ಸಾವರಿನ್ ಗೋಲ್ಡ್ ಬಾಂಡ್ಗಳಲ್ಲಿ (sovereign gold bonds) ಕಳೆದ 8 ವರ್ಷಗಳಲ್ಲಿ ಹೂಡಿದವರಿಗೆ ಸರಾಸರಿ 13.7% ಆದಾಯ ಲಭಿಸಿದೆ. ಇದರೊಂದಿಗೆ ಚಿನ್ನದ ಬಾಂಡ್ಗಳು ಹೂಡಿಕೆಗೆ ಉತ್ತಮ ಎಂಬುದು ಸಾಬೀತಾದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಹಣದುಬ್ಬರದ ಮಟ್ಟಕ್ಕಿಂತಲೂ ಹೆಚ್ಚಿನ ಆದಾಯವನ್ನು ಗೋಲ್ಡ್ ಬಾಂಡ್ಗಳು ಕಳೆದ ಎಂಟು ವರ್ಷಗಳಲ್ಲಿ ನೀಡಿರುವುದನ್ನು ಗಮನಿಸಬಹುದು. ಹಣದುಬ್ಬರಕ್ಕಿಂತ ಕಡಿಮೆಯಾದರೆ ನಷ್ಟವಾಗುತ್ತದೆ. ಆದರೆ ಗೋಲ್ಡ್ ಬಾಂಡ್ಗಳು (SGBs) ಹೂಡಿಕೆದಾರರ ಕೈ ಹಿಡಿದಿವೆ.
ಸರ್ಕಾರ 2015ರ ನವೆಂಬರ್ನಿಂದ 63 tranches ಗಳಲ್ಲಿ ಗೋಲ್ಡ್ ಬಾಂಡ್ಗಳನ್ನು ಬಿಡುಗಡೆಗೊಳಿಸಿದ್ದು, ವಾರ್ಷಿಕ ಸರಾಸರಿ 13.7% ಆದಾಯ ನೀಡಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯ ನಡುವೆ ಬಂಗಾರದ ದರವನ್ನು ಆಧರಿಸಿದ ಹೂಡಿಕೆ ಲಾಭದಾಯಕವಾಗಿದೆ ಎಂದು ಹೂಡಿಕೆಯ ತಜ್ಞರು ತಿಳಿಸಿದ್ದಾರೆ.
ಗೋಲ್ಡ್ ಬಾಂಡ್ಗಳ 63 issuanceಗಳು ಹೂಡಿಕೆದಾರರಿಗೆ 4.48% ಮತ್ತು 51.89% ರ ನಡುವೆ ಆದಾಯ ನೀಡಿವೆ. ಅಂದರೆ ಅವರವರ ಹೂಡಿಕೆಯ ಅವಧಿಯನ್ನು ಆಧರಿಸಿ ಪ್ರತಿಫಲ ಸಿಕ್ಕಿದೆ. ಇದು ಸರ್ಕಾರ ನೀಡುವ 2.5% ಬಡ್ಡಿಯ ಹೊರತಾದ ಆದಾಯವಾಗಿದೆ.
ಆರಂಭದಲ್ಲಿ ಹೂಡಿದವರಿಗೆ ಹೆಚ್ಚು ಲಾಭ:
ಗೋಲ್ಡ್ ಬಾಂಡ್ಗಳಲ್ಲಿ (sovereign gold bonds) ಆರಂಭದಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚು ಲಾಭವಾಗಿದೆ. ಉದಾಹರಣೆಗೆ 2015ರ ನವೆಂಬರ್ನಲ್ಲಿ ಮೊದಲ 8 ವರ್ಷದ ಗೋಲ್ಡ್ ಬಾಂಡ್ ಖರೀದಿಸುವಾಗ ಪ್ರತಿ ಗ್ರಾಮ್ ಚಿನ್ನದ ದರ 2,684 ರೂ. ಇತ್ತು. ಈಗ ಗ್ರಾಮ್ಗೆ 6,017 ರೂ. ಇದೆ. ಇದು ಈ ವರ್ಷ ನವೆಂಬರ್ನಲ್ಲಿ Redemptionಗೆ ಬರಲಿದೆ. ಆಗ ಹೂಡಿದವರಿಗೆ 125% ರಿಟರ್ನ್ ಸಿಕ್ಕಿದಂತಾಗಲಿದೆ. ಅನೇಕ ಶ್ರೀಮಂತ ಹೂಡಿಕೆದಾರರು ಗೋಲ್ಡ್ ಬಾಂಡ್ಗಳಲ್ಲಿ ಹೂಡಿದ್ದಾರೆ. ಗೋಲ್ಡ್ ಫಂಡ್ ಅಥವಾ ಇಟಿಎಫ್ಗೆ ಹೋಲಿಸಿದರೆ ಎಸ್ಜಿಬಿಗಳಲ್ಲಿ ತೆರಿಗೆ ಅನುಕೂಲಗಳು ಹೆಚ್ಚು ಇರುವುದು ಇದಕ್ಕೆ ಕಾರಣ.
