ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 208 ಪ್ರಕಾರ, 10,000 ರೂ.ಗಿಂತ ಹೆಚ್ಚು ತೆರಿಗೆ ಉತ್ತರದಾಯಿತ್ವ ಇದ್ದರೆ ಮಾತ್ರ ಮುಂಗಡ ತೆರಿಗೆ ಪಾವತಿಸುವ ಪರಿಸ್ಥಿತಿ ಉಂಟಾಗುತ್ತದೆ. ಇತರ ಮೂಲಗಳ ಆದಾಯ ಇದ್ದರೆ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (Self Assessment Tax) ನೀಡಬೇಕಾಗುತ್ತದೆ.
ಏನಿದು ಮುಂಗಡ ತೆರಿಗೆ?
ಮುಂಗಡ ತೆರಿಗೆ ಒಂದು ವಿಧದ ನೇರ ತೆರಿಗೆ. ಆರ್ಥಿಕ ವರ್ಷದಲ್ಲಿ ವೈಯಕ್ತಿಕ ಒಟ್ಟು ಆದಾಯವನ್ನು ಮೊದಲೇ ಅಂದಾಜಿಸಿ ನೀಡುವ ತೆರಿಗೆಯಿದು. ಮುಂಗಡ ತೆರಿಗೆ ಪಾವತಿಯಲ್ಲಿ ವಿಫಲವಾದರೆ, ಅದಕ್ಕೆ ಸೆಕ್ಷನ್ 234 ಬಿ ಹಾಗೂ 234 ಸಿ ಅಡಿಯಲ್ಲಿ 1% ಸರಳ ಬಡ್ಡಿ ಅನ್ವಯವಾಗುತ್ತದೆ.
ಏನಿದು ಸೆಲ್ಫ್ ಅಸೆಸ್ಮೆಂಟ್ ತೆರಿಗೆ?
ಇತರ ಮೂಲಗಳ ಆದಾಯ ಇದ್ದರೆ, ಅದಕ್ಕೆ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ (SAT) ಅನ್ವಯವಾಗುತ್ತದೆ. ಇದು ಟಿಡಿಎಸ್ ಕಡಿತದ (Tax Deducted at source) ಬಳಿಕ ನೀಡಬೇಕಾಗುವ ಅಂತಿಮ ತೆರಿಗೆ ಉತ್ತರದಾಯಿತ್ವ.
ಮುಂಗಡ ತೆರಿಗೆಯನ್ನು ಪಾವತಿಸುವುದು ಹೇಗೆ?
ಆನ್ಲೈನ್ ಪಾವತಿ ಹೀಗೆ:
ಕೆಳಗಿನ ವೆಬ್ಸೈಟ್ಗೆ ಲಾಗಿನ್ ಆಗಿ: http://www.tin-nsdl.com > Services > e-payment
ಚಲನ್ ITNS 280 ಆಯ್ಕೆ ಮಾಡಿಕೊಳ್ಳಿ.
ಚಲನ್ ಭರ್ತಿ ಮಾಡಿ, ( Advance Tax check box)
ಅರ್ಜಿ ಭರ್ತಿಗೊಳಿಸಿದ ಬಳಿಕ ನಿಮ್ಮ ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಸೈಟ್ಗೆ ಲಾಗಿನ್ ಆಗಬೇಕಾಗುತ್ತದೆ.
ನೆಟ್ ಬ್ಯಾಂಕಿಂಗ್ ಪೋರ್ಟಲ್ಗೆ ಲಾಗಿನ್ ಆದ ಬಳಿಕ ಪಾವತಿಯ ವಿವರಗಳನ್ನು ಭರ್ತಿಗೊಳಿಸಿ.
ಯಶಸ್ವಿ ಪೇಮೆಂಟ್ ಬಳಿಕ ಬ್ಯಾಂಕ್ ಪೇಮೆಂಟ್ ವಿವರಗಳನ್ನು ಡಿಸ್ಪ್ಲೇ ಮಾಡುತ್ತದೆ.
ಚಲನ್ ಅನ್ನು ಪೇಮೆಂಟ್ ಪ್ರೂಫ್ ಆಗಿ ಬಳಸಬಹುದು.
ಆಫ್ಲೈನ್ ಪಾವತಿ:
ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಿಂದ ಅರ್ಜಿಯ ಪ್ರಿಂಟ್ ಔಟ್ ಪಡೆಯಿರಿ.
ಚಲನ್ ಮಾಹಿತಿಯನ್ನು ಭರ್ತಿಗೊಳಿಸಿ. ನಗದು ಅಥವಾ ಚೆಕ್ ಸಹಿತ ಆದಾಯ ತೆರಿಗೆ ಪೇಮೆಂಟ್ ಸ್ವೀಕರಿಸುವ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಿ.
ಮುಂಗಡ ತೆರಿಗೆ ಲೆಕ್ಕಾಚಾರ ಹೇಗೆ?
ವ್ಯಕ್ತಿಯ ಒಟ್ಟು ಅಂದಾಜು ಮುಂಗಡ ತೆರಿಗೆ ಯಾವ ಶ್ರೇಣಿಯ ತೆರಿಗೆ ದರಕ್ಕೆ ಬರಲಿದೆ ಎಂಬುದನ್ನು ಪರಿಗಣಿಸಿ ಲೆಕ್ಕಾಚಾರ ನಿರ್ಣಯವಾಗುತ್ತದೆ.
ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಅನ್ನು ಆನ್ಲೈನ್ನಲ್ಲಿ ಪಾವತಿಸುವುದು ಹೇಗೆ?
ಆದಾಯ ತೆರಿಗೆ ಇಲಾಖೆ ವೆಬ್ಸೈಟ್ಗೆ ಲಾಗಿನ್ ಆಗಿರಿ.
ಇ-ಪೇ ಟ್ಯಾಕ್ಸ್ ಮೇಲೆ ಕ್ಲಿಕ್ಕಿಸಿ.
ನ್ಯಾಶನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ ವೆಬ್ಸೈಟ್ಗೆ ಈ ಲಿಂಕ್ ಕಲ್ಪಿಸುತ್ತದೆ.
ಚಲನ್ ನಂ/ ITNS 280 ಆಯ್ಕೆ ಮಾಡಿರಿ.
ಪ್ಯಾನ್ ಕಾರ್ಡ್, ಹೆಸರು, ಸಂಪರ್ಕ ವಿವರಗಳನ್ನು ನಮೂದಿಸಿ.
ಬ್ಯಾಂಕ್ ವಿವರ ಭರ್ತಿಗೊಳಿಸಿ. Tax payable amount ನಮೂದಿಸಿ.
ವಿವರಗಳನ್ನು ಭರ್ತಿಗೊಳಿಸಿದ ಬಳಿಕ ಚಲನ್ ಡಿಸ್ಪ್ಲೇ ಆಗುತ್ತದೆ. ಇದರಲ್ಲಿ CIN ಇರುತ್ತದೆ.
ಚಲನ್ನ ಸ್ಕ್ಯಾನ್ ಅಥವಾ ಹಾರ್ಡ್ ಕಾಪಿ ಇಟ್ಟುಕೊಳ್ಳಿ.