ವೈರಲ್‌ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು? - Vistara News

ಲೈಫ್‌ಸ್ಟೈಲ್

ವೈರಲ್‌ ಆದ ಹರ್ಷ ಗೋಯೆಂಕಾ ಪ್ರಶ್ನೋತ್ತರ: ಯಾವ ಶಿಕ್ಷಣ ನಿಮಗೆ ಶಾಲೆಯಲ್ಲಿ ಸಿಗಬೇಕಿತ್ತು?

ಚಿಕ್ಕಂದಿನಲ್ಲಿ ಯಾವ ಶಿಕ್ಷಣ ಸಿಕ್ಕಿದ್ದರೆ ಚೆನ್ನಾಗಿತ್ತು ಅನಿಸುತ್ತದೆ? ಇದು ಉದ್ಯಮಿ ಹರ್ಷ ಗೋಯೆಂಕಾ ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆ, ಇದಕ್ಕೆ ಬಂದ ಹೆಚ್ಚಿನ ಉತ್ತರಗಳಲ್ಲಿ ಏನಿತ್ತು ಗೊತ್ತೆ?

VISTARANEWS.COM


on

harsha goenka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಾಲಾ ಜೀವನ ಎಲ್ಲರ ಬದುಕಿನಲ್ಲಿ ಬಂದುಹೋಗುವ ಬೆಳವಣಿಗೆಯ ಅಧ್ಯಾಯ. ನಮ್ಮ ಬದುಕಿಗೆ ಹಾಕುವ ತಳಪಾಯ ಅದು. ಅದು ಗಟ್ಟಿಯಾದರೆ, ಬದುಕೆಂಬ ಕಟ್ಟಡ ಅಲ್ಲಾಡದೆ ಸದೃಢವಾಗಿ ನಿಲ್ಲುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವುದೇ. ಆದರೂ ಶಾಲಾ ಶಿಕ್ಷಣದ ಸಂದರ್ಭ ಬದುಕಿಗೆ ನಿಜವಾಗಿ ಬೇಕಾದ ಎಲ್ಲ ಅಂಶಗಳೂ ಸಿಗುವುದಿಲ್ಲ. ಬಹಳಷ್ಟನ್ನು ನಂತರ ನಾವು ಕಲಿತುಕೊಳ್ಳಬೇಕಾಗುತ್ತದೆ. ಶಾಲೆಯಲ್ಲಿ ಡಿಸ್ಟಿಂಕ್ಷನ್‌ ಪಡೆದವರು ಬದುಕಿನಲ್ಲಿ ಫೇಲ್‌ ಕೂಡಾ ಆಗುವುದುಂಟು. ಹಾಗೆಯೇ ಉತ್ತಮ ಅಂಕ ಗಳಿಸದವರು ಬದುಕಿನಲ್ಲಿ ಯಾರೂ ಮಾಡದ ಸಾಧನೆಯನ್ನೂ ಮಾಡುವುದುಂಟು. ಹಾಗಾದರೆ, ಈ ಶಾಲಾ ಶಿಕ್ಷಣದ ನಿಜವಾದ ಮರ್ಮ ಏನು? ಪುಸ್ತಕದ ಬದನೆಕಾಯಿಯಿಂದ ಬದುಕಿನಲ್ಲಿ ಸಾಂಬಾರ್‌ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬ ವಾದಗಳು ಇದ್ದರೂ ಶಿಕ್ಷಣವೆಂಬುದು ಬದುಕಿಗೆ ಬೇಕೇ ಬೇಕು ಎಂಬುದು ಅಪ್ಪಟ ಸತ್ಯ. ಹಾಗೆಯೇ ಶಿಕ್ಷಣದ ಕ್ರಮವೂ ಕಾಲಕಾಲಕ್ಕೆ ಅಪ್‌ಗ್ರೇಡ್‌ ಆಗಲೇಬೇಕಾಗಿರುವುದೂ ಅಷ್ಟೇ ನಿಜ.

ಈ ಸತ್ಯಕ್ಕೆ ಪೂರಕವಾಗಿ ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಈಗ ಒಂದು ಪ್ರಶ್ನೆಯನ್ನು ಟ್ವಿಟರಿನಲ್ಲಿ ಎಲ್ಲರ ಮುಂದಿಟ್ಟಿದ್ದಾರೆ. ಯಾವ ಒಂದು ಶಿಕ್ಷಣ ನಿಮಗೆ ಶಾಲೆಯಲ್ಲಿ ಇರಬೇಕಾಗಿತ್ತು ಎಂದೆನಿಸುತ್ತದೆ ಎಂಬ ಪ್ರಶ್ನೆಯನ್ನು ಇವರು ಪೋಸ್ಟ್‌ ಮಾಡಿದ್ದು, ಇದಕ್ಕೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಎಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆಗಳಲ್ಲಿ ಎಂಥ ಶಿಕ್ಷಣ ನಮಗೆ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂಬ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ, ಹಲವರು ಒಂದೇ ಬಗೆಯ ಉತ್ತರಗಳನ್ನು ಕೊಟ್ಟಿರುವುದು.

