ನಾಸಿಕ್: ಅಸಾದುದ್ದೀನ್ ಓವೈಸಿ (Asaduddin Owaisi) ಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIMIM – ಎಐಎಂಐಎಂ) ಪಕ್ಷದ ನಾಯಕ, ಮಹಾರಾಷ್ಟ್ರದ ಮಾಲೆಗಾಂವ್‌ನ ಮಾಜಿ ಮೇಯರ್ (Ex Malegaon Mayor) ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ ಎಂಬಾತನ ಮೇಲೆ ಇಂದು ಬೆಳಗ್ಗೆ ಅಪರಿಚಿತ ದಾಳಿಕೋರರು ಗುಂಡಿನ ದಾಳಿ (Firing) ನಡೆಸಿದ್ದಾರೆ.
ಅಬ್ದುಲ್ ಮಲಿಕ್ ಮೊಹಮ್ಮದ್ ಅವರ ದೇಹಕ್ಕೆ ಮೂರು ಕಡೆ ಗುಂಡುಗಳು ಬಿದ್ದಿವೆ. ಎದೆಯ ಎಡಭಾಗದಲ್ಲಿ, ಎಡ ತೊಡೆ ಮತ್ತು ಬಲಗೈಗೆ ಗಾಯಗಳಾಗಿವೆ. ಗಾಯಗಳು ತೀವ್ರವಾಗಿರುವ ಕಾರಣ, ಎಐಎಂಐಎಂ ನಾಯಕನನ್ನು ನಾಸಿಕ್‌ನ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಮಾಲೆಗಾಂವ್ ನಗರ ಪೊಲೀಸ್ ಅಧಿಕಾರಿಯ ಪ್ರಕಾರ, ಓಲ್ಡ್ ಆಗ್ರಾ ರಸ್ತೆಯಲ್ಲಿರುವ ಅಂಗಡಿಯೊಂದರ ಹೊರಗೆ ಮಲಿಕ್ ಕುಳಿತಿದ್ದಾಗ 1:20ಕ್ಕೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ವ್ಯಾಪಕ ತನಿಖೆಯನ್ನು ಪ್ರಾರಂಭಿಸಿದ್ದಾರೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ, ಅಸಾದುದ್ದೀನ್ ಓವೈಸಿಯ ಆಪ್ತನಾಗಿದ್ದು, ಮಾಲೆಗಾಂವ್‌ನ ಮೇಯರ್ ಆಗಿದ್ದ.
ಅಯೋಧ್ಯೆಯಲ್ಲಿ ರಾಮಮಂದಿರವೇ ಇರ್ಲಿಲ್ಲ: ಅಸಾದುದ್ದೀನ್ ಓವೈಸಿ ವಿವಾದ!
ಕಲಬುರಗಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು (Asaduddin Owaisi), “ಅಯೋಧ್ಯೆಯಲ್ಲಿ ರಾಮಮಂದಿರವೇ ಇರಲಿಲ್ಲ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “500 ವರ್ಷಗಳಿಂದ ಬಾಬರಿ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರವೇ ಇರಲಿಲ್ಲ. ಆದರೆ, ಷಡ್ಯಂತ್ರದ ಮೂಲದ ಮುಸ್ಲಿಮರಿಂದ ರಾಮಮಂದಿರವನ್ನು ಕಸಿದುಕೊಳ್ಳಲಾಯಿತು. ಕಾಂಗ್ರೆಸ್‌ನ ಜಿ.ಬಿ. ಪಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಮಸೀದಿಯಲ್ಲಿ ರಾಮನ ಮೂರ್ತಿಗಳನ್ನು ಇರಿಸಲಾಯಿತು. ಆಗ, ನಾಯರ್ ಅವರು ಅಯೋಧ್ಯೆ ಜಿಲ್ಲಾಧಿಕಾರಿಯಾಗಿದ್ದರು. ಇದಾದ ಬಳಿಕ ರಾಮನ ಮೂರ್ತಿಗಳನ್ನು ಮಸೀದಿಯಿಂದ ತೆಗೆಯಲೇ ಇಲ್ಲ” ಎಂದು ತಿಳಿಸಿದ್ದಾರೆ.
“ರಾಮಮಂದಿರದ ಕುರಿತು ಮಹಾತ್ಮ ಗಾಂಧೀಜಿ ಅವರು ಎಂದಿಗೂ ಪ್ರಸ್ತಾಪ ಮಾಡಿಲ್ಲ. ವಿಶ್ವ ಹಿಂದು ಪರಿಷತ್ ಹುಟ್ಟುವ ಮೊದಲೇ ಮಸೀದಿ ಇತ್ತು. ಜಿ.ಬಿ. ಪಂತ್ ಅವರು ಮಸೀದಿಯಿಂದ ರಾಮನ ಮೂರ್ತಿಗಳನ್ನು ವಾಪಸ್ ತೆಗೆದುಕೊಂಡಿದ್ದರೆ 1992ರಲ್ಲಿ ಮಸೀದಿಯನ್ನು ನೆಲಸಮಗೊಳಿಸಲು ಆಗುತ್ತಿರಲಿಲ್ಲ. ತುಂಬ ವ್ಯವಸ್ಥಿತವಾಗಿ ಮಸೀದಿಯನ್ನು ಮುಸ್ಲಿಮರಿಂದ ಕಿತ್ತುಕೊಳ್ಳಲಾಯಿತು. ಇಂಡಿಯಾ ಒಕ್ಕೂಟದ ಸದಸ್ಯರಾಗಿರುವ ಅರವಿಂದ್ ಕೇಜ್ರಿವಾಲ್ ಅವರೂ ಈಗ ಹನುಮಾನ್ ಚಾಲೀಸಾ ಪಠಣ ಆಯೋಜಿಸಲು ಮುಂದಾಗಿದ್ದಾರೆ. ಎಲ್ಲರಿಗೂ ಬಹುಸಂಖ್ಯಾತರ ಮತಗಳೇ ಮುಖ್ಯವಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ram Mandir: ಅಮೆಜಾನ್‌ನಲ್ಲಿ ರಾಮಮಂದಿರ ಪ್ರಸಾದ ಸಿಗುತ್ತದೆಯೇ? ಕೇಂದ್ರ ಕೆಂಡವಾಗಿದ್ದೇಕೆ?