Site icon Vistara News

ಭಾರತೀಯ ಗ್ರಾಹಕರನ್ನು ಟಾರ್ಗೆಟ್ ಮಾಡಿದ್ದ 17 ಲೋನ್ ಆ್ಯಪ್ಸ್ ಕಿತ್ತು ಹಾಕಿದ ಗೂಗಲ್

Google Removed 17 Deceptive android loan apps from its platform

ನವದೆಹಲಿ: ವೈಯಕ್ತಿಕ ಸಾಲ (personal loan) ನೀಡುವ ನೆಪದಲ್ಲಿ ಭಾರತೀಯರು (Indian Costumers) ಸೇರಿದಂತೆ ಇತರ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ 18 ಆ್ಯಪ್‌‌ಗಳನ್ನು ಪತ್ತೆ ಮಾಡಿರುವ ಗೂಗಲ್(Google), ಅವುಗಳನ್ನು ತನ್ನ ವೇದಿಕೆಯಿಂದ ಕಿತ್ತು ಹಾಕಿದೆ. ಇಎಸ್‌ಇಟಿ ಸಂಶೋಧನೆಯ ವರದಿಯ ಪ್ರಕಾರ(ESTE Research Report), ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಮೊದಲು ಗೂಗಲ್‌ಪ್‌ ಪ್ಲೇನಿಂದ (Google Play) ಜಾಗತಿಕವಾಗಿ 12 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದ್ದವು. ಇಂತಹ ಮೋಸಗೊಳಿಸುವ ಆಂಡ್ರಾಯ್ಡ್ ಸಾಲದ ಆ್ಯಪ್‌ಗಳನ್ನು ಸ್ಪೈಲೋನ್ ಅಪ್ಲಿಕೇಶನ್‌ಗಳು (Spyloan Apps) ಎಂದು ಕರೆಯಲಾಗುತ್ತದೆ.

ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ಕಾನೂನುಬದ್ಧ ಸಾಲ ಪೂರೈಕೆದಾರರಲ್ಲಿ ಬಳಕೆದಾರರು ಇರಿಸುವ ನಂಬಿಕೆಯನ್ನು ಬಳಸಿಕೊಳ್ಳುತ್ತವೆ, ಜನರನ್ನು ಮೋಸಗೊಳಿಸಲು ಮತ್ತು ವ್ಯಾಪಕ ಶ್ರೇಣಿಯ ವೈಯಕ್ತಿಕ ಮಾಹಿತಿಯನ್ನು ಕದಿಯಲು ಅತ್ಯಾಧುನಿಕ ತಂತ್ರಗಳನ್ನು ಬಳಸುತ್ತವೆ ಎಂದು ಈ ಸ್ಪೈಲೋನ್ ಆ್ಯಪ್‌ಗಳನ್ನು ಪತ್ತೆ ಹಚ್ಚಿರುವ ಇಎಸ್ಇಟಿ ಸಂಶೋಧಕ ಲುಕಾಸ್ ಸ್ಟೆಫಾಂಕೊ ಹೇಳಿದ್ದಾರೆ.

ಗ್ರಾಹಕರಿಗೆ ಬೆದರಿಕೆ ಹಾಕುವ ಮತ್ತು ಕಿರುಕುಳ ನೀಡುವ ಈ ಅಪ್ಲಿಕೇಶನ್‌ಗಳ ಮೂಲಗಳು ಮುಖ್ಯವಾಗಿ ಮೆಕ್ಸಿಕೊ, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಭಾರತ, ಪಾಕಿಸ್ತಾನ, ಕೊಲಂಬಿಯಾ, ಪೆರು, ಫಿಲಿಪೈನ್ಸ್, ಈಜಿಪ್ಟ್, ಕೀನ್ಯಾ, ನೈಜೀರಿಯಾ ಮತ್ತು ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಂಚಕರ ಕೈ ಸೇರುವ 600 ಕೋಟಿ ರೂ. ತಡೆದ ಭಾರತದ ಸೈಬರ್ ಫ್ರಾಡ್ ರಿಪೋರ್ಟಿಂಗ್ ಸಿಸ್ಟಂ!