ಬಹಳಷ್ಟು ಮಂದಿಗೆ ಹಣಕಾಸಿನ ವಿಚಾರವೇ ಹೆಚ್ಚು ಪ್ರಮುಖವೆಂದು ಅನಿಸಿದೆ. ʻಆರ್ಥಿಕ ವಿಷಯಗಳು ಶಾಲಾ ಪಠ್ಯದಲ್ಲಿಲ್ಲ. ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಸಣ್ಣವರಿದ್ದಾಗಿಂದಲೇ ಅಗತ್ಯವಿತ್ತುʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರೂ ಕೂಡಾ, ಇದೇ ವಿಚಾರವನ್ನು ಎತ್ತಿ ಹಿಡಿದಿದ್ದಾರೆ. ʻಹಣಕಾಸಿನ ವಿಚಾರಗಳು ಶಾಲೆಯಲ್ಲಿ ಪಠ್ಯವಾಗಿ ಯಾಕೆ ಇಂದಿಗೂ ಪರಿಗಣಿಸುತ್ತಿಲ್ಲ ಎಂಬುದೇ ದೊಡ್ಡ ಆಶ್ಚರ್ಯ. ನಿಜವಾಗಿ ಜೀವನಕ್ಕೆ ಬೇಕಾದ ಶಿಕ್ಷಣಗಳಲ್ಲಿ ಇದು ಪ್ರಮುಖವಾದದ್ದುʼ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ʻಚಿಕ್ಕ ವಯಸ್ಸಿನಲ್ಲಿಯೇ ಉಳಿತಾಯ ಹೇಗೆ ಮಾಡುವುದು ಎಂಬ ವಿಚಾರದಲ್ಲಿ ಶಿಕ್ಷಣ ಬೇಕಿತ್ತುʼ ಎಂದೂ ಮತ್ತೊಬ್ಬರು ಉತ್ತರಿಸಿದ್ದಾರೆ. ʻಹಣಕಾಸಿನ ಮಹತ್ವ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಗತ್ಯವಾಗಿ ತಿಳುವಳಿಕೆಯನ್ನು ಎಳವೆಯಲ್ಲಿಯೇ ನೀಡಬೇಕಿತ್ತುʼ ಎಂದಿದ್ದಾರೆ.

ʻಹಣಕಾಸು ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲು ಶಿಕ್ಷಣದ ಅಗತ್ಯವಿದೆ. ಪ್ರತಿಯೊಬ್ಬರ ಭವ್ಯ ಭವಿಷ್ಯ ಹಾಗೂ ವೃತ್ತಿ ಇವೆರಡಕ್ಕೂ ಅಗತ್ಯವಾಗಿ ಬೇಕಾಗಿರುವುದು ಹಣಕಾಸು ನಿರ್ವಹಣೆ. ಹಾಗಾಗಿ ಇವುಗಳ ಶಿಕ್ಷಣ ಶಾಲಾ ವ್ಯವಸ್ಥೆಯಲ್ಲಿ ಮೊದಲೇ ನಮಗೆ ಸಿಕ್ಕಿರಬೇಕಿತ್ತು ಅನಿಸುತ್ತಿದೆʼ ಎಂದೂ ಕಮೆಂಟಿಸಿದ್ದಾರೆ.

ಇನ್ನೂ ಕೆಲವರಿಗೆ ತಮಗೆ ಇಂಗ್ಲೀಷ್‌ ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿದರೆ ಒಳ್ಳೆಯದಿತ್ತೆಂದು ಅನಿಸಿದೆ. ಮತ್ತೊಂದಿಷ್ಟು ಮಂದಿ, ಮಾನಸಿಕ ಆರೋಗ್ಯದ ಬಗ್ಗೆ ಶಾಲೆಯಲ್ಲಿ ಶಿಕ್ಷಣ ಸಿಗಲಿಲ್ಲ ಅನಿಸಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿರುವ ವೃತ್ತಿ ಸಂಬಂಧೀ ಒತ್ತಡಗಳು ಹಾಗೂ ಕೌಟುಂಬಿಕ ಒತ್ತಡಗಳಿಂದ ಹೊರಬರಲು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಶಿಕ್ಷಣ ನೀಡಬೇಕಾಗಿತ್ತು ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್‌ಗಳಂತೆಯೇ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಬಹು ಅಗತ್ಯವಾದ ವಿಷಯ. ಈ ಶಿಕ್ಷಣ ಎಲ್ಲರಿಗೂ ಸಿಕ್ಕಿದ್ದಿದ್ದರೆ ಒಳ್ಳೆಯದಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ.

ಕೆಲವರಂತೂ ಇಡೀ ಲಿಸ್ಟನ್ನೇ ಪೋಸ್ಟ್‌ ಮಾಡಿದ್ದಾರೆ. ಆರ್ಥಿಕ ಸ್ವಾವಲಂಬನೆಯಿಂದ ಹಿಡಿದು ಕಂಪ್ಯೂಟರ್‌ ಕೌಶಲ್ಯದವರೆಗೆ ತನಗೆ ಸಿಗಬೇಕಾಗಿತ್ತದೆಂದು ಬಯಸುವ ಎಲ್ಲ ಶಿಕ್ಷಣಗಳ ಲಿಸ್ಟನ್ನು ಇವರು ಬರೆದುಕೊಂಡಿದ್ದಾರೆ. ಕೆಲವರು, ʻತಮಗೆ ಶಾಲಾ ಪಠ್ಯದಲ್ಲಿ ಕೊಟ್ಟ ಜ್ಞಾನದಿಂದ ಜೀವನಕ್ಕೇನೂ ಉಪಯೋಗವಾಗಿಲ್ಲʼ ಎಂದೂ ಹೇಳಿದ್ದಾರೆ.

ʻಶಾಲೆಯ ಪಠ್ಯದಲ್ಲಿ ಇಂಥದ್ದನ್ನೇ ಓದು ಎಂದು ಹೇಳುವ ಬದಲು ನನ್ನ ನಿಜವಾದ ಆಸಕ್ತಿಗಳಿಗಾದರೂ ನೀರೆರೆಯುತ್ತಿದ್ದರೆ!ʼ ಎಂದು ಒಬ್ಬರು ಚಿಂತನಾರ್ಹ ಮಾತುಗಳನ್ನೂ ಹೇಳಿದ್ದಾರೆ. ಒಟ್ಟಾರೆಯಾಗಿ, ಪಠ್ಯ ಪರಿಷ್ಕರಣೆಯ ಸಂದರ್ಭ ಸಾರ್ವಜನಿಕರ ಈ ಅಮೂಲ್ಯ ಸಲಹೆಗಳು ಉಪಯೋಗಕ್ಕೆ ಬರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Actress Saree Fashion: ಟ್ರೆಂಡಿ ಸನ್‌ ಶೇಡ್‌ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ ಸಮ್ಮರ್‌ ಲುಕ್‌

