ಬೆಂಗಳೂರು: ಕಾನೂನು ಆಯೋಗದ ಅಧ್ಯಕ್ಷರಾಗಿ ಕರ್ನಾಟಕ ಹೈ ಕೊರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ರಿತುರಾಜ್ ಅವಸ್ಥಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರಕ್ಕೆ ಕಾನೂನು ಸಲಹೆ ನೀಡುವ ಹೊಣೆ ಆಯೋಗದ್ದಾಗಿದೆ. ಕಳೆದ 4 ವರ್ಷದಿಂದ ಕಾನೂನು ಆಯೋಗದ ಮುಖ್ಯಸ್ಥ ಹುದ್ದೆ ಖಾಲಿಯಾಗಿ ಉಳಿದಿತ್ತು. ನ್ಯಾ. ರಿತುರಾಜ್ ಅವಸ್ಥಿ ಅವರು ಅಲಹಾಬಾದ್ ಹೈಕೋರ್ಟ್‌ನ 2022ರ ಜುಲೈವರೆಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಆಯೋಗದ ಸದಸ್ಯರನ್ನಾಗಿ ಕೇರಳ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಕೆ.ಟಿ ಶಂಕರನ್, ಪ್ರೊ.ಆನಂದ ಪಲಿವಾಲ್, ಪ್ರೊ.ಡಿ.ಪಿ ವರ್ಮಾ, ರಾಕಾ ಆರ್ಯ ಹಾಗೂ ಎಂ.ಕರುಣಾನಿಧಿ ಅವರನ್ನು ಆರಿಸಲಾಗಿದೆ. 2018ರ ಆಗಸ್ಟ್‌ನಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಬಿ.ಎಸ್ ಚೌಹಾಣ್ ಅವರ ನಿವೃತ್ತಿಯ ಬಳಿಕ ಕಾನೂನು ಆಯೋಗದ ಅಧ್ಯಕ್ಷ ಸ್ಥಾನ ತೆರವಾಗಿ ಉಳಿದಿತ್ತು.