ನವ ದೆಹಲಿ: ಕೇಂದ್ರ ಸರ್ಕಾರ 14 ಮೊಬೈಲ್ ಮೆಸೆಂಜರ್ ಆ್ಯಪ್‌ಗಳನ್ನು ನಿರ್ಬಂಧಿಸಿದೆ. ಭಯೋತ್ಪಾದಕರು ಪಾಕಿಸ್ತಾನದಿಂದ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳಿಸಲು ಈ ಮೆಸೆಂಜರ್ ಆ್ಯಪ್‌ಗಳನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ.
ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ 14 ಮೆಸೆಂಜರ್ ಆ್ಯಪ್‌ಗಳನ್ನು ಬ್ಲಾಕ್ ಮಾಡಿದೆ. ಅವುಗಳನ್ನು ಭಾರತದಲ್ಲಿ ಇನ್ನು ಮುಂದೆ ಬಳಸಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕ ಗುಂಪುಗಳು ಈ ಆ್ಯಪ್‌ಗಳನ್ನು ಬಳಸುತ್ತಿದ್ದವು ಎಂದು ವರದಿಯಾಗಿದೆ.
ವರದಿಯ ಪ್ರಕಾರ ಕ್ರಿಪ್‌ವೈಸರ್, ಸೇಫ್‌ವೈಸ್, ವಿಕ್ರೆಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಾಂಡ್ ಬಾಕ್ಸ್, ಕೊನಿನ್, ಐಎಂಒ, ಎಲಿಮೆಂಟ್ , ಸೆಕೆಂಡ್ ಲೈನ್, ಜಾಂಗಿ, ಎಂಜಿಮಾ, ತ್ರೀಮಾ ಮೆಸೆಂಜರ್ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ಭಯೋತ್ಪಾದಕರು ತಮ್ಮ ಬೆಂಬಲಿಗರನ್ನು ಸಂಪರ್ಕಿಸಲು ಈ ಮೆಸೆಂಜರ್ ಆ್ಯಪ್‌ಗಳನ್ನು ಬಳಸುತ್ತಿದ್ದರು. ಇತ್ತೀಚಿನ ತನಿಖೆಗಳಲ್ಲಿ ಈ ವಿಷಯ ತಿಳಿದು ಬಂದಿದೆ.
ಪಾಕ್ ಹಣದುಬ್ಬರ ಜಿಗಿತ:
ವಿಶ್ವದ ಐದನೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ದಾಖಲೆಯ 47%ಕ್ಕೆ ಏರಿಕೆಯಾಗಿದೆ. ಪ್ರತಿ ಕೆ.ಜಿ ಈರುಳ್ಳಿಯ ದರ 225 ರೂ.ಗೆ ಏರಿಕೆಯಾಗಿದೆ. ಇತ್ಖೈತೀಚೆಗೆ ಬರ್ ಪಂಕ್ತೂನ್‌ಖ್ವಾ ಪ್ರಾಂತ್ಯದಲ್ಲಿ ಗೋಧಿ ಚೀಲಗಳನ್ನು ವಿತರಿಸುವಾಗ ಕಾಲ್ತುಳಿತಕ್ಕೆ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ. ನೂಕು ನುಗ್ಗಲಿಗೆ ಅಕ್ಕಿ ಗಿರಣಿಯ ಕಂಪೌಂಡ್ ಕುಸಿದಿದೆ. ದಕ್ಷಿಣ ಪಂಜಾಬ್‌ನಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಐವರು ಮಹಿಳೆಯರಿಗೆ ಗಾಯವಾಗಿತ್ತು. ಜನತೆಗೆ ಉಚಿತವಾಗಿ ಗೋಧಿ ಚೀಲಗಳನ್ನು ವಿತರಿಸುವ ಸಂದರ್ಭ ಕಾಲ್ತುಳಿತ ಸಂಭವಿಸಿದೆ. ಕಳೆದ ಜನವರಿಯಲ್ಲೂ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ,.
ಪಾಕಿಸ್ತಾನ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಮಾರ್ಚ್ 22ಕ್ಕೆ ಅಂತ್ಯವಾದ ವಾರದಲ್ಲಿ ಹಣದುಬ್ಬರ 47%ಕ್ಕೆ ಏರಿಕೆಯಾಗಿದೆ. ಈರುಳ್ಳಿ ದರದಲ್ಲಿ 228%, ಗೋಧಿ ಹಿಟ್ಟಿನ ದರದಲ್ಲಿ 120% ಏರಿಕೆಯಾಗಿದೆ. ಅಡುಗೆ ಅನಿಲ ದರದದಲ್ಲಿ 108%, ಚಹಾ ದರದಲ್ಲಿ 94% ಹೆಚ್ಚಳವಾಗಿದೆ. ಡೀಸೆಲ್ ದರದಲ್ಲಿ 102%, ಬಾಳೆ ಹಣ್ಣಿನ ದರದಲ್ಲಿ 89%, ಪೆಟ್ರೋಲ್ ದರದಲ್ಲಿ 81% ಏರಿಕೆಯಾಗಿದೆ.