ನಟಿ ತೇಜಸ್ವಿನಿ ಶರ್ಮಾ ಈ ಸಮ್ಮರ್‌ನಲ್ಲಿ ಸನ್‌ ಕಲರ್‌ ಶೇಡ್‌ನ ಸೀರೆಯಲ್ಲಿ (Actress Saree Fashion) ಸ್ಟ್ರೀಟ್‌ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಈ ಶೇಡ್‌ ಸೀರೆಗಳ ಆಯ್ಕೆಯಿಂದಾಗುವ ಲಾಭ ಹಾಗೂ ಹೇಗೆಲ್ಲಾ ಇವು ಮಹಿಳೆಯರನ್ನು ಆಕರ್ಷಕವಾಗಿಸುತ್ತದೆ ಎಂಬುದರ ಬಗ್ಗೆ ಸೀರೆ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Actress Saree Fashion
ಚಿತ್ರಗಳು: ತೇಜಸ್ವಿನಿ ಶರ್ಮಾ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನ ಸ್ಟ್ರೀಟ್‌ ಫ್ಯಾಷನ್‌ನಲ್ಲಿ (Actress Saree Fashion) ನಟಿ ತೇಜಸ್ವಿನಿ ಶರ್ಮಾ, ಸನ್‌ ಕಲರ್‌ ಶೇಡ್‌ನ ಸಿಂಪಲ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದ್ದಾರೆ. ಸದ್ಯ ಟ್ರೆಂಡ್‌ನಲ್ಲಿರುವ ಈ ಶೇಡ್‌ ಸೀರೆಗಳು ಲೆಕ್ಕವಿಲ್ಲದಷ್ಟು ಬಗೆಯ ಪ್ರಿಂಟ್ಸ್‌ ಹಾಗೂ ಸಿಂಪಲ್‌ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಈ ಸೀಸನ್‌ಗೆ ಹೊಂದುವ ಕಾಟನ್‌, ಲೆನಿನ್‌ ಹಾಗೂ ಇತರೇ ಬ್ರಿಥೆಬಲ್‌ ಫ್ಯಾಬ್ರಿಕ್‌ನಲ್ಲಿ ಆಗಮಿಸಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಸನ್‌ ಶೇಡ್‌ ಸೀರೆಗಳು ಸದ್ಯ ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ.

Actress Saree Fashion

ನಟಿ ತೇಜಸ್ವಿನಿ ಶರ್ಮಾ ಸೀರೆ ಲವ್‌

ನಟಿ ತೇಜಸ್ವಿನಿ ಶರ್ಮಾಗೆ ಮೊದಲಿನಿಂದಲೂ ಸೀರೆ ಲವ್‌ ಇದೆ. ಸೀಸನ್‌ಗೆ ತಕ್ಕಂತೆ ಸೀರೆ ಉಡುವುದು ಅವರ ಸೀರೆ ಪ್ರೇಮ ಎತ್ತಿ ತೋರಿಸುತ್ತದೆ. ಅದರಲ್ಲೂ ದೇಸಿ ಸೀರೆಗಳೆಂದರೇ ಅವರಿಗೆ ಸಖತ್‌ ಇಷ್ಟ. ಇದೀಗ ಈ ಸನ್‌ ಶೇಡ್‌ ಸೀರೆ ಅವರ ಮನಸ್ಸನ್ನು ಮತ್ತಷ್ಟು ಗೆದ್ದಿದೆ. ಅದರೊಂದಿಗೆ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಖುದ್ದು ಅವರೇ ಹೇಳುತ್ತಾರೆ. ಸಮ್ಮರ್‌ ಸೀಸನ್‌ನಲ್ಲಿ ನಾನು ಆದಷ್ಟೂ ಫ್ರೆಶ್‌ ಲುಕ್‌ ನೀಡುವ ಹಾಗೂ ಉಲ್ಲಾಸಿತಗೊಳಿಸುವ ಸೀರೆಗಳನ್ನು ಉಡಲು ಇಷ್ಟಪಡುತ್ತೇನೆ. ಇನ್ನು ಸೀರೆ ಪ್ರಿಯರು ಕೂಡ ಆದಷ್ಟೂ ಉತ್ಸಾಹ ಹೆಚ್ಚಿಸುವ ಶೇಡನ್ನು ಆಯ್ಕೆ ಮಾಡುಬೇಕು ಎನ್ನುತ್ತಾರೆ.

ಮಾರುಕಟ್ಟೆಯಲ್ಲಿ ಸನ್‌ ಶೇಡ್‌ ಸೀರೆಗಳು

“ಸಮ್ಮರ್‌ನಲ್ಲಿ ಯೆಲ್ಲೋ ಶೇಡ್‌ ಸೀರೆಗಳು ಅತಿ ಹೆಚ್ಚು ಬಿಡುಗಡೆಗೊಳ್ಳುತ್ತವೆ. ಅದರಲ್ಲೂ ನಾನಾ ಬಗೆಯ ಲೈಟ್‌ ಶೇಡ್‌ಗಳು ಚಾಲ್ತಿಗೆ ಬರುತ್ತವೆ. ಅವುಗಳಲ್ಲಿ ಸನ್‌ ಶೇಡ್‌ ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸನ್‌ ಶೇಡ್‌ನಲ್ಲೂ ನಾನಾ ಲೈಟ್‌ ಹಾಗೂ ಡಾರ್ಕ್‌ ಶೇಡ್‌ಗಳು ದೊರೆಯುತ್ತಿವೆ. ಇವುಗಳಲ್ಲಿ ಮಾನೋಕ್ರೋಮ್‌ ಶೇಡ್‌ನವು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇನ್ನು ಚಿಕ್ಕ ಪ್ರಿಂಟೆಡ್‌, ಫ್ಲೋರಲ್‌ ಪ್ರಿಂಟ್‌ನವು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಸಮ್ಮರ್‌ಗೆ ಸೂಟ್‌ ಆಗುವ ಫ್ಯಾಬ್ರಿಕ್‌ಗಳಲ್ಲೂ ಸನ್‌ ಶೇಡ್‌ ಸೀರೆಗಳು ಲಗ್ಗೆ ಇಟ್ಟಿವೆ ” ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ ರಾಯನ್‌. ಅವರ ಪ್ರಕಾರ, ಬೇಸಿಗೆ ಸನ್‌ ಕಲರ್‌ ಸೀರೆಗಳಿಗೆ ಹೇಳಿ ಮಾಡಿಸಿದ ಕಾಲ ಎನ್ನುತ್ತಾರೆ.

