ISRO Chief Salary: ಇಸ್ರೋ ಅಧ್ಯಕ್ಷರ ಸ್ಯಾಲರಿ ತಿಂಗಳಿಗೆ ಕೇವಲ 2.5 ಲಕ್ಷ ರೂಪಾಯಿನಾ? ಗೋಯೆಂಕಾ ಟ್ವೀಟ್‌ಗೆ ಭಾರೀ ಚರ್ಚೆ - Vistara News

ದೇಶ

ISRO Chief Salary: ಇಸ್ರೋ ಅಧ್ಯಕ್ಷರ ಸ್ಯಾಲರಿ ತಿಂಗಳಿಗೆ ಕೇವಲ 2.5 ಲಕ್ಷ ರೂಪಾಯಿನಾ? ಗೋಯೆಂಕಾ ಟ್ವೀಟ್‌ಗೆ ಭಾರೀ ಚರ್ಚೆ

ISRO Chief Salary: ಚಂದ್ರಯಾನ-3 ಮಿಷನ್ ಯಶಸ್ಸಿನ ರೂವಾರಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರ ಸ್ಯಾಲರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ.

VISTARANEWS.COM


on

S Somanath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಎಕ್ಸ್‌ ವೇದಿಕೆಯಲ್ಲಿ ಮೋಟಿವೇಷನಲ್ ಹಾಗೂ ಆಸಕ್ತಿಕರ ಸಂಗತಿಗಳನ್ನು ಷೇರ್ ಮಾಡುವ ಉದ್ಯಮಿ, ಆರ್‌ಪಿಜಿ ಗ್ರೂಪ್‌ನ ಚೇರ್ಮನ್ ಹರ್ಷ ಗೋಯೆಂಕಾ (RPG Group Chairman Harsh Goenka) ಅವರು ಈ ಬಾರಿ ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಚೇರ್ಮನ್ ಎಸ್ ಸೋಮನಾಥ್ (ISRO Chief S Samanath) ಅವರ ಸಂಬಳದ ಬಗ್ಗೆ ಚರ್ಚೆ ಮಾಡಿದ್ದಾರೆ(ISRO Chief Salary). ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ 2.5 ಲಕ್ಷ ರೂ. ವೇತನವಿದೆ. ವಿಜ್ಞಾನ ಮತ್ತು ಸಂಶೋಧನೆಯಬಗ್ಗ ಪ್ಯಾಶನ್ ಹೊಂದಿರುವ ಎಸ್‌ ಸೋಮನಾಥ್ ಅವರಿಗೆ ಇಷ್ಟು ಸಂಬಳವೇ ಸಾಕೇ ಎಂದು ಪ್ರಶ್ನಿಸಿದ್ದಾರೆ. ಅವರ ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉದ್ಯಮಿ ಹರ್ಷ ಗೋಯೆಂಕಾ ಅವರ ಈ ಟ್ವೀಟ್‍‌ಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಂತಹ ವ್ಯಕ್ತಿಗಳ ಸಮರ್ಪಣೆ ಮತ್ತು ಉತ್ಸಾಹವು ಅಳೆಯಲಾಗದು. ಅವರ ಕೆಲಸವು ಹಣದ ಪ್ರತಿಫಲಗಳನ್ನು ಮೀರಿದ್ದು, ವಿಜ್ಞಾನ, ಸಂಶೋಧನೆ ಮತ್ತು ಅವರ ರಾಷ್ಟ್ರದ ಸುಧಾರಣೆಗೆ ಆಳವಾದ ಬದ್ಧತೆಯಿಂದ ಕೂಡಿರುತ್ತದೆ. ಅವರು ನಿಜವಾದ ಸ್ಫೂರ್ತಿದಾಯಕ ವ್ಯಕ್ತಿಗಳು. ಅವರ ಕೊಡುಗೆಗಳು ಸಮಾಜಕ್ಕೆ ಅಮೂಲ್ಯವಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ವೈರಲ್‌ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?

