Site icon Vistara News

Cross Border Love: ನಾನು ಪಾಕ್‌ನಲ್ಲಿ ಸುರಕ್ಷಿತ… ಫೇಸ್‌ಬುಕ್‌ ಗೆಳೆಯನಿಗಾಗಿ ಗಡಿ ದಾಟಿದ ಮಹಿಳೆ ಹೇಳಿದ್ದೇನು?

Indian Woman Goes To Pakistan For Love

Cross Border Love: Indian woman crosses border for love, goes to Pakistan to meet friend

ಹೊಸದಿಲ್ಲಿ: ಪಾಕಿಸ್ತಾನ ನೋಡಲು ತಾನು ಇಲ್ಲಿಗೆ ಬಂದಿದ್ದು, ನಸ್ರುಲ್ಲಾನನ್ನು ಮದುವೆಯಾಗುವ ಇರಾದೆ ಇಲ್ಲ ಎಂದು ಗಡಿ ದಾಟಿ ಫೇಸ್‌ಬುಕ್‌ ಗೆಳೆಯನನ್ನು (facebook friend) ಭೇಟಿಯಾಗಲು ಪಾಕ್‌ಗೆ ಹೋಗಿದ್ದ (Cross Border Love) ಮಹಿಳೆ ಅಂಜು ಹೇಳಿದ್ದಾಳೆ.

ರಾಜಸ್ತಾನದಿಂದ ಗಡಿ ದಾಟಿ ಪಾಕಿಸ್ತಾನದ ಖೈಬರ್‌ಪಕ್ತೂಂಖ್ವಾ ಸೇರಿಕೊಂಡಿರುವ ಮಹಿಳೆ ಹೇಳಿರುವ ಪ್ರಕಾರ ಸೋಶಿಯಲ್‌ ಮೀಡಿಯಾದಲ್ಲಿ ಆಕೆಯ ಕತೆಯನ್ನು ಉತ್ಪ್ರೇಕ್ಷೆ ಮಾಡಿ ಬಿಂಬಿಸಲಾಗಿದೆ. ʼʼನಾನು ಸೀಮಾ ಹೈದರ್‌ ಅಲ್ಲ. ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ. ನಾನು ಪಾಕಿಸ್ತಾನಕ್ಕೆ ಸೈಟ್‌ ಸೀಯಿಂಗ್‌ಗಾಗಿ ಹಾಗೂ ಒಂದು ಮದುವೆಯಲ್ಲಿ ಭಾಗವಹಿಸಲು ಬಂದಿದ್ದೇನೆ. ಪ್ರಯಾಣ ದಾಖಲೆಗಳೂ ಇವೆʼʼ ಎಂದಿದ್ದಾಳೆ.

ತನ್ನ ಪತಿಯ ಜತೆಗಿನ ದಾಂಪತ್ಯ ಸುಖಕರವಾಗಿಲ್ಲ; ಹೀಗಾಗಿ ಅವನಿಂದ ಪ್ರತ್ಯೇಕವಾಗಲಿದ್ದೇನೆ. ಮಕ್ಕಳಿಗಾಗಿ ಇದುವರೆಗೆ ಜೊತೆಯಲ್ಲಿದ್ದೆ. ಆದರೆ ನಸ್ರುಲ್ಲಾ (ಪಾಕಿಸ್ತಾನದ ಗೆಳೆಯ)ನನ್ನು ಮದುವೆಯಾಗುವ ಯೋಚನೆಯಿಲ್ಲ. 2-3 ವರ್ಷಗಳಿಂದ ಆತನ ಪರಿಚಯ ಹೊಂದಿದ್ದು, ನನ್ನ ತಾಯಿ- ತಂಗಿಗೂ ಇದರ ಬಗ್ಗೆ ತಿಳಿಸಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ನಮಗೆ ಮದುವೆಯಾಗುವ ಯೋಚನೆಯಿಲ್ಲ. ಆಗಸ್ಟ್‌ 20ರಂದು ಆಕೆಯ ವೀಸಾ ಮುಗಿದ ಬಳಿಕ ಭಾರತಕ್ಕೆ ಹಿಂದಿರುಗಲಿದ್ದಾಳೆ ಎಂದು ಆಕೆಯ ಗೆಳೆಯ ನಸ್ರುಲ್ಲಾ ಹೇಳಿದ್ದಾನೆ. ಭಾನುವಾರ ಆಕೆಯನ್ನು ಬಂಧಿಸಿದ್ದ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಿಟ್ಟಿದ್ದರು.

ರಾಜಸ್ತಾನದ ಭಿವಾಡಿ ಜಿಲ್ಲೆಯ ಅಂಜು, ಪತಿ ಅರವಿಂದ್‌ ಜತೆ ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದರು. ಇದೇ ವೇಳೆ ಅವರು ಪಾಕಿಸ್ತಾನಕ್ಕೆ ಪರಾರಿಯಾಗಿದ್ದರು. ಅಂಜು ಹಾಗೂ ನಸ್ರುಲ್ಲಾ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಸ್ರುಲ್ಲಾ ಮೆಡಿಕಲ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಈಗ ಅಂಜು ಗಡಿ ದಾಟಿ ಹೋಗಿದ್ದಾರೆ. 2020ರಲ್ಲೇ ಅಂಜು ಪಾಸ್‌ಪಾರ್ಟ್‌ ಮಾಡಿಸಿದ್ದರು. ಗಂಡ ಏಕೆ ಎಂದು ಕೇಳಿದರೆ, ವಿದೇಶದಲ್ಲಿ ಕೆಲಸ ಹುಡುಕುತ್ತೇನೆ ಎಂದು ಹೇಳಿದ್ದರು.

ಕೆಲ ದಿನಗಳ ಹಿಂದೆ ಪ್ರೀತಿ ಅರಸಿ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ (seema haider) ಪ್ರಕರಣ ಸದ್ದು ಮಾಡತೊಡಗಿದ ಹಿನ್ನೆಲೆಯಲ್ಲಿ ಈ ಪ್ರಕರಣವೂ ಸುದ್ದಿಯಾಗಿತ್ತು.

ಇದನ್ನೂ ಓದಿ: Cross Border Love: ಫೇಸ್‌ಬುಕ್‌ ಗೆಳೆಯನಿಗಾಗಿ ಪಾಕ್‌ಗೆ ತೆರಳಿದ ಭಾರತದ ಮಹಿಳೆ; ಮತ್ತೊಂದು ಗಡಿ ಮೀರಿದ ಪ್ರೀತಿ

Exit mobile version