ಗೋಲ್ಡ್ ಬಾಂಡ್ಗಳಲ್ಲಿ 8 ವರ್ಷಗಳ ಹೂಡಿಕೆ ಬಳಿಕ ಸಿಗುವ ಆದಾಯ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಮುಕ್ತವಾಗಿರುತ್ತದೆ. ಜತೆಗೆ ಸರ್ಕಾರ ಕೂಡ ಬಾಂಡ್ ಮೌಲ್ಯಕ್ಕೆ 2.5% ಬಡ್ಡಿಯನ್ನೂ ಕೊಡುತ್ತದೆ. ಚಿನ್ನದ ಇತರ ಹೂಡಿಕೆಗಳ ಆದಾಯದ ಮೇಲೆ ವೈಯಕ್ತಿಕ ಆದಾಯ ತೆರಿಗೆ ಆಧರಿಸಿ ತೆರಿಗೆ ಇರುತ್ತದೆ. ಶ್ರೀಮಂತರಿಗೆ ಗರಿಷ್ಠ 30% ತನಕ ತೆರಿಗೆ ಬರಬಹುದು. ವೈಯಕ್ತಿಕವಾಗಿ ವ್ಯಕ್ತಿಯೊಬ್ಬ ಕನಿಷ್ಠ 1 ಗ್ರಾಂ ಹಾಗೂ ಗರಿಷ್ಠ 4 ಕೆ.ಜಿಗೆ ಸಮವಾಗುವಷ್ಟು ಗೋಲ್ಡ್ ಬಾಂಡ್ ಖರೀದಿಸಬಹುದು.
ಎಲ್ಲಿ ಖರೀದಿಸಬಹುದು?
ಸರ್ಕಾರ ಗೋಲ್ಡ್ ಬಾಂಡ್ಗಳ ಕಂತುಗಳನ್ನು ಬಿಡುಗಡೆಗೊಳಿಸಿದ ಬಳಿಕ ಹೂಡಿಕೆದಾರರು ನಿಗದಿತ ಬ್ಯಾಂಕ್ ಶಾಖೆಗಳು, ಅಂಚೆ ಕಚೇರಿ ಶಾಖೆಗಳು, ಷೇರು ವಿನಿಮಯ ಕೇಂದ್ರಗಳಲ್ಲಿ ಗೋಲ್ಡ್ ಬಾಂಡ್ಗಳನ್ನು ಖರೀದಿಸಬಹುದು. ಕೆಲ ಬ್ಯಾಂಕ್ಗಳ ವೆಬ್ ಸೈಟ್ ಮೂಲಕ ಆನ್ಲೈನ್ನಲ್ಲೂ ಗೋಲ್ಡ್ ಬಾಂಡ್ ಖರೀದಿಸಬಹುದು.
ಗೋಲ್ಡ್ ಬಾಂಡ್ ಹೂಡಿಕೆಯ ಪ್ರಯೋಜನಗಳೇನು?
ಭೌತಿಕ ಬಂಗಾರ (Physical gold) ಖರೀದಿಸುವುದಕ್ಕೆ ಗೋಲ್ಡ್ ಬಾಂಡ್ ಪರ್ಯಾಯ ವಿಧಾನ. ಕೆಳಕಂಡ ಪ್ರಯೋಜನಗಳು ಸಿಗುತ್ತದೆ.
ಗೋಲ್ಡ್ ಬಾಂಡ್ಗಳು ಅತ್ಯಂತ ಸುರಕ್ಷಿತ. ನಿರ್ವಹಣೆಯ ಅಪಾಯ ಇರುವುದಿಲ್ಲ
ಹೂಡಿಕೆದಾರರಿಗೆ ಗ್ರಾಮ್ ಚಿನ್ನದ ಮೌಲ್ಯದ ಮೇಲೆ ವಾರ್ಷಿಕ 2.50% ಬಡ್ಡಿಯನ್ನೂ ಸರ್ಕಾರ ನೀಡುತ್ತದೆ.
ಚಿನ್ನದ ದರ ಏರಿಕೆಯಾದಾಗ ಬಾಂಡ್ನಲ್ಲಿನ ಹೂಡಿಕೆಯ ರಿಟರ್ನ್ ಕೂಡ ಹೆಚ್ಚುತ್ತದೆ.
ಎಸ್ಜಿಬಿಯಲ್ಲಿ ಸಿಗುವ ಆದಾಯಕ್ಕೆ ಟಿಡಿಎಸ್ ಇರುವುದಿಲ್ಲ
ಎಸ್ಜಿಬಿ ದರ 999 ಪ್ಯೂರಿಟಿ ಚಿನ್ನದ ದರದ ಜತೆ ಲಿಂಕ್ ಆಗಿರುತ್ತದೆ
ಗೋಲ್ಡ್ ಬಾಂಡ್ ಅಡಮಾನ ಇಟ್ಟು ಸಾಲ ಪಡೆಯಬಹುದು
ಬಾಂಡ್ ಅವಧಿ 8 ವರ್ಷವಾದರೂ, 5 ವರ್ಷದ ಬಳಿಕ ಹಿಂತೆಗೆದುಕೊಳ್ಳಬಹುದು.