ಮತ್ತೊಬ್ಬ ನೆಟ್ಟಿಗರು, ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ 25 ಲಕ್ಷ ರೂ.ಗಿಂತಲೂ ಹೆಚ್ಚು ಸಂಬಳ ನೀಡಬೇಕು. ನಾವು ಅವರು ಪ್ರತಿಭೆಯನ್ನು ಗುರುತಿಸಬೇಕು ಮತ್ತು ಅದಕ್ಕೆ ತಕ್ಕಂತೆ ವೇತನ ನೀಡಬೇಕು ಎಂದು ಬರೆದುಕೊಂಡಿದ್ದಾರೆ. ಅವರ ಸಂಬಳವು ಮನೆ, ಕಾರು, ಸೇವಕರು ಮತ್ತು ಇತರ ಭತ್ಯೆಗಳನ್ನು ಹೊಂದಿರುತ್ತದೆ. ಆದರೆ ನೀವು ಹೇಳಿದಂತೆ, ಅವರು ಹಣವನ್ನು ದೊಡ್ಡ ಪ್ರೇರಣೆಯಾಗಿ ಕಾಣುವುದಿಲ್ಲ. ಅವರಿಗೆ, ಯಶಸ್ಸು ಮತ್ತು ರಾಷ್ಟ್ರದ ಹೆಮ್ಮೆ ದೊಡ್ಡ ಸಂಗತಿಯಾಗಿರುತ್ತದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Yogi Adityanath: ಅತಿಯಾದ ಆತ್ಮವಿಶ್ವಾಸವೇ ಮುಳುವಾಯ್ತು; ಬಿಜೆಪಿ ಸೋಲಿನ ಆತ್ಮವಲೋಕನ ಮಾಡಿದ ಯೋಗಿ ಆದಿತ್ಯನಾಥ್

Yogi Adityanath: ಅತಿಯಾದ ಆತ್ಮವಿಶ್ವಾಸ, ದಲಿತ ಮತಗಳ ವರ್ಗಾವಣೆ, ಸಾಧನೆಗಳನ್ನು ಬಳಸಿಕೊಳ್ಳುವಲ್ಲಿನ ವೈಫಲ್ಯ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಬಳಸದಿರುವುದೇ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ (BJP)ಯ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಲಕ್ನೋದಲ್ಲಿ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮತ್ತೊಮ್ಮೆ ಯಶಸ್ಸು ಸಾಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

VISTARANEWS.COM


on

Yogi Adityanath
Koo

ಲಕ್ನೋ: ಅತಿಯಾದ ಆತ್ಮವಿಶ್ವಾಸ, ದಲಿತ ಮತಗಳ ವರ್ಗಾವಣೆ, ಸಾಧನೆಗಳನ್ನು ಬಳಸಿಕೊಳ್ಳುವಲ್ಲಿನ ವೈಫಲ್ಯ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಬಳಸದಿರುವುದೇ 2024ರ ಲೋಕಸಭಾ ಚುನಾವಣೆ (Lok Sabha Election)ಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ (BJP)ಯ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದ್ದಾರೆ.

ಲಕ್ನೋದಲ್ಲಿ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ನಾವು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಧ್ವಜವನ್ನು ಹಾರಿಸಬೇಕಾಗಿದೆ. ರಾಜ್ಯದ 10 ಸ್ಥಾನಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆ ಮತ್ತು 2027ರ ವಿಧಾನಸಭಾ ಚುನಾವಣೆಗೆ ಎಲ್ಲರೂ ಈಗಿನಿಂದಲೇ ಸಕ್ರಿಯರಾಗಿರಬೇಕು. ಎಲ್ಲ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮೇಯರ್‌ಗಳು, ಕೌನ್ಸಿಲರ್‌ಗಳು, ಕಾರ್ಯಕರ್ತರು ಸೇರಿ ಎಲ್ಲರೂ 2027ರ ಚುನಾವಣೆಗೆ ಈಗಿನಿಂದಲೇ ತಯಾರಿ ಪ್ರಾರಂಭಿಸಬೇಕುʼʼ ಎಂದು ಆದಿತ್ಯನಾಥ್ ಕರೆ ನೀಡಿದ್ದಾರೆ.

ಪಕ್ಷದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನು ಎತ್ತಿ ತೋರಿಸಿದ ಮುಖ್ಯಮಂತ್ರಿ, “ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ನಾವು ರಾಜ್ಯದಲ್ಲಿ ಪ್ರತಿಪಕ್ಷಗಳ ಮೇಲೆ ನಿರಂತರ ಒತ್ತಡವನ್ನು ಕಾಯ್ದುಕೊಂಡಿದ್ದೇವೆ. 2014, 2017, 2019 ಮತ್ತು 2022ರಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದೇವೆ. ಆದರೆ ಈ ಬಾರಿ ಮತಗಳ ಬದಲಾವಣೆ ಮತ್ತು ಅತಿಯಾದ ಆತ್ಮವಿಶ್ವಾಸ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಈ ಹಿಂದೆ ಸೋಲನ್ನು ಒಪ್ಪಿಕೊಂಡು ತಮ್ಮ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದ ಪ್ರತಿಪಕ್ಷಗಳು ಈಗ ಸಿಕ್ಕ ಯಶಸ್ಸಿನಿಂದ ಮೆರೆಯುತ್ತಿವೆʼʼ ಎಂದು ಹೇಳಿದ್ದಾರೆ.

