ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮಾರಂಭಕ್ಕೆ ಇಲ್ಲವೇ ವೀಕೆಂಡ್ ಔಟಿಂಗ್‌ಗೆ ಹೋಗಬೇಕು ಎಂಬ ಆತುರದಲ್ಲಿರುತ್ತಿರಿ. ನಿಮ್ಮ ಫೇವರಿಟ್ ಡ್ರೆಸ್ ಇಲ್ಲವೇ ಶರ್ಟ್ ಹುಡುಕಾಡುತ್ತೀರಿ. ಆದರೆ, ಅದು ಸಿಗುವುದಿಲ್ಲ. ಯಾಕೆಂದರೆ, ನಿಮ್ಮ ಇಷ್ಟ ಬಂದ ಹಾಗೆ ಡ್ರೆಸ್‌ಗಳನ್ನು ತುರುಕಿರುತ್ತೀರಿ. ಈ ಮಧ್ಯೆ ಬೇಕಾದ ಉಡುಪು ಕೈಗೆ ಸಿಗುವುದಿಲ್ಲ. ಹಾಗಾಗಿ ಇಂತಹ ಸಂದರ್ಭ ಮತ್ತೆ ಎದುರಾಗಬಾರದು ಎಂದಾದರೆ ಆಗಾಗ ಸೀಸನ್‌ಗೆ ತಕ್ಕಂತೆ ವಾರ್ಡ್‌ರೋಬ್ ಆರ್ಗನೈಜ್ ಮಾಡಿ. ಈ ಬಗ್ಗೆ ಸ್ಟೈಲಿಸ್ಟ್ ಸೀಮಾ ಒಂದಿಷ್ಟು ಸಿಂಪಲ್ ಸೂತ್ರಗಳನ್ನು ನೀಡಿದ್ದಾರೆ.
ಆದ್ಯತೆ ಮೇರೆಗೆ ಒಪ್ಪವಾಗಿಡಿ
ಪ್ರತಿನಿತ್ಯ ಬೇಕಾಗಿರುವ ಫಾರ್ಮಲ್ ಹಾಗೂ ಕ್ಯಾಶುವಲ್ ಉಡುಪುಗಳು ಸುಲಭವಾಗಿ ಸಿಗುವಂತೆ ವಾರ್ಡ್‌ರೋಬ್‌ನ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಜೋಡಿಸಿಡಿ. ಅವುಗಳಿಗೆ ಸೂಟ್ ಆಗುವ ವಾಚ್, ಆಕ್ಸೆಸರೀಸ್‌ಗಳನ್ನು ಪಕ್ಕದ ಶೆಲ್‌ನಲ್ಲಿಡಿ. ಬಗೆಬಗೆಯ ಡ್ರೆಸ್‌ಗಳನ್ನು ಡಿವೈಡ್ ಮಾಡಿ ಪ್ರತ್ಯೇಕವಾಗಿ ಇರಿಸಿ. ಉದಾಹರಣೆಗೆ ಸೀರೆಗಳೆಲ್ಲವೂ ಒಂದೇ ಕಡೆ ಇರಲಿ. ಅದಕ್ಕೆ ಮ್ಯಾಚ್ ಆಗುವ ಪೆಟಿಕೋಟ್‌ಗಳು, ಬ್ಲೌಸ್‌ಗಳು, ಅದೇ ಕಂಪಾರ್ಟ್‌ಮೆಂಟ್‌ನಲ್ಲಿರಲಿ.
ದಿನ ಬಳಕೆಯ ಇನ್ನರ್‌ವೇರ್ ಬೇರೆಡೆ ಇರಿಸಿ. ಜೀನ್ಸ್ ಹಾಗೂ ಸಲ್ವಾರ್ ಪ್ರತ್ಯೇಕಿಸಿಡಿ. ವಾರ್ಡ್‌ರೋಬ್ ತುಂಬೆಲ್ಲಾ ಡ್ರೆಸ್‌ಗಳನ್ನು ತುಂಬಬೇಡಿ. ಬಳಸದ ಡ್ರೆಸ್‌ಗಳನ್ನು ತೆಗೆದಿಡಿ. ಪದೇ ಪದೇ ಧರಿಸುವ ದಿರಿಸುಗಳನ್ನು ಓರಣವಾಗಿ ವಾರ್ಡ್‌ರೋಬ್‌ನಲ್ಲಿ ಸುಲಭವಾಗಿ ದೊರೆಯುವಂತೆ ಜೋಡಿಸಿ.
ಜ್ಯುವೆಲರಿ ಮತ್ತು ಅಕ್ಸೆಸರಿಸ್
ಬೆಲೆ ಬಾಳುವ ಜ್ಯುವೆಲರಿಗಳನ್ನು ವಾರ್ಡ್‌ರೋಬ್‌ನ ಲಾಕ್ ಇರುವ ಲಾಕರ್‌ನಲ್ಲಿಡಿ. ಫಂಕಿ ಹಾಗೂ ಜಂಕ್ ಜುವೆಲರಿಗಳನ್ನು ಇವುಗಳೊಂದಿಗೆ ಮಿಕ್ಸ್ ಮಾಡಬೇಡಿ. ಪ್ರತಿದಿನ ಬಳಸುವಂತವನ್ನು ಕಬೋರ್ಡ್ನಲ್ಲಿರಿಸಿ ಡ್ರೆಸ್ಸಿಂಗ್ ಟೇಬಲ್ ಕಬೋರ್ಡ್ ಗಳಲ್ಲಿರಿಸಿ.
