Site icon Vistara News

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

India Pakistan War

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 1947-48ರಿಂದ ಇದುವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧ (India Pakistan War) ಮಾಡಿದೆ ಹಾಗೂ ನಾಲ್ಕು ಬಾರಿಯೂ ಸೋತು ಸುಣ್ಣವಾಗಿದೆ. ಇಷ್ಟಾದರೂ, ಗಡಿಯಲ್ಲಿ ಉದ್ಧಟತನ ಮಾಡುವುದು, ಉಗ್ರರನ್ನು ಛೂ ಬಿಡುವುದನ್ನು ಮಾತ್ರ ಕುತಂತ್ರಿ ಪಾಕಿಸ್ತಾನ ಬಿಟ್ಟಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಈಗ ಪಾಕಿಸ್ತಾನದ 600 ಕಮಾಂಡೋಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಾರ್ಗಿಲ್‌ (Kargil War) ಮಾದರಿಯಲ್ಲೇ ಉಭಯ ದೇಶಗಳ ಮಧ್ಯೆ ಮತ್ತೊಂದು ಯುದ್ಧ ಆರಂಭವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಹೌದು, ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಸ್ಫೋಟಕ ಮಾಹಿತಿ ನೀಡಿರುವುದು ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. “ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್‌ ಆಫಿಸರ್‌ ಕಮಾಂಡಿಂಗ್‌ (ಜಿಒಸಿ) ಮೇಜರ್‌ ಜನರಲ್‌ ಆದಿಲ್‌ ರೆಹಮಾನಿಯು ಜಮ್ಮು ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾನೆ. ಪಾಕಿಸ್ತಾನದ 600 ಕಮಾಂಡೋಗಳು ಭಾರತಕ್ಕೆ ನುಗ್ಗಿದ್ದು, ಕುಪ್ವಾರದಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದಾಗಿ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಪೋಸ್ಟ್‌ ಮಾಡಿದ್ದಾರೆ.

“ಕಣಿವೆಯ ಸ್ಥಳೀಯ ಜಿಹಾದಿ ಹೋರಾಟಗಾರರು ಪಾಕಿಸ್ತಾನದ ಪರವಾಗಿ ಹೋರಾಡಲು ಸಜ್ಜಾಗಿದ್ದಾರೆ. ಜಮ್ಮುವಿನಲ್ಲಿ ನಡೆಯುತ್ತಿರುವ ದಾಳಿಯ ಉಸ್ತುವಾರಿಯನ್ನು ಪಾಕಿಸ್ತಾನದ ಲೆಫ್ಟಿನೆಂಟ್‌ ಕರ್ನಲ್‌ ಶಾಹಿದ್‌ ಸಲೀಮ್‌ ಜಂಜುವಾ ವಹಿಸಿಕೊಂಡಿದ್ದಾನೆ. ಭಾರತೀಯ ಸೇನೆಯ 15 ಕಾರ್ಪ್ಸ್‌ ಯೋಧರೇ ಅವರ ಗುರಿಯಾಗಿದ್ದಾರೆ. ಇನ್ನೂ ಎರಡು ಬೆಟಾಲಿಯನ್‌ಗಳು ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಲು ಮುಂದಾಗಿದ್ದಾರೆ” ಎಂದು ಎಚ್ಚರಿಸಿದ್ದಾರೆ. ಇದು ಈಗ ಆತಂಕದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.

ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ (BSF) ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕೃತ್ಯಗಳು ಹೆಚ್ಚಾಗಿರುವ ಕಾರಣ ಹೆಚ್ಚಿನ ಭದ್ರತೆಗಾಗಿ ಬಿಎಸ್‌ಎಫ್‌ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ವಾರ್ನಿಂಗ್‌ ಕೊಟ್ಟಿರುವ ಮೋದಿ

ಜುಲೈ 26ರ ಕಾರ್ಗಿಲ್‌ ವಿಜಯ ದಿವಸದಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. “ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ. ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

ಇದನ್ನೂ ಓದಿ: ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Exit mobile version