ನವದೆಹಲಿ: ಪಾಕಿಸ್ತಾನಕ್ಕೆ (Pakistan) ಹಣಕಾಸಿನ ಸಹಾಯದ ಜತೆಗೆ ಸೇನಾ ನೆರವನ್ನು (Military Aid) ಚೀನಾ (China) ನೀಡುತ್ತಿರುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದೀಗ, ಚೀನಾ ಪಾಕಿಸ್ತಾನವನ್ನು ಬಳಸಿಕೊಂಡು ಭಾರತದ ಮಗ್ಗಲಿನಲ್ಲೇ ಬಂದು ಕೂತಿದೆ. ಹೌದು, ಎನ್‌ಡಿ ಟಿವಿ ವರದಿಯ ಪ್ರಕಾರ, ಕರಾಚಿ ಬಂದರಿನಲ್ಲಿ (Karachi Port) ಚೀನೀ ಯುದ್ಧನೌಕೆಗಳು(Warships), ಜಲಾಂತರ್ಗಾಮಿ (Submarine) ಮತ್ತು ಸೇನಾ ಬೆಂಬಲ ವ್ಯವಸ್ಥೆಯ ಉಪಸ್ಥಿತಿಯನ್ನು ಉಪಗ್ರಹ ಚಿತ್ರಗಳು ಸೂಚಿಸುತ್ತವೆ. ಅಂದರೆ, ಸೇನಾ ಅಭ್ಯಾಸ ನೆಪದಲ್ಲಿ ಚೀನಾ ಭಾರತದ ಹತ್ತಿರಕ್ಕೆ ತನ್ನ ಯುದ್ಧ ನೌಕಾ ಹಡಗುಗಳನ್ನು ಲಂಗುರ ಹಾಕಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ.
ಸೀ ಗಾರ್ಡಿಯನ್ -3 ಸೇನಾ ಅಭ್ಯಾಸವು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ಗಮನಾರ್ಹವಾಗಿ ವಿಸ್ತರಿಸಿದ ಸಮಯದಲ್ಲಿ ಬಂದಿವೆ. ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನು ಒಳಗೊಂಡಿದೆ. ಜತೆಗೆ, ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ ನಾಲ್ಕು ಟೈಪ್-054 A/P ಫ್ರಿಗೇಟ್‌ಗಳು ಸೇರಿದಂತೆ ಹಲವಾರು ಆಧುನಿಕ ವೇದಿಕೆಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಕೂಡ ಇದರಲ್ಲೇ ಸೇರಿದೆ.
ಕಳೆದ ವರ್ಷ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನೀ ಕಣ್ಗಾವಲು ಮತ್ತು ಸಮುದ್ರಶಾಸ್ತ್ರೀಯ ಸಮೀಕ್ಷೆ ಹಡಗುಗಳು ಸಹ ಪತ್ತೆಯಾಗಿದ್ದವು. ಈ ತಿಂಗಳ ಆರಂಭದಲ್ಲಿ, ಚೀನಾದ ಸಾಗರ ಸಂಶೋಧನಾ ಹಡಗು, ಶಿ ಯಾನ್ 6 ಕೊಲಂಬೊದಲ್ಲಿ ಬಂದಿಳಿತ್ತು. ಈ ಪ್ರದೇಶದಾದ್ಯಂತ ವ್ಯಾಪಕವಾದ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸಲು ಬಂಗಾಳ ಕೊಲ್ಲಿ ಸೇರಿದಂತೆ ಹಿಂದೂ ಮಹಾಸಾಗರವನ್ನು ಚೀನಾ ಬಳಸಿಕೊಳ್ಳುತ್ತಿದೆ ಎಂದು ನಂಬಲಾಗಿದೆ.
ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಉಪಕರಣಗಳ ಪೈಕಿ ಚೀನಾದ ಟೈಪ್ 039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ. ಈ ಜಲಾಂತರ್ಗಾಮಿ ನೌಕೆಯ ನಿಖರವಾದ ಸಾಮರ್ಥ್ಯ, ಅದು ಎಷ್ಟು ಶಾಂತವಾಗಿದೆ ಎಂಬುದನ್ನು ಒಳಗೊಂಡಂತೆ, ನೌಕಾ ರಹಸ್ಯಗಳನ್ನು ನಿಕಟವಾಗಿ ಊಹಿಸಬಲ್ಲದು. ಅರಬ್ಬಿ ಸಮುದ್ರದಲ್ಲಿ ಹಡಗುಗಳ ಉಪಸ್ಥಿತಿಯು, ತಮ್ಮ ಹೋಮ್‌ಪೋರ್ಟ್‌ಗಳಿಂದ ಹಲವಾರು ಸಾವಿರ ಕಿಲೋಮೀಟರ್ ದೂರದಲ್ಲಿರುವ ನೌಕಾ ಆಸ್ತಿಗಳನ್ನು ನಿಯೋಜಿಸಲು ಬೀಜಿಂಗ್‌ನ ವಿಶ್ವಾಸವನ್ನು ವೃದ್ಧಿಸಲು ಈ ಜಲಾಂತರ್ಗಾಮಿ ಕಾರಣವಾಗಿದೆ. 2013ರದಿಂದ ಈಚೆಗೆ ಚೀನಾ ಸೇನಾಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತಾರ್ಗಮಿಗಳನ್ನು ನಿಯೋಜಿಸಿದೆ ಎಂದುಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಮೋದಿ ಕರೆಗೆ ಓಗೊಟ್ಟು ದೇಶೀಯ ಉತ್ಪನ್ನ ಖರೀದಿ; ಹಬ್ಬದ ವೇಳೆ ಚೀನಾಗೆ ಲಕ್ಷ ಕೋಟಿ ರೂ. ನಷ್ಟ!