Actress Saree Fashion

ಸನ್‌ ಶೇಡ್‌ ಸೀರೆ ಆಯ್ಕೆ ಯಾಕೆ?

ಸನ್‌ ಶೇಡ್‌ ಬಿಸಿಲು ಕಾಲದ ಕಲರ್‌ಗಳು. ಇವು ಫ್ರೆಶ್‌ ಲುಕ್‌ ನೀಡುವುದರೊಂದಿಗೆ ಸೀರೆಗಳನ್ನು ಉಟ್ಟಾಗ ಮನೋಲ್ಲಾಸ ನೀಡುತ್ತವೆ. ಹಾಗಾಗಿ ಈ ಶೇಡ್‌ನ ನಾನಾ ಪ್ರಿಂಟ್ಸ್‌ನ ಸೀರೆಗಳು ಈ ಕಾಲದಲ್ಲೆ ಅತಿ ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಹೆಸರಿಗೆ ಒಂದೇ ಶೇಡ್‌ ಎಂದೆನಿಸದರೂ ಲೈಟ್‌ ಡಾರ್ಕ್‌ ಹೀಗೆ ನಾನಾ ಪ್ರಿಂಟ್ಸ್‌ನವು ಇವುಗಳಲ್ಲಿ ದೊರೆಯುತ್ತವೆ.

ಸನ್‌ ಶೇಡ್‌ ಸೀರೆಗೆ ಬ್ಲೌಸ್‌ ಮಿಕ್ಸ್‌ ಮ್ಯಾಚ್‌ ಹೇಗೆ?

ಸನ್‌ ಶೇಡ್‌ ಸೀರೆಗೆ ನೀವು ಅದೇ ವರ್ಣದ ಬ್ಲೌಸ್‌ ಧರಿಸಬೇಕೆಂಬ ರೂಲ್ಸ್‌ ಇಲ್ಲ. ಯಾವುದಾದರೂ ಸರಿಯೇ ಕಾಂಟ್ರಸ್ಟ್‌ ಬಣ್ಣವನ್ನು ಮ್ಯಾಚ್‌ ಮಾಡಿದರಾಯಿತು. ಇನ್ನು ಈ ಸೀಸನ್‌ನಲ್ಲಿ ಆದಷ್ಟೂ ಸ್ಲಿವ್‌ಲೆಸ್‌ ಬ್ಲೌಸ್‌, ಸ್ಲಿವ್‌ಲೆಸ್‌ ಕ್ರಾಪ್‌ ಟಾಪ್‌ ಹಾಗೂ ಹಾಲ್ಟರ್‌ ನೆಕ್‌ಲೈನ್‌ ಇರುವಂತವನ್ನು ಚೂಸ್‌ ಮಾಡುವುದು ಉತ್ತಮ. ಇವು ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್.‌

Actress Saree Fashion

ಸನ್‌ ಶೇಡ್‌ ಸೀರೆ ಪ್ರಿಯರ ಲುಕ್‌ಗೆ 4 ಟಿಪ್ಸ್

  • ಸಿಂಪಲ್‌ ಸಮ್ಮರ್‌ ಮೇಕಪ್‌ ಇರಲಿ.
  • ಹೆಚ್ಚು ಆಕ್ಸೆಸರೀಸ್‌ ಬೇಡ.
  • ಸೀಸನ್‌ಗೆ ತಕ್ಕ ಫ್ಯಾಬ್ರಿಕ್‌ನ ಸೀರೆ ಆಯ್ಕೆ ಮಾಡಿ.
  • ಉದ್ದದ್ದದ ಸ್ಲೀವ್‌ ಬ್ಲೌಸ್‌ ಆಯ್ಕೆ ಬೇಡ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌!

Continue Reading

ಫ್ಯಾಷನ್

Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

ಹುಡುಗರ ಫ್ಯಾಷನ್‌ನಲ್ಲಿ (Mens Neck Chains Fashion) ಇದೀಗ ನೆಕ್‌ ಚೈನ್‌ಗಳು ರೀ ಎಂಟ್ರಿ ನೀಡಿವೆ. ನಾನಾ ಬಗೆಯ ಫಂಕಿ ಜಂಕ್‌ ನೆಕ್‌ ಚೈನ್‌ಗಳು ಕತ್ತನ್ನು ಆವರಿಸಿಕೊಂಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಮೆನ್ಸ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Mens Neck Chains Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗರ ಫ್ಯಾಷನ್‌ನಲ್ಲಿ ಇದೀಗ ನೆಕ್‌ ಚೈನ್‌ಗಳು (Mens Neck Chains Fashion) ರೀ ಎಂಟ್ರಿ ನೀಡಿವೆ. ನಾನಾ ಬಗೆಯ ಫಂಕಿ ಜಂಕ್‌ ನೆಕ್‌ ಚೈನ್‌ಗಳು ಕತ್ತನ್ನು ಆವರಿಸಿಕೊಂಡಿವೆ.

Mens Neck Chains Fashion

ಪೆಂಡೆಂಟ್‌ ನೆಕ್‌ ಚೈನ್‌ ಫ್ಯಾಷನ್‌

“ರೆಟ್ರೋ ಫ್ಯಾಷನ್‌ನಲ್ಲಿ ಭಾಗವಾಗಿದ್ದ ಮೆನ್ಸ್‌ ನೆಕ್‌ ಚೈನ್‌ಗಳು ಹೊಸ ರೂಪದೊಂದಿಗೆ ಹೊಸ ವಿನ್ಯಾಸದೊಂದಿಗೆ ಫಂಕಿ ಫ್ಯಾಷನ್‌ ಹೆಸರಲ್ಲಿ ಮರಳಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಚಿತ್ರ-ವಿಚಿತ್ರ ಡಿಸೈನ್‌ ಒಳಗೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸೀಸನ್‌ನ ಜೆನ್‌ ಜಿ ಹುಡುಗರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಹೊಂದುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಆಯಾ ಹುಡುಗರ ಅಭಿಲಾಷೆಗೆ ತಕ್ಕಂತೆ ಹಾಗೂ ಅಭಿರುಚಿಗೆ ತಕ್ಕಂತೆ ಇವು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಕೆಲವು ಕಸ್ಟಮೈಸ್ಡ್‌ ನೆಕ್‌ ಚೈನ್‌ ವಿತ್‌ ಪೆಂಡೆಂಟ್‌ಗಳು ಲಭ್ಯ. ಹಾಗಾಗಿ ಇವುಗಳ ಬೇಡಿಕೆ ಮೊದಲಿಗಿಂತ ದುಪಟ್ಟಾಗಿದೆ. ಔಟ್‌ಫಿಟ್‌ಗೆ ತಕ್ಕಂತೆ ಇವು ಕಂಡು ಬರುತ್ತಿವೆ” ಎನ್ನುತ್ತಾರೆ ಫಂಕಿ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

