Site icon Vistara News

Ghar Wapsi: ಇಸ್ಲಾಮ್ ಬಿಟ್ಟು ಹಿಂದು ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಸ್ಟಾರ್! ಐಎಸ್ಐ‌ಗೆ ಥ್ಯಾಂಕ್ಸ್ ಹೇಳಿ

Shayan Ali

ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನ (Pakistan) ನೆರೆ ಹೊರೆಯ ರಾಷ್ಟ್ರಗಳಾದರೂ ಬದ್ಧ ವೈರಿ ರಾಷ್ಟ್ರಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಂಥದ್ದರಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬ ಹಿಂದು ಧರ್ಮಕ್ಕೆ (Hindu religion) ಮತಾಂತರವಾಗುವುದು ವಿರಳ. ಆದರೆ, ಪಾಕಿಸ್ತಾನದ ಸೋಷಿಯಲ್ ಸ್ಟಾರ್ (Social Media Star) ಶಯಾನ್ ಅಲಿ (Shayan Ali) ಅವರು ಇತ್ತೀಚೆಗಷ್ಟೇ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ (Ghar Wapsi). ಅವರು ಇಸ್ಲಾಮ್ ತೊರೆದು ಹಿಂದು ಧರ್ಮವನ್ನು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಈ ವಿಷಯ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತದ ವಿರುದ್ಧ ಕೆಲಸ ಮಾಡುವಂತೆ ನಿರಂತರವಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಒತ್ತಡ ಹೇರುತ್ತಿರವುದಾಗಿ ಶಯಾನ್ ಅಲಿ ಅವರು ಹೇಳಿಕೊಂಡಿದ್ದಾರೆ. ಈ ಸವಾಲಿನ ಅವಧಿಯಲ್ಲಿ, ಅವರು ಶ್ರೀಕೃಷ್ಣನಲ್ಲಿ (Lord Krishna) ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಕೃಷ್ಣನಿಂದ ಪ್ರೇರಣೆ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ಶಯಾನ್ ವ್ಯಕ್ತಪಡಿಸಿದ್ದಾರೆ.

ಐಎಸ್‌ಐನಿಂದ ನಡೆಯುತ್ತಿರುವ ದಬ್ಬಾಳಿಕೆಯಿಂದಾಗಿ ಪಾಕಿಸ್ತಾನವನ್ನು ಶಾಶ್ವತವಾಗಿ ತೊರೆಯುವುದನ್ನು ಬಿಟ್ಟು ತನಗೆ ಪರ್ಯಾಯವಿಲ್ಲ ಎಂದು ಶಯಾನ್ ಅಲಿ ಹೇಳಿದ್ದಾರೆ. ಅಲ್ಲದೇ ತಮ್ಮ ಜೀವನದ ವಿರುದ್ಧ ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ. ಹಿಂದು ಧರ್ಮಕ್ಕೆ ಮತಾಂತರವಾಗುವುದನ್ನು ಟ್ವಿಟರ್ ಮೂಲಕ ಘೋಷಣೆ ಮಾಡಿರುವ ಶಯಾನ್ ಅಲಿ, ಘರ್ ವಾಪ್ಸಿ ಎಂದು ಬಣ್ಣಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನನ್ನ ಪೂರ್ವಜರ ಸಂಸ್ಕೃತಿ ಮತ್ತು ಜೀವನ ವಿಧಾನದಲ್ಲಿ ನನ್ನನ್ನು ಆಳವಾಗಿ ಮನಸಿನಾಳಕ್ಕೆ ಇಳಿದ ನಂತರ, ನಾನು ಈಗ ಅಧಿಕೃತವಾಗಿ ನನ್ನ ‘ಘರ್ ವಾಪ್ಸಿ’ಯನ್ನು ಘೋಷಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನದ ಶಯಾನ್ ಅಲಿ ಟ್ವೀಟ್

ಅವರು 2019 ರಲ್ಲಿ ಪಾಕಿಸ್ತಾನಿ ಸಂಸ್ಥೆಗಳ ಕೈಯಲ್ಲಿ ಅನುಭವಿಸಿದ ಸಂಕಷ್ಟದ ಅನುಭವಗಳನ್ನು ವಿವರಿಸಿದ್ದಾರೆ. ಐಎಸ್ಐ ದಬ್ಬಾಳಿಕೆಯೇ ದೇಶದಿಂದ ಬಲವಂತದ ನಿರ್ಗಮನಕ್ಕೆ ಕಾರಣವಾಯಿತು. ಶಯಾನ್ ಅವರು ಖಿನ್ನತೆಯ ಸ್ಥಿತಿಗೆ ಸಿಲುಕಿದರು ಮತ್ತು ಎಲ್ಲಾ ಭರವಸೆಯನ್ನು ಕಳೆದುಕೊಂಡರು ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದೂ, ಭಗವಾನ್ ಶ್ರೀಕೃಷ್ಣ ಹೋರಾಡುವುದಕ್ಕೆ ಪ್ರೇರಣೆ ನೀಡಿದರು, ಶಕ್ತಿ ನೀಡಿದರು. ಪಡೆದರುವ ಬೆಂಬಲವನ್ನು ವಾಪಸ್ ನೀಡುವುದು ತಮ್ಮ ಕರ್ತವ್ಯ ಎಂದು ಶಯಾನ್ ಭಾವಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಅಸ್ಸಾಂನಲ್ಲಿ ಮುಂದುವರಿದ ಘರ್ ವಾಪ್ಸಿ ಅಭಿಯಾನ; ಕ್ರೈಸ್ತ ಮತ ಸೇರಿದ್ದ 11 ಕುಟುಂಬಗಳ 43 ಮಂದಿ ಹಿಂದು ಧರ್ಮಕ್ಕೆ ವಾಪಸ್​

ಶಯಾನ್ ತನ್ನ ಪೂರ್ವಜರ ತಾಯ್ನಾಡು ಭಾರತಕ್ಕೆ ಮರಳಲು ತನ್ನ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅವನ ಅಜ್ಜಿ ಮತ್ತು ಪೂರ್ವಜರು ಜನ್ಮ ಪಡೆದುಕೊಂಡು ನೆಲವಿದೆ. ಈ ಮನೆಯು ಹೃದಯವು ನೆಲೆಸಿದೆ ಎಂದು ಶಯಾನ್ ಹೇಳಿಕೊಂಡಿದ್ದಾರೆ. ಸನಾತನ ಧರ್ಮದ ಅನುಯಾಯಿಯಾಗಿ ತಾವು ಧರ್ಮದ ವಿರುದ್ಧ ದ್ವೇಷವನ್ನು ಸಾಧಿಸಲಾರೆ. ಎಲ್ಲ ಧರ್ಮಗಳೆಡೆಗೂ ಸಮಾನವಾದ ಗೌರವ ಮತ್ತು ನಂಬಿಕೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version