Site icon Vistara News

ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ & ಅಡುಗೆ ಅನಿಲ ದರ ಹೆಚ್ಚಳ

petrol

ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ ಗೆ 80 ಪೈಸೆಯಷ್ಟು ಏರಿಕೆಯಾಗಿದ್ದು, ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 96 ರೂಪಾಯಿ 21 ಪೈಸೆಯಾಗಿದೆ. ಈ ಹಿಂದೆ ದೆಹಲಿಯಲ್ಲಿ ಪೆಟ್ರೋಲ್ ದರ 95 ರೂಪಾಯಿ 41 ಪೈಸೆಯಾಗಿತ್ತು. ಡೀಸೆಲ್ ಬೆಲೆ 86 ರೂಪಾಯಿ 67 ಪೈಸೆಯಿಂದ 87 ರೂಪಾಯಿ 47 ಪೈಸೆಗೆ ಹೆಚ್ಚಳವಾಗಿದೆ.

14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 949 ರೂಪಾಯಿ 50 ಪೈಸೆಯಾಗಿದೆ. ೨೦೨೧ರ ಅಕ್ಟೋಬರ್ 6ರಂದು ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳವಾಗಿತ್ತು. ಹಾಗೆಯೇ 2021ರ ನವೆಂಬರ್ 4ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ನಾಲ್ಕೂವರೆ ತಿಂಗಳಿನಿಂದ ದೇಶದಲ್ಲಿ ಇಂಧನ ದರ ಏರಿಕೆಯಾಗಿರಲಿಲ್ಲ.

ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 101 ರೂಪಾಯಿ 42 ಪೈಸೆಯಾಗಿದೆ. ಇನ್ನು ಡೀಸೆಲ್ ದರ ಲೀಟರ್‌ಗೆ 85 ರೂಪಾಯಿ 80 ಪೈಸೆಯಾಗಿದೆ. ಇನ್ನು ಎಲ್‌ಪಿಜಿ ಸಿಲಿಂಡರ್ ಬೆಲೆ 902 ರೂಪಾಯಿ 50 ಪೈಸೆಯಾಗಿದೆ. 

ಇಂದಿನ ತೈಲ ಬೆಲೆ (ಪ್ರತಿ ಲೀ.)

ನಗರಪೆಟ್ರೋಲ್‌ಡೀಸೆಲ್
ಬೆಂಗಳೂರು₹101.41₹85.80
ದೆಹಲಿ ₹96.21₹87.47
ಮುಂಬೈ₹110.82₹95.00
ಚೆನ್ನೈ₹102.16₹92.19
ಕೋಲ್ಕತ್ತಾ₹105.51₹90.62

Exit mobile version