Mens Neck Chains Fashion

ಚಿತ್ರ-ವಿಚಿತ್ರ ನೆಕ್‌ ಚೈನ್‌ ಡಿಸೈನ್ಸ್‌

ಹುಡುಗರ ಲಿಸ್ಟ್‌ನಲ್ಲಿ ಅದರಲ್ಲೂ ಒಂದೇ ಗ್ರೂಪ್‌ನ ಹುಡುಗರ ಗುಂಪಿನಲ್ಲೂ ಒಂದೇ ಬಗೆಯ ನೆಕ್‌ ಚೈನ್‌ ನೀವು ನೋಡಿರಲು ಸಾಧ್ಯವಿಲ್ಲ! ಯಾಕೆಂದರೇ, ಒಂದೊಂದು ಬಗೆಯ ನಾನಾ ಚಿತ್ರ-ವಿಚಿತ್ರ ವಿನ್ಯಾಸದ ನೆಕ್‌ಚೈನ್‌ಗಳು ಕಾಣ ಸಿಗುತ್ತವೆ. ಉದಾಹರಣೆಗೆ, ಲಿಂಗ್‌ ಚೈನ್‌ಗೆ ದೊಡ್ಡ ಪೆಂಡೆಂಟ್‌ನದ್ದು ನಾನಾ ಡಿಸೈನ್‌ ಹಾಗೂ ಆಕಾರದಲ್ಲಿ ದೊರೆತರೇ, ಇನ್ನು ಕೆಲವು ವೈಲ್ಡ್‌ ಹಾಗೂ ವಿಯರ್ಡ್‌ ಲುಕ್‌ನ ಪೆಂಡೆಂಟ್‌ ಹೊಂದಿರುವಂತವು ಹುಡುಗರ ಕತ್ತಿನಲ್ಲಿ ನೇತಾಡುತ್ತಿರುತ್ತವೆ. ಮತ್ತೆ ಕೆಲವು, ಜೆಮೆಟ್ರಿಕಲ್‌ ವಿನ್ಯಾಸದವು, ಊಹೆಗೂ ಮೀರಿದ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ನವು ಹುಡುಗರನ್ನು ತಗಲು ಹಾಕಿಕೊಂಡಿರುತ್ತವೆ. ಹಾಗಾಗಿ ಇಂದು ಒಂದೇ ಡಿಸೈನ್‌ನ ನೆಕ್‌ಚೈನ್‌ ಟ್ರೆಂಡಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಹುಡುಗರ ಭಿನ್ನ-ವಿಭಿನ್ನ ಸ್ಟೈಲಿಂಗ್‌ಗೆ ತಕ್ಕಂತೆ ಬದಲಾಗುತ್ತವೆ. ಅವೇ ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ಆಕ್ಸೆಸರೀಸ್‌ ಸ್ಟೈಲಿಸ್ಟ್‌ಗಳು.

Mens Neck Chains Fashion

ಮನಸ್ಥಿತಿ ಹೇಳುವ ನೆಕ್‌ಚೈನ್ಸ್‌ ವಿನ್ಯಾಸ

ಇನ್ನು ಹುಡುಗರ ಮನ ಸ್ಥಿತಿ ಹೇಳುವ ನೆಕ್‌ಚೈನ್ಸ್‌, ಧರಿಸುವ ಹುಡುಗರ ಅಭಿರುಚಿಯ ಧ್ಯೋತಕ ಎನ್ನುತ್ತಾರೆ ಆಕ್ಸೆಸರೀಸ್‌ ಡಿಸೈನರ್ಸ್.‌ ಹೌದು, ಕೆಲವರು ಮೈಲ್ಡ್‌ ಲುಕ್‌ ಹಾಗೂ ಮೈಂಡನ್ನು ರಿಲಾಕ್ಸ್‌ಗೊಳಿಸುವ ಪೆಂಡೆಂಟ್‌ನ ನೆಕ್‌ ಚೈನ್‌ ಧರಿಸುತ್ತಾರೆ. ಇನ್ನು ಕೆಲವರು ಭಯ ಬೀಳಿಸುವಂತಹ ಹೆದರಿಕೆ ಹುಟ್ಟು ಹಾಕುವಂತಹ ಸ್ಕೆಲಿಟನ್‌, ದೆವ್ವ, ಭೂತದ ಮುಖ ಅಥವಾ ಮಾನ್‌ಸ್ಟರ್‌ನಂತಹ ಫೇಸ್‌ ಇರುವಂತಹ ಪೆಂಡೆಂಟ್‌ನ ನೆಕ್‌ಚೈನ್‌ಗಳನ್ನು ಆಯ್ಕೆ ಮಾಡುತ್ತಾರೆ. ಕಾಲೇಜು ಹುಡುಗರಂತೂ ಯೋಚಿಸದೇ ನಾನಾ ಬಗೆಯ ನೆಕ್‌ಚೈನ್‌ ಧರಿಸುವುದು ಹೆಚ್ಚಾಗಿದೆ. ಕೆಲವರಿಗಂತೂ ಅವುಗಳ ಅರ್ಥವೂ ತಿಳಿದಿರುವುದಿಲ್ಲ. ಇನ್ನು, ಇತ್ತೀಚೆಗೆ ಒಂದರ ಮೇಲೊಂದರಂತೆ ಚೈನ್‌ ಇರುವ ಲೇಯರ್‌ ಚೈನ್‌ಗಳು ಹುಡುಗರನ್ನು ಆಕರ್ಷಿಸಿವೆ. ಹುಡುಗಿಯರಿಗೆ ಸೀಮಿತವಾಗಿದ್ದ ಈ ಡಿಸೈನ್‌ಗಳು ಇದೀಗ ಹುಡುಗರನ್ನೂ ಸೆಳೆದಿವೆ. ಆದರೆ, ಒಂದಿಷ್ಟು ಡಿಸೈನ್‌ ಬದಲಾವಣೆಯೊಂದಿಗೆ ಇವು ಹುಡುಗರ ಕತ್ತನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಧೀಮಂತ್‌.