“ಬಿಜೆಪಿ ಸಂವಿಧಾನದ ಬಗ್ಗೆ ಅತ್ಯುನ್ನತ ಗೌರವ ಹೊಂದಿರುವ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮೂಲ ಪ್ರತಿಯನ್ನು ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಿದ್ದಾರೆ. ಬಿಜೆಪಿ ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ. ಆದರೆ ಪ್ರತಿಪಕ್ಷಗಳು ವದಂತಿಗಳನ್ನು ಹರಡಿ, ಗೊಂದಲವನ್ನು ಸೃಷ್ಟಿಸಿವೆ. ಇದು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸಿತು. ನಾವು ಈ ಬಗ್ಗೆ ಜಾಗರೂಕರಾಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಬಾ ಸಾಹೇಬ್ ಅವರ ಹೆಸರಿನಲ್ಲಿದ್ದ ಕನೌಜ್ ವೈದ್ಯಕೀಯ ಕಾಲೇಜಿನ ಹೆಸರನ್ನು ಎಸ್‌ಪಿ ಸರ್ಕಾರ ರಾಜ್ಕಿಯಾ ವೈದ್ಯಕೀಯ ಕಾಲೇಜು ಎಂದು ಬದಲಾಯಿಸಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, “ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಿದ್ದು ಬಿಜೆಪಿ ಸರ್ಕಾರ. ಅದೇ ರೀತಿ ಹಿಂದುಳಿದ ಜಾತಿಗೆ ಸೇರಿದ ರಾಜು ಪಾಲ್, ರಮೇಶ್ ಪಾಲ್ ಮತ್ತು ರಮೇಶ್ ಯಾದವ್ ಅವರ ಹತ್ಯೆಯ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ಸಂತ್ರಸ್ತರ ಧ್ವನಿಗೆ ಬೆಂಬಲ ನೀಡಲು ಬಿಜೆಪಿ ಸರ್ಕಾರ ಬರಬೇಕಾಯಿತು” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಇದನ್ನೂ ಓದಿ: Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

ಬಿಜೆಪಿ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಯೋಜನೆಗಳ ಪ್ರಯೋಜನಗಳನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಸಮಾಜವಾದಿ ಪಕ್ಷದ ನಾಯಕರು ದಲಿತ ಚಿಂತಕರು ಮತ್ತು ಮಹಾಪುರುಷರನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ. “ಎಸ್‌ಸಿ ಸರ್ಕಾರ 2016ರಲ್ಲಿ ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನಿಲ್ಲಿಸಿತ್ತು. ಇದನ್ನು 2017ರಲ್ಲಿ ಬಿಜೆಪಿ ಪುನರಾರಂಭಿಸಿದೆʼʼ ಎಂದು ವಿವರಿಸಿದ್ದಾರೆ.

Continue Reading

ದೇಶ

BJP: ಲೋಕಸಭೆ ಚುನಾವಣೆ ಹಿನ್ನಡೆ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಬಿಜೆಪಿ ಬಲ 86ಕ್ಕೆ ಕುಸಿತ

BJP: ರಾಕೇಶ್‌ ಸಿನ್ಹಾ, ರಾಮ್‌ ಶಕಾಲ್‌, ಸೋನಾಲ್‌ ಮಾನ್‌ಸಿಂಗ್‌ ಹಾಗೂ ಮಹೇಶ್‌ ಜೇಠ್ಮಲಾನಿ ಅವರ ಅವಧಿಯು ಮುಕ್ತಾಯಗೊಂಡ ಕಾರಣ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಎನ್‌ಡಿಎ ಬಲವು 101ಕ್ಕೆ ಇಳಿಕೆಯಾಗಿದೆ.

