Site icon Vistara News

ISRO Chief Salary: ಇಸ್ರೋ ಅಧ್ಯಕ್ಷರ ಸ್ಯಾಲರಿ ತಿಂಗಳಿಗೆ ಕೇವಲ 2.5 ಲಕ್ಷ ರೂಪಾಯಿನಾ? ಗೋಯೆಂಕಾ ಟ್ವೀಟ್‌ಗೆ ಭಾರೀ ಚರ್ಚೆ

S Somanath

Want To Continue Chandrayaan Series Till An Indian Lands On Moon: Says ISRO Chief S Somanath

ನವದೆಹಲಿ: ಎಕ್ಸ್‌ ವೇದಿಕೆಯಲ್ಲಿ ಮೋಟಿವೇಷನಲ್ ಹಾಗೂ ಆಸಕ್ತಿಕರ ಸಂಗತಿಗಳನ್ನು ಷೇರ್ ಮಾಡುವ ಉದ್ಯಮಿ, ಆರ್‌ಪಿಜಿ ಗ್ರೂಪ್‌ನ ಚೇರ್ಮನ್ ಹರ್ಷ ಗೋಯೆಂಕಾ (RPG Group Chairman Harsh Goenka) ಅವರು ಈ ಬಾರಿ ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಚೇರ್ಮನ್ ಎಸ್ ಸೋಮನಾಥ್ (ISRO Chief S Samanath) ಅವರ ಸಂಬಳದ ಬಗ್ಗೆ ಚರ್ಚೆ ಮಾಡಿದ್ದಾರೆ(ISRO Chief Salary). ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ 2.5 ಲಕ್ಷ ರೂ. ವೇತನವಿದೆ. ವಿಜ್ಞಾನ ಮತ್ತು ಸಂಶೋಧನೆಯಬಗ್ಗ ಪ್ಯಾಶನ್ ಹೊಂದಿರುವ ಎಸ್‌ ಸೋಮನಾಥ್ ಅವರಿಗೆ ಇಷ್ಟು ಸಂಬಳವೇ ಸಾಕೇ ಎಂದು ಪ್ರಶ್ನಿಸಿದ್ದಾರೆ. ಅವರ ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉದ್ಯಮಿ ಹರ್ಷ ಗೋಯೆಂಕಾ ಅವರ ಈ ಟ್ವೀಟ್‍‌ಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಂತಹ ವ್ಯಕ್ತಿಗಳ ಸಮರ್ಪಣೆ ಮತ್ತು ಉತ್ಸಾಹವು ಅಳೆಯಲಾಗದು. ಅವರ ಕೆಲಸವು ಹಣದ ಪ್ರತಿಫಲಗಳನ್ನು ಮೀರಿದ್ದು, ವಿಜ್ಞಾನ, ಸಂಶೋಧನೆ ಮತ್ತು ಅವರ ರಾಷ್ಟ್ರದ ಸುಧಾರಣೆಗೆ ಆಳವಾದ ಬದ್ಧತೆಯಿಂದ ಕೂಡಿರುತ್ತದೆ. ಅವರು ನಿಜವಾದ ಸ್ಫೂರ್ತಿದಾಯಕ ವ್ಯಕ್ತಿಗಳು. ಅವರ ಕೊಡುಗೆಗಳು ಸಮಾಜಕ್ಕೆ ಅಮೂಲ್ಯವಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ವೈರಲ್‌ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?

ಮತ್ತೊಬ್ಬ ನೆಟ್ಟಿಗರು, ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ 25 ಲಕ್ಷ ರೂ.ಗಿಂತಲೂ ಹೆಚ್ಚು ಸಂಬಳ ನೀಡಬೇಕು. ನಾವು ಅವರು ಪ್ರತಿಭೆಯನ್ನು ಗುರುತಿಸಬೇಕು ಮತ್ತು ಅದಕ್ಕೆ ತಕ್ಕಂತೆ ವೇತನ ನೀಡಬೇಕು ಎಂದು ಬರೆದುಕೊಂಡಿದ್ದಾರೆ. ಅವರ ಸಂಬಳವು ಮನೆ, ಕಾರು, ಸೇವಕರು ಮತ್ತು ಇತರ ಭತ್ಯೆಗಳನ್ನು ಹೊಂದಿರುತ್ತದೆ. ಆದರೆ ನೀವು ಹೇಳಿದಂತೆ, ಅವರು ಹಣವನ್ನು ದೊಡ್ಡ ಪ್ರೇರಣೆಯಾಗಿ ಕಾಣುವುದಿಲ್ಲ. ಅವರಿಗೆ, ಯಶಸ್ಸು ಮತ್ತು ರಾಷ್ಟ್ರದ ಹೆಮ್ಮೆ ದೊಡ್ಡ ಸಂಗತಿಯಾಗಿರುತ್ತದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version