ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ನಿರತರಾಗಿದ್ದ ವೇಳೆ ವ್ಯಕ್ತಿಯೊಬ್ಬ ಪಿಸ್ತೂಲ್ (Gun) ಸೊಂಟಕ್ಕೆ ಸಿಕ್ಕಿಸಿಕೊಂಡು ಹೋಗಿ, ಸಿಎಂ ಸೇರಿದಂತೆ ಮುಖಂಡರಿಗೆ ಹಾರ ಹಾಕಿದ ಪ್ರಕರಣದಲ್ಲಿ ಭದ್ರತಾ ವೈಫಲ್ಯ ಕಂಡುಬಂದಿದ್ದರಿಂದ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮುಖ್ಯಮಂತ್ರಿ ಬಳಿ ಹಾರ ಹಾಕಲು ಬಂದ ವ್ಯಕ್ತಿಯು ಗನ್ ಶೋ ಮಾಡಿದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಭದ್ರತಾ ವೈಫಲ್ಯ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಇನ್ಸ್‌ಪೆಕ್ಟರ್ ಅವರನ್ನು ಬಿಟ್ಟು ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪಿಎಸೈ ಮೆಹಬೂಬ್ ಹುಡ್ಡದಲ್ಲಿ, ಪೊಲೀಸ್ ಕಾನ್ಸ್‌ಟೇಬಲ್ ಮಂಜು ನಾಯಕ್, ಪೊಲೀಸ್ ಕಾನ್ಸ್‌ಟೇಬಲ್ ಸಚಿನ್ ಹಾಗೂ ಒಬ್ಬರು ಎಎಸ್‌ಐ ಅಮಾನತುಗೊಂಡಿದ್ದಾರೆ.
ಏನಿದು ಕೇಸ್?
ಏಪ್ರಿಲ್ 8ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಎಂಬಾತ ಸಿಎಂ ಬಳಿ ಬಂದು ಬೃಹತ್ ಹಾವನ್ನು ಹಾಕಿದ್ದಾಗ. ಆ ವೇಳೆ ರಿಯಾಜ್ ತನ್ನ ಸೊಂಟದಲ್ಲಿ ಇಟ್ಟುಕೊಂಡಿದ್ದ ರಿವಾಲ್ವರ್ ಸಾರ್ವಜನಿಕವಾಗಿ ಪ್ರದರ್ಶನಗೊಂಡಿತು. ಇದು ಮಾಧ್ಯಮಗಳಲ್ಲೂ ಬಿತ್ತರವಾಯಿತು. ಈ ಸಂಬಂಧ ಈಗ ತನಿಖೆ ನಡೆದಿದೆ. 5 ವರ್ಷದ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನ ಆಗಿತ್ತು. ಹೀಗಾಗಿ ಆತ ಲೈಸೆನ್ಸ್ ಪಡೆದುಕೊಂಡಿದ್ದರು.
ರಿಯಾಜ್ ಗನ್ ಮುಟ್ಟುಗೋಲು
ಎಲೆಕ್ಷನ್ ಸಮಯದಲ್ಲಿ ಗನ್ ಸರೆಂಡರ್ ಮಾಡಿರದ ರಿಯಾಜ್, ತಮಗೆ ಜೀವಭಯವಿದೆ ಎಂದು ಅರ್ಜಿ ನೀಡಿ ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. Z ಸೆಕ್ಯುರಿಟಿ ಭದ್ರತೆ ಸಿಎಂಗೆ ಇದೆ. ಹೀಗಾಗಿ ಸಿಎಂ ಬಳಿ ಬರುವವರನ್ನು ತಪಾಸಣೆ ನಡೆಸಿ ಹತ್ತಿರ ಬಿಡಬೇಕಿತ್ತು. ಗನ್ ಅನ್ನು ರಿಯಾಜ್ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ರಿಯಾಜ್ ಗನ್ ಮುಟ್ಟುಗೋಲು ಹಾಕಿಕೊಳ್ಳುವಂತೆ ದಕ್ಷಿಣ ವಿಭಾಗ ಡಿಸಿಪಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್ ಸವಾರ ಸಾವು, ಬಾಲಕ ಗಂಭೀರ
2019ರಲ್ಲಿ ರಿಯಾಜ್ ಮೇಲೆ ಹಲ್ಲೆ ನಡೆದಿತ್ತು
2019ರಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಮೇಲೆ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ, ಗನ್ ಇಟ್ಟುಕೊಳ್ಳಲು ಲೈಸೆನ್ಸ್‌ಗೆ ಅರ್ಜಿ ಹಾಕಿದ್ದ. ದಕ್ಷಿಣ ವಿಭಾಗ ಡಿಸಿಪಿ ಅರ್ಜಿ ಪರಿಶೀಲಿಸಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡಿದ್ದರು. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ ಸೈಯದ್ ರಿಯಾಜ್ ಮೇಲೆ ಅಟ್ಯಾಕ್ ನಡೆದಿತ್ತು. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ರಿಯಾಜ್ ಗನ್ ಪಡೆದುಕೊಂಡಿದ್ದ.