Site icon Vistara News

ದೇಶದಲ್ಲಿ ಮತ್ತೆ ಏರಿದ ತೈಲ ದರ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹110ಗಳತ್ತ..!

ನವದೆಹಲಿ: ದೇಶದಲ್ಲಿ ತೈಲ ಬೆಲೆ ರಾಕೆಟ್‌ ವೇಗದಲ್ಲಿ ಮುನ್ನುಗುತ್ತಿದೆ. ಸೋಮವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ 40 ಪೈಸೆಯಷ್ಟು ಹೆಚ್ಚಾಗಿದೆ.

ಈ ಮೂಲಕ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹110ಗಳತ್ತ ಸಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹109.41 ತಲುಪಿದ್ದು, ಡೀಸೆಲ್ ಬೆಲೆ ₹93.23 ಏರಿಕೆಯಾಗಿದೆ.

ಕಳೆದ 2 ವಾರದಲ್ಲಿ 12ನೇ ಬಾರಿಗೆ ತೈಲ ದರ ಹೆಚ್ಚಾಗಿದ್ದು, ಈವರೆಗೂ ಪೆಟ್ರೋಲ್‌ ಬೆಲೆ ₹8.40 ಹೆಚ್ಚಾಗಿದೆ . ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹103.81 ಏರಿಕೆಯಾಗಿದೆ. ಲೀಟರ್ ಡೀಸೆಲ್ ಬೆಲೆ ₹95.07 ತಲುಪಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್​ ₹118.83, ಡೀಸೆಲ್ ₹103.07ಕ್ಕೆ ಹೆಚ್ಚಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ ₹109.34 ಹಾಗೂ ಲೀಟರ್ ಡೀಸೆಲ್ ದರ ₹99.42 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ ₹113.03, ಡೀಸೆಲ್ ಬೆಲೆ ಲೀಟರ್​ಗೆ ₹97.82 ಏರಿಕೆಯಾಗಿದೆ.

Exit mobile version