VISTARANEWS.COM


on

BJP
Koo

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಸ್ಥಾನಗಳು 240 ಸ್ಥಾನಗಳಿಗೆ ಕುಸಿದಿದ್ದು, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಚುನಾವಣೆಯಲ್ಲಿ ಬಿಜೆಪಿ (BJP) ಸ್ಥಾನಗಳು ಕುಸಿದಿರುವುದು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ (Rajya Sabha) ಕೂಡ ಬಿಜೆಪಿ ಬಲವು ಕುಸಿತಗೊಂಡಿದೆ. ನಾಮನಿರ್ದೇಶನಗೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ.

ರಾಕೇಶ್‌ ಸಿನ್ಹಾ, ರಾಮ್‌ ಶಕಾಲ್‌, ಸೋನಾಲ್‌ ಮಾನ್‌ಸಿಂಗ್‌ ಹಾಗೂ ಮಹೇಶ್‌ ಜೇಠ್ಮಲಾನಿ ಅವರ ಅವಧಿಯು ಮುಕ್ತಾಯಗೊಂಡ ಕಾರಣ ಬಿಜೆಪಿ ಬಲವು 86ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಎನ್‌ಡಿಎ ಬಲವು 101ಕ್ಕೆ ಇಳಿಕೆಯಾಗಿದೆ. ಒಟ್ಟು 245 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಈಗ 225 ಸದಸ್ಯರು ಇದ್ದು, ಬಹುಮತಕ್ಕೆ 113 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಆದಾಗ್ಯೂ, ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ 7 ನಾಮನಿರ್ದೇಶನಗೊಂಡಿರುವ ಸದಸ್ಯರ ಬಲವೂ ಎನ್‌ಡಿಎಗೆ ಇದೆ. ಅಲ್ಲಿಗೆ, ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತಕ್ಕೆ ಇನ್ನೂ 4 ಸದಸ್ಯರ ಕೊರತೆ ಇದೆ.

Modi In Parliament

ಕಾಂಗ್ರೆಸ್‌ ಬಲಾಬಲ ಹೇಗಿದೆ?

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟವು 87 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್‌ 26, ತೃಣಮೂಲ ಕಾಂಗ್ರೆಸ್‌ 13, ಆಮ್‌ ಆದ್ಮಿ ಪಕ್ಷ, ಡಿಎಂಕೆ ಪಕ್ಷಗಳು ತಲಾ 10 ಸದಸ್ಯರನ್ನು ಹೊಂದಿವೆ. ಉಳಿದ ಸ್ಥಾನಗಳು ತೆಲಂಗಾಣದ ಬಿಆರ್‌ಎಸ್‌, ನಾಮನಿರ್ದೇಶಿತ ಸದಸ್ಯರು ಹಾಗೂ ಸ್ವತಂತ್ರ ಸದಸ್ಯರಾಗಿದ್ದಾರೆ. ಆದಾಗ್ಯೂ, ಬಿಜೆಪಿಯು ಪ್ರಸಕ್ತ ವರ್ಷ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಹಾಗೆಯೇ, 11 ಸ್ಥಾನಗಳಿಗೆ ಚುನಾವಣೆಯೂ ನಡೆಯಲಿದೆ. ಹಾಗಾಗಿ, ಶೀಘ್ರದಲ್ಲೇ ಬಿಜೆಪಿಯು ಮೇಲ್ಮನೆಯಲ್ಲಿ ಬಹುಮತ ಸಾಧಿಸಲಿದೆ ಎಂದೇ ತಜ್ಞರು ವಿಶ್ಲೇಷಿಸಿದ್ದಾರೆ.

ಸೀಟು ಕಡಿಮೆಯಾದರೆ ಬಿಜೆಪಿಗೆ ಹೇಗೆ ತೊಂದರೆ?

ರಾಜ್ಯಸಭೆಯಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾದರೆ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗಲಿದೆ. ಮಹತ್ವದ ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅನುಮೋದನೆ ಪಡೆಯಲು ಆಗುವುದಿಲ್ಲ. ಹಾಗಾಗಿ, ಬಿಜೆಪಿಯು ಈಗ ವಿಧೇಯಕಗಳಿಗೆ ಅನುಮೋದನೆ ಪಡೆಯಲು ಎನ್‌ಡಿಎ ಜತೆಗೆ ಇರದ ಎಐಎಡಿಎಂಕೆ ಹಾಗೂ ಆಂಧ್ರಪ್ರದೇಶದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ, ಯಾವುದೇ ವಿದೇಯಕಗಳಿಗೆ ಅಂಗೀಕಾರ ಸಿಗಲು ಬಿಜೆಪಿಯು ಬಹುಮತ ಗಳಿಸಲೇಬೇಕಿದೆ.