ಸುಮಾರು 600 ಕೋಟಿ ರೂಪಾಯಿ ಆನ್‌ಲೈನ್ ವಂಚಕರ (Online Fraud) ಕೈಗೆ ಸೇರುವುದನ್ನು ಭಾರತದ ವಿಶಿಷ್ಟವಾದ ಸೈಬರ್ ಫ್ರಾಡ್ ರಿಪೋರ್ಟಿಂಗ್ ಸಿಸ್ಟಮ್ (Cyber Fraud Reporting System) ಪಡೆದಿದೆ ಎಂದು ಜಾಗತಿಕ ಅಕ್ರಮ ಹಣ ವರ್ಗಾವಣೆ ವಿರೋಧಿ ಮತ್ತು ಭಯೋತ್ಪಾದಕ ಹಣಕಾಸು ವಾಚ್‌ಡಾಗ್ ತನ್ನ ವರದಿಯಲ್ಲಿ ತಿಳಿಸಿದೆ(watchdog Report). ಭಾರತವು 2021ರಲ್ಲಿ ನಾಗರಿಕ ಹಣಕಾಸು ಸೈಬರ್ ವಂಚನೆ ರಿಪೋರ್ಟಿಂಗ್ ಮತ್ತು ನಿರ್ವಹಣಾ ವ್ಯವಸ್ಥೆ(CFCFRMS – ಸಿಟಿಜೆನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್)ಯನ್ನು ಜಾರಿಗೆ ತಂದಿದೆ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ತನ್ನ ವರದಿಯಲ್ಲಿ ತಿಳಿಸಿದೆ.

ನವೆಂಬರ್ 9ರಂದು ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಸದಸ್ಯ ರಾಷ್ಟ್ರಗಳು ಅನುಕರಿಸಬಹುದಾದ “ಉತ್ತಮ ಅಭ್ಯಾಸ” ಎಂದು ಸೈಬರ್ ವಂಚನೆಗಳಿಂದ ಅಕ್ರಮ ಹಣಕಾಸಿನ ಹರಿವನ್ನು ತಡೆಗಟ್ಟುವ ವ್ಯವಸ್ಥೆಯ ಸಾಮರ್ಥ್ಯವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ವಂಚನೆಯ ವಹಿವಾಟುಗಳು ವಂಚಕರ ಕೈಗೆ ಹೋಗುವುದನ್ನು ತಡೆಯುವಲ್ಲಿ ಈ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಎಫ್ಎಟಿಎಫ್ ತನ್ನ ವರದಿಯಲ್ಲಿ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್(i4C) ಸಿಎಫ್‍‌ಸಿಎಫ್ಆರ್‌ಎಂಸಿ ಆನ್‌ಲೈನ್ ಸಿಸ್ಟಮ್ ಅಭಿವೃದ್ಧಿ ಪಡಿಸಿದೆ. ಈ ವ್ಯವಸ್ಥೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಏಜೆನ್ಸಿಗಳು ಹಾಗೂ ಬ್ಯಾಂಕ್‌ಗಳು, ವರ್ಚುವಲ್ ವ್ಯಾಲೆಟ್‌ಗಳು, ಪಾವತಿ ಸಂಗ್ರಾಹಕರು ಮತ್ತು ಗೇಟ್‌ವೇಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿರುವ 243 ಹಣಕಾಸು ಸಂಸ್ಥೆಗಳನ್ನು ಒಟ್ಟಾಗಿ ಕೆಲಸ ಮಾಡಲು ಮತ್ತು ಸಿಎಫ್‌ಸಿಎಫ್‌ಆರ್‌ಎಂಸಿನಲ್ಲಿ ವರದಿಯಾದ ದೂರುಗಳ ಮೇಲೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ.

ಒಮ್ಮೆ ಸಂತ್ರಸ್ತ ವ್ಯಕ್ತಿ ಕಾನೂನು ಜಾರಿ ಸಂಸ್ಥೆಗೆ ವಂಚನೆಯನ್ನು ವರದಿ ಮಾಡಿದರೆ, ಮೋಸದ ವಹಿವಾಟಿನ ಫಲಾನುಭವಿಯ ವಿವರಗಳನ್ನು ದಾಖಲಿಸಲಾಗುತ್ತದೆ ಮತ್ತು ಟಿಕೆಟ್ ರೂಪದಲ್ಲಿ ಸಿಎಫ್‌ಸಿಎಫ್‌ಆರ್‌ಎಂಎಸ್‌ ವ್ಯವಸ್ಥೆಗೆ ಸಲ್ಲಿಸಲಾಗುತ್ತದೆ. ಈ ಟಿಕೆಟ್ ಅನ್ನು ಸಂಬಂಧಪಟ್ಟ ಹಣಕಾಸು ಘಟಕಕ್ಕೆ (ಬ್ಯಾಂಕ್, ಪಾವತಿ ವಾಲೆಟ್, ಇತ್ಯಾದಿ) ಹೆಚ್ಚಿಸಲಾಗಿದೆ. ಅದು ತನ್ನ ಸಿಸ್ಟಂನ ಡ್ಯಾಶ್‌ಬೋರ್ಡ್‌ನಲ್ಲಿ ಎಚ್ಚರಿಕೆಯನ್ನು ರವಾನಿಸುತ್ತದೆ ಎಂದು ಎಂದು ಐ4ಸಿಯ ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Cyber Crime: 700 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಹೈದ್ರಾಬಾದ್ ಪೊಲೀಸ್, ಉಗ್ರರಿಗೆ ದುಡ್ಡು ರವಾನೆ!

Exit mobile version