Mens Neck Chains Fashion

ಸ್ಟೈಲಿಂಗ್‌ಗೆ ಸಾಥ್‌ ನೀಡುವ ಫಂಕಿ ನೆಕ್‌ಚೈನ್‌ಗಳಿವು

  • ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಮೇಲೆ ಲಾಂಗ್‌ ಚೈನ್‌ ಹಾಗೂ ಸಿಂಪಲ್‌ ಬಿಗ್‌ ಪೆಂಡೆಂಟ್‌ ನೆಕ್‌ಚೈನ್‌ ಲುಕ್‌ ಬಿಂದಾಸ್‌ ಲುಕ್‌ ನೀಡುತ್ತದೆ.
  • ಜಾಕೆಟ್‌ ಪ್ರಿಯರಿಗೆ ಇದೀಗ ಟ್ರೆಂಡ್‌ನಲ್ಲಿರುವ ಬ್ಲ್ಯಾಕ್‌, ವೈಟ್‌ ಮೆಟಲ್‌ನ ಲಿಂಕ್‌ ನೆಕ್‌ಚೈನ್‌ಗಳು ಬೆಸ್ಟ್.‌
  • ಸಿಂಪಲ್‌ ಲುಕ್‌ ಬೇಕೆನ್ನುವವರಿಗೆ ಸಿಂಪಲ್‌ ತೆಳುವಾದ ನೆಕ್‌ಚೈನ್‌ ಸಾಕು.
  • ವೈಲ್ಡ್‌ ಲುಕ್‌ ಇಷ್ಟ ಪಡುವವರಿಗೆ ಟೈಗರ್‌, ಲಯನ್‌, ಮಾನ್ಸ್ಟರ್ಮುಖದ ಪೆಂಡೆಂಟ್‌ನ ನೆಕ್‌ಚೈನ್ಸ್‌ ಬಂದಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

Continue Reading

ಆಹಾರ/ಅಡುಗೆ

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ಭಾರತ ತನ್ನ ಸಿಹಿತಿಂಡಿಯ (Top 10 Puddings) ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ.

VISTARANEWS.COM


on

Top 10 Puddings
Koo

ಭಾರತ ಪಾಕಶಾಸ್ತ್ರದಲ್ಲಿ (Top 10 Puddings) ಹೆಸರು ಮಾಡಿದ ದೇಶ. ಭಾರತದ ಬಗೆಬಗೆಯ ಆಹಾರಗಳು, ತಿನಿಸುಗಳು, ವೈವಿಧ್ಯಮಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಮಾಡಿದೆ. ದೇಶವಿದೇಶಗಳಿಂದ ಇಲ್ಲಿನ ಆಹಾರ ಸವಿಯಲೆಂದೇ ಪ್ರವಾಸಿಗರು ಬರುತ್ತಾರೆ. ಸಿಹಿತಿಂಡಿ ಇಲ್ಲಿನ ಜನರ ನಿತ್ಯದ ಆಹಾರಾಭ್ಯಾಸ. ಹಬ್ಬಗಳು ಬಂದರಂತೂ ಈ ಸಿಹಿ ತಿನಿಸುಗಳ ಸಡಗರ ಇನ್ನೂ ಹೆಚ್ಚುತ್ತದೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ, ಬೇಋಎ ಬೇರೆ ಆಚರಣೆಗಳನ್ನು ಹೊಂದಿದ ಜನರ ಬಗೆಬಗೆಯ ಆಹಾರಾಭ್ಯಾಸಗಳು, ತಿನಿಸುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿ. ಇದೀಗ, ಭಾರತ ತನ್ನ ಸಿಹಿತಿಂಡಿಯ ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಅಕ್ಕಿ ಪಾಯಸ ಅಥವಾ ಖೀರ್‌ ಮಾಡುವುದು ಸಾಮಾನ್ಯ. ಈ ಅಕ್ಕಿ ಪಾಯಸಕ್ಕೆ ಐದನೇ ಸ್ಥಾನ ಸಿಕ್ಕಿದರೆ, ನಾಲ್ಕನೇ ಸ್ಥಾನದಲ್ಲಿ ಫಿರ್ನಿ ಇದೆ. ಒಂಭತ್ತನೇ ಸ್ಥಾನದಲ್ಲಿ ತಮಿಳುನಾಡಿನ ಪ್ರಸಿದ್ಧ ಸಕ್ಕರೆ ಪೊಂಗಲ್‌ ಅಥವಾ ಸಿಹಿ ಪೊಂಗಲ್‌ ಆಯ್ಕೆಯಾಗಿದೆ.
ಸಾಂಪ್ರದಾಯಿಕ ತಿನಿಸು ಫಿರ್ನಿಯನ್ನು ಸಾಮಾನ್ಯವಾಗಿ ಪುಟ್ಟ ಪುಟ್ಟ ಮಣ್ಣಿನ ಮಡಕೆಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ತಿನ್ನುವುದು ರೂಢಿ. ಬೇಸಿಗೆಯಲ್ಲಿ ಐಸ್‌ಕ್ರೀಂನಂತೆ ಹಿತವಾಗಿರುವ ಸಾಂಪ್ರದಾಯಿಕ ಶೈಲಿಯ ಸಿಹಿತಿನಿಸಿದು. ಗುಲಾಬಿ ದಳಗಳು, ಪಿಸ್ತಾ ಬಾದಾಮಿಯ ಚೂರುಗಳಿಂದ ಅಲಂಕರಿಸಿ ಕೊಡಲಾಗುತ್ತದೆ.

