ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ಮತ್ತು ರುಪೇ ಕ್ರೆಡಿಟ್ ಕಾರ್ಡ್ ಜತೆ ಲಿಂಕ್ ಮಾಡಲು ಬುಧವಾರ ಪ್ರಕಟಿಸಿದ ತನ್ನ ಹಣಕಾಸು ನೀತಿಯಲ್ಲಿ ಸಮ್ಮತಿಸಿದೆ. ಇದರಿಂದಾಗಿ ಕ್ರೆಡಿಟ್ ಕಾರ್ಡ್‌ದಾರರೂ ಶೀಘ್ರದಲ್ಲಿ ಜನಪ್ರಿಯ ಯುಪಿಐ ಅಪ್ಲಿಕೇಶನ್‌ಗಳಾದ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇತ್ಯಾದಿಗಳ ಜತೆಗೆ ತಮ್ಮ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿಕೊಂಡು ಪ್ರಯೋಜನ ಪಡೆಯಬಹುದು. ಇದು ಬಳಕೆದಾರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ (Unified Payments Interface) ಜತೆ ಲಿಂಕ್ ಕಲ್ಪಿಸಲು ಆರ್‌ಬಿಐ ಅನುಮತಿ ನೀಡಿದೆ. ಆರಂಭದಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಇದು ಹೆಚ್ಚಿಸುವ ನಿರೀಕ್ಷೆ ಇದೆ. ಭವಿಷ್ಯದ ದಿನಗಳಲ್ಲಿ ಕೋಟ್ಯಂತರ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರಯೋಜನವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸುಮಾರು 7 ಕೋಟಿ ಕ್ರೆಡಿಟ್ ಕಾರ್ಡ್‌ದಾರರಿದ್ದಾರೆ.
ಪ್ರಸ್ತುತ ಡೆಬಿಟ್ ಕಾರ್ಡ್‌ಗಳಿಗೆ ಮಾತ್ರ ಯುಪಿಐ ಜತೆ ಲಿಂಕ್ ಮಾಡಬಹುದು. ಇದರಿಂದ ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಅಪ್ಲಿಕೇಶನ್‌ಗಳಾದ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮೊದಲಾದವುಗಳ ಜತೆ ಲಿಂಕ್ ಮಾಡಿ ಬಳಸಬಹುದು. ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ಬಳಿಕ ಪೇಮೆಂಟ್ ಮೋಡ್ ಆಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು.
ಯುಪಿಐ ಮೂಲಕ ಹಣಕಾಸು ವರ್ಗಾವಣೆ ಭಾರತದಲ್ಲಿ ಈಗ ಜನಪ್ರಿಯವಾಗಿದೆ. ಕಳೆದ ಮೇನಲ್ಲಿ 594 ಕೋಟಿ ವರ್ಗಾವಣೆಗಳು ನಡೆದಿತ್ತು. ಇದರ ಮೌಲ್ಯ 10.40 ಲಕ್ಷ ಕೋಟಿ ರೂ. ಆಗಿದೆ.
ಆರಂಭದಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಅವಕಾಶ
ಆರ್‌ಬಿಐ ಆರಂಭಿಕ ಹಂತದಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಮಾತ್ರ ಯುಪಿಐ ನೆಟ್ ವರ್ಕ್ ಜತೆ ಲಿಂಕ್ ಮಾಡಲು ಅನುಮತಿ ನೀಡಿದೆ.
ಆರ್‌ಬಿಐ ಶುಲ್ಕ ನಿಗದಿಪಡಿಸಿಲ್ಲ
ಯುಪಿಐ ಪೇಮೆಂಟ್‌ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವುದಕ್ಕೆ ಸಂಬಂಧಿಸಿ ಆರ್‌ಬಿಐ ಯಾವುದೇ ಶುಲ್ಕವನ್ನು ಇದುವರೆಗೆ ನಿಗದಿಪಡಿಸಿಲ್ಲ. ಬ್ಯಾಂಕ್‌ಗಳು ನಿಯಮಿತ ಶುಲ್ಕ ವಿಧಿಸುವ ಸಾಧ್ಯತೆ ಇದೆ.
ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಜತೆಗೆ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಏಕೆಂದರೆ ದುಬಾರಿ ಪಿಒಎಸ್ ಮೆಶೀನ್‌ನ ಅಗತ್ಯ ಇರುವುದಿಲ್ಲ.
ಯುಪಿಐ-ಕ್ರೆಡಿಟ್ ಕಾರ್ಡ್ ಲಿಂಕ್‌ನಿಂದ ಲಾಭವೇನು?
- ಬಳಕೆದಾರರಿಗೆ ನಾನಾ ವಿಧದ ಬಿಲ್ಗಳನ್ನು ಯುಪಿ-ಕ್ರೆಡಿಟ್ ಕಾರ್ಡ್ ಲಿಂಕ್‌ನಿಂದ ಪಾವತಿಸಬಹುದು.
- ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇತ್ಯಾದಿಗಳಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಬಳಸಿಯೂ ಹಣಕಾಸು ವರ್ಗಾವಣೆ ಮಾಡಬಹುದು.
- ವ್ಯಾಪಾರಿಗಳಿಗೆ, ವರ್ತಕರಿಗೆ ಪಿಒಎಸ್ ಮೆಶೀನ್ ಅಥವಾ ಕಾರ್ಡ್ ಸ್ವೈಪಿಂಗ್ ಮೆಶೀನ್ ಅಗತ್ಯ ಇರುವುದಿಲ್ಲ.
- ಪಿಒಎಸ್ ಮೆಶೀನ್ ದುಬಾರಿ, ಅದರ ಬದಲಿ ಯುಪಿಐ-ಕ್ರೆಡಿಟ್ ಕಾರ್ಡ್ ಲಿಂಕ್ ಬಳಕೆ ವರ್ತಕರಿಗೆ ಅನುಕೂಲಕಾರಿ