ಇದನ್ನೂ ಓದಿ: Sudha Murthy: ʼಹೆಣ್ಣುಮಕ್ಕಳಿಗೆ ಇದೊಂದು ಕೊಟ್ಟುಬಿಡಿ, ಪ್ಲೀಸ್‌ʼ ಎಂದ ಸುಧಾ ಮೂರ್ತಿ; ರಾಜ್ಯಸಭೆಯಲ್ಲಿ ಭಾಷಣಕ್ಕೆ ಮೋದಿ ಮೆಚ್ಚುಗೆ

Continue Reading

ದೇಶ

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Pooja Khedkar: ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಕುರಿತಾದ ವಿವಾದ ಒಂದೊಂದಾಗಿ ಹೊರ ಬೀಳುತ್ತಿದೆ. ಪುಣೆಯ ಶ್ರೀಮತಿ ಕಾಶಿಬಾಯಿ ನವಲೆ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ನಿರ್ದೇಶಕ ಅರವಿಂದ್ ಭೋರೆ ಅವರು ಹೇಳಿಕೆ ನೀಡಿ, ಪೂಜಾ ಖೇಡ್ಕರ್ 2007ರಲ್ಲಿ ಅಲೆಮಾರಿ ಬುಡಕಟ್ಟು -3 ವಿಭಾಗದ ಅಡಿಯಲ್ಲಿ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

VISTARANEWS.COM


on

Pooja Khedkar
Koo

ಮುಂಬೈ: ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ (Pooja Khedkar) ಕುರಿತಾದ ವಿವಾದ ಒಂದೊಂದಾಗಿ ಹೊರ ಬೀಳುತ್ತಿದೆ. ಅವರು ಎಂಬಿಬಿಎಸ್‌ ಪ್ರವೇಶಕ್ಕಾಗಿ ಸುಳ್ಳು ದಾಖಲೆಗಳನ್ನು ಹಾಜರುಪಡಿಸಿರುವುದು ಸದ್ಯ ಬೆಳಕಿಗೆ ಬಂದಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪುಣೆಯ ಶ್ರೀಮತಿ ಕಾಶಿಬಾಯಿ ನವಲೆ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಯ ನಿರ್ದೇಶಕ ಅರವಿಂದ್ ಭೋರೆ ಅವರು ಹೇಳಿಕೆ ನೀಡಿ, ಪೂಜಾ ಖೇಡ್ಕರ್ 2007ರಲ್ಲಿ ಅಲೆಮಾರಿ ಬುಡಕಟ್ಟು -3 ವಿಭಾಗದ ಅಡಿಯಲ್ಲಿ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಪೂಜಾ ಖೇಡ್ಕರ್ ಅವರು ಅಸೋಸಿಯೇಷನ್ ಆಫ್ ಮ್ಯಾನೇಜ್‌ಮೆಂಟ್‌ ಆಫ್ ಅನ್‌ಆ್ಯಡೆಡ್‌ ಪ್ರವೇಟ್‌ ಮೆಡಿಕಲ್‌ & ಡೆಂಟಲ್‌ ಕಾಲೇಜಸ್‌ ಆಫ್‌ ಮಹಾರಾಷ್ಟ್ರ (AMUPMDC) ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿದ್ದರು. ಆಗ ಅವರು 200ರಲ್ಲಿ 146 ಅಂಕಗಳನ್ನು ಗಳಿಸಿದ್ದರು ಎಂದು ಭೋರೆ ತಿಳಿಸಿದ್ದಾರೆ.