Sweet kheer

ಸಿಹಿಯಾದ ಖೀರು

ಅಕ್ಕಿಯನ್ನು ಬಳಸಿ ಮಾಡಲಾಗುವ ಸಿಹಿಯಾದ ಖೀರು, ಯಾವುದೇ ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಇಡಲು ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಹಾಲು ಹಾಕಿ ಕೇಸರಿಯನ್ನು ಉದುರಿಸಿ ಮಾಡುವ ಸರಳವಾದ ಪಾಯಸವಿದು. ಉತ್ತರ ಭಾರತ, ದಕ್ಷಿಣ ಭಾರತವೆಂಬ ಬೇಧವಿಲ್ಲದೆ, ಈ ಸಿಹಿಯನ್ನು ಎಲ್ಲೆಡೆ ಮಾಡುತ್ತಾರೆ.

Sweet Pongal

ಸಿಹಿ ಪೊಂಗಲ್‌

ಸಿಹಿ ಪೊಂಗಲ್‌ ಅಥವಾ ಸಕ್ಕರೆ ಪೊಂಗಲ್‌ ತಮಿಳುನಾಡಿನ ಪ್ರಖ್ಯಾತ ಸಿಹಿತಿನಿಸು. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ಬೆಲ್ಲ ಹಾಗೂ ತುಪ್ಪ ಹಾಕಿ ಮಾಡುವ ಘಮಘಮಿಸುವ ಸಿಹಿ ಪಾಯಸವಿದು. ಸಾಂಪ್ರದಾಯಿಕ ಹೊಸ ವರ್ಷವಾದ ಪೊಂಗಲ್‌ ಹಬ್ಬದ ಆಚರಣೆಯ ಸಂದರ್ಭ ಸಿಹಿ ಪೊಂಗಲ್‌ ಅನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿ, ದೇವರಿಗೆ ಇಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬಹಳ ರುಚಿಯಾದ ಸರಳವಾದ ಪಾಯಸವಿದು.

Firin Sutlac

ಟರ್ಕಿಗೆ ಮೊದಲ ಸ್ಥಾನ

ಈ ಸ್ಪರ್ಧೆಯಲ್ಲಿ, ಮೊದಲ ಸ್ಥಾನದಲ್ಲಿ ಟರ್ಕಿಯ ಫಿರಿನ್‌ ಸುಟ್‌ಲ್ಯಾಕ್‌, ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಖಾವೋ ನಿಯಾವೋ ಮಾಮುಅಂಗ್‌, ಮೂರನೇ ಸ್ಥಾನದಲ್ಲಿ ಶೋಲೆಹ್‌ ಝರ್ದ್‌ ಇವೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಫಿರ್ನಿ, ಐದನೇ ಸ್ಥಾನದಲ್ಲಿ ನಮ್ಮ ಖೀರ್‌ ಇವೆ. ಇವಲ್ಲದೆ, ಡೆನ್ಮಾರ್ಕ್‌, ಟರ್ಕಿ, ಪೋರ್ಚುಗಲ್‌ನ ಸಿಹಿ ತಿನಿಸುಗಳೂ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

Continue Reading

ಆರೋಗ್ಯ

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

ನೈಸರ್ಗಿಕವಾಗಿ ಮಳೆಗಾಲದ ಆರಂಭದ (Benefits of Bamboo Shoots) ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಕಳಲೆ ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.

VISTARANEWS.COM


on

Benefits of Bamboo Shoots
Koo

ಬಿದಿರು ಎನ್ನುತ್ತಿದ್ದಂತೆ ದೊಡ್ಡ ಮೆಳೆಗಳೇ (Benefits of Bamboo Shoots) ನಮಗೆ ನೆನಪಾಗುವುದು. ಆದರೆ ಈ ಬೃಹತ್‌ ಮೆಳೆಗಳೂ ಹಿಂದೊಮ್ಮೆ ಎಳೆಯವೇ ಆಗಿದ್ದವಲ್ಲ. ಅಂಥ ಎಳೆಯ ಬಿದಿರು ಅಥವಾ ಮೊಳಕೆಗಳನ್ನು ಕಳಲೆ ಎನ್ನಲಾಗುತ್ತದೆ. ನೈಸರ್ಗಿಕವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ತಾಜಾ ಕಳಲೆಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಸೇವನೆಗೆ ಯೋಗ್ಯವಾದ ಇಂಥ ರುಚಿಕರ ಕಳಲೆಗಳನ್ನು ಸಾಂಪ್ರದಾಯಿಕವಾದ ಸಾಂಬಾರು, ಪಲ್ಯಗಳಿಂದ ಹಿಡಿದು, ಆಧುನಿಕ ಖಾದ್ಯಗಳವರೆಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.
ಸಸ್ಯಾದಿಗಳ ಮೊಳಕೆ ಮತ್ತು ಚಿಗುರುಗಳು ಭರಪೂರ ಪೋಷಕಾಂಶಗಳಿಂದ ತುಂಬಿರುತ್ತವೆ. ಬೆಳೆಯುವ ಸಸ್ಯಗಳಿಗೆ ಬೇಕೆಂಬ ಕಾರಣಕ್ಕಾಗಿ ನಿಸರ್ಗವೇ ಸೃಷ್ಟಿಸಿಕೊಂಡಿರುವ ಮಾರ್ಗವಿದು. ಪ್ರಕೃತಿಯ ಈ ಕೃತಿ ಮಾನವರಿಗೂ ಲಾಭದಾಯಕವಾಗುವುದಿದೆ. ಕಾರಣ, ಇವು ಪೌಷ್ಟಿಕತೆಯಲ್ಲಿ ಮಾತ್ರವಲ್ಲಿ ರುಚಿಯಲ್ಲೂ ಒಂದು ಕೈ ಮೇಲೆಯೇ ಇರುತ್ತವೆ. ಎಳೆಯ ಬಿದಿರು ಅಥವಾ ಕಳಲೆಯನ್ನೂ ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ಅರಿಯೋಣ

 Bamboo Shoots

ಏನಿವೆ ಇದರಲ್ಲಿ?

