Site icon Vistara News

G20 Summit 2023: ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ; ಆಫ್ರಿಕನ್ ಯೂನಿಯನ್ ಶ್ಲಾಘನೆ

G20 Summit 2023

ನವದೆಹಲಿ: ಭಾರತವು ಈಗ ಸೂಪರ್ ಪವರ್ (India Super Power Nation) ರಾಷ್ಟ್ರವಾಗಿದೆ ಮತ್ತು ಚೀನಾಕ್ಕಿಂತಲೂ (China) ಮುಂದಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ (Azali Assoumani) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆದ ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ (African Union) ಅನ್ನು ಜಿ20ನ ಶಾಶ್ವತ ಸದಸ್ಯ ರಾಷ್ಟ್ರವಾಗಿ ಘೋಷಿಸಲಾಯಿತು(G20 Summit 2023).

ಭಾರತವು ಜಗತ್ತಿನ ಐದನೇ ಸೂಪರ್ ಪವರ್ ರಾಷ್ಟ್ರವಾಗಿದೆ. ಹಾಗಾಗಿ, ಆಫ್ರಿಕಾದಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಲಿವೆ. ಭಾರತವು ಬಾಹ್ಯಾಕಾಶಕ್ಕೆ ಹೋಗಿರುವ ಸಂಗತಿಯೂ ನಮಗೆ ಅರಿವು ಇದೆ. ಚೀನಾಕ್ಕಿಂತಲೂ ಮುಂದಿರುವ ಭಾರತವು ಸೂಪರ್ ಪವರ್ ರಾಷ್ಟ್ರವಾಗಿದ್ದು, ನಾವು ಅದರ ಜತೆಗೆ ಸಮನ್ವಯವನ್ನು ಸಾಧಿಸಬೇಕಷ್ಟೇ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಹೇಳಿದ್ದಾರೆ.

ಶೃಂಗಸಭೆ ವೇಳೆ ಆಫ್ರಿಕನ್‌ ಯೂನಿಯನ್ ಅನ್ನು ಜಿ20 ಸದಸ್ಯವಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿ, ತಮ್ಮನ್ನು ಅಪ್ಪಿಕೊಂಡಾಗ ಭಾವಕರಾಗಿದ್ದ ಕ್ಷಣವನ್ನೂ ಅಸೌಮೌನಿ ಅವರು ವಿವರಿಸಿದ್ದಾರೆ.

ಆಫ್ರಿಕನ್ ಯೂನಿಯನ್ ಅನ್ನು ಜಿ20 ಕುಟುಂಬಕ್ಕೆ ಸೇರಿಸುವ ನಿರ್ಧಾರ ಬರುವ ಮೊದಲು ಚರ್ಚೆ ನಡೆಯಲಿದೆ ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷರು ಭಾವಿಸಿದ್ದರು. ಎರಡು ದಿನಗಳ ಶೃಂಗಸಭೆಯ ಪ್ರಾರಂಭದಲ್ಲಿ ಆಫ್ರಿಕನ್ ಯೂನಿಯನ್ ಅನ್ನು ಜಿ20 ಸದಸ್ಯ ಸಂಸ್ಥೆ ಎಂದು ಘೋಷಿಸಲಾಯಿತು.

ಈ ಸುದ್ದಿಯನ್ನೂ ಓದಿ: G20 Summit 2023: ಜಿ20ಯಲ್ಲಿ ಮಮತಾ ಊಟ, ಕಾಂಗ್ರೆಸ್‌ ಹೊಟ್ಟೆಯಲ್ಲಿ ಸಂಕಟ!

ಆಫ್ರಿಕನ್ ಯೂನಿಯನ್ ಅನ್ನು ಜಿ20 ಸದಸ್ಯ ಸಂಸ್ಥೆ ಎಂದು ಘೋಷಿಸಿದ ಕ್ಷಣ ಭಾವನಾತ್ಮಕವಾಗಿತ್ತು. ಅದೊಂದು ದೊಡ್ಡ ಎಮೋಷನ್ ಆಗಿತ್ತು. ಯಾಕೆಂದರೆ, ಮೊದಲು ಚರ್ಚೆಯಾಗಲಿದೆ ಆ ಮೇಲೆ ನಿರ್ಧಾರ ಕೈಗೊಳ್ಳಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಶೃಂಗಸಭೆಯ ಆರಂಭದಲ್ಲೇ ನಾವು(ಎಯು) ಜಿ20 ಸದಸ್ಯರಾಗಿದ್ದೇವೆ ಎಂದು ಹೇಳಿದ್ದು ಖುಷಿ ನೀಡಿತು ಎಂದು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version