Site icon Vistara News

Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು?

Money Guide

ಬೆಂಗಳೂರು: ಭಾರತದಲ್ಲಿ ಪ್ರತಿಯೊಂದು ವಾಹನ ವಿಮೆಯನ್ನು (Vehicle insurance) ಹೊಂದಿರುವುದು ಕಡ್ಡಾಯ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಒಂದು ವೇಳೆ ವಾಹನ ಕಳ್ಳತನವಾದರೆ ಅಥವಾ ಅಪಘಾತದಂತಹ ಅನಿರೀಕ್ಷಿತ ಸಮಸ್ಯೆ ಎದುರಾದರೆ ವಾಹನ ವಿಮಾ ಪಾಲಿಸಿ ಆರ್ಥಿಕವಾಗಿ ಸಹಾಯ ಮಾಡುತ್ತದೆ. ವಾಹನ ಮಾದರಿಗಳನ್ನು ಆಧರಿಸಿ ವಿಮೆಯ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಇದರ ಜತೆಗೆ ಈಗ ಕಾರಿಗೆ ʼಚಲಾಯಿಸಿದಷ್ಟೇ ಪಾವತಿʼ (Pay as You Drive-PAYD) ವಿಧಾನ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ (Money Guide).

ವಾಹನ ವಿಮೆಯಲ್ಲಿನ ವಿಧಗಳು

ಸಾಮಾನ್ಯ ವಾಹನ ವಿಮೆಯಲ್ಲಿ 2 ವಿಧಗಳಿವೆ. ಮೊದಲನೆಯದ್ದು ಮೂರನೇ ವ್ಯಕ್ತಿಯಿಂದ ಪಡೆದುಕೊಳ್ಳುವಂತದ್ದು. ಇದು ಭಾರತದಲ್ಲಿ ಕಡ್ಡಾಯ. ಮತ್ತೊಂದು ಸಮಗ್ರ ವಿಮಾ ಪಾಲಿಸಿ. ಮೂರನೇ ವ್ಯಕ್ತಿಯ ವಿಮೆಯನ್ನು ಬಹುತೇಕ ಡೀಲರ್‌ಗಳೇ ಒದಗಿಸುತ್ತಾರೆ ಹಾಗೂ ಪ್ರೀಮಿಯಂ ವಾಹನದ ಬೆಲೆಯನ್ನು ಅವಲಂಬಿಸಿರುತ್ತದೆ. ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು, ವೈಯಕ್ತಿಕ ಅಪಘಾತಗಳು ಮತ್ತು ಕಳ್ಳತನಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ವಿಮೆಗೆ ಹೋಲಿಸಿದರೆ ದುಬಾರಿ. ಇನ್ನು ಚಲಾಯಿಸಿದಷ್ಟೇ ಪಾವತಿ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಹೇಗೆ ಲೆಕ್ಕ ಹಾಕಲಾಗುತ್ತದೆ?

ಕಿ.ಮೀ. ಲೆಕ್ಕಾಚಾರ: ನೀವು ಕಾರು ಓಡಿಸಲು ನಿರೀಕ್ಷಿಸುವ ಒಟ್ಟು ಕಿಲೋ ಮೀಟರ್‌ಗಳನ್ನು ಪಾಲಿಸಿ ಅವಧಿಯಲ್ಲಿ ನೀವು ಅಂದಾಜು ಮಾಡಿ ಸೂಕ್ತವಾದ ಸ್ಲ್ಯಾಬ್ ಅನ್ನು ಆಯ್ಕೆ ಮಾಡಿ.

ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ: ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ವೇಗ, ದೂರ, ದಿನದ ಸಮಯ ಮತ್ತು ಚಾಲನಾ ಮಾದರಿಗಳು ಸೇರಿದಂತೆ ಚಾಲನೆಯ ವಿವಿಧ ಅಂಶಗಳ ಬಗ್ಗೆ ಡೇಟಾವನ್ನು ಸಂಗ್ರಹಿಸಿ ಪ್ರೀಮಿಯಂ ನಿರ್ಧರಿಸಲಾಗುತ್ತದೆ.

ಪ್ರೀಮಿಯಂ ಮೊತ್ತ ನಿರ್ಧಾರ: ನೀವು ಆಯ್ಕೆ ಮಾಡಿದ ಕಿ.ಮೀ. ಸ್ಲ್ಯಾಬ್‌ನ ಆಧಾರದ ಮೇಲೆ ಕಂಪನಿ ಪ್ರೀಮಿಯಂ ನಿರ್ಧರಿಸುತ್ತದೆ.

ಟ್ರ್ಯಾಕಿಂಗ್: ಟೆಲಿಮ್ಯಾಟಿಕ್ಸ್ ಉಪಕರಣವನ್ನು ಬಳಸಿಕೊಂಡು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಮೂಲಕ ವಾಹನದ ಮೈಲೇಜ್ ಅನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಪ್ರೀಮಿಯಂ ಹೊಂದಾಣಿಕೆ: ಪಾಲಿಸಿ ಅವಧಿಯ ಕೊನೆಯಲ್ಲಿ ನಿಮ್ಮ ನಿಜವಾದ ಮೈಲೇಜ್ ಅನ್ನು ಘೋಷಿತ ಮೈಲೇಜ್‌ಗೆ ಹೋಲಿಸಲಾಗುತ್ತದೆ. ನೀವು ಕಡಿಮೆ ಚಾಲನೆ ಮಾಡಿದ್ದರೆ ನೀವು ಮರುಪಾವತಿ ಪಡೆಯುತ್ತೀರಿ. ನೀವು ಹೆಚ್ಚು ಚಾಲನೆ ಮಾಡಿದ್ದರೆ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಅನುಕೂಲಗಳೇನು?

ಅನಾನುಕೂಲ

ಇದನ್ನೂ ಓದಿ: Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Exit mobile version