ಹಲವಾರು ರೀತಿಯ ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಇದು ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಸ್ಥೂಲವಾಗಿ ಹೇಳುವುದಾದರೆ, ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ಕೊಬ್ಬು ಕಡಿಮೆ ಮಾಡಲೂ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಿಟ್ಯುಟರಿ ಮತ್ತು ಥೈರಾಯ್ಡ್‌ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಇವುಗಳ ಮಾತ್ರ ಹಿರಿದಾದದ್ದು. ಇದರ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ನೋಡುವುದಾದರೆ-

Constipation

ಮಲಬದ್ಧತೆ ನಿವಾರಣೆ

ಇದರಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್‌ ಅಂಶದಿಂದಾಗಿ, ಜಠರ ಮತ್ತು ಕರುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗಿ, ದೇಹದಲ್ಲಿ ಶೇಖರವಾದ ಕೊಬ್ಬೂ ಇಳಿಯುತ್ತದೆ. ಕಳಲೆಗೆ ಪ್ರೊಬಯಾಟಿಕ್‌ ಗುಣವೂ ಇರುವುದರಿಂದ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

Overweight man suffering from chest pain, high blood pressure, cholesterol level

ಕೊಲೆಸ್ಟ್ರಾಲ್‌ ಕಡಿತ

ದೇಹಕ್ಕೆ ಮಾರಕವಾದ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಕಡಿತ ಮಾಡುವಂಥ ಫೈಟೋಸ್ಟೆರೋಲ್‌ಗಳು ಕಳಲೆಯಲ್ಲಿವೆ. ಹಾಗಾಗಿ ಇದು ಬೇಡದ ಕೊಲೆಸ್ಟ್ರಾಲ್‌ ನಿವಾರಿಸುವುದು ಮಾತ್ರವಲ್ಲದೆ, ಒಟ್ಟಾರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಕೆ ಅಂಶದಿಂದಾಗಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಈ ತರಕಾರಿ ಸಹಾಯಕ.

ಕೊಲಾಜಿನ್‌ ವೃದ್ಧಿ

ಮಾನವ ಶರೀರದಲ್ಲಿ ಹೇರಳವಾಗಿರುವ ಖನಿಜಗಳ ಪೈಕಿ ಸತು ಮತ್ತು ಕಬ್ಬಿಣದ ನಂತರದ ಸ್ಥಾನ ಸಿಲಿಕಾಗೆ. ಎಳೆ ಬಿದಿರಿನಲ್ಲೂ ಈ ಅಂಶ ಧಾರಾಳವಾಗಿದೆ. ಸಿಲಿಕಾ ಅಂಶವು ಹೈಡ್ರಾಕ್ಸಿಪ್ರೊಲಿನ್‌ ಎಂಬ ಅಮೈನೊ ಆಮ್ಲದ ಉತ್ಪತ್ತಿಗೆ ಅಗತ್ಯವಾದದ್ದು. ಎಲಾಸ್ಟಿನ್‌ ಮತ್ತು ಕೊಲಾಜಿನ್‌ ಅಂಶಗಳನ್ನು ದೇಹದಲ್ಲಿ ಸಿದ್ಧಪಡಿಸಿಕೊಳ್ಳುವುದಕ್ಕೆ ಈ ಅಮೈನೊ ಆಮ್ಲವು ಅತ್ಯಗತ್ಯ.

Bone Health In Winter

ಮೂಳೆಗಳ ಬಲವೃದ್ಧಿ

ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಅಂಶವು ಹೇರಳವಾಗಿರುವ ಕಳಲೆಯಿಂದ ಮೂಳೆಗಳು ಟೊಳ್ಳಾಗದೆ ಬಲಗೊಳ್ಳುತ್ತವೆ. ಇದರಲ್ಲಿರುವ ವಿಟಮಿನ್‌ ಸಿ ಅಂಶದಿಂದಾಗಿ ಇತರ ಖನಿಜಗಳನ್ನು ಹೀರಿಕೊಳ್ಳಲು ಮೂಳೆಗಳಿಗೆ ನೆರವು ದೊರೆಯುತ್ತದೆ.

weight loss

ತೂಕ ಇಳಿಕೆ

ಈ ತರಕಾರಿ ಕ್ಯಾಲರಿ ಲೆಕ್ಕದಲ್ಲಿ ಕಡಿಮೆ ಇದ್ದು, ನಾರಿನಂಶ ಬೇಕಾದಷ್ಟಿದೆ. ಹಾಗಾಗಿ ಆರೋಗ್ಯಕರ ಮಾರ್ಗದಲ್ಲಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದೊಂದು ಉತ್ತಮ ಆಯ್ಕೆ. ನಾರಿನಿಂದ ಕೂಡಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಹಸಿವಾಗದಂತೆ ದೇಹವನ್ನು ಕಾಪಾಡುತ್ತವೆ.

ಇದನ್ನೂ ಓದಿ: Coriander Benefits: ಚರ್ಮದ ಯಾವುದೇ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪು ಮದ್ದು

Continue Reading
Advertisement
Nada Gheethe
ಪ್ರಮುಖ ಸುದ್ದಿ5 mins ago

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

Sachin Tendulkar Birthday
ಕ್ರೀಡೆ40 mins ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

PM Narendra Modi
ಕರ್ನಾಟಕ42 mins ago

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ1 hour ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ1 hour ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

2nd PUC Exam
ಕರ್ನಾಟಕ1 hour ago

2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

DCM D K Shivakumar visit adichunchanagiri mutt
ಕರ್ನಾಟಕ2 hours ago

Lok Sabha Election 2024: ನನ್ನ ಜೀವ, ನನ್ನ ದೇಹ ಇರುವುದೇ ನಮ್ಮ ಜನರಿಗಾಗಿ: ಡಿ.ಕೆ. ಶಿವಕುಮಾರ್

Road Accident
ಕರ್ನಾಟಕ2 hours ago

Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Madrid Open 2024
ಕ್ರೀಡೆ2 hours ago

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