Site icon Vistara News

Coronavirus | ಚೀನಾದ ಅರ್ಧದಷ್ಟು ವೈದ್ಯರಿಗೆ ಕೊರೊನಾ ಸೋಂಕು! ಹೆಚ್ಚಿದ ಆತಂಕ

Covid-19 @ China

ನವದೆಹಲಿ: ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ಕೋವಿಡ್ ಪ್ರಕರಣಗಳು (Covid-19) ದಿಢೀರ್ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಎಲ್ಲ ನಿಯಂತ್ರಣವನ್ನು ಮೀರಿ ಕೋವಿಡ್ ಸೋಂಕು ಚೀನಾದಲ್ಲಿ ಹರಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮ, ಭಾರತವು ಸೇರಿದಂತೆ ಇತರ ರಾಷ್ಟ್ರಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವತ್ತ ಲಕ್ಷ ವಹಿಸಿವೆ. ಏತನ್ಮಧ್ಯೆ, ಚೀನಾದ ಅರ್ಧದಷ್ಟು ವೈದ್ಯರಿಗೆ ಸೋಂಕು ತಗುಲಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಈಗ ಕೊರೊನಾ ಸೋಂಕು ಹರಡುತ್ತಿರುವ ವೇಗವನ್ನು ಗಮನಿಸಿದರೆ, ಮುಂದಿನ ಕೆಲವೇ ತಿಂಗಳಲ್ಲಿ ಚೀನಾದ ಸುಮಾರು 80 ಕೋಟಿ ಜನರು ಸೋಂಕಿತರಾಗಬಹುದು ಎಂದು ಚೀನಾದ ಅಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಅಂದರೆ, ಚೀನಾ ಜನಸಂಖ್ಯೆಯ ಪೈಕಿ ಶೇ.60 ಜನಸಂಖ್ಯೆಯು ಕೋವಿಡ್‌ನಿಂದ ಬಳಲಿದೆ. ಜತೆಗೆ, 5 ಲಕ್ಷ ಜನರು ಸಾವಿಗೀಡಾಗಬಹುದು ಎಂದು ಹೇಳಲಾಗುತ್ತಿದೆ.

ಚೀನಾದಲ್ಲಿ ಕೋವಿಡ್ ಉಲ್ಬಣಗೊಳ್ಳಲು ಕೊರೊನಾ ವೈರಸ್‌ನ ಒಮಿಕ್ರಾನ್ ಬಿಎಫ್.7 ತಳಿ ಕಾರಣವಾಗಿದೆ. ಈ ಒಮಿಕ್ರಾನ್ ಕಳೆದ ಒಂದು ವರ್ಷದಿಂದ ಇದ್ದು, ಸಾಕಷ್ಟು ಬಲಶಾಲಿಯಾಗಿದೆ. ಆ ಕಾರಣಕ್ಕಾಗಿಯೇ, ಚೀನಾದಲ್ಲಿ ಸಾಕಷ್ಟು ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಸದ್ಯದ ಮಾಹಿತಿಯ ಪ್ರಕಾರ, ಚೀನಾದ ಅರ್ಧದಷ್ಟು ವೈದ್ಯರಿಗೆ ಕೋವಿಡ್ ತಗುಲಿದೆ. ಇದೇ ಕಾರಣಕ್ಕಾಗಿ ಇನ್ನೂ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ | Covid-19 | ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಒಮಿಕ್ರಾನ್ ಬಿಎಫ್.9 ವೇರಿಯಂಟ್ ಕಾರಣ!

Exit mobile version