ಪೂಜಾ ಅವರ ದಿಲೀಪ್ ಖೇಡ್ಕರ್ ಸುಮಾರು 40 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹೀಗಾಗಿ ಅವರು ಅದು ಹೇಗೆ ಯುಪಿಎಸ್‌ಸಿಗೆ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರ ಹಾಜರುಪಡಿಸಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಪೂಜಾ ಖೇಡ್ಕರ್ ಅವರಿಗೆ ನೀಡಲಾದ ಕೆನೆಪದರವಲ್ಲದ ಒಬಿಸಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಪಥರ್ಡಿ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಅಹ್ಮದ್ ನಗರದ ಜಿಲ್ಲಾಧಿಕಾರಿ ಎಸ್.ಸಾಲಿಮಠ್ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಅಹ್ಮದ್ ನಗರದಿಂದ ಸ್ಪರ್ಧಿಸಿದ್ದ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಮತ್ತು ಪತ್ನಿಯ ಆಸ್ತಿ ಮೌಲ್ಯ 58 ಕೋಟಿ ರೂ. ಎಂದು ಘೋಷಿಸಿದ್ದರು. ಇನ್ನು ಪೂಜಾ 22 ಕೋಟಿ ರೂ.ಗಳ ಆಸ್ತಿ ಮತ್ತು ವಾರ್ಷಿಕ ಆದಾಯ 43 ಲಕ್ಷ ರೂ. ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಒಬಿಸಿಯ ಕೆನೆಪದರ ರಹಿತರ ಆದಾಯ ಮಿತಿ ವರ್ಷಕ್ಕೆ 8 ಲಕ್ಷ ರೂ. ಹೀಗಾಗಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ʼʼಪುಣೆ ಮೂಲದ ವೈದ್ಯಕೀಯ ಕಾಲೇಜಿನ ಪ್ರವೇಶದ ಸಮಯದಲ್ಲಿ ಪೂಜಾ ಮೊದಲ ಬಾರಿಗೆ ಕೆನೆಪದರ ಪ್ರಮಾಣಪತ್ರವನ್ನು ಬಳಸಿದ್ದರು. ಈ ವಿಚಾರವಾಗಿ ಇಲ್ಲಿಯವರೆಗೆ ಯಾರೂ ಸಂಪರ್ಕಿಸಿಲ್ಲ. ಆದಾಗ್ಯೂ, ನಡೆಯುತ್ತಿರುವ ತನಿಖೆಯನ್ನು ಪರಿಗಣಿಸಿ, ನಾವು ವಿವರಗಳನ್ನು ಸಂಗ್ರಹಿಸಿಟ್ಟಿದ್ದೇವೆ” ಎಂದು ಸಾಲಿಮಠ್ ತಿಳಿಸಿದ್ದಾರೆ. ಐಎಎಸ್‌ನಲ್ಲಿ ಸ್ಥಾನ ಪಡೆಯಲು ಅಂಗವೈಕಲ್ಯ ಮತ್ತು ಒಬಿಸಿ ಕೋಟಾವನ್ನು ದುರುಪಯೋಗಪಡಿಸಿಕೊಂಡಿರುವ ಪೂಜಾ ಅವರ ವಿವರಗಳನ್ನು ಪರಿಶೀಲಿಸಲು ಕೇಂದ್ರವು ಕಳೆದ ಏಕ ಸದಸ್ಯ ಸಮಿತಿಯನ್ನು ರಚಿಸಿತ್ತು.

ಇದನ್ನೂ ಓದಿ: Pooja Khedkar: ಯಾರು ಈ ಪೂಜಾ ಖೇಡ್ಕರ್? ವಿಐಪಿ ದರ್ಬಾರ್ ನಡೆಸಿ ಸಿಕ್ಕಿಹಾಕಿಕೊಂಡ ಐಎಎಸ್ ಅಧಿಕಾರಿ!

“ಕೆನೆಪದರ ರಹಿತ ಪ್ರಮಾಣಪತ್ರಗಳನ್ನು ನೀಡುವಾಗ, ಸ್ವಯಂ ಘೋಷಣೆ ಆದಾಯ ನಮೂನೆಯನ್ನು ಗ್ರಾಮ ತಲಾಥಿಯಿಂದ ಪರಿಶೀಲನೆ ನಡೆಸಬೇಕು. ನಿಜವಾದ ಆದಾಯ ಮತ್ತು ಕೆನೆಪದರ ಪ್ರಮಾಣಪತ್ರದಲ್ಲಿ ವ್ಯತ್ಯಾಸವಿದ್ದರೆ ಸಂಬಂಧಪಟ್ಟ ತಲಾಥಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂಜಾ ನಕಲಿ ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವುದೂ ವಿವಾದಕ್ಕೆ ಕಾರಣವಾಗಿದೆ. ಕೆನೆಪದರ ಪರಿಕಲ್ಪನೆಯನ್ನು ಒಬಿಸಿಯ ಶ್ರೀಮಂತ ಮತ್ತು ಸುಶಿಕ್ಷಿತ ವರ್ಗವನ್ನು ಸೂಚಿಸಲು ಬಳಸಲಾಗುತ್ತಿದೆ.

