಾಕ್ಟ್ ಅಥವಾ ಜೆಮೆಟ್ರಿಕಲ್ ಡಿಸೈನ್ನ ಬಾರ್ಡರ್ಲೆಸ್ ಸೀರೆಗಳು ಕೂಡ ವೈವಿಧ್ಯಮಯ ಡಿಸೈನ್ಗಳಲ್ಲಿ ಆಗಮಿಸಿದ್ದು, ಹುಡುಗಿಯರನ್ನು ಇವು ಸೆಳೆಯುತ್ತಿವೆ.
ಆಕರ್ಷಕ ಗಾರ್ಡನ್ ಪ್ರಿಂಟ್ಸ್ ಸಿಲ್ಕ್ ಸೀರೆ
ಇಡೀ ಸೀರೆ ತುಂಬೆಲ್ಲಾ ಗಾರ್ಡನ್ ಪ್ರಿಂಟ್ಸ್ ಇರುವಂತಹ ಸಾಫ್ಟ್ ಹಾಗೂ ಸೆಮಿ ಸಾಫ್ಟ್ ಸಿಲ್ಕ್ ಸೀರೆಗಳು, ಗ್ರ್ಯಾಂಡ್ ಗೋಲ್ಡನ್ ಹಾಗೂ ಸಿಲ್ವರ್ ಬಾರ್ಡರ್ ಹೊಂದಿರುವಂತವು ಎಂಟ್ರಿ ನೀಡಿದ್ದು, ಉಟ್ಟಾಗ ಆಕರ್ಷಕವಾಗಿ ಕಾಣಿಸುತ್ತವೆ.
ಬಿಗ್ ಬಾರ್ಡರ್ ಸಿಲ್ಕ್ ಸೀರೆ
ಬಿಗ್ ಬಾರ್ಡರ್ ಸಿಲ್ಕ್ ಸೀರೆಗಳು ಮತ್ತೊಮ್ಮೆ ಹಬ್ಬದ ಸೀಸನ್ನಲ್ಲಿ ಹೊಸ ರೂಪದಲ್ಲಿ ಆಗಮಿಸಿದ್ದು, ಇವುಗಳ ಅಗಲವಾದ ಟ್ರೆಡಿಷನಲ್ ಬಾರ್ಡರ್ ಉಟ್ಟಾಗ ನೋಡಲು ಮನ ಸೆಳೆಯುತ್ತವೆ. ಇವುಗಳ ಕಾಂಟ್ರಾಸ್ಟ್ ಶೇಡ್ಗಳವು ಅತಿ ಹೆಚ್ಚು ಪ್ರಚಲಿತದಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festive Fashion: ಫೆಸ್ಟಿವ್ ಸೀಸನ್ನಲ್ಲಿ ಟ್ರೆಂಡ್ ಸೆಟ್ ಮಾಡಿದ ಚೈತ್ರಾ ವಾಸುದೇವನ್ ಸೌತ್ ಇಂಡಿಯನ್ ಲೆಹೆಂಗಾ!