ಗ್ರ್ಯಾಂಡ್ ಉಡುಪುಗಳನ್ನು ಒಂದೆಡೆ ಜೋಡಿಸಿ
ಹಬ್ಬ ಹಾಗೂ ಮದುವೆ ಸಮಾರಂಭಗಳಿಗೆ ಧರಿಸುವಂತಹ ಗ್ರ್ಯಾಂಡ್ ಉಡುಪುಗಳಿಗೆ ವಾರ್ಡ್ರೋಬ್‌ನ ಒಂದೆಡೆ ಸ್ಥಾನ ಕಲ್ಪಿಸಿ. ಪದೇಪದೇ ಧರಿಸದ ಈ ಔಟ್‌ಫಿಟ್‌ಗಳು ವಾಸನೆ ಬರದಂತೆ ನ್ಯಾಫ್ತಾಲೀನ್ ಗುಳಿಗೆಗಳನ್ನು ಇರಿಸಿ. ಸೀರೆ, ಲೆಹೆಂಗಾ, ಗಾಗ್ರಾ, ಶರಾರ ಇತ್ಯಾದಿಗಳನ್ನು ಸೆಫ್ಟಿ ಕವರ್‌ನಲ್ಲಿಡಿ.
ನಿಮಗೆ ಫಿಟ್ ಆಗದ ಔಟ್‌ಫಿಟ್ ಬೇಡ
ನೀವು ಸ್ಲಿಮ್ ಆಗಿದ್ದಾಗ ಸುಮಾರು ವರ್ಷದ ಹಿಂದೆ ಖರೀದಿಸಿದ ಔಟ್‌ಫಿಟ್ ನಿಮಗೆ ಈಗ ಟೈಟ್ ಆಗಿರುತ್ತದೆ ಎಂದಾದಲ್ಲಿ, ಅದನ್ನು ಪ್ರತಿದಿನ ಧರಿಸುವ ಉಡುಪಿನೊಂದಿಗೆ ಇರಿಸುವುದು ಬೇಡ. ಮತ್ತೆ ಧರಿಸಬೇಕು ಎಂದಾದರೆ ನೀವು ಸ್ಲಿಮ್ ಆಗಬೇಕು,
ಸಾಧ್ಯವಿಲ್ಲವಾದರೆ ಅದನ್ನು ಡಿಸ್‌ಕಾರ್ಡ್ ಮಾಡಿ. ಓವರ್‌ಸೈಝ್ ಡ್ರೆಸ್‌ಗಳು ಲೂಸಾಗಿರುವ ಡ್ರೆಸ್‌ಗಳು ಫಿಟ್ಟಿಂಗ್ ಮಾಡಿಸಿ, ಅದಕ್ಕೂ ಸ್ಥಾನ ಕಲ್ಪಿಸಿ. ಹರಿದುಹೋಗಿರುವ ಜೀನ್ಸ್ ಸ್ಟೈಲಿಷ್ ಆಗಿರುತ್ತವೆ. ನಿಜ. ಆದರೆ ಎಂದೋ ನೀವು ಹೈಸ್ಕೂಲ್‌ಗೆ ಹೋಗುವಾಗ ಖರೀದಿಸಿದ ಜೀನ್ಸ್ ಮತ್ತು ತುಂಬಾ ಹಳೆಯದಾದ ಮೇಲಂಗಿಗಳು ಈಗ ಸೂಟ್ ಆಗುವುದಿಲ್ಲ. ಅಂತಹ ಡ್ರೆಸ್‌ಗಳನ್ನು ಡಿಸ್‌ಕಾರ್ಡ್ ಮಾಡಿ. ಮಾಸಿದ ಉಡುಪುಗಳನ್ನು ತೆಗೆದುಬಿಡಿ.
ವಾರ್ಡ್‌ರೋಬ್ ಸ್ವಚ್ಛತೆ
ಪ್ರತಿ 15 ದಿನಗಳಿಗೊಮ್ಮೆ ವಾರ್ಡ್‌ರೋಬ್ ಮರುಜೋಡಣೆ ಮಾಡುವುದನ್ನು ರೂಢಿಸಿಕೊಳ್ಳಿ. ಆಗ ನಿಮಗೆ ಬೇಕಾಗಿರುವ ಡ್ರೆಸ್ ಆಗಲಿ, ವಸ್ತುವಾಗಲಿ ಎಲ್ಲಿದೆ ಎಂಬ ಅರಿವು ನಿಮಗಿರುತ್ತದೆ. ಹುಡುಗಿಯರಿಗೆ ಅವರ ಡ್ರೆಸ್‌ಗಳ ಇನ್ನಿಲ್ಲದ ಪ್ರೀತಿ. ಅವು ಹಳೆಯದಾದರೂ ಉಡಲು ಯೋಗ್ಯವಾಗಿಲ್ಲದಿದ್ದರೂ ಆ ಡ್ರೆಸ್‌ಗಳು ಮತ್ತದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಬಿಸಾಡಲು ಅವರಿಗೆ ಇಷ್ಟವಾಗದು. ಅಂತಹ ಡ್ರೆಸ್‌ಗಳನ್ನು ಮೊದಲು ವಿಲೇವಾರಿ ಮಾಡಿ.
ಇದನ್ನೂ ಓದಿ| Fashion News: ರಾಕಿ ಸಾವಂತ್ ಜೊತೆಗೆ ಕನ್ನಡತಿ ರಶ್ಮಿ ರ‍್ಯಾಂಪ್ ವಾಕ್