Continue Reading

ದೇಶ

‘ಆಜಾದ್‌ ಕಾಶ್ಮೀರ’ ಎನ್ನುತ್ತಿದ್ದ ಒಮರ್‌ ಅಬ್ದುಲ್ಲಾ ಈಗ ಪತ್ನಿಯಿಂದ ಸ್ವಾತಂತ್ರ್ಯ ಕೊಡಿಸಿ ಎಂದು ಕೋರ್ಟ್‌ ಮೊರೆ!

ಒಮರ್‌ ಅಬ್ದುಲ್ಲಾ ಅವರು ಇದಕ್ಕೂ ಮೊದಲು ಪತ್ನಿಯಿಂದ ವಿಚ್ಛೇದನ ಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಹಾಗಾಗಿ, ಸುಪ್ರೀಂ ಕೋರ್ಟ್‌ ಈಗ ಪಾಯಲ್‌ ಅಬ್ದುಲ್ಲಾ ಅವರಿಗೆ ನೋಟಿಸ್‌ ನೀಡಿದೆ.

VISTARANEWS.COM


on

Omar Abdullah
Koo

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಪರ ವಾದ ಮಂಡಿಸುವ, 370ನೇ ವಿಧಿ ರದ್ದುಗೊಳಿಸುವುದನ್ನು ವಿರೋಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ (Omar Abdullah) ಅವರು ಈಗ ಪತ್ನಿಯಿಂದ ವಿಚ್ಛೇದನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. “ನನಗೆ ನನ್ನ ಪತ್ನಿಯಿಂದ ವಿಚ್ಛೇದನ ಬೇಕು” ಎಂಬುದಾಗಿ ಒಮರ್‌ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ಪತ್ನಿ ಪಾಯಲ್‌ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ನೋಟಿಸ್‌ ಜಾರಿಗೊಳಿಸಿದೆ.

ಒಮರ್‌ ಅಬ್ದುಲ್ಲಾ ಅವರು ಇದಕ್ಕೂ ಮೊದಲು ಪತ್ನಿಯಿಂದ ವಿಚ್ಛೇದನ ಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್‌ ನಿರಾಕರಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾಹ್‌ ಅವರಿದ್ದ ಪೀಠವು, “ಇಬ್ಬರೂ ಕಳೆದ 15 ವರ್ಷಗಳಿಂದ ಬೇರೆ ಬೇರೆಯಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಇವರ ಮದುವೆಗೆ ಅರ್ಥವಿಲ್ಲ” ಎಂಬ ಅಂಶವನ್ನು ಪರಿಗಣಿಸಿತು. ನಂತರ ಪಾಯಲ್‌ ಅಬ್ದುಲ್ಲಾ ಅವರಿಗೆ ನೋಟಿಸ್‌ ನೀಡಿತು.

ಒಬರ್‌ ಅಬ್ದುಲ್ಲಾ ಹಾಗೂ ಪಾಯಲ್‌ ಅಬ್ದುಲ್ಲಾ ಅವರು ದೆಹಲಿಯಲ್ಲಿರುವ ದಿ ಒಬೆರಾಯ್‌ನಲ್ಲಿ ಕೆಲಸ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು. ಇಬ್ಬರ ಪರಿಚಯವು ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರೂ 1994ರಲ್ಲಿ ಮದುವೆಯಾಗಿದ್ದರು. ಇವರಿಗೆ ಜಹೀರ್‌ ಹಾಗೂ ಜಮೀರ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, 17 ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದ ಒಮರ್‌ ಅಬ್ದುಲ್ಲಾ, ನಾವಿಬ್ಬರೂ ಬೇರೆ ಬೇರೆಯಾಗಿದ್ದೇವೆ ಎಂದು 2011ರಲ್ಲಿ ಘೋಷಣೆ ಮಾಡಿದ್ದರು. ಅದಕ್ಕೂ ಮೊದಲೇ ಇಬ್ಬರೂ ಪ್ರತ್ಯೇಕವಾಗಿದ್ದರು ಎಂದು ಹೇಳಲಾಗುತ್ತಿದೆ.

ಇಬ್ಬರೂ ಬೇರೆ ಬೇರೆಯಾಗಿದ್ದರೂ ವಿಚ್ಛೇದನ ಪಡೆದಿರಲಿಲ್ಲ. ಇದೇ ಕಾರಣಕ್ಕೆ ಒಮರ್‌ ಅಬ್ದುಲ್ಲಾ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ನ್ಯಾಯಾಲಯವು ವಿಚ್ಛೇದನ ನೀಡಲು ನಿರಾಕರಿಸಿತ್ತು. ಅಷ್ಟೇ ಅಲ್ಲ, ಪಾಯಲ್‌ ಅವರಿಗೆ ಮಾಸಿಕವಾಗ 1.5 ಲಕ್ಷ ರೂ. ಜೀವನಾಂಶ ಹಾಗೂ ಮಗನ ಶಿಕ್ಷಣಕ್ಕೆ 60 ಸಾವಿರ ರೂ. ನೀಡಬೇಕು ಎಂಬುದಾಗಿ ದೆಹಲಿ ಹೈಕೋರ್ಟ್‌ ಆದೇಶಿಸಿತ್ತು. ಇದಾದ ಬಳಿಕವೇ ಒಮರ್‌ ಅಬ್ದುಲ್ಲಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: Omar Abdullah: ಒಮರ್‌ ಅಬ್ದುಲ್ಲ: ನಿನ್ನೆ ಕಾಶ್ಮೀರ ದೊರೆಯಲಿಲ್ಲ; ಇಂದು ಪತ್ನಿಯಿಂದ ಡೈವೋರ್ಸೂ ಸಿಗಲಿಲ್ಲ!

Continue Reading
Advertisement
Yogi Adityanath
ರಾಜಕೀಯ7 mins ago

Yogi Adityanath: ಅತಿಯಾದ ಆತ್ಮವಿಶ್ವಾಸವೇ ಮುಳುವಾಯ್ತು; ಬಿಜೆಪಿ ಸೋಲಿನ ಆತ್ಮವಲೋಕನ ಮಾಡಿದ ಯೋಗಿ ಆದಿತ್ಯನಾಥ್

karnataka Weather Forecast
ಮಳೆ8 mins ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Paris Olympics
ಕ್ರೀಡೆ8 mins ago

Paris Olympics: ಅಂದು ಒಲಿಂಪಿಕ್ಸ್​ ಕ್ರೀಡಾಪಟು; ಇಂದು ಖ್ಯಾತ ಸ್ವಾಮೀಜಿ; ಯಾರಿವರು?

BJP
ದೇಶ9 mins ago

BJP: ಲೋಕಸಭೆ ಚುನಾವಣೆ ಹಿನ್ನಡೆ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಬಿಜೆಪಿ ಬಲ 86ಕ್ಕೆ ಕುಸಿತ

Janhvi Kapoor Trying To Copy Uorfi Javed TROLLED
ಬಾಲಿವುಡ್15 mins ago

Janhvi Kapoor: ಉರ್ಫಿ ಸ್ಟೈಲ್ ಕಾಪಿ ಮಾಡಿದ್ರಾ ಜಾಹ್ನವಿ ಕಪೂರ್‌? ಟ್ರೋಲ್‌ ಆದ್ರು ನಟಿ!

Teachers Recruitment
ಕರ್ನಾಟಕ34 mins ago

Teachers Recruitment: 10 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ: ಸಚಿವ ಮಧು ಬಂಗಾರಪ್ಪ

ಕ್ರಿಕೆಟ್49 mins ago

Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

Paris Olympics 2024
ಕ್ರೀಡೆ54 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

Pooja Khedkar
ದೇಶ58 mins ago

Pooja Khedkar: ಎಂಬಿಬಿಎಸ್ ಪ್ರವೇಶಕ್ಕೆ ಒಬಿಸಿ ಕೆನೆಪದರ ರಹಿತ ಪ್ರಮಾಣಪತ್ರ ಸಲ್ಲಿಸಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್

Omar Abdullah
ದೇಶ59 mins ago

‘ಆಜಾದ್‌ ಕಾಶ್ಮೀರ’ ಎನ್ನುತ್ತಿದ್ದ ಒಮರ್‌ ಅಬ್ದುಲ್ಲಾ ಈಗ ಪತ್ನಿಯಿಂದ ಸ್ವಾತಂತ್ರ್ಯ ಕೊಡಿಸಿ ಎಂದು ಕೋರ್ಟ್‌ ಮೊರೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ8 mins ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ7 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ11 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